logo
ಕನ್ನಡ ಸುದ್ದಿ  /  Photo Gallery  /  All You Need To Know About How Mukesh Ambani Transformed Reliance In ~ Years

Mukesh Ambani: 20 ವರ್ಷಗಳಲ್ಲಿ ರಿಲಯನ್ಸ್‌ ಎಂಬ ದೈತ್ಯ ಸಂಸ್ಥೆಯ ಹಣೆಬರಹ ಬರೆದಿದ್ದೇಗೆ ಮುಕೇಶ್‌ ಅಂಬಾನಿ?: ಇಂಟ್ರೆಸ್ಟಿಂಗ್‌ ಕಹಾನಿ..!

Dec 28, 2022 04:37 PM IST

ಮುಕೇಶ್‌ ಅಂಬಾನಿ ಇಂದು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಭಾರತದ ಖ್ಯಾತ ಉದ್ಯಮಿ. 2002ರಲ್ಲಿ ತಮ್ಮ ಪ್ರಸಿದ್ಧ ಕೈಗಾರಿಕೋದ್ಯಮಿ ತಂದೆ ಧೀರೂಭಾಯಿ ಅಂಬಾನಿಯವರ ಹಠಾತ್ ನಿಧನದ ನಂತರ, ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ ಆಡಳಿತದ ಚುಕ್ಕಾಣಿ ಹಿಡಿದರು. ಮುಕೇಶ್‌ ರಿಲಯನ್ಸ್‌ ಸಂಸ್ಥೆಯನ್ನು ಯಶಸ್ಸಿನ ಉನ್ನತ ಶಿಖರದತ್ತ ಕೊಂಡೊಯ್ದಿದ್ದು ಹೇಗೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ..

  • ಮುಕೇಶ್‌ ಅಂಬಾನಿ ಇಂದು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಭಾರತದ ಖ್ಯಾತ ಉದ್ಯಮಿ. 2002ರಲ್ಲಿ ತಮ್ಮ ಪ್ರಸಿದ್ಧ ಕೈಗಾರಿಕೋದ್ಯಮಿ ತಂದೆ ಧೀರೂಭಾಯಿ ಅಂಬಾನಿಯವರ ಹಠಾತ್ ನಿಧನದ ನಂತರ, ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)ನ ಆಡಳಿತದ ಚುಕ್ಕಾಣಿ ಹಿಡಿದರು. ಮುಕೇಶ್‌ ರಿಲಯನ್ಸ್‌ ಸಂಸ್ಥೆಯನ್ನು ಯಶಸ್ಸಿನ ಉನ್ನತ ಶಿಖರದತ್ತ ಕೊಂಡೊಯ್ದಿದ್ದು ಹೇಗೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ..
ರಿಲಯನ್ಸ್‌ ಸಂಸ್ಥೆ ಟೆಲಿಕಾಂ ವ್ಯವಹಾರಕ್ಕೆ ಮರು-ಪ್ರವೇಶ ಪಡೆದಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಾಖಲೆಯ 2.5 ಲಕ್ಷ ಕೋಟಿ ರೂ. ಹೂಡಿಕೆಯನ್ನು ಸಂಸ್ಥೆಯು ಈ ಕ್ಷೇತ್ರದಲ್ಲಿ ಮಾಡಿದೆ. (ಸಂಗ್ರಹ ಚಿತ್ರ)
(1 / 14)
ರಿಲಯನ್ಸ್‌ ಸಂಸ್ಥೆ ಟೆಲಿಕಾಂ ವ್ಯವಹಾರಕ್ಕೆ ಮರು-ಪ್ರವೇಶ ಪಡೆದಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಾಖಲೆಯ 2.5 ಲಕ್ಷ ಕೋಟಿ ರೂ. ಹೂಡಿಕೆಯನ್ನು ಸಂಸ್ಥೆಯು ಈ ಕ್ಷೇತ್ರದಲ್ಲಿ ಮಾಡಿದೆ. (ಸಂಗ್ರಹ ಚಿತ್ರ)(HT)
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ, ಅಕ್ಟೋಬರ್. 1, 2022 ರಂದು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022ರಲ್ಲಿ ಭಾಗವಹಿಸಿದ್ದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವೇಳೆ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.
(2 / 14)
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ, ಅಕ್ಟೋಬರ್. 1, 2022 ರಂದು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022ರಲ್ಲಿ ಭಾಗವಹಿಸಿದ್ದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವೇಳೆ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.(Bloomberg)
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಸಂಸ್ಥೆಯ ಮಾರುಕಟ್ಟೆ ಬಂಡವಾಳೀಕರಣವು ಕಳೆದ 20 ವರ್ಷಗಳಲ್ಲಿ ಶೇ.20.6ರಷ್ಟು ವಾರ್ಷಿಕ ದರದಲ್ಲಿ ಏರಿಕೆ ಕಂಡಿದೆ. ಮಾರ್ಚ್ 2002ರಲ್ಲಿ 41,989 ಕೋಟಿ ರೂ.ದಿಂದ, ಮಾರ್ಚ್ 2022ರಲ್ಲಿ 17,81,841 ಕೋಟಿ ರೂ.ಗೆ ಏರಿಕೆಯಾಗಿರುವುದು ವಿಶೇಷ.
(3 / 14)
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಸಂಸ್ಥೆಯ ಮಾರುಕಟ್ಟೆ ಬಂಡವಾಳೀಕರಣವು ಕಳೆದ 20 ವರ್ಷಗಳಲ್ಲಿ ಶೇ.20.6ರಷ್ಟು ವಾರ್ಷಿಕ ದರದಲ್ಲಿ ಏರಿಕೆ ಕಂಡಿದೆ. ಮಾರ್ಚ್ 2002ರಲ್ಲಿ 41,989 ಕೋಟಿ ರೂ.ದಿಂದ, ಮಾರ್ಚ್ 2022ರಲ್ಲಿ 17,81,841 ಕೋಟಿ ರೂ.ಗೆ ಏರಿಕೆಯಾಗಿರುವುದು ವಿಶೇಷ.(HT)
ರಿಲಯನ್ಸ್‌ ಸಂಸ್ಥೆಯ ಆದಾಯವು 2001-02ರ ಹಣಕಾಸು ವರ್ಷದಲ್ಲಿ, 45,411 ಕೋಟಿ ರೂ.ಗಳಷ್ಟಿತ್ತು. ಇದೀಗ ಶೇ.15.4 ರಷ್ಟು ವಾರ್ಷಿಕ ದರದಲ್ಲಿ ಏರಿಕೆಯಾಗಿ, 2021-22ರ ಹಣಕಾಸು ವರ್ಷದಲ್ಲಿ 792,756 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.
(4 / 14)
ರಿಲಯನ್ಸ್‌ ಸಂಸ್ಥೆಯ ಆದಾಯವು 2001-02ರ ಹಣಕಾಸು ವರ್ಷದಲ್ಲಿ, 45,411 ಕೋಟಿ ರೂ.ಗಳಷ್ಟಿತ್ತು. ಇದೀಗ ಶೇ.15.4 ರಷ್ಟು ವಾರ್ಷಿಕ ದರದಲ್ಲಿ ಏರಿಕೆಯಾಗಿ, 2021-22ರ ಹಣಕಾಸು ವರ್ಷದಲ್ಲಿ 792,756 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.(PTI)
2001-02ರ ಹಣಕಾಸು ವರ್ಷದಲ್ಲಿ 3,280 ಕೋಟಿ ರೂ.ಗಳಷ್ಟಿದ್ದ  ರಿಲಯನ್ಸ್‌ ಸಂಸ್ಥೆಯ ನಿವ್ವಳ ಲಾಭ, ಶೇ.16.3ರಷ್ಟು  ವಾರ್ಷಿಕ ದರದಲ್ಲಿ  2021-22ರ ಹಣಕಾಸು ವರ್ಷಲ್ಲಿ, 67,845 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.
(5 / 14)
2001-02ರ ಹಣಕಾಸು ವರ್ಷದಲ್ಲಿ 3,280 ಕೋಟಿ ರೂ.ಗಳಷ್ಟಿದ್ದ  ರಿಲಯನ್ಸ್‌ ಸಂಸ್ಥೆಯ ನಿವ್ವಳ ಲಾಭ, ಶೇ.16.3ರಷ್ಟು  ವಾರ್ಷಿಕ ದರದಲ್ಲಿ  2021-22ರ ಹಣಕಾಸು ವರ್ಷಲ್ಲಿ, 67,845 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ.(HT)
ರಿಲಯನ್ಸ್‌ ಸಂಸ್ಥೆ ಈ ಎರಡು ದಶಕಗಳಲ್ಲಿ, ಹೂಡಿಕೆದಾರರ ಸಂಪತ್ತಿಗೆ 17.4 ಲಕ್ಷ ಕೋಟಿ ರೂ.ಗಳನ್ನು ಸೇರಿಸಿದೆ, ಇದು ಪ್ರತಿ ವರ್ಷ ಸರಾಸರಿ 87,000 ಕೋಟಿ ರೂ. ಆಗಿದೆ.
(6 / 14)
ರಿಲಯನ್ಸ್‌ ಸಂಸ್ಥೆ ಈ ಎರಡು ದಶಕಗಳಲ್ಲಿ, ಹೂಡಿಕೆದಾರರ ಸಂಪತ್ತಿಗೆ 17.4 ಲಕ್ಷ ಕೋಟಿ ರೂ.ಗಳನ್ನು ಸೇರಿಸಿದೆ, ಇದು ಪ್ರತಿ ವರ್ಷ ಸರಾಸರಿ 87,000 ಕೋಟಿ ರೂ. ಆಗಿದೆ.(HT)
ಮೋತಿಲಾಲ್ ಓಸ್ವಾಲ್ ಅವರ 26ನೇ ವಾರ್ಷಿಕ ಸಂಪತ್ತು ಸೃಷ್ಟಿ ಅಧ್ಯಯನದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ 2016-21ರಲ್ಲಿ ಅತಿದೊಡ್ಡ ಸಂಪತ್ತು ಸೃಷ್ಟಿಕರ್ತ ಸಂಸ್ಥೆಯಾಗಿ ಹೊರಹೊಮ್ಮಿದೆ. ಸುಮಾರು 10 ಲಕ್ಷ ಕೋಟಿ ರೂ.ಗಳ ಸಂಪತ್ತನ್ನು ಸಂಸ್ಥೆಯು ಸೃಷ್ಟಿಸಿದ್ದು, ತನ್ನದೇ ಹಿಂದಿನ ದಾಖಲೆಯನ್ನು ಮುರಿದಿದೆ.
(7 / 14)
ಮೋತಿಲಾಲ್ ಓಸ್ವಾಲ್ ಅವರ 26ನೇ ವಾರ್ಷಿಕ ಸಂಪತ್ತು ಸೃಷ್ಟಿ ಅಧ್ಯಯನದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ 2016-21ರಲ್ಲಿ ಅತಿದೊಡ್ಡ ಸಂಪತ್ತು ಸೃಷ್ಟಿಕರ್ತ ಸಂಸ್ಥೆಯಾಗಿ ಹೊರಹೊಮ್ಮಿದೆ. ಸುಮಾರು 10 ಲಕ್ಷ ಕೋಟಿ ರೂ.ಗಳ ಸಂಪತ್ತನ್ನು ಸಂಸ್ಥೆಯು ಸೃಷ್ಟಿಸಿದ್ದು, ತನ್ನದೇ ಹಿಂದಿನ ದಾಖಲೆಯನ್ನು ಮುರಿದಿದೆ.(HT)
ರಿಲಯನ್ಸ್ ಫೌಂಡೇಶನ್ ಭಾರತದ ಅತಿದೊಡ್ಡ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮವಾಗಿದೆ.
(8 / 14)
ರಿಲಯನ್ಸ್ ಫೌಂಡೇಶನ್ ಭಾರತದ ಅತಿದೊಡ್ಡ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮವಾಗಿದೆ.(PTI)
ಈ ಎರಡು ದಶಕಗಳಲ್ಲಿ ರಿಲಯನ್ಸ್ ಹಲವಾರು ಹೊಸ ವ್ಯವಹಾರಗಳನ್ನು ಪ್ರಾರಂಭಿಸಿತು. ಸಂಸ್ಥೆಯ ಟೆಲಿಕಾಂ ಉಪಕ್ರಮ ಜಿಯೋ 2016ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, 2006ರಲ್ಲಿ ಚಿಲ್ಲರೆ ವ್ಯಾಪಾರ ಮತ್ತು 2021ರಲ್ಲಿ ಹೊಸ ಶಕ್ತಿ ಕ್ಷೇತ್ರದಲ್ಲಿ ಸಂಸ್ಥೆ ಕಾಲಿರಿಸಿದೆ.
