logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಲ್ಲಿ ಆಸಾಡಿ ಅಮಾವಾಸ್ಯೆ ಘಮ್ಮತ್ತು; ಟೀಮ್‌ ಕುಂದಾಪುರಿಯನ್ಸ್‌ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ ಹೀಗಿತ್ತು

ಬೆಂಗಳೂರಲ್ಲಿ ಆಸಾಡಿ ಅಮಾವಾಸ್ಯೆ ಘಮ್ಮತ್ತು; ಟೀಮ್‌ ಕುಂದಾಪುರಿಯನ್ಸ್‌ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ ಹೀಗಿತ್ತು

Aug 04, 2024 08:50 PM IST

ಆಸಾಡಿ ಅಮಾವಾಸ್ಯೆ (ಆಷಾಢ ಮಾಸದ ಅಮಾವಾಸ್ಯೆ) ಕುಂದಾಪುರ ಸೇರಿದಂತೆ ಕರಾವಳಿ ಭಾಗದವರಿಗೆ ಬಹಳ ವಿಶೇಷ. ಇಂದು (ಆಗಸ್ಟ್‌ 4) ವಿಶ್ವ ಕುಂದಾಪ್ರ ಕನ್ನಡ ದಿನದ ಹಿನ್ನೆಲೆಯಲ್ಲಿ ಟೀಮ್‌ ಕುಂದಾಪುರಿಯನ್ಸ್‌ ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಗ್ರೌಂಡ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಚಿತ್ರನಟ ರಮೇಶ್‌ ಭಟ್‌ ಕಾರ್ಯಕ್ರಮ ಉದ್ಘಾಟಿಸಿದರು. 

  • ಆಸಾಡಿ ಅಮಾವಾಸ್ಯೆ (ಆಷಾಢ ಮಾಸದ ಅಮಾವಾಸ್ಯೆ) ಕುಂದಾಪುರ ಸೇರಿದಂತೆ ಕರಾವಳಿ ಭಾಗದವರಿಗೆ ಬಹಳ ವಿಶೇಷ. ಇಂದು (ಆಗಸ್ಟ್‌ 4) ವಿಶ್ವ ಕುಂದಾಪ್ರ ಕನ್ನಡ ದಿನದ ಹಿನ್ನೆಲೆಯಲ್ಲಿ ಟೀಮ್‌ ಕುಂದಾಪುರಿಯನ್ಸ್‌ ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಗ್ರೌಂಡ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಚಿತ್ರನಟ ರಮೇಶ್‌ ಭಟ್‌ ಕಾರ್ಯಕ್ರಮ ಉದ್ಘಾಟಿಸಿದರು. 
ಕಳೆದ ಬಾರಿಯಂತೆ ಈ ಬಾರಿಯೂ ಟೀಮ್‌ ಕುಂದಾಪುರಿಯನ್ಸ್‌ ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಿದೆ. ಚಿತ್ರನಟ ರಮೇಶ್‌ ಭಟ್‌ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಂದಾಪುರ ಭಾಗದ ಗ್ರಾಮೀಣ ಕ್ರೀಡೆಗಳು ನೆರೆದವರನ್ನು ರಂಜಿಸಿತು. ಇದರೊಂದಿಗೆ ಗಂಜಿ ಊಟ ಕಾರ್ಯಕ್ರಮಕ್ಕೆ ಬಂದವರ ಹೊಟ್ಟೆ ತಣಿಸಿತ್ತು. ಇಂದು (ಆಗಸ್ಟ್‌ 4) ನಡೆದ ಕಾರ್ಯಕ್ರಮದಲ್ಲಿ ಇನ್ನೂ ಏನೆಲ್ಲಾ ಇತ್ತು ಎಂಬುದನ್ನು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ.
(1 / 10)

ಮೀನು ಮಾರುವವನ ವೇಷ, ಯಕ್ಷಗಾನ ವೇಷ ಹೀಗೆ ಕರಾವಳಿ ಸಂಪ್ರದಾಯ ಪ್ರತಿಬಿಂಬಿಸುವ ವಿವಿಧ ವೇಷಗಳನ್ನು ಧರಿಸಿದ್ದ ಪುಟ್ಟ ಮಕ್ಕಳು ಕುಂದಗನ್ನಡದಲ್ಲಿ ಪಟಪಟನೆ ಅರಳು ಹುರಿದಂತೆ ಮಾತನಾಡಿ ಜನರನ್ನು ರಂಜಿಸಿದರು. 
(2 / 10)

ಕರಾವಳಿ ಭಾಗದ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾದ ಕಂಗೀಲು ಕುಣಿತ ಪ್ರದರ್ಶನವೂ ಏರ್ಪಟ್ಟಿತ್ತು. ಕರಾವಳಿ ಕಲಾವಿದರ ಕಂಗೀಲು ನೃತ್ಯ ನೆರೆದಿದ್ದ ಜನರ ಗಮನ ಸೆಳೆಯಿತು. 
(3 / 10)

ಕುಂದಾಪುರ, ಕರಾವಳಿ ಭಾಗದ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಕೂಡ ಆಯೋಜಿಸಲಾಗಿದ್ದು, ಹೆಣ್ಣುಮಕ್ಕಳು ಕಪ್ಪೆ ಜಿಗಿತ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. 
(4 / 10)

ಗಂಡು ಮಕ್ಕಳಿಗೆ ಲಗೋರಿ ಆಟ ಕೂಡ ಇದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಭಾಗದ ಗಂಡುಮಕ್ಕಳು ಲಗೋರಿ ಆಡಿ ಖುಷಿ ಪಟ್ಟರು. 
(5 / 10)

ಊರಲ್ಲೇ ಕೋಳಿಪಡೆ (ಕೋಳಿ ಅಂಕ) ಕಡಿಮೆಯಾಗಿರುವ ಈ ಕಾಲದಲ್ಲಿ ಟೀಮ್‌ ಕುಂದಾಪುರಿಯನ್ಸ್‌ ತಂಡ ಬೆಂಗಳೂರಿನ ವೇದಿಕೆ ಮೇಲೆ ಕೋಳಿ ಪಡೆ ಮಾಡಿಸಿದ್ದು ವಿಶೇಷವಾಗಿತ್ತು. 
(6 / 10)

ಬಾಲ್ಯದ ದಿನಗಳಲ್ಲಿ ಹೆಣ್ಣುಮಕ್ಕಳ ನೆಚ್ಚಿನ ಆಟವಾಗಿದ್ದ ಕುಂಟೆಬಿಲ್ಲೆ ಕೂಡ ಟೀಮ್ಸ್‌ ಕುಂದಾಪುರಿಯನ್ಸ್‌ ಆಯೋಜಿಸಿದ್ದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಭಾಗವಾಗಿತ್ತು. ಕುಂಟೆಬಿಲ್ಲೆ ಆಡಿದ ಹೆಣ್ಣುಮಕ್ಕಳು ಬಾಲ್ಯ ನೆನಪುಗಳೊಂದಿಗೆ ಆಟವಾಡಿ ಹರ್ಷ ವ್ಯಕ್ತಪಡಿಸಿದರು. 
(7 / 10)

ಕುಂದಾಪುರದ ಗ್ರಾಮೀಣ ಬದುಕನ್ನು ಬಿಂಬಿಸುವ ವಿವಿಧ ವಸ್ತುಗಳ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ನಟ ರಮೇಶ್‌ ಭಟ್‌ ವಸ್ತು ಪ್ರದರ್ಶನದಲ್ಲಿ ಇರಿಸಿಲಾಗಿದ್ದ ವಸ್ತುಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. 
(8 / 10)

ಟೀಮ್‌ ಕುಂದಾಪುರಿಯನ್ಸ್‌ ಉದ್ಯೋಗ, ವ್ಯವಹಾರದ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ದೂರದ ಕುಂದಾಪುರದಿಂದ ಬೆಂಗಳೂರಿಗೆ ಬಂದ ಒಂದು ಸಮಾನ ಮನಸ್ಕರ ತಂಡ. ನಮ್ಮೂರು, ನಮ್ಮ ಭಾಷೆ ಎಂಬ ಅಭಿಮಾನವೇ ಈ ತಂಡಕ್ಕೆ ಸ್ಫೂರ್ತಿ. ಹಲವು ಯುವ ಮನಸ್ಸುಗಳೇ ಸೇರಿ ಕಟ್ಟಿಕೊಂಡ ಈ ತಂಡ ಬೆಂಗಳೂರಿನಲ್ಲಿ ಹಲವು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಿದೆ. 
(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(10 / 10)

    ಹಂಚಿಕೊಳ್ಳಲು ಲೇಖನಗಳು