Yogi Bulldozer Action: ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಆ್ಯಕ್ಷನ್; ಅತ್ಯಾಚಾರ-ಕೊಲೆ ಆರೋಪಿಯ ಮನೆ ನೆಲಸಮ VIDEO
Jun 27, 2023 02:55 PM IST
ಅತ್ಯಾಚಾರ-ಕೊಲೆ ಆರೋಪಿಯ ಮನೆ ನೆಲಸಮ
- Uttar Pradesh News: ಜೂನ್ 23 ರಂದು ಫರೀದ್‌ಪುರದ ನಿರ್ಮಾಣ ಹಂತದ ಮನೆಯೊಂದರಲ್ಲಿ ಯುವತಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಕಾನ್ಪುರ ಹಾಲೆಟ್ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸಾವನ್ನಪ್ಪಿದಳು. ಸಿಕಂದರ್ ಖಾನ್ ಆಕೆಯನ್ನು ರೇಪ್ ಮಾಡಿ ಬಳಿಕ ಇಟ್ಟಿಗೆಯಿಂದ ಆಕೆಗೆ ತಲೆಗೆ ಹೊಡೆದಿದ್ದನು.
ಫತೇಪುರ್ (ಉತ್ತರ ಪ್ರದೇಶ): ಆರೋಪಿಗಳ ವಿರುದ್ಧ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಕ್ರಮ (Yogi Adityanath Bulldozer action) ಮುಂದುವರೆದಿದೆ. ಉತ್ತರ ಪ್ರದೇಶದ ಫತೇಪುರ್‌ನ ಆಡಳಿತವು ಅತ್ಯಾಚಾರ ಮತ್ತು ಕೊಲೆ ಆರೋಪಿಯ ಮನೆಯನ್ನು ನೆಲಸಮಗೊಳಿಸಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ನೆಲಸಮ ಕಾರ್ಯ ನಡೆಸಲಾಯಿತು. ಆರೋಪಿಯನ್ನು ಸಿಕಂದರ್ ಖಾನ್ ಎಂದು ಗುರುತಿಸಲಾಗಿದೆ. ಈತ 19 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ್ದಲ್ಲದೇ ಆಕೆಯನ್ನು ಕೊಲೆ ಮಾಡಿದ್ದ.
ಜೂನ್ 23 ರಂದು ಮುಂಜಾನೆ ಫರೀದ್‌ಪುರದ ನಿರ್ಮಾಣ ಹಂತದ ಮನೆಯೊಂದರಲ್ಲಿ ಯುವತಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಕಾನ್ಪುರ ಹಾಲೆಟ್ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅದರ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸಾವನ್ನಪ್ಪಿದಳು. ಸಿಕಂದರ್ ಖಾನ್ ಆಕೆಯನ್ನು ರೇಪ್ ಮಾಡಿ ಬಳಿಕ ಇಟ್ಟಿಗೆಯಿಂದ ಆಕೆಗೆ ತಲೆಗೆ ಹೊಡೆದಿದ್ದನು.
ತಮ್ಮ ಮಗಳನ್ನು ಬಲೆಗೆ ಬೀಳಿಸಿಕೊಳ್ಳಲು ಆತ ತನ್ನ ಗುರುತನ್ನು ಮರೆಮಾಡಿದ್ದಾನೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದ್ದು, ಬಲಪಂಥೀಯ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆದಿವೆ. ಸದ್ಯ ಕೊಲೆ ಮತ್ತು ಅತ್ಯಾಚಾರದ ಆರೋಪದ ಮೇಲೆ ಸಿಕಂದರ್ ಖಾನ್ನನ್ನು ಬಂಧಿಸಲಾಗಿದ್ದು, ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಬುಲ್ಡೋಜರ್ ರಾಜಕಾರಣ - ಬುಲ್ಡೋಜರ್ ಬಾಬಾ
ಭಾರತದಲ್ಲಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಲು ಸರ್ಕಾರದ ವತಿಯಿಂದ ಬುಲ್ಡೋಜರ್ ಅನ್ನು ಬಳಸಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಕ್ರಮ ನಿರ್ಮಾಣದ ಜೊತೆ ಗ್ಯಾಂಗ್ಸ್ಟರ್ಗಳು, ರೌಡಿಶೀಟರ್ಗಳು, ಮಾಫಿಯಾ ಡಾನ್ಗಳು, ಕೋಮುಗಲಭೆಕೋರರು, ಕೆಲವು ಪ್ರಮುಖ ಪ್ರಕರಣಗಳ ಆರೋಪಿಗಳು ಮತ್ತು ಅಪರಾಧಿಗಳ ಆಸ್ತಿ ನಾಶಮಾಡಲು ಬುಲ್ಡೋಜರ್ ಬಳಸಲಾಗುತ್ತಿದೆ. ಇದರಿಂದ ಯೋಗಿಗೆ 'ಬುಲ್ಡೋಜರ್ ಬಾಬಾ' ಎಂಬ ಹೆಸರು ಕೂಡ ಬಂದಿದೆ. ಈಗಾಗಲೇ ಯುಪಿಯಲ್ಲಿ ವಿಕಾಸ್ ದುಬೆ, ಮುಖ್ತಾರ್ ಅನ್ಸಾರಿ ಮತ್ತು ಅತೀಕ್ ಅಹ್ಮದ್ ಸೇರಿದಂತೆ ಅನೇಕ ದರೋಡೆಕೋರರ ಆಸ್ತಿಯನ್ನು ನೆಲಸಮಗೊಳಿಸಲಾಗಿದೆ. ಉತ್ತರ ಪ್ರದೇಶದ ಬಳಿಕ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಬುಲ್ಡೋಜರ್ ರಾಜಕಾರಣ ಆರಂಭಿಸಿದೆ.