logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dacia Spring Ev: ಮಾರುಕಟ್ಟೆಗೆ ಬರಲಿದೆ ಡೇಸಿಯಾ ಸ್ಪ್ರಿಂಗ್ ಇವಿ; ರೆನಾಲ್ಟ್ ಕ್ವಿಡ್ ಹೋಲುವ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯ ಹೀಗಿದೆ

Dacia Spring EV: ಮಾರುಕಟ್ಟೆಗೆ ಬರಲಿದೆ ಡೇಸಿಯಾ ಸ್ಪ್ರಿಂಗ್ ಇವಿ; ರೆನಾಲ್ಟ್ ಕ್ವಿಡ್ ಹೋಲುವ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯ ಹೀಗಿದೆ

Feb 26, 2024 08:10 PM IST

 Dacia Spring EV: ರೆನಾಲ್ಟ್ ಕ್ವಿಡ್ ವಿನ್ಯಾಸದಿಂದ ಸ್ಫೂರ್ತಿ ಪಡೆದಿರುವ ಡೇಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಹೊಸ ಇವಿಯ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

ಡೇಸಿಯಾ ಇತ್ತೀಚೆಗಷ್ಟೇ ಫೇಸ್ ಲಿಫ್ಟೆಡ್ ಸ್ಪ್ರಿಂಗ್ ಎಲೆಕ್ಟ್ರಿಕ್ ಮಾದರಿ ಕಾರನ್ನು ಅಭಿವೃದ್ಧಿ ಪಡಿಸಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ. ರೆನಾಲ್ಟ್ ಕ್ವಿಡ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಕಾರಿನಲ್ಲಿ ಏನೆಲ್ಲಾ ಹೊಸದು  ಇದೆ ಅನ್ನೋದನ್ನ ತಿಳಿಯೋಣ.
(1 / 6)

ಡೇಸಿಯಾ ಸ್ಪ್ರಿಂಗ್ ಇವಿ ಔಟ್‌ಲುಕ್ ಹೆಚ್ಚು ಟ್ರೆಂಡಿಯನ್ನಾಗಿ ವಿನ್ಯಾಸ ಮಾಡಲಾಗಿದೆ. ಇದು ಹೊಸ ತಲೆಮಾರಿನ ರೆನಾಲ್ಟ್ ಕ್ವಿಡ್ ನಿಂದ ಹೆಚ್ಚು ಸ್ಫೂರ್ತಿ ಪಡೆದ ಮುಂಭಾಗದ ಫ್ಯಾಸಿಯಾವನ್ನು ಹೊಂದಿದೆ. ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್ ಲ್ಯಾಂಪ್ ಗಳು, ಕನೆಕ್ಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಬಂಪರ್‌ಗಳ ವಿನ್ಯಾಸದಲ್ಲಿ ಆಕರ್ಷಕ ಬದಲಾವಣೆಗಳನ್ನು ಮಾಡಲಾಗಿದೆ. ಆದ್ದರಿಂದ ಈ ಸಣ್ಣ ಸಿಟಿ ಹ್ಯಾಚ್ ಬ್ಯಾಕ್ ನೋಟಕ್ಕೆ ಬೋಲ್ಡ್ ಕ್ರಾಸ್ ಒವರ್ ತರಹದ ಅನುಭವವನ್ನು ನೀಡುತ್ತದೆ.
(2 / 6)

ರಿಬ್ಬನ್ ಹೊರತುಪಡಿಸಿ ಕಾರಿನ ಸೈಡ್ ಪ್ರೊಫೈಲ್‌ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಕಾರಿನ ಹಿಂಭಾಗದಲ್ಲಿ ಹಲವಾರು ನವೀಕರಣಗಳನ್ನು ಮಾಡಲಾಗಿದೆ. ವಿಶೇಷವೆಂದರೆ, ಚಂಕಿ ಕಪ್ಪು ಪ್ಲಾಸ್ಟಿಕ್ ಕ್ಲಾಡಿಂಗ್ ಕನೆಕ್ಟ್ ಮಾಡಿದ ಎಲ್ಇಡಿ ಟೈಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗದ ಬಂಪರ್ ಅನ್ನು ಸಹ ನವೀಕರಿಸಲಾಗಿದೆ. ಈ ಕಾರಿನಲ್ಲಿ ಹೊಸದಾಗಿ 16 ಇಂಚಿನ ವಿನ್ಯಾಸದ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
(3 / 6)

ಹೊಸ ಡೇಸಿಯಾ ಸ್ಪ್ರಿಂಗ್ ಇವಿ ಕಾರಿನ  ಕ್ಯಾಬಿನ್‌ನ ಒಳಾಂಗಣದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಸ್ಟೀರಿಂಗ್ ವೀಲ್ ವಿನ್ಯಾಸವನ್ನು ಬದಲಾಯಿಸಲಾಗಿದೆ. ಲೇಯರ್ಡ್-ಲುಕ್ ಡ್ಯಾಶ್‌ಬೋರ್ಡ್ ಈಗ ಏಳು ಇಂಚಿನ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10 ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಸೆಂಟರ್ ಕನ್ಸೋಲ್ ಅನ್ನು ಸಹ ನವೀಕರಿಸಲಾಗಿದ್ದು, ಗೇರ್ ಶಿಫ್ಟರ್ ಆಕರ್ಷಕವಾಗಿದೆ.
(4 / 6)

ಹೊಸ ಡೇಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ಕಾರಿನಲ್ಲಿ ವ್ಯಾಪಕವಾದ ಫೋಕಸ್ಡ್ ಅಪ್ಡೇಟ್‌ಗಳನ್ನು ಮಾಡಲಾಗಿದೆ. ಇವುಗಳಲ್ಲಿ ಒಂದು ಹುಡ್ ಅಡಿಯಲ್ಲಿ ಸ್ಥಾಪಿಸಲಾದ 35-ಲೀಟರ್ ಫ್ರಂಕ್. ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ 308 ಲೀಟರ್ ಬೂಟ್ ಸ್ಟೋರೇಜ್ ಹೊಂದಿದೆ.
(5 / 6)

ಡೇಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ಕಾರು ಪವರ್ ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 26.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 220 ಕಿ.ಮೀ ಚಲಿಸುತ್ತದೆ. ಈ ಫೇಸ್ ಲಿಫ್ಟೆಡ್ ಡಾಸಿಯಾ ಸ್ಪ್ರಿಂಗ್ ಇವಿ ಈಗ ದ್ವಿ-ದಿಕ್ಕಿನ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರರ್ಥ ಈ ಇವಿಯಲ್ಲಿರುವ ಬ್ಯಾಟರಿಯು ಇತರ ವಿದ್ಯುತ್ ಸಾಧನಗಳನ್ನು  ಸಹ ಚಾರ್ಜ್ ಮಾಡಬಹುದು.
(6 / 6)

    ಹಂಚಿಕೊಳ್ಳಲು ಲೇಖನಗಳು