logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಮ್ಮ ಮಕ್ಕಳ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ಬಾಲಿವುಡ್‌ನ ಸ್ಟಾರ್‌ ಸೆಲೆಬ್ರಿಟಿಗಳು Photos

ತಮ್ಮ ಮಕ್ಕಳ ಹೆಸರನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ಬಾಲಿವುಡ್‌ನ ಸ್ಟಾರ್‌ ಸೆಲೆಬ್ರಿಟಿಗಳು PHOTOS

Sep 14, 2024 04:10 PM IST

Bollywood Celebrities: ಅಜಯ್ ದೇವಗನ್, ರವೀನಾ ಟಂಡನ್, ಅರ್ಜುನ್ ರಾಂಪಾಲ್, ವಿಕ್ರಾಂತ್ ಮಾಸ್ಸಿ ಮತ್ತು ಇಮ್ರಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಮೈಮೇಲೆ ಮಕ್ಕಳ ಹೆಸರು ಹಚ್ಚೆ ಹಾಕುವ ಮೂಲಕ ಅವರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.

  • Bollywood Celebrities: ಅಜಯ್ ದೇವಗನ್, ರವೀನಾ ಟಂಡನ್, ಅರ್ಜುನ್ ರಾಂಪಾಲ್, ವಿಕ್ರಾಂತ್ ಮಾಸ್ಸಿ ಮತ್ತು ಇಮ್ರಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಮೈಮೇಲೆ ಮಕ್ಕಳ ಹೆಸರು ಹಚ್ಚೆ ಹಾಕುವ ಮೂಲಕ ಅವರ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ 2018ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ನಿಕ್‌ ಜೋನಸ್‌ ಅವರನ್ನು ವಿವಾಹವಾದರು. ಜನವರಿ 2022ರಲ್ಲಿ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಮಾಲ್ತಿ ಮೇರಿ ಮಗುವನ್ನು ಸ್ವಾಗತಿಸಿದರು. ಮಗು ಜನಿಸಿದ ಬಳಿಕ ಪ್ರಿಯಾಂಕ ತಮ್ಮ ಬಲಗೈ ಮೇಲೆ ಮಗಳ ಮುಖವನ್ನು ಹಚ್ಚೆ ಹಾಕಿಸಿದ್ದಾರೆ.
(1 / 9)

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 2022ರ ಏಪ್ರಿಲ್‌ನಲ್ಲಿ ವಿವಾಹವಾದರು. ಅದೇ ವರ್ಷದ ನವೆಂಬರ್‌ನಲ್ಲಿ ಮಗಳು ರಾಹಾಳನ್ನು ಸ್ವಾಗತಿಸಿದರು. ಅದಾಗಿ ಕೆಲ ದಿನಕ್ಕೆ ಮಗಳ ಹೆಸರನ್ನು ಶೋಲ್ಡರ್‌ ಬಳಿ ಹಚ್ಚೆ ಹಾಕಿಸಿಕೊಂಡಿದ್ದಾರೆ ರಣಬೀರ್.‌ 
(2 / 9)

ಅಕ್ಷಯ್ ಕುಮಾರ್ ತಮ್ಮ ಮಗ ಆರವ್ ಹೆಸರನ್ನು ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಬಲ ಭುಜದ ಮೇಲೆ ಮಗಳು ನಿತಾರಾ ಅವರ ಹೆಸರಿನ ಟ್ಯಾಟೂ ಇದೆ.  ಅಂದಹಾಗೆ ಅಕ್ಷಯ್ 2001 ರಲ್ಲಿ ಟ್ವಿಂಕಲ್ ಖನ್ನಾ ಅವರನ್ನು ವರಿಸಿದ್ದರು.
(3 / 9)

ತಮ್ಮ ಮಗಳು ಇಮಾರಾ ಅವರನ್ನು ಜಗತ್ತಿಗೆ ಸ್ವಾಗತಿಸಿದ ಸುಮಾರು ಹತ್ತು ತಿಂಗಳ ನಂತರ, ಬಾಲಿವುಡ್ ನಟ ಇಮ್ರಾನ್ ಖಾನ್,  ಮಗಳ ಹೆಜ್ಜೆಗುರುತನ್ನು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
(4 / 9)

ಬಾಲಿವುಡ್‌ ನಟ ಕುನಾಲ್ ಖೇಮು ತಮ್ಮ ಮಗಳು ಇನಾಯಾ ಅವರ ಹೆಸರನ್ನು ಎದೆಯ ಭಾಗದ ಬಳಿ ಹಚ್ಚೆ ಹಾಕಿಸಿಕೊಂಡಿದ್ದಾರೆ,
(5 / 9)

ವಿಕ್ರಾಂತ್ ಮಾಸ್ಸಿ ಮತ್ತು ಶೀತಲ್ ಠಾಕೂರ್ ಫೆಬ್ರವರಿ 14, 2022 ರಂದು ವಿವಾಹವಾದರು. ಈ ಜೋಡಿ ಇದೇ ವರ್ಷದ ಫೆಬ್ರವರಿ 7 ರಂದು ಮಗನನ್ನು ಸ್ವಾಗತಿಸಿದರು. ಮಗನ ವರ್ದಾನ್‌ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ಈ ನಟ. ಜತೆಗೆ ಹುಟ್ಟಿದ ದಿನಾಂಕವೂ ಅದರಲ್ಲಿದೆ. 
(6 / 9)

ಬಾಲಿವುಡ್‌ ನಟಿ ರವೀನಾ ಟಂಡನ್‌ ತಮ್ಮ ಇಬ್ಬರು ಮಕ್ಕಳಾದ ರಾಶಾ ಮತ್ತು ಮಗ ರಣಬೀರ್ ವರ್ಧನ್ ಅವರ ಹೆಸರುಗಳನ್ನು ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
(7 / 9)

ಬಾಲಿವುಡ್ ನಟ ಅಜಯ್‌ ದೇವಗನ್‌ ತಮ್ಮ ಮಗ ಯುಗ್ ಹೆಸರಿನ ಮೊದಲ ಅಕ್ಷರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. 
(8 / 9)

ಬಾಲಿವುಡ್‌ ನಟ ಅರ್ಜುನ್ ರಾಂಪಾಲ್‌ ತಮ್ಮಿಬ್ಬರು ಹೆಣ್ಣುಮಕ್ಕಳಾದ ಮಹಿಕಾ, ಮೈರಾ ಅವರ ಹೆಸರುಗಳನ್ನು ಎರೂ ಕೈಗಳ ಮೇಲೆ ಒಬ್ಬೊಬ್ಬರ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು