logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Arpita Mukherjee: ಕಂತೆ ಕಂತೆ ನೋಟುಗಳೊಂದಿಗೆ ಪ್ರಸಿದ್ಧಳಾದ ನಟಿಯ ಹಾಟ್‌ ಫೋಟೋಸ್‌ ಇಲ್ಲಿವೆ!

Arpita Mukherjee: ಕಂತೆ ಕಂತೆ ನೋಟುಗಳೊಂದಿಗೆ ಪ್ರಸಿದ್ಧಳಾದ ನಟಿಯ ಹಾಟ್‌ ಫೋಟೋಸ್‌ ಇಲ್ಲಿವೆ!

Jul 23, 2022 10:15 AM IST

Who Is Arpita Mukherjee: ಎಸ್‌ಎಸ್‌ಸಿ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಜಾರಿ ನಿರ್ದೇಶನಾಲಯ ನಿನ್ನೆ 20 ಕೋಟಿಗೂ ಹೆಚ್ಚು ಹಣ ಮತ್ತು 20 ಮೊಬೈಲ್ ಫೋನ್‌ಗಳನ್ನು ವಶಪಡಿಸಿದೆ. ಸಚಿವ ಪಾರ್ಥ ಚಟರ್ಜಿಗೆ ಆಪ್ತರಾದ ಆಕೆ ಸಿನಿಮಾ ನಟಿ ಆಗಿದ್ದವರು. 

  • Who Is Arpita Mukherjee: ಎಸ್‌ಎಸ್‌ಸಿ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಜಾರಿ ನಿರ್ದೇಶನಾಲಯ ನಿನ್ನೆ 20 ಕೋಟಿಗೂ ಹೆಚ್ಚು ಹಣ ಮತ್ತು 20 ಮೊಬೈಲ್ ಫೋನ್‌ಗಳನ್ನು ವಶಪಡಿಸಿದೆ. ಸಚಿವ ಪಾರ್ಥ ಚಟರ್ಜಿಗೆ ಆಪ್ತರಾದ ಆಕೆ ಸಿನಿಮಾ ನಟಿ ಆಗಿದ್ದವರು. 
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಹಗರಣ (West Bengal SSC Scam)ಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (enforcement directorate) ನಿನ್ನೆ ಶೋಧ ಕಾರ್ಯಾಚರಣೆ ಮಾಡಿದಾಗ 20 ಕೋಟಿ ರೂಪಾಯಿಗೂ ಅಧಿಕ ಹಣದೊಂದಿಗೆ ಸಿಕ್ಕಬಿದ್ದವರು ಅರ್ಪಿತಾ ಮುಖರ್ಜಿ. 
(1 / 7)

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ನಿನ್ನೆ ತಾಲಿಗಂಜ್‌ನ ಗಣ್ಯರ ಕಾಲನಿಯಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆ ಸೇರಿ ಒಟ್ಟು 13 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಹುಡುಕಾಟದ ವೇಳೆ ಅರ್ಪಿತಾ ಅವರ ಮನೆಯಲ್ಲಿ ಭಾರ್ತಿ ಹಣದ ಬ್ಯಾಗ್‌ಗಳು ಪತ್ತೆಯಾಗಿದ್ದವು. ಇದರಲ್ಲಿ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ನೋಟುಗಳೇ ತುಂಬಿಕೊಂಡಿದ್ದವು. ಆಕೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಬಳಗದಲ್ಲಿದ್ದಾರೆ. 
(2 / 7)
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ನಿನ್ನೆ ತಾಲಿಗಂಜ್‌ನ ಗಣ್ಯರ ಕಾಲನಿಯಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆ ಸೇರಿ ಒಟ್ಟು 13 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಹುಡುಕಾಟದ ವೇಳೆ ಅರ್ಪಿತಾ ಅವರ ಮನೆಯಲ್ಲಿ ಭಾರ್ತಿ ಹಣದ ಬ್ಯಾಗ್‌ಗಳು ಪತ್ತೆಯಾಗಿದ್ದವು. ಇದರಲ್ಲಿ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ನೋಟುಗಳೇ ತುಂಬಿಕೊಂಡಿದ್ದವು. ಆಕೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಬಳಗದಲ್ಲಿದ್ದಾರೆ. (TWITTER )
ಅರ್ಪಿತಾ ಕಳೆದ ಕೆಲವು ವರ್ಷಗಳಿಂದ ನಕ್ತಲಾ ಉದಯನ್ ಸಂಘದ ಪೂಜೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇದಲ್ಲದೆ, ಅವರು ಪಾರ್ಥ ಚಟರ್ಜಿಯವರ ಚುನಾವಣಾ ಪ್ರಚಾರದಲ್ಲಿಯೂ ಕಾಣಿಸಿಕೊಂಡರು. ಅರ್ಪಿತಾ ಮಮತಾ ಜೊತೆ ಇರುವ ಚಿತ್ರವನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅರ್ಪಿತಾ ತೃಣಮೂಲಕ್ಕೆ ಹತ್ತಿರವಾಗಿದ್ದಾರೆ ಎಂದು ಹೇಳಿಕೊಂಡಿದೆ.
(3 / 7)

ಅರ್ಪಿತಾ ಮನೆಯಲ್ಲಿ ಭಾರೀ ಪ್ರಮಾಣದ ಆಸ್ತಿ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ಅರ್ಪಿತಾ ಬಿರ್ಭೂಮ್‌ನಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿದುಕೊಂಡಿದ್ದಾರೆ. ಇಡಿ ಆ ಆಸ್ತಿಗಳ ಸಂಪೂರ್ಣ ಪಟ್ಟಿಯನ್ನು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
(4 / 7)

ಅರ್ಪಿತಾ ಮುಖರ್ಜಿ ಕೆಲವು ಬೆಂಗಾಲಿ, ಒಡಿಯಾ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಬೆಂಗಾಲಿ ಪ್ರಸೇನಜಿತ್‌ ಚಟರ್ಜಿ (ಮಾಮಾ ಭಾಗ್ನೆ) 2009ರ ಮತ್ತು ಜೀತ್‌ ಅವರ ಜತೆಗೆ (ಪಾರ್ಟನರ್‌) 2008ರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು.
(5 / 7)

ಅರ್ಪಿತಾ ಮುಖರ್ಜಿ ಅವರು ದಕ್ಷಿಣ ಕೋಲ್ಕತ್ತಾದ ಪ್ರಸಿದ್ಧ ದುರ್ಗಾ ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದು ಪಾರ್ಥ ಚಟರ್ಜಿ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಸಾಕ್ಷಿ
(6 / 7)

ನಕ್ತಲಾ ಉದಯನ್ ಸಂಘದ ಪೂಜೆ ಸಮಾರಂಭಕ್ಕೆ ಅರ್ಪಿತಾ ಬ್ರಾಂಡ್‌ ಅಂಬಾಸಿಡರ್‌ ತರ ಇದ್ದರು. ಅದರ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ವೇದಿಕೆಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದ್ದರು. 
(7 / 7)

    ಹಂಚಿಕೊಳ್ಳಲು ಲೇಖನಗಳು