logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kia Syros: ಕಿಯಾ ಕಾರು ಪ್ರಿಯರಿಗೆ ಸಂತಸದ ಸುದ್ದಿ: ಭಾರತಕ್ಕೆ ಬಂತು ಬಾಕ್ಸ್‌ ವಿನ್ಯಾಸದ ಸಿರೋಸ್‌ ಸಣ್ಣ ಎಸ್‌ಯುವಿ

Kia Syros: ಕಿಯಾ ಕಾರು ಪ್ರಿಯರಿಗೆ ಸಂತಸದ ಸುದ್ದಿ: ಭಾರತಕ್ಕೆ ಬಂತು ಬಾಕ್ಸ್‌ ವಿನ್ಯಾಸದ ಸಿರೋಸ್‌ ಸಣ್ಣ ಎಸ್‌ಯುವಿ

Dec 19, 2024 06:32 PM IST

Kia Syros: ಕಿಯಾ ಕಂಪನಿಯು ಹೊಸ ಸಿರೋಸ್‌ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಬಾಕ್ಸ್‌ ವಿನ್ಯಾಸದ ಸಣ್ಣ ಎಸ್‌ಯುವಿಯಾಗಿದೆ. ಕಿಯಾ ಸೊನೆಟ್‌ ಮತ್ತು ಸೆಲ್ಟೊಸ್‌ ಎಸ್‌ಯುವಿಗಳ ನಡುವಿನ ಶ್ರೇಣಿಯಲ್ಲಿ ಹೊಸ ಸಿರೋಸ್‌ ಆಗಮಿಸಿದೆ.

  • Kia Syros: ಕಿಯಾ ಕಂಪನಿಯು ಹೊಸ ಸಿರೋಸ್‌ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಬಾಕ್ಸ್‌ ವಿನ್ಯಾಸದ ಸಣ್ಣ ಎಸ್‌ಯುವಿಯಾಗಿದೆ. ಕಿಯಾ ಸೊನೆಟ್‌ ಮತ್ತು ಸೆಲ್ಟೊಸ್‌ ಎಸ್‌ಯುವಿಗಳ ನಡುವಿನ ಶ್ರೇಣಿಯಲ್ಲಿ ಹೊಸ ಸಿರೋಸ್‌ ಆಗಮಿಸಿದೆ.
ಕಿಯಾ ಕಂಪನಿಯು ಸಿರೋಸ್‌ ಹೆಸರಿನ ಹೊಸ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕಿಯಾ ಡಿಸನ್‌ 2.0 ತತ್ವಶಾಸ್ತ್ರದಡಿಯಲ್ಲಿ ಹೊಸ ಬಾಕ್ಸಿ ವಿನ್ಯಾಸದಲ್ಲಿ ಈ ಕಾರು ಆಗಮಿಸಿದೆ. ಇದು ಕಿಯಾ ಕಂಪನಿಯ ಮೊದಲ ಮೇಡ್‌ ಇನ್‌ ಇಂಡಿಯಾ ಕಾರಾಗಿದೆ. ಸಿರೋಸ್‌ ಕಾರು ನೋಡಲು ಕಿಯಾ ಇವಿ9ನಂತೆ ಇದೆ.
(1 / 6)

ಕಿಯಾ ಕಂಪನಿಯ ಸಂಪೂರ್ಣ ಹೊಸ ವಿನ್ಯಾಸದ ಕಾರು ಇದಾಗಿದೆ. ನೋಡಲು ಬಾಕ್ಸ್‌ನಂತೆ ಕಂಡರೂ ಆಕರ್ಷಕವಾಗಿದೆ. ಈ ಬಾಕ್ಸಿ ಲುಕ್‌ ಒಂದಿಷ್ಟು ಒರಟು ನೋಟವನ್ನು ನೀಡಿದೆ. 
(2 / 6)

