Viral Video: ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯದೆ ಮೊಟ್ಟೆ ಹೊರಕ್ಕೆ ತೆಗೆಯುವುದು ಹೇಗೆ? ಯೂಟ್ಯೂಬರ್‌ನ ಕರಾಮತ್ತು!
Oct 09, 2022 08:21 AM IST
Viral Video: ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯದೆ ಮೊಟ್ಟೆ ಹೊರಕ್ಕೆ ತೆಗೆಯುವುದು ಹೇಗೆ?
- ಯೂಟ್ಯೂಬರ್ ಮತ್ತು ಇನ್‌ಫ್ಲ್ಯೂನ್ಸರ್ ಆಗಿರುವ ಮ್ಯಾಕ್ಸ್ ಕ್ಲೈಮೆಂಕರ್ ಈ ವಿಡಿಯೋ ಹಂಚಿಕೊಂಡಿರುವುದು ಯೂಟ್ಯೂಬ್‌ನಲ್ಲಿ ಅಲ್ಲ. ಆತನ ಇನ್‌ಸ್ಟಾಗ್ರಾಂನಲ್ಲಿ "ಹೊಸ ರೀತಿಯಾಗಿ ಮೊಟ್ಟೆಯ ಸಿಪ್ಪೆ ತೆಗೆಯದೆ ಮೊಟ್ಟೆ ತೆಗೆಯುವುದು ಹೇಗೆ?ʼʼ ಎಂದು ತೋರಿಸಿಕೊಟ್ಟಿದ್ದಾನೆ.
Viral Video: ಇಂಟರ್‌ನೆಟ್‌ನಲ್ಲಿ ಪ್ರತಿದಿನ ಹಲವು ವಿಷಯಗಳು ವೈರಲ್ ಆಗುತ್ತವೆ. ದಿನದ ಯಾವುದಾದರೂ ವಿಶೇಷ ಘಟನೆ, ವಿಶೇಷ ವರದಿ, ವಿಶೇಷ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯುತ್ತಿದೆ. ಈ ವೈರಲ್ ಕಾಲದಲ್ಲಿ ದಿನ ಬೆಳಗಾಗುವುದರೊಳಗೆ ಕೆಲವರು ಫೇಮಸ್ ಆಗಿ ಬಿಡುತ್ತಾರೆ. ಇದೀಗ ಯೂಟ್ಯೂಬರ್‌ವೊಬ್ಬರು ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಕೊಂಚ ತೆಗೆದು ಅದರಿಂದ ಪೂರ್ತಿ ಮೊಟ್ಟೆಯನ್ನು ಹೊರಕ್ಕೆ ತೆಗೆಯುವ ವಿಡಿಯೋ ವೈರಲ್ ಆಗಿದ್ದು, ಬಗೆಬಗೆಯ ಕಾಮೆಂಟ್‌ಗಳಿಗೆ ಆಹಾರವಾಗಿದೆ.
ಯೂಟ್ಯೂಬರ್ ಮತ್ತು ಇನ್‌ಫ್ಲ್ಯೂನ್ಸರ್ ಆಗಿರುವ ಮ್ಯಾಕ್ಸ್ ಕ್ಲೈಮೆಂಕರ್ ಈ ವಿಡಿಯೋ ಹಂಚಿಕೊಂಡಿದ್ದಾನೆ. ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಮರುಹಂಚಿಕೆ ಮಾಡಿದ್ದಾನೆ. ಆತನ ಇನ್‌ಸ್ಟಾಗ್ರಾಂನಲ್ಲಿ "ಹೊಸ ರೀತಿಯಾಗಿ ಮೊಟ್ಟೆಯ ಸಿಪ್ಪೆ ತೆಗೆಯದೆ ಮೊಟ್ಟೆ ತೆಗೆಯುವುದು ಹೇಗೆ?ʼʼ ಎಂದು ತೋರಿಸಿಕೊಟ್ಟಿದ್ದಾನೆ. ಆತನು ಒಂದು ಕೈನಲ್ಲಿ ಮೊಟ್ಟೆಯನ್ನು ಹಿಡಿದು, ಅದರ ಎರಡು ಬದಿಗಳಲ್ಲಿಯೂ ಸಣ್ಣ ತೂತು ಮಾಡುತ್ತಾನೆ. ನೆನಪಿಡಿ, ಇದು ಬೇಯಿಸಿದ ಮೊಟ್ಟೆ.
"ಮೊಟ್ಟೆಯ ಸಿಪ್ಪೆ ತೆಗೆಯದೆ ಮೊಟ್ಟೆಯನ್ನು ಬಿಡಿಸುವುದು ಹೇಗೆ?ʼʼ ಎಂದು ಇದಕ್ಕೆ ಆತ ಟೈಟಲ್ ನೀಡಿದ್ದಾನೆ. ಇದಕ್ಕಾಗಿ ಮೊದಲನೆಯಾದಗಿ ಮೊಟ್ಟೆಯ ಕೆಳಭಾಗದಲ್ಲಿ ಒಂದು ದೊಡ್ಡ ತೂತು ಮಾಡಿ. ಇನ್ನೊಂದು ಬದಿಯಲ್ಲಿ ಸಣ್ಣ ತೂತು ಮಾಡಿʼʼ ಎಂದು ಆತ ವಿವರಿಸಿದ್ದಾನೆ. ಬಳಿಕ ಸಣ್ಣ ತೂತು ಇರುವ ಕಡೆ ಬಾಯಲ್ಲಿ ಫೂಫ್ ಎಂದು ಊದಿ ಎಂದು ಆತ ಟಿಪ್ಸ್ ನೀಡಿದ್ದಾನೆ. ಈ ಪ್ರಕ್ರಿಯೆ ನಿಮಗೆ ಅರ್ಥವಾಗಬೇಕಾದರೆ ಈ ಕೆಳಗೆ ನೀಡಲಾದ ವಿಡಿಯೋ ನೋಡಬೇಕು.
ಆತ ಊದುವಾಗ ಮೊಟ್ಟೆ ಹೊರಕ್ಕೆ ಬರುವುದಕ್ಕೆ ಬಗೆಬಗೆಯ ಕಾಮೆಂಟ್‌ಗಳು ಬಂದಿದೆ. ಕೆಲವರಿಗೆ ಇದು ಇಷ್ಟವಾಗಿದೆ. ಇನ್ನು ಕೆಲವರಿಗೆ ಇಷ್ಟವಾಗಿಲ್ಲ. "ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ನಿಮ್ಮ ಉಸಿರು, ಎಂಜಲು ತಾಗಿದ ಮೊಟ್ಟೆಯನ್ನು ನೀಡುವಿರಾ?ʼʼ ಎಂದು ಕೆಲವರು ಪ್ರಶ್ನಿಸಿದ್ದಾರೆ.
"ಮೊಟ್ಟೆಯನ್ನು ಪೂರ್ತಿ ಒಡೆಯದೆ ಮೊಟ್ಟೆ ಹೊರಕ್ಕೆ ತೆಗೆಯುವುದು ಹೇಗೆ?ʼʼ, "ಮೊಟ್ಟೆಯ ಸಿಪ್ಪೆ ಸುಳಿಯುವ ಅದ್ಭುತ ತಂತ್ರಗಳು", "ಬಾಯಲ್ಲಿ ಊದಿ ಮೊಟ್ಟೆ ಹೊರತೆಗೆಯುವುದು ಹೇಗೆ?ʼʼ ಇತ್ಯಾದಿ ಹಲವು ಹೆಡ್‌ಲೈನ್‌ಗಳನ್ನು ಕಾಮೆಂಟಿಗರು ನೀಡಿದ್ದಾರೆ.
ಆನ್‌ಲೈನ್ ಜಗತ್ತಿನಲ್ಲಿ ವೈರಲ್ ಆಗುವುದೆಂದರೆ ಹೀಗೆಯೇ. ಯಾವುದೇ ವಿಷಯವನ್ನು ಎಲ್ಲರಿಗಿಂತ ಭಿನ್ನವಾಗಿ ಮಾಡಲು ಪ್ರಯತ್ನಿಸಿದಾಗ ಅದು ಜನರ ಗಮನ ಸೆಳೆಯುತ್ತದೆ. ಅದರ ಒಳಿತು, ಕೆಡಕು ಏನೇ ಇರಲಿ, ಇಂಟರ್‌ನೆಟ್ ಜಗತ್ತು ಅದನ್ನು ವೈರಲ್ ಮಾಡುತ್ತಿದೆ. ಇದೇ ಕಾರಣಕ್ಕೆ ಸಾಕಷ್ಟು ಜನರು ವಾಟ್ಸಪ್, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಸಡನ್ ಜನಪ್ರಿಯತೆ ಪಡೆಯುತ್ತಾರೆ.
ಅಂದಹಾಗೆ, ನೀವು ಈ ರೀತಿ ಮೊಟ್ಟೆಯ ಸಿಪ್ಪೆಯನ್ನು ತೆಗೆಯಲು ಪ್ರಯತ್ನಿಸಿ. ಆ ಮೊಟ್ಟೆಯನ್ನು ನೀವೇ ತಿನ್ನಿ, ಬೇರೆಯವರಿಗೆ ನೀಡಬೇಡಿ.