logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಂಗಾಪುರದಲ್ಲಿ ಹೆಂಡತಿಗೆ ಚಿನ್ನದ ಸರ ಖರೀದಿಸಿದ ಭಾರತೀಯ ವ್ಯಕ್ತಿಗೆ ಅದೃಷ್ಟ; ಲಕ್ಕಿ ಡ್ರಾದಲ್ಲಿ 8 ಕೋಟಿ ರೂ ಗೆದ್ದು ಕೋಟ್ಯಧಿಪತಿಯಾದ ಗಂಡ

ಸಿಂಗಾಪುರದಲ್ಲಿ ಹೆಂಡತಿಗೆ ಚಿನ್ನದ ಸರ ಖರೀದಿಸಿದ ಭಾರತೀಯ ವ್ಯಕ್ತಿಗೆ ಅದೃಷ್ಟ; ಲಕ್ಕಿ ಡ್ರಾದಲ್ಲಿ 8 ಕೋಟಿ ರೂ ಗೆದ್ದು ಕೋಟ್ಯಧಿಪತಿಯಾದ ಗಂಡ

Praveen Chandra B HT Kannada

Dec 02, 2024 06:56 PM IST

google News

ಸಿಂಗಾಪುರದಲ್ಲಿ ಹೆಂಡತಿಗೆ ಚಿನ್ನದ ಸರ ಖರೀದಿಸಿದ ಭಾರತೀಯ ವ್ಯಕ್ತಿಗೆ ಅದೃಷ್ಟ

    • ಬಾಲಸುಬ್ರಹ್ಮಣ್ಯಂ ಚಿತ್ತಾಬರಂ ಎಂಬ ಭಾರತೀಯ ಮೂಲದ ಸಿಂಗಾಪುರ ನಿವಾಸಿ 70 ಸಾವಿರ ಡಾಲರ್‌ (ಅಂದಾಜು 3.7 ಲಕ್ಷ ರೂಪಾಯಿ) ಮೌಲ್ಯದ ಚಿನ್ನಾಭರಣವನ್ನು ಸಿಂಗಾಪುರದಲ್ಲಿರುವ ಮುಸ್ತಾಫ ಜುವೆಲ್ಲರಿಯಿಂದ ಖರೀದಿಸಿದ್ದರು. 
ಸಿಂಗಾಪುರದಲ್ಲಿ ಹೆಂಡತಿಗೆ ಚಿನ್ನದ ಸರ ಖರೀದಿಸಿದ ಭಾರತೀಯ ವ್ಯಕ್ತಿಗೆ ಅದೃಷ್ಟ
ಸಿಂಗಾಪುರದಲ್ಲಿ ಹೆಂಡತಿಗೆ ಚಿನ್ನದ ಸರ ಖರೀದಿಸಿದ ಭಾರತೀಯ ವ್ಯಕ್ತಿಗೆ ಅದೃಷ್ಟ (Instagram/mustafajewellerysg)

ಬೆಂಗಳೂರು: ಭಾರತೀಯ ವ್ಯಕ್ತಿಯೊಬ್ಬರು ಸಿಂಗಾಪುರದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗಿದ್ದಾರೆ. ತನ್ನ ಪತ್ನಿಗಾಗಿ 3.7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದರು. ಆ ಆಭರಣ ಅಂಗಡಿಯವರು ಚಿನ್ನ ಖರೀದಿದಾರರಿಗೆ ಲಕ್ಕಿ ಡ್ರಾ ಕೂಪನ್‌ಗಳನ್ನು ನೀಡುತ್ತಿತ್ತು. ಈ ರೀತಿ ಲಕ್ಕಿ ಡ್ರಾ ಕೂಪನ್‌ ಅನ್ನು ಚಿನ್ನದಂಗಡಿಯವರು ಚಿತ್ತಾಂಬರಂ ಎಂಬ ಈ ವ್ಯಕ್ತಿಗೂ ನೀಡಿತ್ತು. ಇವರಿಗೆ ದೊರಕಿದ ಲಕ್ಕಿ ಡ್ರಾ ಕೂಪನ್‌ ಅವಾರ್ಡ್‌ಗೆ ಆಯ್ಕೆಯಾಗಿತ್ತು. ಈ ವ್ಯಕ್ತಿಗೆ 8 ಕೋಟಿ ರೂಪಾಯಿ ಬಹುಮಾನ ದೊರಕಿತ್ತು. ಭಾರತದಲ್ಲಿರುವ ಸಿಂಗಾಪುರ ಹೈ ಕಮಿಷನ್‌ ಕೂಡ ಈ ಸುದ್ದಿಯನ್ನು ಖಚಿಪಡಿಸಿದ್ದು, ಬಹುಮಾನ ಪಡೆದ ಚಿತ್ತಾಂಬರಂಗೆ ಅಭಿನಂದನೆ ಸಲ್ಲಿಸಿದೆ.

