logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನ ಅತ್ಯಂತ ಐಷಾರಾಮಿ ಹೋಟೆಲ್ ರೂಮ್‌ಗಳ ಬಾಡಿಗೆ ಎಷ್ಟಿರಬಹುದು; ಇಲ್ಲಿದೆ ನೋಡಿ 10 ಲಕ್ಷುರಿ ಸ್ಯೂಟ್‌ಗಳ ವಿವರ

ಜಗತ್ತಿನ ಅತ್ಯಂತ ಐಷಾರಾಮಿ ಹೋಟೆಲ್ ರೂಮ್‌ಗಳ ಬಾಡಿಗೆ ಎಷ್ಟಿರಬಹುದು; ಇಲ್ಲಿದೆ ನೋಡಿ 10 ಲಕ್ಷುರಿ ಸ್ಯೂಟ್‌ಗಳ ವಿವರ

Oct 09, 2024 08:00 PM IST

ಜಗತ್ತಿನ ಅತ್ಯಂತ ಐಷಾರಾಮಿ ಹೋಟೆಲ್ ರೂಮ್‌ಗಳ ಬಾಡಿಗೆ ಎಷ್ಟಿರಬಹುದು? ಗೆಸ್ ಮಾಡಬಹುದಾ. 10 ಲಕ್ಷುರಿ ಸ್ಯೂಟ್‌ಗಳ ವಿವರ ಇಲ್ಲಿದೆ ಗಮನಿಸಿ. 

ಜಗತ್ತಿನ ಅತ್ಯಂತ ಐಷಾರಾಮಿ ಹೋಟೆಲ್ ರೂಮ್‌ಗಳ ಬಾಡಿಗೆ ಎಷ್ಟಿರಬಹುದು? ಗೆಸ್ ಮಾಡಬಹುದಾ. 10 ಲಕ್ಷುರಿ ಸ್ಯೂಟ್‌ಗಳ ವಿವರ ಇಲ್ಲಿದೆ ಗಮನಿಸಿ. 
ದ ಎಂಪತಿ ಸ್ಯೂಟ್‌, ಪಾಮ್ಸ್ ಕ್ಯಾಸಿನೋ ರೆಸಾರ್ಟ್, ಲಾಸ್ ವೇಗಾಸ್, ಅಮೆರಿಕ. ಇಲ್ಲಿನ ದ ಎಂಪತಿ ಸ್ಯೂಟ್ ಸ್ಕೈ ವಿಲ್ಲಾಗೆ ಒಂದು ರಾತ್ರಿ 1 ಲಕ್ಷ ಅಮೆರಿಕನ್ ಡಾಲರ್‌ ಬಾಡಿಗೆ ಇದೆ. ಇದನ್ನು ಬ್ರಿಟಿಷ್ ಕಲಾವಿದ ಡ್ಯಾಮಿಯೆನ್‌ ಹಿರ್ಸ್ಟ್ ವಿನ್ಯಾಸಗೊಳಿಸಿದ್ದು, 2 ಮಾಸ್ಟರ್ ಬೆಡ್‌ರೂಮ್‌, ಮಸಾಜ್ ಟೇಬಲ್‌, ಸಾಲ್ಟ್ ರಿಲಾಕ್ಷೇಷನ್ ರೂಮ್‌ ಸೇರಿ ಐಷಾರಾಮಿ ಸೌಕರ್ಯಗಳಿವೆ.
