logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಾಲಿವುಡ್‌ ನಟ ಗೋವಿಂದ; ಕಾಂಗ್ರೆಸ್‌ ಬಿಟ್ಟು ಕೇಸರಿ ಧ್ವಜ ಹಿಡಿದು ಶಿವಸೇನೆಗೆ ಎಂಟ್ರಿ

ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಾಲಿವುಡ್‌ ನಟ ಗೋವಿಂದ; ಕಾಂಗ್ರೆಸ್‌ ಬಿಟ್ಟು ಕೇಸರಿ ಧ್ವಜ ಹಿಡಿದು ಶಿವಸೇನೆಗೆ ಎಂಟ್ರಿ

Mar 29, 2024 07:09 AM IST

ಬಾಲಿವುಡ್ ನಟ ಮತ್ತು ಕಾಂಗ್ರೆಸ್ ಮಾಜಿ ಲೋಕಸಭಾ ಸಂಸದ ಗೋವಿಂದ, ಗುರುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.

  • ಬಾಲಿವುಡ್ ನಟ ಮತ್ತು ಕಾಂಗ್ರೆಸ್ ಮಾಜಿ ಲೋಕಸಭಾ ಸಂಸದ ಗೋವಿಂದ, ಗುರುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.
ಬಾಲಿವುಡ್ ನಟ ಗೋವಿಂದ, ಗುರುವಾರ ಮುಂಬೈನಲ್ಲಿ ಆಡಳಿತಾರೂಢ ಶಿವಸೇನೆ ಜತೆ ಕೈ ಜೋಡಿಸಿದರು. 14 ವರ್ಷಗಳ ವಿರಾಮದ ನಂತರ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.  
(1 / 6)
ಬಾಲಿವುಡ್ ನಟ ಗೋವಿಂದ, ಗುರುವಾರ ಮುಂಬೈನಲ್ಲಿ ಆಡಳಿತಾರೂಢ ಶಿವಸೇನೆ ಜತೆ ಕೈ ಜೋಡಿಸಿದರು. 14 ವರ್ಷಗಳ ವಿರಾಮದ ನಂತರ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ.  (PTI)
ಮುಂಬೈನಲ್ಲಿ ಗುರುವಾರ ನಡೆದ ಗೋವಿಂದ ಅವರ ಶಿವಸೇನೆ ಸೇರ್ಪಡೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸಿದರು.
(2 / 6)
ಮುಂಬೈನಲ್ಲಿ ಗುರುವಾರ ನಡೆದ ಗೋವಿಂದ ಅವರ ಶಿವಸೇನೆ ಸೇರ್ಪಡೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸಿದರು.(ANI)
ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದರಾಗಿ ಈ ಹಿಂದೆ ಆರಿಸಿ ಬಂದಿದ್ದ ಗೋವಿಂದ, ಇದೀಗ ಲೋಕಸಭಾ ಚುನಾವಣಾ ಹೊತ್ತಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.  
(3 / 6)
ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದರಾಗಿ ಈ ಹಿಂದೆ ಆರಿಸಿ ಬಂದಿದ್ದ ಗೋವಿಂದ, ಇದೀಗ ಲೋಕಸಭಾ ಚುನಾವಣಾ ಹೊತ್ತಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.  (PTI)
60 ವರ್ಷದ ನಟನನ್ನು ಶಿಂಧೆ ತಮ್ಮ ಪಕ್ಷಕ್ಕೆ ಸ್ವಾಗತಿಸಿ, ಗೋವಿಂದ ಅವರು ಸಮಾಜದ ಎಲ್ಲಾ ವರ್ಗಗಳ ಜನಪ್ರಿಯ ವ್ಯಕ್ತಿ ಎಂದು ಹೇಳಿದರು.  
(4 / 6)
60 ವರ್ಷದ ನಟನನ್ನು ಶಿಂಧೆ ತಮ್ಮ ಪಕ್ಷಕ್ಕೆ ಸ್ವಾಗತಿಸಿ, ಗೋವಿಂದ ಅವರು ಸಮಾಜದ ಎಲ್ಲಾ ವರ್ಗಗಳ ಜನಪ್ರಿಯ ವ್ಯಕ್ತಿ ಎಂದು ಹೇಳಿದರು.  (PTI)
2004 ರಿಂದ 2009 ರವರೆಗೆ ಕಾಂಗ್ರೆಸ್‌ನ ಸಂಸದರಾಗಿದ್ದ ಗೋವಿಂದ, ಅದಾದ ಬಳಿಕ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಅವರ ಆಗಮನವಾಗುತ್ತಿದೆ. 
(5 / 6)
2004 ರಿಂದ 2009 ರವರೆಗೆ ಕಾಂಗ್ರೆಸ್‌ನ ಸಂಸದರಾಗಿದ್ದ ಗೋವಿಂದ, ಅದಾದ ಬಳಿಕ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಅವರ ಆಗಮನವಾಗುತ್ತಿದೆ. (PTI)
“14 ವರ್ಷಗಳ ಸುದೀರ್ಘ ವನವಾಸದ ನಂತರ ನಾನು (ರಾಜಕೀಯಕ್ಕೆ) ಮರಳಿದ್ದೇನೆ. ಅವಕಾಶ ಸಿಕ್ಕರೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ” ಎಂದು ಗೋವಿಂದ ಹೇಳಿದ್ದಾರೆ.
(6 / 6)
“14 ವರ್ಷಗಳ ಸುದೀರ್ಘ ವನವಾಸದ ನಂತರ ನಾನು (ರಾಜಕೀಯಕ್ಕೆ) ಮರಳಿದ್ದೇನೆ. ಅವಕಾಶ ಸಿಕ್ಕರೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ” ಎಂದು ಗೋವಿಂದ ಹೇಳಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು