logo
ಕನ್ನಡ ಸುದ್ದಿ  /  Photo Gallery  /  Bollywood News Actor Arjun Kapoor Breaks Silence On Malaika Arora S Pregnancy Rumours Actor Reacts Mnk

Malaika Arora:‌ ಮಲೈಕಾ ಅರೋರಾ ಪ್ರಗ್ನೆಂಟ್‌!?; ಮತ್ತೆ ಮೌನ ಮುರಿದ ಪ್ರಿಯಕರ ಅರ್ಜುನ್‌ ಕಪೂರ್

Jun 01, 2023 12:14 PM IST

Malaika Arora: ಬಾಲಿವುಡ್‌ ಲವ್‌ಬರ್ಡ್ಸ್‌ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಮದುವೆ ಆಗದೆ ಎಲ್ಲೆಂದರಲ್ಲಿ ಸುತ್ತಾಡುತ್ತಿರುವ ಈ ಜೋಡಿ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಬಗೆಬಗೆ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಹೊಸ ಸುದ್ದಿ ಏನೆಂದರೆ ಮಲೈಕಾ ಅರೋರಾ ಗರ್ಭಿಣಿಯಂತೆ!

  • Malaika Arora: ಬಾಲಿವುಡ್‌ ಲವ್‌ಬರ್ಡ್ಸ್‌ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಮದುವೆ ಆಗದೆ ಎಲ್ಲೆಂದರಲ್ಲಿ ಸುತ್ತಾಡುತ್ತಿರುವ ಈ ಜೋಡಿ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಬಗೆಬಗೆ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಹೊಸ ಸುದ್ದಿ ಏನೆಂದರೆ ಮಲೈಕಾ ಅರೋರಾ ಗರ್ಭಿಣಿಯಂತೆ!
2019ರಿಂದಲೇ ಮಲೈಕಾ ಮತ್ತು ಅರ್ಜುನ್‌ ಕಪೂರ್‌ ಡೇಟಿಂಗ್‌ನಲ್ಲಿದ್ದಾರೆ. ಎಲ್ಲೆಂದರಲ್ಲಿ  ಕೈ ಕೈ ಹಿಡಿದು ಸುತ್ತಾಡುತ್ತ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದಾರೆ. ಇನ್ನೂ ಮದುವೆ ಆಗದೆ ಓಡಾಡುತ್ತಿದ್ದ ಈ ಜೋಡಿಗೆ, ಮದುವೆ ಯಾವಾಗ ಎಂಬ ಪ್ರಶ್ನೆಗಳೂ ಸೋಷಿಯಲ್‌ ಮೀಡಿಯಾದಲ್ಲಿ ತೇಲಿಬಂದಿವೆ.
(1 / 6)

ಆದರೆ, ಅದ್ಯಾವುದಕ್ಕೂ ಉತ್ತರಿಸಿದ ಮಲೈಕಾ ಮತ್ತು ಅರ್ಜುನ್‌ ಕಪೂರ್‌ ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಓಡಾಡುತ್ತಿದ್ದಾರೆ.  ಇದೀಗ ಇದೇ ಮಲೈಕಾ ಅರೋರಾ ಅರ್ಜುನ್‌ ಕಪೂರ್‌ ಜತೆ ಮದುವೆ ಆಗದೇ, ಗರ್ಭಿಣಿ ಆಗಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಮತ್ತೆ ಹಲ್‌ಚಲ್‌ ಸೃಷ್ಟಿಸಿದೆ. 
(2 / 6)

ಈ ಸುದ್ದಿ ಹರಿದಾಡುತ್ತಿದ್ದಂತೆ, ವದಂತಿಗೆ ನಟ ಅರ್ಜುನ್‌ ಕಪೂರ್‌ ಕೊಂಚ ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡುವ ಧೈರ್ಯ ಬೇಡ. ಸೆಲೆಬ್ರಿಟಿಗಳೂ ಮನುಷ್ಯರು ಎಂಬುದನ್ನು ಜನರು ಮರೆತಂತಿದೆ" ಎಂದಿದ್ದಾರೆ. 
(3 / 6)

ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅರ್ಜುನ್‌ ಕಪೂರ್‌, ಕೊಂಚ ಬೇಸರದಲ್ಲಿಯೇ ಮಾತನಾಡಿದ್ದಾರೆ. ಅವರಾಡಿದ ಮಾತು ಹೀಗಿದೆ.
(4 / 6)

"ನೆಗೆಟಿವಿಟಿ ಹರಡುವುದು ತುಂಬ ಸುಲಭ. ಜನರೂ ಅದಕ್ಕೆ ಬೇಗ ಆಕರ್ಷಿತರಾಗುತ್ತಾರೆ. ನಾವು ಕಲಾವಿದರು. ನಮಗೂ ಒಂದು ವೈಯಕ್ತಿಕ ಜೀವನವಿದೆ. ಅದು ಯಾವಾಗಲೂ ಗೌಪ್ಯವಾಗಿರುವುದಿಲ್ಲ. ಅದರ ನಡುವಿನ ಕೊಂಚ ನಮ್ಮ ಖಾಸಗಿ ಜೀವನವನ್ನೂ ನೀವು ಗೌರವಿಸಬೇಕು. ಪತ್ರಕರ್ತರಾದ ನೀವೂ ನಮಗೆ ಬೇಕು. ನಮ್ಮ ಜೀವನದಲ್ಲಿ ನೀವೂ ಎಂಟ್ರಿ ಆಗಿದ್ದೀರಿ. ಹಾಗಾಗಿ ಏನೇ ವಿಚಾರ ಬರೆಯಬೇಕಿದ್ದರೆ ಸತ್ಯಾಸತ್ಯತೆ ಗಮನದಲ್ಲಿರಲಿ. ಊಹೆ ಮಾಡಿ ಬರೆಯುವುದಲ್ಲ. ಏಕೆಂದರೆ ನಾವೂ ಮನುಷ್ಯರೇ" ಎಂದಿದ್ದಾರೆ. (Photo/ HT Gallery)
(5 / 6)

ಕಳೆದ ನಾಲ್ಕು ವರ್ಷಗಳಿಂದ 49 ವರ್ಷದ ಮಲೈಕಾ ಮತ್ತು 37 ವರ್ಷದ ಅರ್ಜುನ್‌ ಕಪೂರ್‌ ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಇಂದಿಗೂ ಸದಾ ಸುದ್ದಿಯಲ್ಲಿರುವ ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. (Photo/ HT Gallery)
(6 / 6)

    ಹಂಚಿಕೊಳ್ಳಲು ಲೇಖನಗಳು