(9 / 14)
ಈ ಎರಡು ದಶಕಗಳಲ್ಲಿ ರಿಲಯನ್ಸ್ ಹಲವಾರು ಹೊಸ ವ್ಯವಹಾರಗಳನ್ನು ಪ್ರಾರಂಭಿಸಿತು. ಸಂಸ್ಥೆಯ ಟೆಲಿಕಾಂ ಉಪಕ್ರಮ ಜಿಯೋ 2016ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, 2006ರಲ್ಲಿ ಚಿಲ್ಲರೆ ವ್ಯಾಪಾರ ಮತ್ತು 2021ರಲ್ಲಿ ಹೊಸ ಶಕ್ತಿ ಕ್ಷೇತ್ರದಲ್ಲಿ ಸಂಸ್ಥೆ ಕಾಲಿರಿಸಿದೆ.(HT)
ಜಾಮ್‌ನಗರ್ ಈಗ ವಿಶ್ವದ ಅತಿ ದೊಡ್ಡ ಏಕ-ಸ್ಥಳ ಸಂಸ್ಕರಣಾ ಸಂಕೀರ್ಣವಾಗಿದೆ. ಈ ಅವಧಿಯಲ್ಲಿ‌ ರಿಲಯನ್ಸ್‌ ತನ್ನ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿತು, ಕೆಟ್ಟ ಕಚ್ಚಾ ತೈಲಗಳನ್ನು ಅತ್ಯುತ್ತಮ ರಫ್ತು ಮಾಡಬಹುದಾದ ಇಂಧನಗಳಾಗಿ ಪರಿವರ್ತಿಸುವ ಅನನ್ಯ ಸಾಮರ್ಥ್ಯವನ್ನು ಸಂಸ್ಥೆಯು ಪಡೆದುಕೊಂಡಿದೆ. ಇದು ಪ್ರಪಂಚದ ಕೆಲವು ದೊಡ್ಡ ಡೌನ್‌ಸ್ಟ್ರೀಮ್ ಘಟಕಗಳನ್ನು ಕೂಡ ತನ್ನದಾಗಿಸಿಕೊಂಡಿದೆ..
(10 / 14)
ಜಾಮ್‌ನಗರ್ ಈಗ ವಿಶ್ವದ ಅತಿ ದೊಡ್ಡ ಏಕ-ಸ್ಥಳ ಸಂಸ್ಕರಣಾ ಸಂಕೀರ್ಣವಾಗಿದೆ. ಈ ಅವಧಿಯಲ್ಲಿ‌ ರಿಲಯನ್ಸ್‌ ತನ್ನ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿತು, ಕೆಟ್ಟ ಕಚ್ಚಾ ತೈಲಗಳನ್ನು ಅತ್ಯುತ್ತಮ ರಫ್ತು ಮಾಡಬಹುದಾದ ಇಂಧನಗಳಾಗಿ ಪರಿವರ್ತಿಸುವ ಅನನ್ಯ ಸಾಮರ್ಥ್ಯವನ್ನು ಸಂಸ್ಥೆಯು ಪಡೆದುಕೊಂಡಿದೆ. ಇದು ಪ್ರಪಂಚದ ಕೆಲವು ದೊಡ್ಡ ಡೌನ್‌ಸ್ಟ್ರೀಮ್ ಘಟಕಗಳನ್ನು ಕೂಡ ತನ್ನದಾಗಿಸಿಕೊಂಡಿದೆ..(HT)
ರಿಲಯನ್ಸ್‌ನ ತೈಲ ಮತ್ತು ಅನಿಲ ಪರಿಶೋಧನೆ (E&P) ವ್ಯವಹಾರವು 2002ರ ಕೊನೆಯಲ್ಲಿ, ಮೊದಲ ಹೈಡ್ರೋಕಾರ್ಬನ್ ಆವಿಷ್ಕಾರವನ್ನು ಮಾಡಿತು. 2009ರಲ್ಲಿ ಇದರ ಉತ್ಪಾದನೆಯನ್ನು ಸಂಸ್ಥೆಯು ಆರಂಭಿಸಿತು. 
(11 / 14)
ರಿಲಯನ್ಸ್‌ನ ತೈಲ ಮತ್ತು ಅನಿಲ ಪರಿಶೋಧನೆ (E&P) ವ್ಯವಹಾರವು 2002ರ ಕೊನೆಯಲ್ಲಿ, ಮೊದಲ ಹೈಡ್ರೋಕಾರ್ಬನ್ ಆವಿಷ್ಕಾರವನ್ನು ಮಾಡಿತು. 2009ರಲ್ಲಿ ಇದರ ಉತ್ಪಾದನೆಯನ್ನು ಸಂಸ್ಥೆಯು ಆರಂಭಿಸಿತು. (REUTERS)
ರಿಲಯನ್ಸ್ ನ್ಯೂ ಎನರ್ಜಿ ಬ್ಯುಸಿನೆಸ್‌ಗೆ ಬುನಾದಿ ಹಾಕಿದ್ದು, ಮೂರು ವರ್ಷಗಳಲ್ಲಿ 75,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ಮಾಡಲಿದೆ. ವಿಶ್ವದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಜಾಮ್‌ನಗರದಲ್ಲಿ, ಐದು ಅನನ್ಯವಾಗಿ ಸಂಯೋಜಿತ ಗಿಗಾ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಸಂಸ್ಥೆಯು ಮುಂದಾಗಿದೆ.
(12 / 14)
ರಿಲಯನ್ಸ್ ನ್ಯೂ ಎನರ್ಜಿ ಬ್ಯುಸಿನೆಸ್‌ಗೆ ಬುನಾದಿ ಹಾಕಿದ್ದು, ಮೂರು ವರ್ಷಗಳಲ್ಲಿ 75,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ಮಾಡಲಿದೆ. ವಿಶ್ವದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಜಾಮ್‌ನಗರದಲ್ಲಿ, ಐದು ಅನನ್ಯವಾಗಿ ಸಂಯೋಜಿತ ಗಿಗಾ ಫ್ಯಾಕ್ಟರಿಗಳನ್ನು ಸ್ಥಾಪಿಸಲು ಸಂಸ್ಥೆಯು ಮುಂದಾಗಿದೆ.(PTI)
ರಿಲಯನ್ಸ್ 21ರ ಹಣಕಾಸು ವರ್ಷದಲ್ಲಿ ಬಂಡವಾಳ ನಿಧಿಸಂಗ್ರಹದಲ್ಲಿ ದಾಖಲೆ ಬರೆದಿದೆ. ಇದು ಜಾಗತಿಕ ಮಾರುಕಟ್ಟೆ ಹೂಡಿಕೆದಾರರಿಗೆ ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್‌ನಲ್ಲಿನ ಹಕ್ಕುಗಳ ವಿತರಣೆ ಮತ್ತು ಅಲ್ಪಸಂಖ್ಯಾತ ಷೇರುಗಳ ಮಾರಾಟದ ಮೂಲಕ 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ.
(13 / 14)
ರಿಲಯನ್ಸ್ 21ರ ಹಣಕಾಸು ವರ್ಷದಲ್ಲಿ ಬಂಡವಾಳ ನಿಧಿಸಂಗ್ರಹದಲ್ಲಿ ದಾಖಲೆ ಬರೆದಿದೆ. ಇದು ಜಾಗತಿಕ ಮಾರುಕಟ್ಟೆ ಹೂಡಿಕೆದಾರರಿಗೆ ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್‌ನಲ್ಲಿನ ಹಕ್ಕುಗಳ ವಿತರಣೆ ಮತ್ತು ಅಲ್ಪಸಂಖ್ಯಾತ ಷೇರುಗಳ ಮಾರಾಟದ ಮೂಲಕ 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ.(PTI)
ಜಿಯೋ ಪ್ರಾರಂಭವಾದ ನಂತರ, ಭಾರತವು ವಿಶ್ವದ ಡೇಟಾ ರಾಜಧಾನಿಯಾಯಿತು ಮತ್ತು ಡೇಟಾ/ಜಿಬಿ ವೆಚ್ಚವು ರೂ 500 ರೂ.ದಿಂದ 12 ರೂ.ಗೆ ಕುಸಿಯಿತು. ಬ್ರಾಡ್‌ಬ್ಯಾಂಡ್ ಡೇಟಾ ಬಳಕೆಯಲ್ಲಿ ಭಾರತದ ಶ್ರೇಯಾಂಕವು 2016ರಲ್ಲಿ 150 ರಿಂದ 2018ರಲ್ಲಿ ನಂ.1 ಸ್ಥಾನಕ್ಕೆ ಏರಿದೆ. ಇದರಲ್ಲಿ ರಿಲಯನ್ಸ್‌ ಜಿಯೋ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
(14 / 14)
ಜಿಯೋ ಪ್ರಾರಂಭವಾದ ನಂತರ, ಭಾರತವು ವಿಶ್ವದ ಡೇಟಾ ರಾಜಧಾನಿಯಾಯಿತು ಮತ್ತು ಡೇಟಾ/ಜಿಬಿ ವೆಚ್ಚವು ರೂ 500 ರೂ.ದಿಂದ 12 ರೂ.ಗೆ ಕುಸಿಯಿತು. ಬ್ರಾಡ್‌ಬ್ಯಾಂಡ್ ಡೇಟಾ ಬಳಕೆಯಲ್ಲಿ ಭಾರತದ ಶ್ರೇಯಾಂಕವು 2016ರಲ್ಲಿ 150 ರಿಂದ 2018ರಲ್ಲಿ ನಂ.1 ಸ್ಥಾನಕ್ಕೆ ಏರಿದೆ. ಇದರಲ್ಲಿ ರಿಲಯನ್ಸ್‌ ಜಿಯೋ ಪಾತ್ರ ಅತ್ಯಂತ ಮಹತ್ವದ್ದಾಗಿದೆ.(PTI)

    ಹಂಚಿಕೊಳ್ಳಲು ಲೇಖನಗಳು