8.45 ಕೋಟಿ ಗೆಲುವು

ಬಾಲಸುಬ್ರಹ್ಮಣ್ಯಂ ಚಿತ್ತಾಬರಂ ಎಂಬ ಭಾರತೀಯ ಮೂಲದ ಸಿಂಗಾಪುರ ನಿವಾಸಿ 70 ಸಾವಿರ ಡಾಲರ್‌ (ಅಂದಾಜು 3.7 ಲಕ್ಷ ರೂಪಾಯಿ) ಮೌಲ್ಯದ ಚಿನ್ನಾಭರಣವನ್ನು ಸಿಂಗಾಪುರದಲ್ಲಿರುವ ಮುಸ್ತಾಫ ಜುವೆಲ್ಲರಿಯಿಂದ ಖರೀದಿಸಿದ್ದರು. ಆ ಚಿನ್ನಾಭರಣ ಅಂಗಡಿಯವರು ನಡೆಸಿದ ಲಕ್ಕಿಡ್ರಾ ಕೂಪನ್‌ ಯೋಜನೆಯಲ್ಲಿ ಚಿತ್ತಾಂಬರಂಗೆ 1 ಮಿಲಿಯನ್‌ ಡಾಲರ್‌ ಬಹುಮಾನ ದೊರಕಿದೆ. 1 ಮಿಲಿಯನ್‌ ಡಾಲರ್‌ ಅಂದರೆ ಭಾರತದ ಕರೆನ್ಸಿಯಲ್ಲಿ ಸುಮಾರು 8.45 ಕೋಟಿ ರೂಪಾಯಿ ಆಗುತ್ತದೆ.

ಚಿತ್ತಾಂಬರಂ ಅವರು 1 ಮಿಲಿಯನ್‌ ಡಾಲರ್‌ ಗೆದ್ದಿರುವ ಸುದ್ದಿಯನ್ನು ಆ ಚಿನ್ನದಂಗಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. "ಮುಸ್ತಫಾ ಜುವೆಲ್ಲರಿಯ 1 ಮಿಲಿಯನ್‌ ಡಾಲರ್‌ ಕಾರ್ಯಕ್ರಮದಲ್ಲಿ ಸ್ಮರಣೀಯ ದಿನ. ಸಂಭ್ರಮ, ಅಭಿನಂದನೆಗಳ ಸದ್ದಿನ ನಡುವೆ ನಾವು 10 ಲಕ್ಷ ಡಾಲರ್‌ ಬಹುಮಾನವನ್ನು ಘೋಷಿಸಿದ್ದೇವೆ" ಎಂದು ಮುಸ್ತಫಾ ಜುವೆಲ್ಲರಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

 

ಗೆದ್ದ ಹಣದಲ್ಲಿ ಸ್ವಲ್ಪ ದಾನ ಮಾಡುವೆ

ಈ ಬಹುಮಾನ ಪಡೆದ ಚಿತ್ತಾಂಬರಂ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ತನಗೆ ದೊರಕಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಸಮುದಾಯದ ಒಳಿತಿಗಾಗಿ ನೀಡುವ ಸಂಕಲ್ಪ ಮಾಡಿದ್ದಾರೆ. "ಈ ಸುದ್ದಿ ಕೇಳಿದಾಗ ನನಗೆ ನನ್ನ ಕಿವಿಯನ್ನೇ ನಂಬಲಾಗಲಿಲ್ಲ. ಇಂದು ನನ್ನ ತಂದೆ ಮೃತಪಟ್ಟ ನಾಲ್ಕನೇ ವಾರ್ಷಿಕೋತ್ಸವದ ದಿನ. ಇದು ನನಗೆ ತಂದೆಯ ಕಡೆಯಿಂದ ಬಂದಿರುವ ಆಶೀರ್ವಾದ. ಸಿಂಗಾಪುರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದಕ್ಕೆ ನನಗೆ ಈ ಮೊತ್ತ ದೊರಕಿದೆ. ನಾನು ಈ ಸುದ್ದಿಯನ್ನು ನನ್ನ ತಾಯಿಯ ಜತೆ ಹಂಚಿಕೊಳ್ಳುವೆ. ಈ ಹಣದಲ್ಲಿ ಕೊಂಚ ಹಣವನ್ನು ಚಾರಿಟಿಗೆ ನೀಡಲು ಉದ್ದೇಶಿಸಿದ್ದೇನೆ" ಎಂದು ಚಿತ್ತಾಂಬರಂ ಹೇಳಿದ್ದಾರೆ.

ಭಾರತದಲ್ಲಿರುವ ಸಿಂಗಾಪುರ ಹೈ ಕಮಿಷನ್‌ ಕಡೆಯಿಂದಲೂ ಚಿತ್ತಾಂಬರಂಗೆ ಅಭಿನಂದನೆ ಬಂದಿದೆ. "ಐಕಾನಿಕ್‌ ಮುಸ್ತಫಾ 1 ಸೆಂಟರ್‌ನಲ್ಲಿ ಲಕ್ಕಿ ಡ್ರಾದಲ್ಲಿ ಗೆಲುವು ಪಡೆದ ಚಿತ್ತಾಂಬರಂಗೆ ಅಭಿನಂದನೆಗಳು. ಸಿಂಗಾಪುರದಲ್ಲಿ ಕೋಟ್ಯಧಿಪತಿಯಾಗುವ ಕನಸು ನನಸಾಗಿದೆ" ಎಂದು ಸಿಂಗಾಪುರ ಹೈ ಕಮಿಷನ್‌ ಟ್ವೀಟ್‌ ಮಾಡಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