(1 / 10)
ದ ಎಂಪತಿ ಸ್ಯೂಟ್‌, ಪಾಮ್ಸ್ ಕ್ಯಾಸಿನೋ ರೆಸಾರ್ಟ್, ಲಾಸ್ ವೇಗಾಸ್, ಅಮೆರಿಕ. ಇಲ್ಲಿನ ದ ಎಂಪತಿ ಸ್ಯೂಟ್ ಸ್ಕೈ ವಿಲ್ಲಾಗೆ ಒಂದು ರಾತ್ರಿ 1 ಲಕ್ಷ ಅಮೆರಿಕನ್ ಡಾಲರ್‌ ಬಾಡಿಗೆ ಇದೆ. ಇದನ್ನು ಬ್ರಿಟಿಷ್ ಕಲಾವಿದ ಡ್ಯಾಮಿಯೆನ್‌ ಹಿರ್ಸ್ಟ್ ವಿನ್ಯಾಸಗೊಳಿಸಿದ್ದು, 2 ಮಾಸ್ಟರ್ ಬೆಡ್‌ರೂಮ್‌, ಮಸಾಜ್ ಟೇಬಲ್‌, ಸಾಲ್ಟ್ ರಿಲಾಕ್ಷೇಷನ್ ರೂಮ್‌ ಸೇರಿ ಐಷಾರಾಮಿ ಸೌಕರ್ಯಗಳಿವೆ.(Palms Casino Resort)
ರಾಯಲ್ ಪೆಂಟ್‌ಹೌಸ್ ಸ್ಯೂಟ್‌, ಹೋಟೆಲ್‌ ಪ್ರೆಸಿಡೆಂಟ್‌ ವಿಲ್ಸನ್‌ ಜಿನೇವಾ, ಸ್ವಿಜರ್ಲೆಂಡ್‌. ಈ ಹೋಟೆಲ್‌ನ ರಾಯಲ್ ಪೆಂಟ್‌ ಹೌಸ್‌ ಸ್ಯೂಟ್‌ನಲ್ಲಿ ಒಂದು ರಾತ್ರಿ ಇರಬೇಕಾದರೆ 80,000 ಅಮೆರಿಕನ್ ಡಾಲರ್ ಪಾವತಿಸಬೇಕು. ಇದರಲ್ಲಿ 12 ಬೆಡ್‌ರೂಮ್‌, 103 ಇಂಚಿನ ಟಿವಿ ಪರದೆ, ಟೆರೆಸ್‌ನಲ್ಲಿ ನಿಂತು ಆಗಸ ನೋಡಲು ಟೆಲಿಸ್ಕೋಪ್‌ ಸೇರಿ ಅತ್ಯಾಧುನಿಕ ಸೌಕರ್ಯಗಳಿವೆ.
(2 / 10)
ರಾಯಲ್ ಪೆಂಟ್‌ಹೌಸ್ ಸ್ಯೂಟ್‌, ಹೋಟೆಲ್‌ ಪ್ರೆಸಿಡೆಂಟ್‌ ವಿಲ್ಸನ್‌ ಜಿನೇವಾ, ಸ್ವಿಜರ್ಲೆಂಡ್‌. ಈ ಹೋಟೆಲ್‌ನ ರಾಯಲ್ ಪೆಂಟ್‌ ಹೌಸ್‌ ಸ್ಯೂಟ್‌ನಲ್ಲಿ ಒಂದು ರಾತ್ರಿ ಇರಬೇಕಾದರೆ 80,000 ಅಮೆರಿಕನ್ ಡಾಲರ್ ಪಾವತಿಸಬೇಕು. ಇದರಲ್ಲಿ 12 ಬೆಡ್‌ರೂಮ್‌, 103 ಇಂಚಿನ ಟಿವಿ ಪರದೆ, ಟೆರೆಸ್‌ನಲ್ಲಿ ನಿಂತು ಆಗಸ ನೋಡಲು ಟೆಲಿಸ್ಕೋಪ್‌ ಸೇರಿ ಅತ್ಯಾಧುನಿಕ ಸೌಕರ್ಯಗಳಿವೆ.(Hotel President Wilson, a Luxury Collection Hotel)
ದ ಮಾರ್ಕ್‌ ಪೆಂಟ್‌ಹೌಸ್ ಸ್ಯೂಟ್‌, ದ ಮಾರ್ಕ್‌ ಹೋಟೆಲ್, ನ್ಯೂಯಾರ್ಕ್‌, ಅಮೆರಿಕ. ಫ್ರೆಂಚ್ ಇಂಟೀರಿಯರ್ ಡಿಸೈನರ್‌ ಜಾಕ್ವೆಸ್ ಗ್ರಾಂಜೆ ಇದರ ವಿನ್ಯಾಸಕಾರ. ಮಾರ್ಕ್‌ ಪೆಂಟ್‌ಹೌಸ್‌ನಲ್ಲಿ ಒಂದು ರಾತ್ರಿ ತಂಗಬೇಕಾದರೆ 75000 ಡಾಲರ್ ಕೊಡಬೇಕು. ಇದರಲ್ಲಿ ರೂಫ್‌ಟಾಪ್‌ ಟೆರೇಸ್‌ ಸೇರಿ ಹಲವು ಐಷಾರಾಮಿ ಸೌಕರ್ಯಗಳಿವೆ. 
(3 / 10)
ದ ಮಾರ್ಕ್‌ ಪೆಂಟ್‌ಹೌಸ್ ಸ್ಯೂಟ್‌, ದ ಮಾರ್ಕ್‌ ಹೋಟೆಲ್, ನ್ಯೂಯಾರ್ಕ್‌, ಅಮೆರಿಕ. ಫ್ರೆಂಚ್ ಇಂಟೀರಿಯರ್ ಡಿಸೈನರ್‌ ಜಾಕ್ವೆಸ್ ಗ್ರಾಂಜೆ ಇದರ ವಿನ್ಯಾಸಕಾರ. ಮಾರ್ಕ್‌ ಪೆಂಟ್‌ಹೌಸ್‌ನಲ್ಲಿ ಒಂದು ರಾತ್ರಿ ತಂಗಬೇಕಾದರೆ 75000 ಡಾಲರ್ ಕೊಡಬೇಕು. ಇದರಲ್ಲಿ ರೂಫ್‌ಟಾಪ್‌ ಟೆರೇಸ್‌ ಸೇರಿ ಹಲವು ಐಷಾರಾಮಿ ಸೌಕರ್ಯಗಳಿವೆ. (The Mark)
ದ ಮುರಕ ಸ್ಯೂಟ್‌, ಕೊನಾರ್ಡ್‌ ರಂಗಲಿ ಐಲ್ಯಾಂಡ್‌, ಮಾಲ್ಡೀವ್ಸ್‌. ದ ಮುರಕ ಸ್ಯೂಟ್‌ನಲ್ಲಿರಬೇಕಾದರೆ ಒಂದು ರಾತ್ರಿಗೆ 60,000 ಡಾಲರ್ ಕೊಡಬೇಕು. ಇದರಲ್ಲೂ ಅಷ್ಟೇ ಹಲವು ಐಷಾರಾಮಿ ಸೌಕರ್ಯಗಳಿವೆ. ಫೋನ್‌ ಮಾಡಿದರೆ ಸಾಕು ಸ್ಪೀಡ್‌ ಬೋಟ್ ಸೇವೆ ಲಭ್ಯವಿದೆ. ಪರ್ಸನಲ್ ಟ್ರೈನರ್ ಕೂಡ ಇರುತ್ತಾರೆ. 
(4 / 10)
ದ ಮುರಕ ಸ್ಯೂಟ್‌, ಕೊನಾರ್ಡ್‌ ರಂಗಲಿ ಐಲ್ಯಾಂಡ್‌, ಮಾಲ್ಡೀವ್ಸ್‌. ದ ಮುರಕ ಸ್ಯೂಟ್‌ನಲ್ಲಿರಬೇಕಾದರೆ ಒಂದು ರಾತ್ರಿಗೆ 60,000 ಡಾಲರ್ ಕೊಡಬೇಕು. ಇದರಲ್ಲೂ ಅಷ್ಟೇ ಹಲವು ಐಷಾರಾಮಿ ಸೌಕರ್ಯಗಳಿವೆ. ಫೋನ್‌ ಮಾಡಿದರೆ ಸಾಕು ಸ್ಪೀಡ್‌ ಬೋಟ್ ಸೇವೆ ಲಭ್ಯವಿದೆ. ಪರ್ಸನಲ್ ಟ್ರೈನರ್ ಕೂಡ ಇರುತ್ತಾರೆ. (Conrad Maldives Rangali Island)
ದ ಪೆಂಟ್‌ಹೌಸ್‌ ಸ್ಯೂಟ್‌, ಹೋಟೆಲ್‌ ಮಾರ್ಟಿನೆಝ್ ಬೈ ಹೈಟ್‌, ಕ್ಯಾನ್ನೆಸ್ ಫ್ರಾನ್ಸ್‌. ಈ ಪ್ರತಿಷ್ಠಿತ ಪೆಂಟ್‌ಹೌಸ್‌ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 55,000 ಡಾಲರ್ ಕೊಡಬೇಕು. ಇದು ಹೋಟೆಲ್‌ನ ತುತ್ತತುದಿಯ ಮಹಡಿಯಲ್ಲಿದ್ದು, ಬಹುದೊಡ್ಡ ಟೆರೇಸ್‌ ಕೂಡ ಇದೆ. ಅಲ್ಲಿಂದ ಸಮುದ್ರ ವೀಕ್ಷಣೆ ಸೌಲಭ್ಯ ಸೇರಿ ಹಲವು ಐಷಾರಾಮಿ ಸೌಲಭ್ಯಗಳಿವೆ. 
(5 / 10)
ದ ಪೆಂಟ್‌ಹೌಸ್‌ ಸ್ಯೂಟ್‌, ಹೋಟೆಲ್‌ ಮಾರ್ಟಿನೆಝ್ ಬೈ ಹೈಟ್‌, ಕ್ಯಾನ್ನೆಸ್ ಫ್ರಾನ್ಸ್‌. ಈ ಪ್ರತಿಷ್ಠಿತ ಪೆಂಟ್‌ಹೌಸ್‌ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 55,000 ಡಾಲರ್ ಕೊಡಬೇಕು. ಇದು ಹೋಟೆಲ್‌ನ ತುತ್ತತುದಿಯ ಮಹಡಿಯಲ್ಲಿದ್ದು, ಬಹುದೊಡ್ಡ ಟೆರೇಸ್‌ ಕೂಡ ಇದೆ. ಅಲ್ಲಿಂದ ಸಮುದ್ರ ವೀಕ್ಷಣೆ ಸೌಲಭ್ಯ ಸೇರಿ ಹಲವು ಐಷಾರಾಮಿ ಸೌಲಭ್ಯಗಳಿವೆ. (Hôtel Martinez)
ಹಿಲ್‌ಟಾಪ್ ವಿಲ್ಲಾ, ಕೊಮೊ ಲೌಕಲಾ ಐಲ್ಯಾಂಡ್‌, ಫಿಜಿ. ಇದು ಕೂಡ ದ್ವೀಪದ ತುತ್ತ ತುದಿಯಲ್ಲಿದ್ದು ಮೂರು ಬೆಡ್‌ರೂಮ್‌ನ ವಿಲ್ಲಾ. ಇದರಲ್ಲಿ ಒಂದು ರಾತ್ರಿ ಉಳಿಯಬೇಕಾದರೆ 55,000 ಡಾಲರ್ ಕೊಡಬೇಕು.
(6 / 10)
ಹಿಲ್‌ಟಾಪ್ ವಿಲ್ಲಾ, ಕೊಮೊ ಲೌಕಲಾ ಐಲ್ಯಾಂಡ್‌, ಫಿಜಿ. ಇದು ಕೂಡ ದ್ವೀಪದ ತುತ್ತ ತುದಿಯಲ್ಲಿದ್ದು ಮೂರು ಬೆಡ್‌ರೂಮ್‌ನ ವಿಲ್ಲಾ. ಇದರಲ್ಲಿ ಒಂದು ರಾತ್ರಿ ಉಳಿಯಬೇಕಾದರೆ 55,000 ಡಾಲರ್ ಕೊಡಬೇಕು.(HILLTOP VILLA)
ಪ್ರೈವೇಟ್ ಐಲ್ಯಾಂಡ್‌, ಚೆವಲ್‌ ಬ್ಲಾಂಕ್‌ ರಾಂಧೆಲಿ, ಮಾಲ್ಡೀವ್ಸ್. ಈ ರೆಸಾರ್ಟ್‌ 46 ದ್ವೀಪ ವೀಕ್ಷಣೆಗೆ ಅನುಕೂಲಕರವಾಗಿದ್ದು, ಒಂದು ರಾತ್ರಿಗೆ 50,000 ಡಾಲರ್ ಶುಲ್ಕ ವಿಧಿಸುತ್ತದೆ. ನಾಲ್ಕು ಬೆಡ್‌ರೂಮ್ ವಿಲ್ಲಾ ಇದಾಗಿದ್ದು, ಖಾಸಗಿ ದ್ವೀಪದಲ್ಲಿದೆ. 
(7 / 10)
ಪ್ರೈವೇಟ್ ಐಲ್ಯಾಂಡ್‌, ಚೆವಲ್‌ ಬ್ಲಾಂಕ್‌ ರಾಂಧೆಲಿ, ಮಾಲ್ಡೀವ್ಸ್. ಈ ರೆಸಾರ್ಟ್‌ 46 ದ್ವೀಪ ವೀಕ್ಷಣೆಗೆ ಅನುಕೂಲಕರವಾಗಿದ್ದು, ಒಂದು ರಾತ್ರಿಗೆ 50,000 ಡಾಲರ್ ಶುಲ್ಕ ವಿಧಿಸುತ್ತದೆ. ನಾಲ್ಕು ಬೆಡ್‌ರೂಮ್ ವಿಲ್ಲಾ ಇದಾಗಿದ್ದು, ಖಾಸಗಿ ದ್ವೀಪದಲ್ಲಿದೆ. (Cheval Blanc Randheli)
ರಾಯಲ್‌ ವಿಲ್ಲಾ, ಗ್ರಾಂಡ್‌ ರೆಸಾರ್ಟ್‌ ಲಾಗನಿಸಿ, ಅಥೇನ್ಸ್ ಗ್ರೀಸ್‌. ಈ ರಾಯಲ್ ವಿಲ್ಲಾದಲ್ಲಿ ಉಳಿದುಕೊಳ್ಳಲು 45,000 ಡಾಲರ್ ಕೊಡಬೇಕು. ಅದ್ಬುತ ಒಳಾಂಗಣ ವಿನ್ಯಾಸ, ಐಷಾರಾಮಿ ಸೌಲಭ್ಯಗಳು ಗಮನಸೆಳೆಯುತ್ತವೆ. 
(8 / 10)
ರಾಯಲ್‌ ವಿಲ್ಲಾ, ಗ್ರಾಂಡ್‌ ರೆಸಾರ್ಟ್‌ ಲಾಗನಿಸಿ, ಅಥೇನ್ಸ್ ಗ್ರೀಸ್‌. ಈ ರಾಯಲ್ ವಿಲ್ಲಾದಲ್ಲಿ ಉಳಿದುಕೊಳ್ಳಲು 45,000 ಡಾಲರ್ ಕೊಡಬೇಕು. ಅದ್ಬುತ ಒಳಾಂಗಣ ವಿನ್ಯಾಸ, ಐಷಾರಾಮಿ ಸೌಲಭ್ಯಗಳು ಗಮನಸೆಳೆಯುತ್ತವೆ. (Grand Resort Lagonissi)
ದ ಬೌಲ್‌ಗರಿ ವಿಲ್ಲಾ, ಬೌಲ್‌ಗರಿ ರೆಸಾರ್ಟ್‌ ದುಬೈ, ಯುಎಇ. ಈ ರೆಸಾರ್ಟ್‌ನಲ್ಲಿ 101 ರೂಮ್‌ ಮತ್ತು ಸ್ಯೂಟ್‌ಗಳಿವೆ. ಇದರಲ್ಲಿ ಅತ್ಯುತ್ತಮ ದರ್ಜೆಯ ದ ಬೌಲ್‌ಗರಿ ವಿಲ್ಲಾದಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕಾದರೆ 35,000 ಡಾಲರ್ ಕೊಡಬೇಕು. ಇದು ಐಷಾರಾಮಿ ಸೌಲಭ್ಯಗಳೊಂದಿಗೆ ಇದ್ದು, ಅತಿಶ್ರೀಮಂತರ ಕುಟುಂಬ, ಸ್ನೇಹಿತರ ಮೆಚ್ಚಿನ ತಾಣವಾಗಿ ಬಳಕೆಯಲ್ಲಿದೆ.
(9 / 10)
ದ ಬೌಲ್‌ಗರಿ ವಿಲ್ಲಾ, ಬೌಲ್‌ಗರಿ ರೆಸಾರ್ಟ್‌ ದುಬೈ, ಯುಎಇ. ಈ ರೆಸಾರ್ಟ್‌ನಲ್ಲಿ 101 ರೂಮ್‌ ಮತ್ತು ಸ್ಯೂಟ್‌ಗಳಿವೆ. ಇದರಲ್ಲಿ ಅತ್ಯುತ್ತಮ ದರ್ಜೆಯ ದ ಬೌಲ್‌ಗರಿ ವಿಲ್ಲಾದಲ್ಲಿ ಒಂದು ರಾತ್ರಿ ಉಳಿದುಕೊಳ್ಳಬೇಕಾದರೆ 35,000 ಡಾಲರ್ ಕೊಡಬೇಕು. ಇದು ಐಷಾರಾಮಿ ಸೌಲಭ್ಯಗಳೊಂದಿಗೆ ಇದ್ದು, ಅತಿಶ್ರೀಮಂತರ ಕುಟುಂಬ, ಸ್ನೇಹಿತರ ಮೆಚ್ಚಿನ ತಾಣವಾಗಿ ಬಳಕೆಯಲ್ಲಿದೆ.(. THE BVLGARI VILLA, THE BVLGARI RESORT DUBAI, UAE)
ದ ಗ್ರಾಂಡ್ ರಿಯಾದ್‌, ದ ರಾಯಲ್ ಮನ್ಸೂರ್, ಮರಾಕೆಚ್‌, ಮೊರಾಕ್ಕೊ, ದ ಗ್ರಾಂಡ್ ರಿಯಾದ್ ಸ್ಯೂಟ್‌ನಲ್ಲಿ ಒಂದು ರಾತ್ರಿ  ಉಳಿಯಬೇಕಾದರೆ 30,000 ಡಾಲರ್ ಪಾವತಿಸಬೇಕು. ರಿಯಾದ್‌ನ ಅತ್ಯಂತ ಐಷಾರಾಮಿ ಸ್ಯೂಟ್ ಇದಾಗಿದ್ದು, ಬಹುತೇಕ ಅತಿ ಶ್ರೀಮಂತರ ನೆಚ್ಚಿನ ತಾಣವಾಗಿದೆ.
(10 / 10)
ದ ಗ್ರಾಂಡ್ ರಿಯಾದ್‌, ದ ರಾಯಲ್ ಮನ್ಸೂರ್, ಮರಾಕೆಚ್‌, ಮೊರಾಕ್ಕೊ, ದ ಗ್ರಾಂಡ್ ರಿಯಾದ್ ಸ್ಯೂಟ್‌ನಲ್ಲಿ ಒಂದು ರಾತ್ರಿ  ಉಳಿಯಬೇಕಾದರೆ 30,000 ಡಾಲರ್ ಪಾವತಿಸಬೇಕು. ರಿಯಾದ್‌ನ ಅತ್ಯಂತ ಐಷಾರಾಮಿ ಸ್ಯೂಟ್ ಇದಾಗಿದ್ದು, ಬಹುತೇಕ ಅತಿ ಶ್ರೀಮಂತರ ನೆಚ್ಚಿನ ತಾಣವಾಗಿದೆ.(THE ROYAL MANSOUR, MARRAKECH, MOROCCO)

    ಹಂಚಿಕೊಳ್ಳಲು ಲೇಖನಗಳು