logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Varun Gandhi: ರಾಹುಲ್‌ ಕೇಂಬ್ರಿಡ್ಜ್ ಭಾಷಣ ವಿವಾದ: ಆಕ್ಸ್‌ಫರ್ಡ್‌ ಆಫರ್‌ಗೆ ಒಲ್ಲೆ ಎಂದು ಕೈ ಮುಗಿದ ವರುಣ್‌ ಗಾಂಧಿ!

Varun Gandhi: ರಾಹುಲ್‌ ಕೇಂಬ್ರಿಡ್ಜ್ ಭಾಷಣ ವಿವಾದ: ಆಕ್ಸ್‌ಫರ್ಡ್‌ ಆಫರ್‌ಗೆ ಒಲ್ಲೆ ಎಂದು ಕೈ ಮುಗಿದ ವರುಣ್‌ ಗಾಂಧಿ!

HT Kannada Desk HT Kannada

Mar 17, 2023 10:02 AM IST

ವರುಣ್‌ ಗಾಂಧಿ (ಸಂಗ್ರಹ ಚಿತ್ರ)

    • ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸರಿಯಾದ ಹಾದಿಯಲ್ಲಿದೆ ಎಂಬ ವಿಷಯದ ಕುರಿತು, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಚರ್ಚೆಯೊಂದನ್ನು ಆಯೋಜಿಸಲಾಗಿದೆ. ಈ ಚರ್ಚೆಯಲ್ಲಿ ಭಾಗವಹಿಸುವಂತೆ ರಾಹುಲ್‌ ಗಾಂಧಿ ಅವರ ಸೋದರ ಸಂಬಂಧಿ ಹಾಗೂ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ವರುಣ್‌ ಗಾಂಧಿ ಈ ಆಹ್ವಾನವನ್ನು ತಿರಸ್ಕರಸಿದ್ದಾರೆ.
ವರುಣ್‌ ಗಾಂಧಿ (ಸಂಗ್ರಹ ಚಿತ್ರ)
ವರುಣ್‌ ಗಾಂಧಿ (ಸಂಗ್ರಹ ಚಿತ್ರ) (Verified Twitter)

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣ ವಿವಾದಕ್ಕೆ ಗುರಿಯಾಗಿದೆ. ಈ ಮಧ್ಯೆ ರಾಹುಲ್‌ ಅವರ ಸೋದರ ಸಂಬಂಧಿ ಹಾಗೂ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಚರ್ಚೆಯೊಂದರಲ್ಲಿ ಭಾಗವಹಿಸುವ ಆಹ್ವಾನವನ್ನು ತಿರಸ್ಕರಿಸಿ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಸರಿಯಾದ ಹಾದಿಯಲ್ಲಿದೆ ಎಂಬ ವಿಷಯದ ಕುರಿತು, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಚರ್ಚೆಯೊಂದನ್ನು ಆಯೋಜಿಸಲಾಗಿದೆ. ಈ ಚರ್ಚೆಯಲ್ಲಿ ಭಾಗವಹಿಸುವಂತೆ ವರುಣ್‌ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ವರುಣ್‌ ಗಾಂಧಿ ಈ ಆಹ್ವಾನವನ್ನು ತಿರಸ್ಕರಸಿದ್ದಾರೆ.

"ಚರ್ಚೆಗೆ ಆಯ್ಕೆ ಮಾಡಿದ ವಿಷಯವು ಚರ್ಚೆ ಅಥವಾ ವಿವಾದಕ್ಕೆ ಹೆಚ್ಚಿನ ಅವಕಾಶವನ್ನು ನೀಡುವುದಿಲ್ಲ ಎಂದು ನಾನು ನಂಬುತ್ತೇನೆ.." ಎಂದು ಹೇಳುವ ಮೂಲಕ ವರುಣ್ ಗಾಂಧಿ ಅವರು ಆಕ್ಸ್‌ಫರ್ಡ್‌ ವಿವಿ ಆಹ್ವಾನವನ್ನು ತಿರಸ್ಕರಿಸಿದ್ದಾರೆ. " ದೇಶವು ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಯ ದೃಷ್ಟಿಯಲ್ಲಿ ಸರಿಯಾದ ಹಾದಿಯಲ್ಲಿದೆ.." ಎಂದು ವರುಣ್‌ ಗಾಂಧಿ ಹೇಳಿರುವುದು ಇದೇ ವೇಳೆ ಗಮನ ಸೆಳೆದಿದೆ. "ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿ ವಿವಿಧ ರಾಜಕೀಯ ಸಂಬಂಧಗಳ ಸರ್ಕಾರಗಳು ಇದನ್ನು ಸಾಧಿಸಿವೆ.." ಎಂದೂ ವರುಣ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

"ಚುನಾಯಿತ ಪ್ರತಿನಿಧಿಯಾಗಿ, ನೀತಿ ಉಪಕ್ರಮಗಳನ್ನು ಅಧ್ಯಯನ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಮತ್ತು ಸಂಸತ್ತಿನ ಒಳಗೆ ಮತ್ತು ಇತರ ವೇದಿಕೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡುವುದು ನನ್ನ ಕೆಲಸ.." ಎಂದು ವರುಣ್‌ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.

"ಆದಾಗ್ಯೂ, ಅಂತಹ ಅಭಿಪ್ರಾಯಗಳನ್ನು ಭಾರತದೊಳಗೆ ಭಾರತೀಯ ನೀತಿ ನಿರೂಪಕರಿಗೆ ನೀಡಬೇಕು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಂತರಿಕ ಸವಾಲುಗಳನ್ನು ಧ್ವನಿಸುವಲ್ಲಿ, ನಾನು ಯಾವುದೇ ಅರ್ಹತೆ ಅಥವಾ ಸಮಗ್ರತೆಯನ್ನು ಕಾಣುವುದಿಲ್ಲ.." ಎಂದು ವರುಣ್‌ ಗಾಂಧಿ ಅವರು ತಮ್ಮ ಸೋದರ ಸಂಬಂಧಿ ರಾಹುಲ್‌ ಗಾಂಧಿ ಅವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

ರಾಹುಲ್‌ ಗಾಂಧಿ ಅವರು ಕಳೆದ ವಾರ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾ, ಭಾರತದ ಪ್ರಜಾತಂತ್ರ ವ್ಯವಸ್ಥೆಯು ಅಪಾಯದಲ್ಲಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಭಾರತದಲ್ಲಿ ಪ್ರಜಾತಂತ್ರವನ್ನು ಮರಳಿ ಸ್ಥಾಪಿಸಲು ಜಗತ್ತಿನ ಹಲವು ದೇಶಗಳು ನೆರವಿಗೆ ಧಾವಿಸಬೇಕು ಎಂದು ರಾಹುಲ್‌ ಗಾಂಧಿ ಮನವಿ ಮಾಡಿದ್ದರು.

ರಾಹುಲ್‌ ಗಾಂಧಿ ಅವರ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್‌ ಗಾಂಧಿ ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿದ್ದು, ಈ ಕೂಡಲೇ ರಾಹುಲ್‌ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಸಂಸತ್ತಿನ ಬಜೆಟ್‌ ಅಧಿವೇಶನದಲ್ಲೂ ರಾಹುಲ್‌ ಅವರ ಹೇಳಿಕೆ ಗದ್ದಲ ಸೃಷ್ಟಿಸಿದ್ದೂ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ರಾಹುಲ್‌ ಕ್ಷಮೆಯಾಚನೆಗೆ ಪಟ್ಟು ಹಿಡಿದಿರುವ ಬಿಜೆಪಿ ಸದಸ್ಯರು, ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇನ್ನು ರಾಹುಲ್‌ ಅವರ ರಕ್ಷಣೆಗೆ ಧಾವಿಸಿರುವ ಕಾಂಗ್ರೆಸ್‌, ರಾಹುಲ್‌ ಅವರು ಭಾರತ ವಿರೋಧಿ ಹೇಳಿಕೆಯನ್ನು ನೀಡಿಲ್ಲ ಎಂದು ಸಮರ್ಥನೆ ನೀಡಿದೆ. ಅಲ್ಲದೇ ಗೌತಮ್‌ ಅದಾನಿ ವಿವಾದದ ತನಿಖೆಗಾಗಿ ಜೆಪಿಸಿ ರಚನೆಯ ಪ್ರತಿಪಕ್ಷಗಳ ಬೇಡಿಕೆಯ ವಿಷಯವನ್ನು ಮರೆಮಾಚಲು, ಬಿಜೆಪಿ ರಾಹುಲ್‌ ಗಾಧಿ ಅವರ ಕೇಂಬ್ರಿಡ್ಜ್‌ ಭಾಷಣದ ಗುಲ್ಲೆಬ್ಬಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಒಟ್ಟಿನಲ್ಲಿ ರಾಹುಲ್‌ ಗಾಂಧಿ ಅವರ ಲಂಡನ್‌ ಭಾಷಣ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು