logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shaik Jani Basha: ಹೀರೋ ಆಗಿ ಪ್ರಮೋಷನ್‌ ಪಡೆದ ಜಾನಿ ಮಾಸ್ಟರ್‌...ಯಾರೆಲ್ಲಾ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ ನೋಡಿ

Shaik Jani Basha: ಹೀರೋ ಆಗಿ ಪ್ರಮೋಷನ್‌ ಪಡೆದ ಜಾನಿ ಮಾಸ್ಟರ್‌...ಯಾರೆಲ್ಲಾ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ ನೋಡಿ

Aug 24, 2022 03:37 PM IST

ಚಿತ್ರರಂಗದಲ್ಲಿ ನಟರಾಗಿ ಹೆಸರು ಮಾಡಿದವರು ನಿರ್ದೇಶನ, ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಾಯಕರಾಗಿರುವವರು ನಾಯಕರಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರು ಕೂಡಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಕೂಡಾ ನಾಯಕನಾಗುತ್ತಿದ್ದಾರೆ.

  • ಚಿತ್ರರಂಗದಲ್ಲಿ ನಟರಾಗಿ ಹೆಸರು ಮಾಡಿದವರು ನಿರ್ದೇಶನ, ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಾಯಕರಾಗಿರುವವರು ನಾಯಕರಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರು ಕೂಡಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್‌ ಕೂಡಾ ನಾಯಕನಾಗುತ್ತಿದ್ದಾರೆ.
ಅನೇಕ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿರುವ ಜಾನಿ ಮಾಸ್ಟರ್‌ ಈಗ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು ಸೆಪ್ಟೆಂಬರ್‌ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.
(1 / 11)
ಅನೇಕ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿರುವ ಜಾನಿ ಮಾಸ್ಟರ್‌ ಈಗ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು ಸೆಪ್ಟೆಂಬರ್‌ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.(PC: Jani Master Facebook)
ಜಾನಿ ಮಾಸ್ಟರ್‌ ಮೂಲ ಹೆಸರು ಶಾಯಿಕ್‌ ಜಾನಿ ಬಾಷಾ, ಇವರು ಮೂಲತ: ಆಂಧ್ರದ ನೆಲ್ಲೂರಿನವರು.
(2 / 11)
ಜಾನಿ ಮಾಸ್ಟರ್‌ ಮೂಲ ಹೆಸರು ಶಾಯಿಕ್‌ ಜಾನಿ ಬಾಷಾ, ಇವರು ಮೂಲತ: ಆಂಧ್ರದ ನೆಲ್ಲೂರಿನವರು.(PC; Jani master Facebook)
