logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bengaluru-mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚುತ್ತಿದೆ ಅಪಘಾತಗಳು: ಇದರ ತಡೆಗಿಲ್ಲ ಕ್ರಮ

Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚುತ್ತಿದೆ ಅಪಘಾತಗಳು: ಇದರ ತಡೆಗಿಲ್ಲ ಕ್ರಮ

Mar 14, 2023 04:55 PM IST

ಭಾನುವಾರವಷ್ಟೇ (ಮಾ.12) ಉದ್ಘಾಟನೆಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಉದ್ಘಾಟನೆಯ ದಿನವೇ ಮದ್ದೂರು ಸಮೀಪ ಅಪಘಾತ ಸಂಭವಿಸಿತ್ತು. ಇಂದು ಚನ್ನಪಟ್ಟಣ ಸಮೀಪ ಅಪಘಾತ ನಡೆದಿದೆ. ದಶಪಥ ರಸ್ತೆಯಲ್ಲಿ ವೇಗದ ಮಿತಿಯ ಸೂಚನಾ ಫಲಕವಿಲ್ಲದೇ ಇರುವುದರಿಂದ ವಾಹನ ಸವಾರರು ಯರ್ರಾಬಿರ್ರಿ ವಾಹನ ಚಲಾಯಿಸುತ್ತಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

  • ಭಾನುವಾರವಷ್ಟೇ (ಮಾ.12) ಉದ್ಘಾಟನೆಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಉದ್ಘಾಟನೆಯ ದಿನವೇ ಮದ್ದೂರು ಸಮೀಪ ಅಪಘಾತ ಸಂಭವಿಸಿತ್ತು. ಇಂದು ಚನ್ನಪಟ್ಟಣ ಸಮೀಪ ಅಪಘಾತ ನಡೆದಿದೆ. ದಶಪಥ ರಸ್ತೆಯಲ್ಲಿ ವೇಗದ ಮಿತಿಯ ಸೂಚನಾ ಫಲಕವಿಲ್ಲದೇ ಇರುವುದರಿಂದ ವಾಹನ ಸವಾರರು ಯರ್ರಾಬಿರ್ರಿ ವಾಹನ ಚಲಾಯಿಸುತ್ತಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.
ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಕಾರೊಂದು ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿ ಆಗಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. 
(1 / 7)

ಚನ್ನಪಟ್ಟಣ ಸಮೀಪ ಅಪಘಾತ ಸಂಭವಿಸಿದ್ದು, ಸೀಟ್​ ಬೆಲ್ಟ್ ಧರಿಸದ ಕಾರಣ ಕಾರು ಚಾಲಕ ಹೊರಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. 
(2 / 7)

118 ಕಿಮೀ ಉದ್ದದ  ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅನ್ನು ಮೊನ್ನೆ ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. 
(3 / 7)

ಬೆಂಗಳೂರು ಮತ್ತು ಮೈಸೂರು ನಗರಗಳ ನಡುವಿನ ಸಂಚಾರ ಅವಧಿಯನ್ನು ಮೂರು ಗಂಟೆಗಳಿಂದ ಕೇವಲ 75 ನಿಮಿಷಗಳಿಗೆ ಈ ಎಕ್ಸ್​ಪ್ರೆಸ್​​ವೇ ಕಡಿಮೆ ಮಾಡಲಿದೆ. 
(4 / 7)

ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ. ಬೇಗ ನಗರ ತಲುಪುವ ಧಾವಂತದಲ್ಲಿ ಸ್ಪೀಟ್​ ಲಿಮಿಟ್​ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. 
(5 / 7)

ಆದರೆ ಅಪಘಾತಗಳನ್ನು ತಪ್ಪಿಸಲು  ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಎಕ್ಸ್‌ಪ್ರೆಸ್‌ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ದೊಡ್ಡ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಓವರ್​​ಪಾಸ್​​ಗಳನ್ನು ಹೊಂದಿದೆ. ಆದರೆ ಎಲ್ಲಿಯೂ ವೇಗದ ಮಿತಿಯ ಸೂಚನಾ ಫಲಕವಿಲ್ಲ. 
(6 / 7)

ಕಳೆದ 6 ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 84ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸೌಲಭ್ಯಗಳು ಸಿಗುವುದಿಲ್ಲ. ಹೆದ್ದಾರಿಯ ಮಧ್ಯದಲ್ಲಿ ರಸ್ತೆ ವಿಭಜಕವಿದ್ದು, ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಹಾಗೂ ಯೂಟರ್ನ್ ಇಲ್ಲ. ಹೀಗಾಗಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.    
(7 / 7)

    ಹಂಚಿಕೊಳ್ಳಲು ಲೇಖನಗಳು