logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Submarine Missing: ಟೈಟಾನಿಕ್ ವೀಕ್ಷಣೆಗೆ ತೆರಳಿದ್ದ ಸಬ್​ಮೆರಿನ್ ನಾಪತ್ತೆ; ಆಕ್ಸಿಜನ್ ಕುಸಿತ, ಪ್ರವಾಸಿಗರ ರಕ್ಷಣೆ ಅಸಾಧ್ಯ ಎಂದ ತಜ್ಞರು

Submarine Missing: ಟೈಟಾನಿಕ್ ವೀಕ್ಷಣೆಗೆ ತೆರಳಿದ್ದ ಸಬ್​ಮೆರಿನ್ ನಾಪತ್ತೆ; ಆಕ್ಸಿಜನ್ ಕುಸಿತ, ಪ್ರವಾಸಿಗರ ರಕ್ಷಣೆ ಅಸಾಧ್ಯ ಎಂದ ತಜ್ಞರು

Prasanna Kumar P N HT Kannada

Jun 21, 2023 12:13 PM IST

google News

ಸಬ್​ಮೆರಿನ್

    • ಟೈಟಾನಿಕ್​ ಹಡಗಿನ ವೀಕ್ಷಣೆಗೆಂದು ತೆರಳಿದ್ದ ಪೈಲಟ್‌ ಹಾಗೂ ನಾಲ್ವರು ಪ್ರವಾಸಿಗರಿದ್ದ ಸಬ್​ಮೆರಿನ್​ ನಾಪತ್ತೆಯಾಗಿದ್ದು, ಅವರಿಗೆ ಶೋಧ ನಡೆಸಲಾಗುತ್ತಿದೆ. ಆದರೆ ಅವರ ರಕ್ಷಣೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಬ್​ಮೆರಿನ್
ಸಬ್​ಮೆರಿನ್

ಲಂಡನ್: ಜಗತ್​ ಪ್ರಸಿದ್ಧಿ ಪಡೆದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿ ಅಟ್ಲಾಂಟಿಕ್​ ಸಾಗರದಲ್ಲಿ (Atlantic Ocean)​ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ನಾಪತ್ತೆಯಾಗಿದ್ದ ಸಬ್​ಮೆರಿನ್​ಗಾಗಿ (Submarine) ಶೋಧ ನಡೆಯುತ್ತಿದೆ. ಅದರಲ್ಲಿದ್ದ ಪೈಲೆಟ್​ ಮತ್ತು ಟೈಟಾನಿಕ್ ಅವಶೇಷಗಳನ್ನು ಕಣ್ತುಂಬಿಕೊಳ್ಳಲು ತೆರಳಿದ್ದ ನಾಲ್ವರ ಜಲಂತರ್ಗಾಮಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಸದ್ಯ ಆಮ್ಲಜನಕದ ಪ್ರಮಾಣ 30ಕ್ಕೆ ಕುಸಿದಿದ್ದು, ಪೈಲೆಟ್​ ಜೊತೆಗೆ ಪ್ರವಾಸಿಗರು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ವಿಶ್ವವಿಖ್ಯಾತ ದೈತ್ಯ ಟೈಟಾನಿಕ್ ಹಡಗು ಮುಳುಗಿ ದಶಕಗಳು ಕಳೆದಿವೆ. ಅದರೂ ಆ ಹಡಗಿನ ಬಗೆಗಿನ ಕೌತುಕ ಹೆಚ್ಚಾಗುತ್ತಲೇ ಇದೆ. ಈ ಹಡಗಿನ ಅವಶೇಷಗಳನ್ನು ನೋಡುವ ಕುತೂಹಲ ಎಲ್ಲರಿಗೂ ಇದೆ. ಈ ಹಡಗು ಉತ್ತರ ಅಟ್ಲಾಂಟಿಕ್​ ಸಾಗರದಲ್ಲಿ ಮುಳುಗಿದ್ದು, ಅವಶೇಷಗಳನ್ನು ಕಣ್ತುಂಬಿಕೊಳ್ಳುವುದು ಕೂಡ ಪ್ರವಾಸೋದ್ಯಮದ ಭಾಗ. ಮತ್ತೊಂದು ಏನೆಂದರೆ ಇದು ಬಲು ದುಬಾರಿ ಪ್ರವಾಸ. ಸದ್ಯ ನಾಪತ್ತೆಯಾದ ಸಬ್​ಮೆರಿನ್​​ನಲ್ಲಿ 96 ಗಂಟೆಗಳಿಗೆ ಮಾತ್ರ ಆಕ್ಸಿಜನ್​ ಪ್ರಮಾಣ ಇತ್ತು. ಇದೀಗ ಆಮ್ಲಜನಕ ಖಾಲಿಯಾಗುವ ಸಾಧ್ಯತೆ ಇದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಆಕ್ಸಿಜನ್ ಮುಗಿಯುತ್ತಾ ಬಂದಿದೆ

ಆಕ್ಸಿಜನ್ ಶೇ 30ರಷ್ಟಿದ್ದು,​​ ಖಾಲಿಯಾಗುವುದಕ್ಕೂ ಮೊದಲೇ ಸಬ್​ಮರಿನ್​ ಪತ್ತೆಗಾಗಿ ಶತ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಇದು ಕಷ್ಟ ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 7,600 ಸ್ಕ್ವೇರ್​-ಮೈಲ್ (20,000 ಅಡಿ​​) ಆಳವಿರುವ ಉತ್ತರ ಆಟ್ಲಾಂಟಿಕ್​​ನಲ್ಲಿ 2 ಮೈಲಿಗಳಿಗಿಂತ ಹೆಚ್ಚು ಆಳ ಪ್ರವೇಶಿಸುವುದು ಅಷ್ಟು ಸುಲಭವಲ್ಲ. ಮುಂದೆ ಹೋದಂತೆಲ್ಲಾ ಕಡು ಕಪ್ಪು, ಹೆಪ್ಪುಗಟ್ಟುವ ಚಳಿ. ನಿಮ್ಮ ಮುಖದ ಮುಂದಿರುವ ನಿಮ್ಮ ಕೈಯನ್ನೂ ನೀವು ನೋಡಲು ಸಾಧ್ಯವಾಗುವುದಿಲ್ಲ ಎಂದು ಟೈಟಾನಿಕ್ ತಜ್ಞ ಟಿಮ್ ಮಾಲ್ಟಿನ್ ಎನ್​​ಬಿಸಿ ನ್ಯೂಸ್ ನೌಗೆ ತಿಳಿಸಿದ್ದಾರೆ. ಇದು ನಿಜವಾಗಿಯೂ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳ ಪರಿಸ್ಥಿತಿಯಂತಾಗಿದೆ ಎಂದಿದ್ದಾರೆ ಅವರು.

ಒಂದು ಟಿಕೆಟ್ ಬೆಲೆ 20 ಲಕ್ಷ

ಸದ್ಯ ಕಣ್ಮರೆಯಾದ ಟೈಟಾನ್ ಎಂದು ಹೆಸರಿಸಲಾದ 21-ಅಡಿ (6.5-ಮೀಟರ್) ಜಲಂತರ್ಗಾಮಿಯಲ್ಲಿ ಪ್ರಯಾಣಿಸಿದವರು ಮೂರು ಪಟ್ಟು ಹಣ ಪಾವತಿಸಿದ್ದಾರೆ. ಎಲ್ಲರೂ ಬಿಲಿಯನೇರ್​​​ಗಳು ಎಂಬುದು ವಿಶೇಷ. ಬ್ರಿಟಿಷ್​ ವ್ಯಕ್ತಿ ಹಮೀಶ್ ಹಾರ್ಡಿಂಗ್, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ದಾವೂದ್ ಅವರ ಮಗ ಸುಲೇಮಾನ್ ಜಲಂತರ್ಗಾಮಿಯಲ್ಲಿದ್ದರು ಎಂಬುದು ತಿಳಿದು ಬಂದಿದೆ. ಟೈಟಾನಿಕ್ ಅವಶೇಷಗಳನ್ನು ಕಣ್ತುಂಬಿಕೊಳ್ಳಲು ಇಚ್ಛಿಸುವ ಪ್ರವಾಸಿಗರು 2,50,000 ಡಾಲರ್ (20,497,987) (ಒಂದು ಆಸನಕ್ಕೆ) ಶುಲ್ಕ ಪಾವತಿಸಬೇಕಾಗುತ್ತದೆ.

ಅಗತ್ಯ ಸಲಕರಣೆಗಳು ಇಲ್ಲ

ಓಷಿಯನ್‌ ಗೇಟ್‌ ಎಕ್ಸ್‌ ಪೆಡಿಷನ್ಸ್‌ ಕಾರ್ಯನಿರ್ವಹಣೆಯ ಜಲಂತರ್ಗಾಮಿ, ಹಡಗಿನ ಸಂಪರ್ಕ ಕಳೆದುಕೊಂಡಿರುವ ಕುರಿತು ಅಮೆರಿಕ ಕರಾವಳಿ ಕಾವಲು ಪಡೆಗೆ ಕರೆ ಬಂದಿರುವುದಾಗಿ ಬಾಸ್ಟನ್‌ನಲ್ಲಿ ಕರಾವಳಿ ಕಾವಲು ವಕ್ತಾರೆ ಲೆಫ್ಟಿನೆಂಟ್ ಸಮಂತಾ ಕೋರ್ಕೊರನ್ ಮಾಹಿತಿ ನೀಡಿದ್ದರು. ಯುಎಸ್ ಕೋಸ್ಟ್ ಗಾರ್ಡ್ ಕ್ಯಾಪ್ಟನ್ ಜೇಮೀ ಫ್ರೆಡೆರಿಕ್, ತಮ್ಮ ಸಂಸ್ಥೆಯು ಹುಡುಕಾಟದಲ್ಲಿ ನಿರತವಾಗಿದೆ. ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುಎಸ್ ಕೋಸ್ಟ್ ಗಾರ್ಡ್ ಹುಡುಕಾಟದ ಜವಾಬ್ದಾರಿ ವಹಿಸಿಕೊಂಡಿದ್ದರೂ ಅಗತ್ಯವಿರುವ ಪರಿಣತಿ ಮತ್ತು ಸಲಕರಣೆ ಹೊಂದಿಲ್ಲ ಎಂದು ಹೇಳಿದ್ದಾರೆ.

ರೇಡಾರ್ ಸಾಮರ್ಥ್ಯವುಳ್ಳ ಎಸಿ-130 ವಿಮಾನವನ್ನು ಕಣ್ಮರೆಯಾದ ಸಬ್​ಮೆರಿನ್​ ಹುಟುಕಾಟಕ್ಕೆ ರವಾನಿಸಲಾಗಿದೆ. ರೇಡಾರ್ ಸಾಮರ್ಥ್ಯವುಳ್ಳ ಎಸಿ-130 ವಿಮಾನವನ್ನು ಕಣ್ಮರೆಯಾದ ಸಬ್​ಮೆರಿನ್​ ಹುಟುಕಾಟಕ್ಕೆ ರವಾನಿಸಲಾಗಿದೆ. ಕೆನಡಾದ ಯುದ್ಧ ನಿಗ್ರಹ ವ್ಯವಸ್ಥೆಯನ್ನು ಹೊಂದಿರುವ 8-ಪೊಸೀಡಾನ್ ವಿಮಾನವೂ ಇದರ ಜೊತೆ ಸೇರಿದೆ. ಇಲ್ಲಿಯವರೆಗೆ, ಹುಡುಕಾಟಗಳು ಫಲಪ್ರದವಾಗಿಲ್ಲ ಎಂದು ಸಾಬೀತಾಗಿದೆ. 

ರಕ್ಷಣೆ ಸಾಹಸದಾಯಕ ಕೆಲಸ

ಬೃಹತ್ ಪೈಪ್-ಲೇಯಿಂಗ್ ಹಡಗಿನ ಮೂಲಕ ಈ ಪ್ರಯತ್ನ ಸುದೀರ್ಘವಾಗಿ ಶೋಧ ನಡೆಸಲಾಗುತ್ತಿದೆ. 1985ರಲ್ಲಿ ಟೈಟಾನಿಕ್ ಅನ್ನು ಕಂಡುಹಿಡಿಯಲು ಬಳಸಿದ ಆಪ್ಟಿಕಲ್ ಇಮೇಜಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದ ತಂಡಗಳೇ ಮೂರು ಪ್ರತ್ಯೇಕ ಸ್ಥಳಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಬ್ರಿಟನ್‌ನ ಕೀಲೆ ವಿಶ್ವವಿದ್ಯಾನಿಲಯದ ಫೊರೆನ್ಸಿಕ್ ಜಿಯೋಸೈನ್ಸ್‌ನ ಪ್ರೊಫೆಸರ್ ಜೇಮೀ ಪ್ರಿಂಗಲ್ ಮಾತನಾಡಿದ್ದು, ಮಿನಿ-ಸಬ್​ಮೆರಿನ್​ ಸಾಗರದಾಳದಲ್ಲಿ ಅಡಗಿದ್ದರೆ, ಅದನ್ನು ಗುರುತಿಸುವುದು ತುಂಬಾ ಕಷ್ಟ. ಸಮುದ್ರದ ತಳವು ಸಮತಟ್ಟಾಗಿಲ್ಲ. ಸಾಕಷ್ಟು ಬೆಟ್ಟಗಳು ಮತ್ತು ಕಣಿವೆಗಳಿಂದ ಕೂಡಿದೆ. ಅವರನ್ನು ರಕ್ಷಿಸುವುದು ಸಾಹಸದಾಯಕ ಎಂದು ಪ್ರಿಂಗಲ್ ಹೇಳಿದ್ದಾರೆ.

1912ರಲ್ಲಿ ಹಡಗು ಮುಳುಗಿತ್ತು

ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಆದರೆ ಪ್ರಯಾಣದ ವೇಳೆ ಬೃಹತ್ ಮಂಜುಗಡ್ಡೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹಡಗು ಮುಳುಗಡೆಯಾಗಿತ್ತು. ಈ ಘಟನೆಯಿಂದ 1500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಈ ದುರಂತದಲ್ಲಿ ಸಾಕಷ್ಟು ಮಂದಿಯ ಮೃತದೇಹಗಳು ಪತ್ತೆನೇ ಆಗಿರಲಿಲ್ಲ. 1985ರಲ್ಲಿ ಟೈಟಾನಿಕ್​ ಅವಶೇಷವನ್ನು ಪತ್ತೆ ಮಾಡಲಾಗಿತ್ತು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