logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಥುರಾ, ಸಂಭಾಲ್‌ನಿಂದ ಮಂಗಳೂರು ಮಳಲಿ ತನಕ ಪೂಜಾ ಸ್ಥಳ ವಿವಾದ; ಭಾರತದ 10 ಪ್ರಮುಖ ದೇಗುಲ- ಮಸೀದಿ ವಿವಾದಗಳ ಚಿತ್ರಣ

ಮಥುರಾ, ಸಂಭಾಲ್‌ನಿಂದ ಮಂಗಳೂರು ಮಳಲಿ ತನಕ ಪೂಜಾ ಸ್ಥಳ ವಿವಾದ; ಭಾರತದ 10 ಪ್ರಮುಖ ದೇಗುಲ- ಮಸೀದಿ ವಿವಾದಗಳ ಚಿತ್ರಣ

Dec 16, 2024 08:30 PM IST

Mosque Temple Disputes: ಭಾರತದಲ್ಲಿ ಯಾವುದೇ ಪೂಜಾ ಸ್ಥಳದ ಮಾಲೀಕತ್ವಕ್ಕೆ ಸಂಬಂಧಿಸಿದ ಹೊಸ ವ್ಯಾಜ್ಯಗಳನ್ನು ಸ್ವೀಕರಿಸದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 12 ರಂದು ಸಿವಿಲ್ ನ್ಯಾಯಾಲಯಗಳಿಗೆ ಸೂಚಿಸಿದೆ. ವಿವಾದಿತ ಧಾರ್ಮಿಕ ಸ್ಥಳಗಳ ಸಮೀಕ್ಷೆಗೂ ಆದೇಶ ನೀಡದಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಪ್ರಮುಖ 10 ಮಸೀದಿ- ದೇಗುಲ ವಿವಾದಗಳ ವಿವರ ಹೀಗಿದೆ.

ಅಯೋಧ್ಯೆಯ ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದ ಇತ್ಯರ್ಥವಾದ ಬಳಿಕ ಉಳಿದ ದೇಗುಲ- ಮಸೀದಿ ವಿವಾದಗಳು ಮುನ್ನೆಲೆಗೆ ಬಂದಿವೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಡಿಸೆಂಬರ್ 12 ರಂದು, ಈಗ “ಬಾಕಿಯಿರುವ ಮೊಕದ್ದಮೆಗಳಲ್ಲಿ, ನ್ಯಾಯಾಲಯಗಳು ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಪರಿಣಾಮಕಾರಿ ಮಧ್ಯಂತರ ಆದೇಶಗಳನ್ನು ಅಥವಾ ಅಂತಿಮ ಆದೇಶಗಳನ್ನು ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಸದ್ಯ ಇತ್ಯರ್ಥಕ್ಕೆ ಬಾಕಿ ಇರುವ ಪ್ರಮುಖ 10 ಮಸೀದಿ ದೇಗುಲ ವಿವಾದಗಳ ವಿವರ ಇಲ್ಲಿದೆ.
(1 / 11)

ಉತ್ತರ ಪ್ರದೇಶದ ವಾರಾಣಸಿ ಜ್ಞಾನವಾಪಿ ಮಸೀದಿ: ಕಾಶಿ ವಿಶ್ವನಾಥ ದೇವಸ್ಥಾನದ ಬದಿಗೆ ಮಸೀದಿ ನಿರ್ಮಿಸಲಾಗಿದೆ ಎಂದು 1991ರಲ್ಲಿ ದೇವರ ಪರವಾಗಿ ಮೊಕದ್ದಮೆ ದಾಖಲಾಯಿತು. 2021ರಲ್ಲಿ ಐವರು ಹಿಂದೂ ಮಹಿಳೆಯರು ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ ಜ್ಞಾನವಾಪಿ ಮಸೀದಿಯೊಳಗೆ ದೇವರ ವಿಗ್ರಹಗಳಿದ್ದು, ಅದರ ಪೂಜೆ ಅವಕಾಶ ನೀಡಬೇಕು ಎಂದು ಕೋರಿ ದಾವೆ ಹೂಡಿದರು. ಇದರ ವಿಚಾರಣೆಯ ನಡೆಸಿದ ವಾರಾಣಸಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಎಎಸ್‌ಐ ಸಮೀಕ್ಷೆಗೆ ಆದೇಶಿಸಿದರು. 2023ರಲ್ಲಿ ಭಕ್ತರು ಸಲ್ಲಿಸಿದ ಮೊಕದ್ದಮೆಯ ವಿಚಾರಣೆಯನ್ನು ಎತ್ತಿಹಿಡಿದರಲ್ಲದೆ, 2024ರ ಜನವರಿಯಲ್ಲಿ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿ ತೀರ್ಪು ನೀಡಿದರು.
(2 / 11)

ಉತ್ತರ ಪ್ರದೇಶದ ಲಕ್ನೋ ತೀಲೆ ವಾಲಿ ಮಸೀದಿ (ಆಲಂಗಿರಿ ಮಸೀದಿ): 2013ರಲ್ಲಿ, ಲಕ್ನೋದ ಲಕ್ಷ್ಮಣ ಟೀಲಾದಲ್ಲಿರುವ ತೀಲೆ ವಾಲಿ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಕೋರಿ ಶೇಷ ನಾಗೇಶ್‌ ತೀಲೇಶ್ವರ ಮಹಾದೇವರ ಎಂಟು ಭಕ್ತರು ದಾವೆ ಹೂಡಿದರು. ಮೊಘಲ್ ದೊರೆ ಔರಂಗಜೇಬ್ ಆ ಸ್ಥಳದಲ್ಲಿ ಹಿಂದೂ ದೇವಾಲಯವನ್ನು ಕೆಡವಿದ ನಂತರ ಮಸೀದಿಯನ್ನು ನಿರ್ಮಿಸಿದ ಎಂದು ಆ ದಾವೆಯಲ್ಲಿ ಪ್ರತಿಪಾದಿಸಲಾಗಿದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಇದರ ವಿಚಾರಣೆ ಬಾಕಿ ಇದೆ. ಮಸೀದಿ ಆವರಣದಲ್ಲಿಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬಾರದು ಎಂದು ತಡೆಯಾಜ್ಞೆ ಕೋರಿಮತ್ತೊಂದು ದಾವೆಯು ಲಕ್ನೋದ ಸಿವಿಲ್ ನ್ಯಾಯಾಧೀಶರ ಮುಂದೆಬಾಕಿ ಇದೆ.
(3 / 11)

ಉತ್ತರ ಪ್ರದೇಶದ ಬುಡೌನ್‌ನಲ್ಲಿರುವ ಶಮ್ಸಿ ಜಮಾ ಮಸೀದಿ: 2022ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾವು ನೀಲಕಂಠ ಮಹಾದೇವನ ದೇವಾಲಯದ ಮೂಲ ಸ್ಥಳ ಅದು ಎಂದು ಪ್ರತಿಪಾದಿಸಿ, ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿದೆ. ಇದಲ್ಲದೆ, ನಿವೇಶನದ ಸಮೀಕ್ಷೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಬುಡೌನ್‌ನಲ್ಲಿರುವ ತ್ವರಿತ ನ್ಯಾಯಾಲಯವು ಪ್ರಸ್ತುತ ಮೊಕದ್ದಮೆಯ ವಿಚಾರಣೆಯ ನಡೆಸುತ್ತಿದ್ದು ವಾದಗಳನ್ನು ಆಲಿಸುತ್ತಿದೆ.
(4 / 11)

ಉತ್ತರ ಪ್ರದೇಶದ ಜೌನ್‌ಪುರದಲ್ಲಿರುವ ಅಟಾಲಾ ಮಸೀದಿ: ಸ್ವರಾಜ್ ವಾಹಿನಿ ಅಸೋಸಿಯೇಷನ್ 2024ರ ಮೇ ತಿಂಗಳಲ್ಲಿ ಅಟಾಲಾ ದೇವಿಗೆ ಸಮರ್ಪಿತವಾದ ಪುರಾತನ ದೇವಾಲಯ ಇರುವಲ್ಲೇ ಮಸೀದಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ ಆಸ್ತಿ ಸ್ವಾಧೀನಕ್ಕೆ ದಾವೆ ಹೂಡಿತು. ಅಲ್ಲಿ ಹಿಂದೂಯೇತರರು ಪ್ರವೇಶಿಸದಂತೆ ತಡೆಯಾಜ್ಞೆ ಕೋರಿ ಮೊಕದ್ದಮೆ ದಾಖಲಿಸಿತು. ಈಗ ನಿವೇಶನ ಸಮೀಕ್ಷೆಗೆ ಆದೇಶ ನೀಡಲಾಗಿದ್ದು, ಜೌನ್‌ಪುರ್ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 16 ರಂದು ಭೂಮಾಪನ ಪ್ರಾಧಿಕಾರಕ್ಕೆ ಭದ್ರತೆ ಒದಗಿಸುವ ಮನವಿಯ ವಿಚಾರಣೆಯನ್ನು ನಡೆಸಲಿದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ದಾವೆ ಇದೆ.
(5 / 11)

ಉತ್ತರ ಪ್ರದೇಶದ ಮಥುರಾ ಶಾಹಿ ಈದ್ಗಾ ಮಸೀದಿ: ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡು ಅದನ್ನು ಅಲ್ಲಿಂದ ತೆರವುಗೊಳಿಸುವಂತೆ ಕೋರಿ 2020 ರಿಂದ ಹಲವಾರು ದಾವೆಗಳನ್ನು ಸಲ್ಲಿಕೆಯಾಗಿವೆ. ಈ ಮೊಕದ್ದಮೆಗಳು 1968 ರ 'ರಾಜಿ ಒಪ್ಪಂದ'ದ ಸಿಂಧುತ್ವವನ್ನು ಸಹ ಪ್ರಶ್ನಿಸುತ್ತವೆ. ಅಲಹಾಬಾದ್ ಹೈಕೋರ್ಟ್ 2023ರ ಮೇ ತಿಂಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಮೊಕದ್ದಮೆಗಳನ್ನು ತನ್ನ ಪೀಠಕ್ಕೆ ವರ್ಗಾಯಿಸಿಕೊಂಡಿತು. 2024ರ ಆಗಸ್ಟ್‌ನಲ್ಲಿ ದಾವೆಗಳ ವಿಚಾರಣೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿತು. ಮಸೀದಿ ಸಮಿತಿಯು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
(6 / 11)

ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿ: ವಕೀಲ ಹರಿ ಶಂಕರ್ ಜೈನ್ ಸೇರಿ ಎಂಟು ಅರ್ಜಿದಾರರು ನವೆಂಬರ್ 19 ರಂದು ಜಮಾ ಮಸೀದಿಯನ್ನು "ಕಲ್ಕಿ ಭಗವಂತನಿಗೆ ಸಮರ್ಪಿತ ಶ್ರೀ ಹರಿಹರ ದೇವಸ್ಥಾನ" ದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ. ಪ್ರಾಚೀನ ಸ್ಮಾರಕಗಳ ಕಾನೂನು ಪ್ರಕಾರ ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶಿಸುವ ಹಕ್ಕಿದೆ ಎಂದು ಪ್ರತಿಪಾದಿಸಿದರು.  ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ), ಸಂಭಾಲ್ ಸಮೀಕ್ಷೆಗೆ ಆದೇಶಿಸಿದರು. ಸಮೀಕ್ಷಾ ತಂಡವು ಅಲ್ಲಿಗೆ ತೆರಳುತ್ತಿದ್ದಂತೆ ಹಿಂಸಾಚಾರ ಶುರುವಾಯಿತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಮೀಕ್ಷೆ ಆದೇಶ ವಿಚಾರಣೆಗೆ ಎತ್ತಿಕೊಳ್ಳುವ ತನಕ ಸಮೀಕ್ಷೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ ನವೆಂಬರ್ 29ರಂದು ಆದೇಶ ನೀಡಿತು. 
(7 / 11)

ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದ ಕುವ್ವಾತ್-ಉಲ್-ಇಸ್ಲಾಂ ಮಸೀದಿ:  ದೆಹಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದೊಳಗೆ ಇರುವ ಕುವ್ವಾತ್-ಉಲ್-ಇಸ್ಲಾಂ ಮಸೀದಿಯು ದೇವಾಲಯದ ಮೇಲೆ ನಿರ್ಮಿಸಲಾಗಿದೆ. ಅಲ್ಲಿ ಹಿಂದೂ ಜೈನ ದೇವತೆಗಳನ್ನು ಮರುಸ್ಥಾಪಿಸಲು ಕೋರಿ ವಿಷ್ಣು ದೇವರ ಪರವಾಗಿ 2020ರಲ್ಲಿ ಮೊಕದ್ದಮೆ ದಾಖಲಾಗಿದೆ. ಮಸೀದಿ ನಿರ್ಮಿಸುವುದಕ್ಕಾಗಿ 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ ಎಂದು ಪ್ರತಿಪಾದಿಸಲಾಯಿತು. ದೆಹಲಿಯ ಸಿವಿಲ್ ನ್ಯಾಯಾಧೀಶರು 2021 ರಲ್ಲಿ ಮೊಕದ್ದಮೆಯನ್ನು ತಿರಸ್ಕರಿಸಿದ್ದು, ಇದು ಪೂಜಾ ಸ್ಥಳಗಳ ಕಾಯಿದೆ, 1991 ರ ನಿಬಂಧನೆಗಳಿಂದ ನಿರ್ಬಂಧಿಸಲ್ಪಟ್ಟಿದೆ ಎಂದು ಹೇಳಿದ್ದರು. ಆದರೆ ಈ ಆದೇಶದ ಮೇಲ್ಮನವಿ ಜಿಲ್ಲಾ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿ ಇದೆ. 
(8 / 11)

ರಾಜಸ್ಥಾನದ ಅಜ್ಮೀರ್‌ನಲ್ಲಿರುವ ದರ್ಗಾ ಶರೀಫ್: ಅಜ್ಮೀರ್ ಷರೀಫ್ ದರ್ಗಾದ ಸ್ಥಳದಲ್ಲಿ ಶಿವನಿಗೆ ಸಮರ್ಪಿತವಾದ ದೇವಾಲಯದ ಪುರಾವೆಗಳಿವೆ ಎಂದು ಪ್ರತಿಪಾದಿಸಿ 2024ರ ಸೆಪ್ಟೆಂಬರ್ ತಿಂಗಳಲ್ಲಿ ಹಿಂದೂ ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಸಿವಿಲ್ ಮೊಕದ್ದಮೆಯನ್ನು ಸಲ್ಲಿಸಿದರು. ಅಜ್ಮೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶರು ನವೆಂಬರ್ 27ರಂದು ಪುರಾತತ್ತ್ವ ಸರ್ವೇಕ್ಷಣಾ ಸಂಸ್ಥೆ ಎಎಸ್‌ಐ, ಅಜ್ಮೀರ್ ದರ್ಗಾ ಸಮಿತಿ, ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದರು.
(9 / 11)

ಮಧ್ಯಪ್ರದೇಶದ ಧಾರ್‌ನ ಭೋಜಶಾಲಾ ಸಂಕೀರ್ಣದ ಕಮಲ್ ಮೌಲಾ ಮಸೀದಿ: ಶುಕ್ರವಾರ ಭೋಜಶಾಲಾ ಸಂಕೀರ್ಣದೊಳಗೆ ಮುಸ್ಲಿಮರು ನಮಾಜ್ ಮಾಡಲು ಅವಕಾಶ ನೀಡುವ 2003ರ ಎಎಸ್‌ಐ ಆದೇಶವನ್ನು ಪ್ರಶ್ನಿಸಿ ಹಿಂದೂ ಫ್ರಂಟ್ ಫಾರ್ ಜಸ್ಟಿಸ್ 2022 ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. 2024ರ ಮಾರ್ಚ್‌ನಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಹೈಕೋರ್ಟ್‌ ಆದೇಶ ನೀಡಿದೆ. ಆವರಣದ ಸ್ವರೂಪ ಬದಲಾಯಿಸುವ ಯಾವುದೇ ಉತ್ಖನನವನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ ಏಪ್ರಿಲ್‌ನಲ್ಲಿ ಆದೇಶ ನೀಡಿತು. ಎಎಸ್‌ಐ ಜುಲೈನಲ್ಲಿ ಇದಕ್ಕೆ ಸಂಬಂಧಿಸಿದ ವರದಿ ಸಲ್ಲಿಸಿದ್ದು, ದೇವಾಲಯದ ಭಾಗವನ್ನು ಬಳಸಿ ಮಸೀದಿ ನಿರ್ಮಿಸಲಾಗಿದೆ ಎಂದು ತಿಳಿಸಿತು.
(10 / 11)

ಕರ್ನಾಟಕದ ಮಂಗಳೂರಿನ ಮಳಲಿ ಜುಮಾ ಮಸೀದಿ: ಮಂಗಳೂರು ಮಳಲಿ ಸಮೀಪ ಮಸೀದಿ ನವೀಕರಿಸುತ್ತಿದ್ದಾಗ ಅದರ ಒಳಗೆ ದೇವಾಲಯದಂತಹ ರಚನೆ ಕಂಡು ಬಂದ ಕಾರಣ, 2022ರಲ್ಲಿ ವಿಶ್ವ ಹಿಂದೂ ಪರಿಷತ್ ಮೊಕದ್ದಮೆ ದಾಖಲಿಸಿತು. ಸ್ಥಳ ಸಮೀಕ್ಷೆ ನಡೆಸಲು ಆಗ್ರಹಿಸಿತು. ವಿಚಾರಣಾ ನ್ಯಾಯಾಲಯದ ತೀರ್ಮಾನ ಬಂದ ಬಳಿಕ ಮುಂದಿನದ್ದು ನಿರ್ಧರಿಸೋಣ ಎಂದು 2024ರ ಜನವರಿ 31ರಂದು ಕರ್ನಾಟಕ ಹೈಕೋರ್ಟ್‌ ಹೇಳಿತು. ಇದು ವಿಚಾರಣಾ ನ್ಯಾಯಾಲಯದ ಹಂತದಲ್ಲಿದೆ.
(11 / 11)

    ಹಂಚಿಕೊಳ್ಳಲು ಲೇಖನಗಳು