ಕೊರಿಯೋಗ್ರಾಫರ್‌ ಆಗಿ ಹೆಸರು ಮಾಡಿರುವ ಜಾನಿ ಮಾಸ್ಟರ್‌ಗೆ ಹೀರೋ ಆಗಬೇಕೆಂಬ ಆಸೆ ಇರಲಿಲ್ಲವಂತೆ. ಆದರೆ ಸ್ನೇಹಿತರ ಒತ್ತಾಯದ ಮೇರೆಗೆ ಅವರು ಈಗ ನಾಯಕನಾಗುತ್ತಿದ್ದಾರೆ. ಈಗಾಗಲೇ ಜಾನಿ ಮಾಸ್ಟರ್‌ ಪಯಣಿ ಎಂಬ ಆಲ್ಬಂ ಹಾಡಿನಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಾಡನ್ನು ರಜನಿಕಾಂತ್‌ ಪುತ್ರಿ ಐಶ್ವರ್ಯ ನಿರ್ಮಿಸಿದ್ದರು.
(3 / 11)
ಕೊರಿಯೋಗ್ರಾಫರ್‌ ಆಗಿ ಹೆಸರು ಮಾಡಿರುವ ಜಾನಿ ಮಾಸ್ಟರ್‌ಗೆ ಹೀರೋ ಆಗಬೇಕೆಂಬ ಆಸೆ ಇರಲಿಲ್ಲವಂತೆ. ಆದರೆ ಸ್ನೇಹಿತರ ಒತ್ತಾಯದ ಮೇರೆಗೆ ಅವರು ಈಗ ನಾಯಕನಾಗುತ್ತಿದ್ದಾರೆ. ಈಗಾಗಲೇ ಜಾನಿ ಮಾಸ್ಟರ್‌ ಪಯಣಿ ಎಂಬ ಆಲ್ಬಂ ಹಾಡಿನಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಾಡನ್ನು ರಜನಿಕಾಂತ್‌ ಪುತ್ರಿ ಐಶ್ವರ್ಯ ನಿರ್ಮಿಸಿದ್ದರು.(PC; Jani master Facebook)
ಜಾನಿ ಮಾಸ್ಟರ್‌ ನಟಿಸುತ್ತಿರುವ ಯಥಾ ರಾಜ ತಥಾ ಪ್ರಜಾ ಸಿನಿಮಾ ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳಲ್ಲಿ ತಯಾರಾಗಲಿದೆ.
(4 / 11)
ಜಾನಿ ಮಾಸ್ಟರ್‌ ನಟಿಸುತ್ತಿರುವ ಯಥಾ ರಾಜ ತಥಾ ಪ್ರಜಾ ಸಿನಿಮಾ ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳಲ್ಲಿ ತಯಾರಾಗಲಿದೆ.(PC; Jani master Facebook)
ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಜಾನಿ ಮಾಸ್ಟರ್‌ ಅನೇಕ ಸಿನಿಮಾಗಳಿಗೆ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ ಅವರೊಂದಿಗಿನ ಫೋಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಯುವರತ್ನ, ಲಕ್ಕಿಮ್ಯಾನ್‌ ಸೇರಿ ಪುನೀತ್‌ ನಟಿಸಿರುವ ಅನೇಕ ಸಿನಿಮಾ ಹಾಡುಗಳಲ್ಲಿ ಜಾನಿ ಮಾಸ್ಟರ್‌ ಡ್ಯಾನ್ಸ್‌ ಇದೆ.
(5 / 11)
ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಜಾನಿ ಮಾಸ್ಟರ್‌ ಅನೇಕ ಸಿನಿಮಾಗಳಿಗೆ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ ಅವರೊಂದಿಗಿನ ಫೋಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಯುವರತ್ನ, ಲಕ್ಕಿಮ್ಯಾನ್‌ ಸೇರಿ ಪುನೀತ್‌ ನಟಿಸಿರುವ ಅನೇಕ ಸಿನಿಮಾ ಹಾಡುಗಳಲ್ಲಿ ಜಾನಿ ಮಾಸ್ಟರ್‌ ಡ್ಯಾನ್ಸ್‌ ಇದೆ.(PC: Jani master Facebook)
ತೆಲುಗು ನಟ ನಿತಿನ್‌ ಜೊತೆ ಜಾನಿ ಮಾಸ್ಟರ್‌
(6 / 11)
ತೆಲುಗು ನಟ ನಿತಿನ್‌ ಜೊತೆ ಜಾನಿ ಮಾಸ್ಟರ್‌(PC: Jani master Facebook)
ಕ್ರಿಕೆಟ್‌ ಲೆಜೆಂಡ್‌ ಕಪಿಲ್‌ ದೇವ್‌ ಹಾಗೂ ಸ್ಯಾಂಡಲ್‌ವುಡ್‌ ಕಿಚ್ಚನೊಂದಿಗೆ ಜಾನಿ ಮಾಸ್ಟರ್.‌ ಇತ್ತೀಚೆಗೆ ತೆರೆ ಕಂಡ ವಿಕ್ರಾಂತ್‌ ರೋಣ ಚಿತ್ರದ ರಾ ರಾ ರಕ್ಕಮ್ಮ ಸೇರಿ ಸುದೀಪ್‌ ಅವರ ಕೆಲವು ಸಿನಿಮಾಗಳಿಗೂ ಜಾನಿ ಮಾಸ್ಟರ್‌ ಕೊರಿಯೋಗ್ರಫಿ ಮಾಡಿದ್ದಾರೆ.
(7 / 11)
ಕ್ರಿಕೆಟ್‌ ಲೆಜೆಂಡ್‌ ಕಪಿಲ್‌ ದೇವ್‌ ಹಾಗೂ ಸ್ಯಾಂಡಲ್‌ವುಡ್‌ ಕಿಚ್ಚನೊಂದಿಗೆ ಜಾನಿ ಮಾಸ್ಟರ್.‌ ಇತ್ತೀಚೆಗೆ ತೆರೆ ಕಂಡ ವಿಕ್ರಾಂತ್‌ ರೋಣ ಚಿತ್ರದ ರಾ ರಾ ರಕ್ಕಮ್ಮ ಸೇರಿ ಸುದೀಪ್‌ ಅವರ ಕೆಲವು ಸಿನಿಮಾಗಳಿಗೂ ಜಾನಿ ಮಾಸ್ಟರ್‌ ಕೊರಿಯೋಗ್ರಫಿ ಮಾಡಿದ್ದಾರೆ.(PC: Jani master Facebook)
ತಮಿಳು ನಟ ಸೂರ್ಯ ಜೊತೆ ಜಾನಿ ಮಾಸ್ಟರ್.‌ ಸೂರ್ಯ ಸಿನಿಮಾಗಳಲ್ಲಿ ಕೂಡಾ ಜಾನಿ ಮಾಸ್ಟರ್‌ ಕೆಲಸ ಮಾಡಿದ್ದಾರೆ. 
(8 / 11)
ತಮಿಳು ನಟ ಸೂರ್ಯ ಜೊತೆ ಜಾನಿ ಮಾಸ್ಟರ್.‌ ಸೂರ್ಯ ಸಿನಿಮಾಗಳಲ್ಲಿ ಕೂಡಾ ಜಾನಿ ಮಾಸ್ಟರ್‌ ಕೆಲಸ ಮಾಡಿದ್ದಾರೆ. (PC: Jani master Facebook)
ತಮನ್ನಾ, ರಾಮ್‌ಚರಣ್‌ ತೇಜ ನಟಿಸಿರುವ 'ರಚ್ಚ' ಚಿತ್ರದ ವಾನ ವಾನ..ಸೇರಿ ರಾಮ್‌ ಚರಣ್‌ ಚಿತ್ರದ ಬಹಳಷ್ಟು ಹಾಡುಗಳಲ್ಲಿ ಜಾನಿ ಮಾಸ್ಟರ್‌ ಡ್ಯಾನ್ಸ್‌ ಇದೆ.
(9 / 11)
ತಮನ್ನಾ, ರಾಮ್‌ಚರಣ್‌ ತೇಜ ನಟಿಸಿರುವ 'ರಚ್ಚ' ಚಿತ್ರದ ವಾನ ವಾನ..ಸೇರಿ ರಾಮ್‌ ಚರಣ್‌ ಚಿತ್ರದ ಬಹಳಷ್ಟು ಹಾಡುಗಳಲ್ಲಿ ಜಾನಿ ಮಾಸ್ಟರ್‌ ಡ್ಯಾನ್ಸ್‌ ಇದೆ.(PC: Jani master Facebook)
ಜಾನಿ ಮಾಸ್ಟರ್‌ಗೆ ಸಿನಿಮಾ ನಿರ್ದೇಶನ ಮಾಡುವ ಕನಸು ಇದ್ದು ಪವನ್‌ ಕಲ್ಯಾಣ್‌ ಅವರಿಗೆ ಡೈರೆಕ್ಷನ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ಘೊಷಣೆಯಾಗಿಲ್ಲ.
(10 / 11)
ಜಾನಿ ಮಾಸ್ಟರ್‌ಗೆ ಸಿನಿಮಾ ನಿರ್ದೇಶನ ಮಾಡುವ ಕನಸು ಇದ್ದು ಪವನ್‌ ಕಲ್ಯಾಣ್‌ ಅವರಿಗೆ ಡೈರೆಕ್ಷನ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ಘೊಷಣೆಯಾಗಿಲ್ಲ.(PC: Jani master Facebook)
ಅಲ್ಲು ಅರ್ಜುನ್‌ ಅವರ 'ಅಲಾ ವೈಕುಂಠಪುರಮಲೋ' ಚಿತ್ರದ ಬುಟ್ಟ ಬೊಮ್ಮಾ.... ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಇದೇ ಜಾನಿ ಮಾಸ್ಟರ್.‌ ಈ ಹಾಡು ಯುವಜನರ ಮೋಸ್ಟ್‌ ಫೇವರೆಟ್
(11 / 11)
ಅಲ್ಲು ಅರ್ಜುನ್‌ ಅವರ 'ಅಲಾ ವೈಕುಂಠಪುರಮಲೋ' ಚಿತ್ರದ ಬುಟ್ಟ ಬೊಮ್ಮಾ.... ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಇದೇ ಜಾನಿ ಮಾಸ್ಟರ್.‌ ಈ ಹಾಡು ಯುವಜನರ ಮೋಸ್ಟ್‌ ಫೇವರೆಟ್(PC: Jani master Facebook)

    ಹಂಚಿಕೊಳ್ಳಲು ಲೇಖನಗಳು