logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಹಾದಿ ಸುಗಮ, ಒಳಸುಳಿ ಇದು

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಹಾದಿ ಸುಗಮ, ಒಳಸುಳಿ ಇದು

Umesh Kumar S HT Kannada

Nov 05, 2024 04:34 PM IST

google News

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಹಾದಿ ಸುಗಮಗೊಳಿಸಿದ್ದಾರೆ.

  • ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟ್ಸ್‌ ಅಭ್ಯರ್ಥಿ ರೇಸ್‌ನಿಂದ ಜೋ ಬೈಡೆನ್ ದಿಢೀರ್ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಹಾದಿ ಸುಗಮವಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಹಾದಿ ಸುಗಮಗೊಳಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್, ಕಮಲಾ ಹ್ಯಾರಿಸ್ ಹಾದಿ ಸುಗಮಗೊಳಿಸಿದ್ದಾರೆ. (AFP/ Joe Biden)

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಅಮೆರಿಕ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ದಾರಿ ಸುಗಮವಾಗಿದೆ. ತನ್ನ ಸಹವರ್ತಿ ಡೆಮೋಕ್ರಾಟ್‌ಗಳ ಹೆಚ್ಚುತ್ತಿರುವ ಒತ್ತಡದ ಅಡಿಯಲ್ಲಿ 2024 ರ ಅಧ್ಯಕ್ಷೀಯ ಸ್ಪರ್ಧೆಯಿಂದ ನಿರ್ಗಮಿಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಭಾನುವಾರ ಘೋಷಿಸಿದರು.

ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲು ಪಕ್ಷದ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಬೈಡೆನ್‌ ಅನುಮೋದಿಸಿದರು. ರಿಪಬ್ಲಿಕನ್ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಖಚಿತವಾಗಿದ್ದು, ಅವರಿಗೆ ಪ್ರಬಲ ಪ್ರತಿಸ್ಪರ್ಧಿಯ ಅವಶ್ಯಕತೆ ಡೆಮಾಕ್ರಟ್ಸ್ ಅನ್ನು ಕಾಡಿತ್ತು. ಇತ್ತೀಚೆಗೆ ಟ್ರಂಪ್ ಅವರ ಮೇಲೆ ದಾಳಿ ನಡೆದು, ಅದರ ಅನುಕಂಪವೂ ಅವರ ಪರವಾಗಿರುವ ಕಾರಣ ರಾಜಕೀಯ ಜಿದ್ದಾಜಿದ್ದಿ ಕುತೂಹಲವನ್ನು ಹೆಚ್ಚಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಟ್ವೀಟ್‌ ಮತ್ತು ಸಂದೇಶ

ಜೋ ಬೈಡೆನ್ ಅವರು ಎಕ್ಸ್ ಖಾತೆಯಲ್ಲಿ ಈ ವಿಚಾರ ಟ್ವೀಟ್ ಮಾಡಿದ್ದು, “ಮರುಆಯ್ಕೆ ಬಯಸುವುದು ನನ್ನ ಉದ್ದೇಶವಾಗಿತ್ತು. ಆದರೆ, ದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಾರಣ ಈ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಹಾಲಿ ಅಧ್ಯಕ್ಷ ಅವಧಿಯ ಉಳಿದ ದಿನಗಳ ಕರ್ತವ್ಯಗಳನ್ನು ಪೂರೈಸುವ ಕಡೆಗೆ ಗಮನಹರಿಸುತ್ತೇನೆ" ಎಂದು ಹೇಳಿಕೊಂಡಿದ್ದಾರೆ.

ಜೋ ಬೈಡೆನ್ ಅವರು ಈ ಪೋಸ್ಟ್‌ನಲ್ಲಿ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರ ಜೊತೆಗಿನ ಫೋಟೋ ಶೇರ್ ಮಾಡಿದ್ದು, ಅವರನ್ನೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸುತ್ತಿರುವುದಾಗಿ ಘೋ‍ಷಿಸಿದ್ದಾರೆ. ಈ ನಿರ್ಧಾರವನ್ನು ಪ್ರಕಟಿಸಿದಾಗ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಜೊತೆಗಿದ್ದರು.

ಅಧ್ಯಕ್ಷೀಯ ಸ್ಪರ್ಧೆಯಿಂದ ಜೋ ಬೈಡೆನ್ ಅವರನ್ನು ಹಿಂದೆ ಸರಿಯುವಂತೆ ಮಾಡಿದ ಅಂಶವೇನು

ಅಮರಿಕದ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವ ಅಧ್ಯಕ್ಷ ಜೋ ಬಿಡೆನ್ ಅವರ ನಿರ್ಧಾರವು ನಾಟಕೀಯ ಮತ್ತು ಅನಿರೀಕ್ಷಿತವಾಗಿ ವ್ಯಕ್ತವಾಗಿದೆ. ಇದರಿಂದ ಅವರ ತಂಡ ಮತ್ತು ಬೆಂಬಲಿಗರು ಸಂಪೂರ್ಣ ಆಘಾತಕ್ಕೆ ಒಳಗಾದರು. 81 ವರ್ಷದ ಜೋ ಬೈಡೆನ್‌ ಭಾನುವಾರ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರನ್ನು 2024 ರ ಚುನಾವಣೆಗೆ ಅಧ್ಯಕ್ಷೀಯ ನಾಮನಿರ್ದೇಶಿತ ಸ್ಥಾನಕ್ಕೆ ಅನುಮೋದಿಸುವ ಮೂಲಕ, ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋ‍ಷಿಸಿದರು.

ಈ ಕೊನೆ ಘಳಿಗೆ ನಿರ್ಗಮನಕ್ಕೆ ಕಾರಣವೇನು, ಅಂಥದ್ದೇನಾಯತಿ ಬೈಡೆನ್ ಅವರಿಗೆ? ಎಂಬ ಕುತೂಹಲ ಹೆಚ್ಚಾಗಿದೆ. ವರದಿಗಳ ಪ್ರಕಾರ, ವೈಯಕ್ತಿಕ ಮತ್ತು ರಾಜಕೀಯ ಅಂಶಗಳು ಬೈಡೆನ್ ಅವರ ಈ ನಿರ್ಧಾರಕ್ಕೆ ಕಾರಣ.

ಚುನಾವಣೆಗೆ ಕೇವಲ ನಾಲ್ಕು ತಿಂಗಳ ಮೊದಲು ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಹಿಂದೊಮ್ಮೆ ಸಂಪೂರ್ಣವಾಗಿ ವಿರೋಧಿಸಿದ್ದ ಅಧ್ಯಕ್ಷ ಜೋ ಬೈಡೆನ್‌, ಅನೇಕ ಡೆಮಾಕ್ರಟ್ಸ್‌ ಕೇಳಲು ಬಯಸಿದ ವಿಚಾರವನ್ನು ಪ್ರಕಟಿಸಿದ್ದೇನೆ ಎಂದು ಹೇಳಿದರು.

ಪ್ರಮುಖ ದಾನಿಗಳು ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಮತ್ತು ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸುವ ಬೈಡೆನ್ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಡೆಮೋಕ್ರಾಟ್‌ಗಳಿಂದ ಹೆಚ್ಚುತ್ತಿರುವ ವಿರೋಧವನ್ನು ಬೈಡೆನ್ ಮನಗಂಡಿದ್ದರು. ಅವರ ಟ್ವೀಟ್‌ನಲ್ಲಿ ಎರಡನೇ ಟ್ವೀಟ್ ಹಣದ ನೆರವಿನ ವಿಚಾರವೇ ಇರುವುದನ್ನು ಗಮನಿಸಬಹುದು. ಎರಡನೇ ಅವಧಿಗೆ ಗೆಲ್ಲುವ ಅವಕಾಶ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಬೈಡೆನ್ ಈ ನಿರ್ಧಾರಕ್ಕೆ ಬಂದು ಎಂದು ವರದಿಗಳು ಹೇಳುತ್ತಿವೆ.

ಈ ನಿರ್ಧಾರ ಪ್ರಕಟಿಸುವ ಮೊದಲು ಜೋ ಬೈಡೆನ್ ಅವರು ಕಮಲಾ ಹ್ಯಾರಿಸ್ ಮತ್ತು ಪಕ್ಷದ ಪ್ರಮುಖ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ್ದರು. ಅದಕ್ಕೂ ಮೊದಲು ತನ್ನ ಕುಟುಂಬ ಸದಸ್ಯರ ಜೊತೆಗೂ ಮಾತುಕತೆ ನಡೆಸಿದ್ದರು. ಹೀಗೆ ಪೂರ್ಣ ಸಮಾಲೋಚನೆಯೊಂದಿಗೆ ಕೂಡಿದ ನಿರ್ಧಾರವನ್ನೇ ಬೈಡೆನ್ ಪ್ರಕಟಿಸಿದ್ದಾರೆ ಎಂದು ವರದಿ ವಿವರಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