logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Agreement B/w Husband And Two Wives: ಇಬ್ಬರು ಹೆಂಡಿರ ಮುದ್ದಿನ ಗಂಡನ ಕಂಡುಕೊಂಡ ʻಸುಖ ಸಂಸಾರದ ಸೂತ್ರʼ -ಏನದು?

Agreement B/w Husband and Two Wives: ಇಬ್ಬರು ಹೆಂಡಿರ ಮುದ್ದಿನ ಗಂಡನ ಕಂಡುಕೊಂಡ ʻಸುಖ ಸಂಸಾರದ ಸೂತ್ರʼ -ಏನದು?

Mar 15, 2023 10:25 PM IST

Agreement B/w Husband and Two Wives: ಆತ 28 ವರ್ಷದ ಯುವಕ. ಇಬ್ಬರು ಸಹೋದ್ಯೋಗಿ ಯುವತಿಯರನ್ನು ಪರಸ್ಪರ ಅರಿವಾಗದಂತೆ ವಿವಾಹವಾಗಿದ್ದ. ಇಬ್ಬರಲ್ಲೂ ಮಕ್ಕಳನ್ನು ಪಡೆದ. ಮೊದಲ ಪತ್ನಿ ಕೇಸ್‌ ದಾಖಲಿಸಿದಾಗ, ʻಸುಖ ಸಂಸಾರಕ್ಕೆ ಒಂದು ಸೂತ್ರʼ ಮುಂದಿಟ್ಟ. ಪತ್ನಿಯರಿಬ್ಬರು ಮತ್ತು ಕೋರ್ಟ್‌ ಕೂಡ ಒಪ್ಪಿಕೊಂಡಿತು. ಏನು ಆ ʻಸೂತ್ರʼ?! 

ಎರಡು ಮದುವೆಗಳು ತಿಳಿದ ಕೂಡಲೇ, ಪತಿ ಇಬ್ಬರು ಹೆಂಡತಿಯರೊಂದಿಗೆ ವಾರದಲ್ಲಿ ಮೂರು ದಿನ ಸಮಯ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅವಳ ಪತಿ ಕೂಡ ಅವಳ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾನೆ. ಏತನ್ಮಧ್ಯೆ, ಪತಿ ಭಾನುವಾರವನ್ನು ಸ್ವಂತವಾಗಿ ಕಳೆಯಲಿದ್ದಾರೆ. ಗ್ವಾಲಿಯರ್ನ ಕುಟುಂಬ ನ್ಯಾಯಾಲಯವು ನೇಮಿಸಿದ ವಕೀಲರು ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದ್ದರು.
(1 / 5)
ಎರಡು ಮದುವೆಗಳು ತಿಳಿದ ಕೂಡಲೇ, ಪತಿ ಇಬ್ಬರು ಹೆಂಡತಿಯರೊಂದಿಗೆ ವಾರದಲ್ಲಿ ಮೂರು ದಿನ ಸಮಯ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅವಳ ಪತಿ ಕೂಡ ಅವಳ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾನೆ. ಏತನ್ಮಧ್ಯೆ, ಪತಿ ಭಾನುವಾರವನ್ನು ಸ್ವಂತವಾಗಿ ಕಳೆಯಲಿದ್ದಾರೆ. ಗ್ವಾಲಿಯರ್ನ ಕುಟುಂಬ ನ್ಯಾಯಾಲಯವು ನೇಮಿಸಿದ ವಕೀಲರು ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದ್ದರು.(HT Bangla)
ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ತಿಂಗಳಿಗೆ 1.5 ಲಕ್ಷ ರೂಪಾಯಿ ವೇತನ. ಅದನ್ನು ಇಬ್ಬರು ಹೆಂಡತಿಯರ ಜತೆಗೆ ಶೇರ್‌ ಮಾಡಲಿದ್ದಾನೆ ಆತ. ಎರಡು ಪ್ರತ್ಯೇಕ ಫ್ಲ್ಯಾಟ್‌ಗಳಲ್ಲಿ ಇರಲಿದ್ದಾರೆ ಈ ಮುದ್ದಿನ ಹೆಂಡಿರು. ಆತ ಗುರುಗ್ರಾಮದ ಕಂಪನಿಯೊಂದರಲ್ಲಿ ಇಂಜಿನಿಯರ್.‌ ಹೆಂಡಿರು ಕೂಡ ಸಹೋದ್ಯೋಗಿಗಳು. ಅವರೂ ಇಂಜಿನಿಯರ್ಸ್.‌ ಆದರೆ ಇತ್ತೀಚಿನವರೆಗೆ ಆ ಇಬ್ಬರು ಹೆಂಡಿರಿಗೆ ಗೊತ್ತಿರಲಿಲ್ಲ ತಮ್ಮ ಗಂಡ ಒಬ್ಬನೇ ಎಂದು!
(2 / 5)

ಆ 28 ವರ್ಷದ ಯುವಕ 2018ರ ಮೇ ತಿಂಗಳಲ್ಲಿ ಮೊದಲ ಸಹೋದ್ಯೋಗಿಯನ್ನು ವಿವಾಹವಾಗಿದ್ದ. ನಂತರ 2020ರ ಮೇ ತಿಂಗಳಲ್ಲಿ ಮೊದಲ ಹೆಂಡತಿ ಗರ್ಭಿಣಿ ಆಗಿದ್ದಳು. ಅದು ಕೋವಿಡ್‌ ಸಂಕಷ್ಟದ ಸಮಯ. ಆಕೆಯನ್ನು ಗ್ವಾಲಿಯರ್‌ನಲ್ಲಿ ಆಕೆಯ ಪಾಲಕರ ಮನೆಯಲ್ಲಿ ಬಿಟ್ಟುಬಂದಿದ್ದ. ಗುರುಗ್ರಾಮಕ್ಕೆ ಬಂದ ಯುವಕ ಮತ್ತೆ ಮೊದಲ ಹೆಂಡತಿ ಬಳಿ ಹೋಗಲಿಲ್ಲ. ಆಕೆ ಬರುತ್ತೇನೆ ಎಂದರೂ ಕರೆದುಕೊಂಡು ಬರಲಿಲ್ಲ ಆ ಯುವಕ.
(3 / 5)

ಆ ಯುವಕನಿಗೆ ಮತ್ತೊಬ್ಬ ಸಹೋದ್ಯೋಗಿ ಯುವತಿ ಜತೆಗೆ ಪ್ರೇಮಾಂಕುರವಾಗಿತ್ತು. 2021ರ ಜೂನ್‌ ತಿಂಗಳಲ್ಲಿ ಆಕೆಯನ್ನು ವಿವಾಹವಾದ. ಆಕೆಯೂ ಗರ್ಭಿಣಿಯಾದಳು. ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಕೆಯನ್ನು ನೋಯ್ಡಾದಲ್ಲಿ ಪಾಲಕರ ಬಳಿ ಬಿಟ್ಟು ತಾನೂ ಅಲ್ಲೇ ಇದ್ದ. ಅದಾಗಿ, ಈ ವರ್ಷ ಜನವರಿಯಲ್ಲಿ ಮೊದಲ ಪತ್ನಿ ನೋಯ್ಡಾಕ್ಕೆ ಬಂದಳು. ಅಲ್ಲಿ ಪತಿ ಎರಡನೇ ಮದುವೆ ಆಗಿರುವುದು ಆಕೆಗೆ ಗೊತ್ತಾಗುತ್ತದೆ.
(4 / 5)

ಹಾಗೆ, ಮೊದಲ ಪತ್ನಿ ತನ್ನ ಪತಿಯ ವಿರುದ್ಧ ನೋಯ್ಡಾ ಪೊಲೀಸರಿಗೆ ದೂರು ನೀಡುತ್ತಾಳೆ. ಎಫ್ಐಆರ್ ದಾಖಲಾಗುತ್ತದೆ. ಅವರು ಗ್ವಾಲಿಯರ್‌ನ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಏತನ್ಮಧ್ಯೆ, ನ್ಯಾಯಾಲಯ ನೇಮಿಸಿದ ವಕೀಲರ ಮಧ್ಯಸ್ಥಿಕೆಯೊಂದಿಗೆ ಒಪ್ಪಂದಕ್ಕೆ ಬರಲಾಯಿತು. ಹಿಂದು ವಿವಾಹ ಕಾಯ್ದೆಯ ಪ್ರಕಾರ ಎರಡು ಮದುವೆ ಆಗುವುದು ಕಾನೂನುಬಾಹಿರ ಎಂದು ಗಮನಿಸಬೇಕು. ಆದರೆ ಅವು ಪರಸ್ಪರ ತಿಳಿವಳಿಕೆಯ ಮೂಲಕ ಇದ್ದರೆ ಯಾವುದೇ ಸಮಸ್ಯೆ ಇಲ್ಲ. ಆದಾಗ್ಯೂ, ಒಪ್ಪಂದವನ್ನು ಉಲ್ಲಂಘಿಸಿದರೆ, ಮೊದಲ ಹೆಂಡತಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಏತನ್ಮಧ್ಯೆ, ಒಪ್ಪಂದದ ಪ್ರಕಾರ ಇಬ್ಬರು ಪತ್ನಿಯರೊಂದಿಗೆ ಸಮಯ ಕಳೆಯಲು ಸಿದ್ಧ ಎಂದು ಆರೋಪಿ ಪತಿ ಹೇಳಿದ್ದ. ಹಾಗೆ ವಾರದಲ್ಲಿ ಮೂರು ದಿನ ಮೊದಲ ಪತ್ನಿ ಜತೆಗೆ, ಇನ್ನು ಮೂರು ದಿನ ಎರಡನೇ ಪತ್ನಿ ಜತೆಗೆ. ಇನ್ನುಳಿದ ಒಂದು ದಿನ ತನಗೆ ಬೇಕು ಎಂದು ಹೇಳಿದ್ದ!. ಈ ಸೂತ್ರಕ್ಕೆ ಸಹಮತ ವ್ಯಕ್ತವಾಗಿದ್ದು, ʻಸುಖ ಸಂಸಾರʼಕ್ಕೆ ಅಡ್ಡಿ ಇಲ್ಲ ಎಂದು ಆ ಎಂಜಿನಿಯರ್‌ ಬೀಗಿದ್ದಾಗಿ ವರದಿ ಹೇಳಿದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು