logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಗ್‌ ಬಾಸ್‌ ಮನೆಯಲ್ಲಿ ಪ್ರಣಯ ಪ್ರಸಂಗ; ಧರ್ಮ ಸಂಕಟದಲ್ಲಿ ಸಿಲುಕಿದ ಧರ್ಮ; ಸೂಪರ್ ಸಂಡೆ ವಿತ್‌ ಬಾದ್‌ಷಾ ಸುದೀಪ

ಬಿಗ್‌ ಬಾಸ್‌ ಮನೆಯಲ್ಲಿ ಪ್ರಣಯ ಪ್ರಸಂಗ; ಧರ್ಮ ಸಂಕಟದಲ್ಲಿ ಸಿಲುಕಿದ ಧರ್ಮ; ಸೂಪರ್ ಸಂಡೆ ವಿತ್‌ ಬಾದ್‌ಷಾ ಸುದೀಪ

Oct 13, 2024 06:21 PM IST

Bigg Boss 11: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಜೋಡಿಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅಷ್ಟಾಗಿ ಇನ್ನೂ ಯಾವ ಜೋಡಿಯೂ ಸುದ್ದಿಯಾಗಿರಲಿಲ್ಲ. ಆದರೆ ಧರ್ಮ ಹಾಗೂ ಅನುಷಾ ರೈ ನಡುವೆ ಏನೋ ಹಳೆಯ ಸಂಬಂಧ ಇದೆ ಎಂಬ ವಿಚಾರ ಬಹಿರಂಗ ಆಗುತ್ತಿದೆ. 

  • Bigg Boss 11: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಜೋಡಿಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅಷ್ಟಾಗಿ ಇನ್ನೂ ಯಾವ ಜೋಡಿಯೂ ಸುದ್ದಿಯಾಗಿರಲಿಲ್ಲ. ಆದರೆ ಧರ್ಮ ಹಾಗೂ ಅನುಷಾ ರೈ ನಡುವೆ ಏನೋ ಹಳೆಯ ಸಂಬಂಧ ಇದೆ ಎಂಬ ವಿಚಾರ ಬಹಿರಂಗ ಆಗುತ್ತಿದೆ. 
ಧರ್ಮ, ಅನುಷಾ ಮತ್ತು ಐಶ್ವರ್ಯ ಈ ಮೂರು ಜನರ ನಡುವೆ ಒಂದು ಸಂಬಂಧ ಇದೆ. ಆದರೆ ಒಬ್ಬರು ಮಾತಾಡಿದಾಗ ಇನ್ನೊಬ್ಬರಿಗೆ ಬೇಸರ ಆಗುತ್ತದೆ ಎಂದು ಹೇಳಲಾಗುತ್ತಿದೆ. 
(1 / 6)
ಧರ್ಮ, ಅನುಷಾ ಮತ್ತು ಐಶ್ವರ್ಯ ಈ ಮೂರು ಜನರ ನಡುವೆ ಒಂದು ಸಂಬಂಧ ಇದೆ. ಆದರೆ ಒಬ್ಬರು ಮಾತಾಡಿದಾಗ ಇನ್ನೊಬ್ಬರಿಗೆ ಬೇಸರ ಆಗುತ್ತದೆ ಎಂದು ಹೇಳಲಾಗುತ್ತಿದೆ. (Colors Kannada)
ಅವಳ ಕಣ್ಣು ಇವನ ಮೇಲೆ, ಇವನ ಕಣ್ಣು ಮತ್ತೊಬ್ಬಳ ಮೇಲೆ, ಮನೆಯವರೆಲ್ಲರ ಕಣ್ಣು ಈ ಮೂವರ ಮೇಲೆ ಎನ್ನುವ ಪ್ರಸಂಗ ಎದುರಾಗಿದ್ದು ಹೌದಾ ಎನ್ನುವ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.
(2 / 6)
ಅವಳ ಕಣ್ಣು ಇವನ ಮೇಲೆ, ಇವನ ಕಣ್ಣು ಮತ್ತೊಬ್ಬಳ ಮೇಲೆ, ಮನೆಯವರೆಲ್ಲರ ಕಣ್ಣು ಈ ಮೂವರ ಮೇಲೆ ಎನ್ನುವ ಪ್ರಸಂಗ ಎದುರಾಗಿದ್ದು ಹೌದಾ ಎನ್ನುವ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.(Colors Kannada)
ಆಗ ಮನೆಯ ಎಲ್ಲಾ ಸ್ಪರ್ಧಿಗಳೂ ಸಹ ಹೌದು ಎಂಬ ಒಂದು ಗ್ರೀನ್‌ ಕಾರ್ಡ್ ತೋರಿಸುತ್ತಾರೆ. ಆದರೆ ಆ ಮೂರು ಜನ ಅಂದರೆ ಧರ್ಮ, ಅನುಷಾ ಹಾಗೂ ಐಶ್ವರ್ಯ ನೋ ಎಂಬ ರೆಡ್‌ ಕಾರ್ಡ್‌ ತೋರಿಸಿರುತ್ತಾರೆ. 
(3 / 6)
ಆಗ ಮನೆಯ ಎಲ್ಲಾ ಸ್ಪರ್ಧಿಗಳೂ ಸಹ ಹೌದು ಎಂಬ ಒಂದು ಗ್ರೀನ್‌ ಕಾರ್ಡ್ ತೋರಿಸುತ್ತಾರೆ. ಆದರೆ ಆ ಮೂರು ಜನ ಅಂದರೆ ಧರ್ಮ, ಅನುಷಾ ಹಾಗೂ ಐಶ್ವರ್ಯ ನೋ ಎಂಬ ರೆಡ್‌ ಕಾರ್ಡ್‌ ತೋರಿಸಿರುತ್ತಾರೆ. (Colors Kannada)
ಆ ನಂತರ ಉಗ್ರಂ ಮಂಜು ಅವರನ್ನು ಪ್ರಶ್ನೆ ಮಾಡಿದಾಗ ಅವರು, ಹೌದು ಸರ್ ಆ ರೀತಿ ಒಂದು ವಾತಾವರಣ ಮನೆಯಲ್ಲಿ ಇದೆ. “ಅವರನ್ನೇ ನೋಡೋದು, ಎಲ್ಲೋಗ್ತಾ ಇದಾರೆ, ಏನ್ ಮಾಡ್ತಾ ಇದಾರೆ ಅದೆಲ್ಲವನ್ನೂ ಐಶ್ವರ್ಯ ಗಮನಿಸುತ್ತಾರೆ” ಎಂದು ಹೇಳುತ್ತಾರೆ.
(4 / 6)
ಆ ನಂತರ ಉಗ್ರಂ ಮಂಜು ಅವರನ್ನು ಪ್ರಶ್ನೆ ಮಾಡಿದಾಗ ಅವರು, ಹೌದು ಸರ್ ಆ ರೀತಿ ಒಂದು ವಾತಾವರಣ ಮನೆಯಲ್ಲಿ ಇದೆ. “ಅವರನ್ನೇ ನೋಡೋದು, ಎಲ್ಲೋಗ್ತಾ ಇದಾರೆ, ಏನ್ ಮಾಡ್ತಾ ಇದಾರೆ ಅದೆಲ್ಲವನ್ನೂ ಐಶ್ವರ್ಯ ಗಮನಿಸುತ್ತಾರೆ” ಎಂದು ಹೇಳುತ್ತಾರೆ.(Colors Kannada)
ಆದರೆ ಹಾಗೆಲ್ಲ ನಮ್ಮ ನಡುವೆ ಏನೂ ಇಲ್ಲ ಎಂದು ಅನುಷಾ ಅವರು ಹೇಳುತ್ತಾರೆ. ಧರ್ಮ ಕೂಡ ಇದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಅನುಷಾ ಮೂರ್ನಾಲ್ಕು ವರ್ಷಗಳಿಂದ ಸ್ನೇಹಿತರು ಎಂದು ಹೇಳುತ್ತಾರೆ. 
(5 / 6)
ಆದರೆ ಹಾಗೆಲ್ಲ ನಮ್ಮ ನಡುವೆ ಏನೂ ಇಲ್ಲ ಎಂದು ಅನುಷಾ ಅವರು ಹೇಳುತ್ತಾರೆ. ಧರ್ಮ ಕೂಡ ಇದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಅನುಷಾ ಮೂರ್ನಾಲ್ಕು ವರ್ಷಗಳಿಂದ ಸ್ನೇಹಿತರು ಎಂದು ಹೇಳುತ್ತಾರೆ. (Colors Kannada)
ನಾನು ಧರ್ಮ ಅವರನ್ನು ಮಾತನಾಡಿಸಿದಾಗಲೆಲ್ಲ ಐಶ್ವರ್ಯ ಅವರು ನನ್ನನ್ನೇ ನೋಡುತ್ತಾ ಇರುತ್ತಾರೆ ಎಂದು ಅನುಷಾ ಹೇಳುತ್ತಾರೆ. ಆದರೆ ಆ ಮಾತನ್ನು ಐಶ್ವರ್ಯ ಒಪ್ಪಿಕೊಳ್ಳುವುದಿಲ್ಲ. 
(6 / 6)
ನಾನು ಧರ್ಮ ಅವರನ್ನು ಮಾತನಾಡಿಸಿದಾಗಲೆಲ್ಲ ಐಶ್ವರ್ಯ ಅವರು ನನ್ನನ್ನೇ ನೋಡುತ್ತಾ ಇರುತ್ತಾರೆ ಎಂದು ಅನುಷಾ ಹೇಳುತ್ತಾರೆ. ಆದರೆ ಆ ಮಾತನ್ನು ಐಶ್ವರ್ಯ ಒಪ್ಪಿಕೊಳ್ಳುವುದಿಲ್ಲ. (Colors Kannada)

    ಹಂಚಿಕೊಳ್ಳಲು ಲೇಖನಗಳು