logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tanuja Special Screening: ವಿದ್ಯಾರ್ಥಿಗಳ ಜತೆ ‘ತನುಜಾ’ ಚಿತ್ರ ವೀಕ್ಷಿಸಿ ‘ಬೆಳದಿಂಗಳ ಬಾಲೆ’ ಬಗ್ಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತು

Tanuja Special Screening: ವಿದ್ಯಾರ್ಥಿಗಳ ಜತೆ ‘ತನುಜಾ’ ಚಿತ್ರ ವೀಕ್ಷಿಸಿ ‘ಬೆಳದಿಂಗಳ ಬಾಲೆ’ ಬಗ್ಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತು

Feb 19, 2023 12:52 PM IST

Tanuja Special Screening: ಹರೀಶ್‌ ಎಂ.ಡಿ ಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿದ್ದ ತನುಜಾ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು. ನೈಜ ಘಟನೆ ಆಧರಿತ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರವನ್ನು ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಣೆ ಮಾಡಿದ್ದಾರೆ. ಅದೂ ಸಾವಿರಾರು ಮಕ್ಕಳ ಜತೆಗೆ ಎಂಬುದು ವಿಶೇಷ. ಇದೇ ವೇಳೆ ತಾವು ಕೊನೆಯದಾಗಿ ವೀಕ್ಷಿಸಿದ ಸಿನಿಮಾ ಯಾವುದೆಂದೂ ಹೇಳಿದ್ದಾರೆ ಸ್ವಾಮೀಜಿ.

  • Tanuja Special Screening: ಹರೀಶ್‌ ಎಂ.ಡಿ ಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿದ್ದ ತನುಜಾ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು. ನೈಜ ಘಟನೆ ಆಧರಿತ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರವನ್ನು ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಣೆ ಮಾಡಿದ್ದಾರೆ. ಅದೂ ಸಾವಿರಾರು ಮಕ್ಕಳ ಜತೆಗೆ ಎಂಬುದು ವಿಶೇಷ. ಇದೇ ವೇಳೆ ತಾವು ಕೊನೆಯದಾಗಿ ವೀಕ್ಷಿಸಿದ ಸಿನಿಮಾ ಯಾವುದೆಂದೂ ಹೇಳಿದ್ದಾರೆ ಸ್ವಾಮೀಜಿ.
ಕೋವಿಡ್‌ ಸಮಯದಲ್ಲಿ ನೀಟ್‌ ಪರೀಕ್ಷೆ ಬರೆದು ಪಾಸಾಗಿ ಎಲ್ಲರ ಗಮನ ಸೆಳೆದ ತನುಜಾಳ ಆ ಸಾಹಸದ ಕಥೆಯೇ ಈ ಸಿನಿಮಾ. ಮಾಜಿ ಸಿಎಂ ಬಿಎಸ್‌ವೈ, ಆರೋಗ್ಯ ಸಚಿವ ಸುಧಾಕರ್ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ್‌ ಭಟ್‌ ಈ ಚಿತ್ರದಲ್ಲಿ ನಟಿಸಿದ್ದಾರೆ. 
(1 / 5)

ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಈ ಚಿತ್ರವನ್ನು ಮಕ್ಕಳಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿತ್ತು.  ಅದರಂತೆ ಆದಿಚುಂಚನಗಿರಿ ಮಠದ ಮಕ್ಕಳು ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಹ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(2 / 5)

ಸಿನಿಮಾ ನೋಡಿದ ಬಳಿಕ ಮಾತನಾಡಿದ ನಿರ್ಮಲಾನಂದ ಸ್ವಾಮೀಜಿ, ತಾವು ವೀಕ್ಷಿಸಿದ ಕೊನೆಯ ಚಿತ್ರ ಬೆಳದಿಂಗಳ ಬಾಲೆ ಬಗ್ಗೆ ಮಾತನಾಡಿದರು. ಆ ಚಿತ್ರದ ಮೂಲ ಕಾದಂಬರಿಯನ್ನು ಸಾಧ್ಯವಾದರೆ ಎಲ್ಲ ಮಕ್ಕಳೂ ಓದಿ ಎಂದರು.
(3 / 5)

ಹರೀಶ್ ಎಂ.ಡಿ ಹಳ್ಳಿ ಈ ಚಿತ್ರ ನಿರ್ದೇಶಿಸಿದರೆ, ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ ನಿರ್ಮಾಪಕರು. ಪ್ರಕಾಶ್ ಮದ್ದೂರು, ಅನಿಲ್ ಶಡಕ್ಷರಿ, ಗಿರೀಶ ಗೋವರ್ಧನ ಬಿ, ಅವಿನಾಶ್ ಗೌಡ ಸಹ ನಿರ್ಮಾಪರಾಗಿ ಸಾಥ್‌ ನೀಡಿದ್ದಾರೆ.
(4 / 5)

ರಘುನಂದನ್ ಎಸ್ ಕೆ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರದ್ಯೋತನ ಸಂಗೀತ ನೀಡಿರುವ ಈ ಚಿತ್ರಕ್ಕೆ ಉಮೇಶ್ ಆರ್.ಬಿ ಸಂಕಲನವಿದೆ. ರವೀಂದ್ರನಾಥ್. ಟಿ ಛಾಯಾಗ್ರಹಣ ಮಾಡಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು