logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Potholes: ಬೆಂಗಳೂರು ನಗರ ಗಂಡಾಗುಂಡಿ; ನಡುರಾತ್ರಿಯಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್‌, ಕಾಮಗಾರಿ ಪರಿಶೀಲನೆ ಹೀಗಿತ್ತು

Bangalore potholes: ಬೆಂಗಳೂರು ನಗರ ಗಂಡಾಗುಂಡಿ; ನಡುರಾತ್ರಿಯಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್‌, ಕಾಮಗಾರಿ ಪರಿಶೀಲನೆ ಹೀಗಿತ್ತು

Sep 24, 2024 11:06 AM IST

ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಬೇಕು ಎನ್ನುವ ಗಡುವು ನೀಡಿ ಅಮೆರಿಕಾಕ್ಕೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ವಾಪಾಸ್‌ ಬಂದ  ನಂತರ ಮಧ್ಯರಾತ್ರಿಯಲ್ಲಿ ಸುತ್ತುಹಾಕಿ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು. ಹೀಗಿತ್ತು ಮಿಡ್‌ ನೈಟ್‌ ರೌಂಡ್ಸ್‌ ಕ್ಷಣಗಳು.

  • ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಬೇಕು ಎನ್ನುವ ಗಡುವು ನೀಡಿ ಅಮೆರಿಕಾಕ್ಕೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ವಾಪಾಸ್‌ ಬಂದ  ನಂತರ ಮಧ್ಯರಾತ್ರಿಯಲ್ಲಿ ಸುತ್ತುಹಾಕಿ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು. ಹೀಗಿತ್ತು ಮಿಡ್‌ ನೈಟ್‌ ರೌಂಡ್ಸ್‌ ಕ್ಷಣಗಳು.
ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ  ಆಗಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಇರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ ಮಧ್ಯರಾತ್ರಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು.
(1 / 8)

ಈಗಾಗಲೇ ಸೆಪ್ಟಂಬರ್‌ ಎರಡನೇ ವಾರದೊಳಗೆ ಬೆಂಗಳೂರು ನಗರದ ಗುಂಡಿಗಳನ್ನು ಮುಚ್ಚಬೇಕು ಎನ್ನುವ ಗಡುವು ನೀಡಿದ್ದ ಡಿಕೆ ಶಿವಕುಮಾರ್‌ ಹಲವಾರು ಭಾಗಗಳಲ್ಲಿ ಸುತ್ತು ಹಾಕಿ ಕಾಮಗಾರಿಗಳನ್ನು ಕಣ್ಣಾರೆ ಕಂಡು ವಿಡಿಯೋ ಮಾಡಿಕೊಂಡರು.
(2 / 8)

ಬೆಂಗಳೂರಿನ ನಾನಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಭಾಗಗಳಲ್ಲಿ ನಡೆದಿರುವ ರಸ್ತೆ ದುರಸ್ಥಿ ಕಾಮಗಾರಿಗಳನ್ನು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್‌ ಸೇರಿದಂತೆ ಹಲವೊಂದಿಗೆ ಪರಿಶೀಲಿಸಿದರು.
(3 / 8)

ರಸ್ತೆ ದುರಸ್ಥಿ ಕಾಮಗೃಿಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ  ನಡೆಯುತ್ತಿದ್ದು ಇದನ್ನೂ ಡಿಕೆಶಿ ಪರಿಶೀಲಿಸಿದರು.
(4 / 8)

ದೊಮ್ಮಲೂರು ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಿರುವ ರಸ್ತೆ ಗುಣಮಟ್ಟವನ್ನು ಪರಿಶೀಲಿಸಲು ಡಿಕೆ ಶಿವಕುಮಾರ್‌ ತಾವೇ ಹಾರೆ ಹಿಡಿದುಕೊಂಡರು.
(5 / 8)

ಕೆಲವು ಭಾಗಗಳಲ್ಲಿ ಇನ್ನೂ ಕಾಮಗಾರಿ ಮುಂದುವರಿದಿದ್ದು. ಈ ತಿಂಗಳೊಳಗೆ ಎಲ್ಲವನ್ನೂ ಮುಗಿಸಬೇಕು. ಬೆಂಗಳೂರು ನಗರ  ರಸ್ತೆಗಳು ಗುಂಡಿ ಮುಕ್ತವಾಗಬೇಕು ಎಂದು ಡಿಕೆಶಿ ಸೂಚಿಸಿದರು.
(6 / 8)

ದೊಮ್ಮಲೂರು ಸೇರಿದಂತೆ ಹಲವು ಭಾಗಗಳಲ್ಲಿ ನಡೆದಿರುವ ಕಾಮಗಾರಿಗಳ ಕುರಿತಾಗಿ ಅಧಿಕಾರಿಗಳು ಖುದ್ದು ಮಾಹಿತಿಯನ್ನು ಡಿಸಿಎಂ ಅವರಿಗೆ ಒದಗಿಸಿದರು.
(7 / 8)

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ತುಷಾರ್‌ ಗಿರಿನಾಥ್‌, ಹಿತಿಯ ಅಧಿಕಾರಿಗಳು ಹಾಗೂ ಸ್ಥಳೀಯರು ಡಿಕೆಶಿ ಮಿಡ್‌ ನೈಟ್‌ ರೌಂಡ್ಸ್‌ ವೇಳೆ ಹಾಜರಿದ್ದರು.
(8 / 8)

    ಹಂಚಿಕೊಳ್ಳಲು ಲೇಖನಗಳು