logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bmw X6 M: ಅಪ್‌ಡೇಟ್‌ ಆಗಿ ಬಂತು ಬಿಎಂಡಬ್ಲ್ಯು ಎಕ್ಸ್‌6 ಎಂ, ದುಬಾರಿ ವಿಲಾಸಿ ಎಸ್‌ಯುವಿಗೆ ಈಗ ಹೈಬ್ರಿಡ್‌ ಟಚ್‌

BMW X6 M: ಅಪ್‌ಡೇಟ್‌ ಆಗಿ ಬಂತು ಬಿಎಂಡಬ್ಲ್ಯು ಎಕ್ಸ್‌6 ಎಂ, ದುಬಾರಿ ವಿಲಾಸಿ ಎಸ್‌ಯುವಿಗೆ ಈಗ ಹೈಬ್ರಿಡ್‌ ಟಚ್‌

Feb 25, 2023 02:45 PM IST

ವಿಲಾಸಿ ಕಾರುಗಳೆಂದರೆ ತಕ್ಷಣ ಬಿಎಂಡಬ್ಲ್ಯು ಕಾರುಗಳು ನೆನಪಿಗೆ ಬರಬಹುದು. ಬಿಎಂಡಬ್ಲ್ಯು ಕಂಪನಿಯ BMW X6 M ಇದೀಗ ಕಾರಿನ ಒಳಾಂಗಣ ಮತ್ತು ಹೊರಾಂಗಣದಲ್ಲಿ ಒಂದಿಷ್ಟು ಪರಿಷ್ಕರಣೆ ಮಾಡಿದೆ. ಜತೆಗೆ ಇದರ ಎಂಜಿನ್‌ಗೆ ಕೊಂಚ ಹೈಬ್ರಿಡ್‌ ಟಚಪ್‌ ನೀಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

  • ವಿಲಾಸಿ ಕಾರುಗಳೆಂದರೆ ತಕ್ಷಣ ಬಿಎಂಡಬ್ಲ್ಯು ಕಾರುಗಳು ನೆನಪಿಗೆ ಬರಬಹುದು. ಬಿಎಂಡಬ್ಲ್ಯು ಕಂಪನಿಯ BMW X6 M ಇದೀಗ ಕಾರಿನ ಒಳಾಂಗಣ ಮತ್ತು ಹೊರಾಂಗಣದಲ್ಲಿ ಒಂದಿಷ್ಟು ಪರಿಷ್ಕರಣೆ ಮಾಡಿದೆ. ಜತೆಗೆ ಇದರ ಎಂಜಿನ್‌ಗೆ ಕೊಂಚ ಹೈಬ್ರಿಡ್‌ ಟಚಪ್‌ ನೀಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬಿಎಂಡಬ್ಲ್ಯು ಎಕ್ಸ್‌ 6 ಎಂ ಕಾಂಪಿಟೇಷನ್‌ ಕಾರು ಪರಿಷ್ಕರಣೆಗೊಂಡಿದ್ದು, ಇದರ ಎಂಜಿನ್‌ ಕೂಡ ಅಪ್‌ಗ್ರೇಡ್‌ ಆಗಿದೆ. 
(1 / 11)

ಪರಿಷ್ಕೃತ ನೂತನ ಎಸ್‌ಯುವಿಯು ಇದೇ ವರ್ಷ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ. 
(2 / 11)
ಪರಿಷ್ಕೃತ ನೂತನ ಎಸ್‌ಯುವಿಯು ಇದೇ ವರ್ಷ ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಆಗಮಿಸಲಿದೆ. 
ಮುಂಭಾಗದ ಗ್ರಿಲ್‌ಗಳು ಕಲಾಕೃತಿಯಂತೆ ಭರ್ಜರಿಯಾಗಿ ಕಾಣುತ್ತಿದ್ದು, ಹೆಚ್ಚು ಶಕ್ತಿಶಾಲಿ ಮತ್ತು ಸ್ನಾಯುಯುತ ಕಾರಿನಂತೆ ಗಮನ ಸೆಳೆಯುತ್ತದೆ. 
(3 / 11)

ಇದರ ಹೆಡ್‌ಲ್ಯಾಂಪ್‌ ಕೂಡ ಹೆಚ್ಚು ತೆಳುವಾಗಿದ್ದು, ಮುಂಭಾಗವನ್ನು ಹೆಚ್ಚು ಆಕರ್ಷಕವಾಗಿಸಿದೆ. 
(4 / 11)
ಇದರ ಹೆಡ್‌ಲ್ಯಾಂಪ್‌ ಕೂಡ ಹೆಚ್ಚು ತೆಳುವಾಗಿದ್ದು, ಮುಂಭಾಗವನ್ನು ಹೆಚ್ಚು ಆಕರ್ಷಕವಾಗಿಸಿದೆ. 
ಮಿರರ್‌ ಕ್ಯಾಪ್‌ ಸೇರಿದಂತೆ ವಿವಿಧೆಡೆ ಫೈಬರ್‌ ಟ್ರಿಮ್‌ಗಳು ಗಮನ ಸೆಳೆಯುತ್ತವೆ. 
(5 / 11)
ಮಿರರ್‌ ಕ್ಯಾಪ್‌ ಸೇರಿದಂತೆ ವಿವಿಧೆಡೆ ಫೈಬರ್‌ ಟ್ರಿಮ್‌ಗಳು ಗಮನ ಸೆಳೆಯುತ್ತವೆ. 
ಪರ್ಫಾಮೆನ್ಸ್‌ಗೆ ಗಮನ ನೀಡುವ ಈ ಎಸ್‌ಯುವಿಯ ಎಲ್ಲಾ ಅಲಾಯ್‌ ವೀಲ್‌ಗಳು ಕಪ್ಪಗಿನ ಸ್ಪೋರ್ಟಿ ಲುಕ್‌ ಹೊಂದಿವೆ.
(6 / 11)

ತೆಳ್ಳಗಿನ ಎಲ್‌ಇಡಿ ಟೇಲ್‌ಲ್ಯಾಂಪ್‌ಗಳು, ಕ್ವಾಡ್‌ ಎಗ್ಸಾಸ್ಟ್‌ ಇತ್ಯಾದಿಗಳು ಗಮನ ಸೆಳೆಯುತ್ತವೆ. 
(7 / 11)

ಕಾರಿನ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇವಲ ಪ್ರಸಾಧನ ವಿನ್ಯಾಸದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಜತೆಗೆ ಎಂಜಿನ್‌ ಅಪ್‌ಗ್ರೇಡ್‌ನಿಂದಾಗಿ ತುಸು ಹೆಚ್ಚು ಪವರ್‌ ದೊರಕುತ್ತದೆ. 
(8 / 11)

ಇದರ ಕ್ಯಾಬಿನ್‌ನಲ್ಲಿ ಬಿಎಂಡಬ್ಲ್ಯು ಕರ್ವ್‌ ಡಿಸ್‌ಪ್ಲೇ ಇದೆ. ಜತೆಗೆ ಒಂದೇ ಬದಿಯಲ್ಲಿ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಮತ್ತು ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಅಳವಡಿಸಲಾಗಿದೆ. 
(9 / 11)

ಈ ಎಸ್‌ಯುವಿಯು ಕೇಲವ 3.2 ಸೆಕೆಂಡ್‌ನಲ್ಲಿ 96 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. 
(10 / 11)
ಈ ಎಸ್‌ಯುವಿಯು ಕೇಲವ 3.2 ಸೆಕೆಂಡ್‌ನಲ್ಲಿ 96 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. 
ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 249 ವೇಗದಲ್ಲಿ ಸಾಗಬಹುದು. ಐಚ್ಛಿಕ ಪರ್ಫಾಮೆನ್ಸ್‌ ಮೂಡ್‌ನಲ್ಲಿ ಇದು ಗಂಟೆಗೆ ಗರಿಷ್ಠ 285 ಕಿ.ಮೀ. ವೇಗದಲ್ಲಿ ಸಾಗಬಹುದು. 
(11 / 11)

    ಹಂಚಿಕೊಳ್ಳಲು ಲೇಖನಗಳು