ಕಾರಿನ ಹಿಂಭಾಗದ ವಿನ್ಯಾಸ ಗಮನ ಸೆಳೆಯುತ್ತದೆ. ಬದಿಯಲ್ಲಿರುವ ಡಿಆರ್‌ಎಲ್‌ ಲೈಟ್‌ಗಳು ಕಾರಿನ ಆಕರ್ಷಣೆ ಹೆಚ್ಚಿಸಿದೆ. ಇದರೊಂದಿಗೆ ಇತರೆ ಸ್ಟಾಪ್‌ ಲ್ಯಾಂಪ್‌, ಟೇಲ್‌ ಲ್ಯಾಂಪ್‌ಗಳು ಕೆಳಭಾಗದಲ್ಲಿ ಜೋಡಿಸಲಾಗಿದೆ.  
(3 / 6)

ಈ ಕಾರಿನ ಹೆಡ್‌ಲ್ಯಾಂಪ್‌ಗಳು ಎಲ್‌ ಆಕಾರದ ವಿನ್ಯಾಸ ಹೊಂದಿವೆ. ಎಲ್‌ಇಡಿ ಡಿಆರ್‌ಎಲ್‌ಗಳ ಜತೆಗೆ ಪ್ರಾಜೆಕ್ಟರ್‌ ಎಲ್‌ಇಡಿ ಲೈಟ್‌ಗಳು ಇವೆ. ಇದರೊಂದಿಗೆ ಈ ಕಾರಿನ ಚಕ್ರಗಳಿಗೆ 17 ಇಂಚಿನ ಅಲಾಯ್‌ ವೀಲ್‌ ಜೋಡಿಸಲಾಗಿದೆ. ಇದು ಡ್ಯೂಯೆಲ್‌ ಟೋನ್‌ ವಿನ್ಯಾಸ ಹೊಂದಿವೆ.
(4 / 6)

ಕಾರಿನ ಒಳಭಾಗವೂ ಆಕರ್ಷಕವಾಗಿದೆ. ಡ್ಯೂಯೆಲ್‌ ಟೋನ್‌ ಇಂಟೀರಿಯರ್‌ ಇದೆ. ಟ್ವಿನ್‌ ಸ್ಪೋಕ್‌ ಸ್ಟಿಯರಿಂಗ್‌ ವೀಲ್‌ ಇದೆ. ಸ್ಟಿಯರಿಂಗ್‌ ವೀಲ್‌ ಹಿಂಭಾಗದಲ್ಲಿ 30 ಇಂಚಿನ ಟ್ರಿನಿಟಿ ಪನೊರಾಮಿಕ್‌ ಡ್ಯೂಯೆಲ್‌ ಸ್ಕ್ರೀನ್‌ ಸೆಟಪ್‌ ಇದೆ. ಇದು ಡ್ರೈವರ್‌ ಡಿಸ್‌ಪ್ಲೇ ಮತ್ತು ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಆಗಿ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ಇದೆ. ಈ ಕಾರಿನಲ್ಲಿ ಎಡಿಎಎಸ್‌ ಲೆವೆಲ್‌ 2 ಸುರಕ್ಷತೆ ಇದೆ.
(5 / 6)

ಕಾರಿನ ಹಿಂಭಾಗವೂ ಸಾಕಷ್ಟು ಸ್ಥಳಾವಕಾಶ ಹೊಂದಿದೆ. ಒಟ್ಟಾರೆ ಕಿಯಾ ಕಾರು ಪ್ರಿಯರಿಗೆ ಹೊಸ ಬಾಕ್ಸಿ ವಿನ್ಯಾಸದ ಸಿರೋಸ್‌ ಇಷ್ಟವಾಗುವುದೇ ಕಾದು ನೋಡಬೇಕಿದೆ. ಸದ್ಯ ಈ ಕಾರು ಭಾರತದಲ್ಲಿ ಅನಾವರಣವಾಗಿದೆ. ಜನವರಿ 2025ರಿಂದ ಬುಕ್ಕಿಂಗ್‌ ಆರಂಭವಾಗಲಿದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು