logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧೋನಿ ಈ ಬಾರಿಯ ಎಲ್ಲಾ ಐಪಿಎಲ್‌ ಪಂದ್ಯ ಆಡಲ್ಲ, ನಡುವೆ ವಿರಾಮ ತೆಗೆದುಕೊಳ್ಳಬಹುದು ಎಂದ ಕ್ರಿಸ್ ಗೇಲ್

ಧೋನಿ ಈ ಬಾರಿಯ ಎಲ್ಲಾ ಐಪಿಎಲ್‌ ಪಂದ್ಯ ಆಡಲ್ಲ, ನಡುವೆ ವಿರಾಮ ತೆಗೆದುಕೊಳ್ಳಬಹುದು ಎಂದ ಕ್ರಿಸ್ ಗೇಲ್

Mar 23, 2024 02:14 PM IST

ಐಪಿಎಲ್‌ 2024ರ ಆವೃತ್ತಿಯ ಆರಂಭಕ್ಕೂ ಮುನ್ನ, ದಿಗ್ಗಜ ಆಟಗಾರ ಎಂಎಸ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕತ್ವವನ್ನು‌ ಋತುರಾಜ್‌ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು. ಅಲ್ಲಿಗೆ ಮಾಹಿ ನಾಯಕತ್ವದ ಪರಂಪರೆ ಅಂತ್ಯವಾಯ್ತು. ಸದ್ಯ, ನಾಯಕತ್ವ ತ್ಯಜಿಸಿದರೂ ಚೆನ್ನೈ ತಂಡದಲ್ಲಿ ಮಾಹಿ ಉಪಸ್ಥಿತಿ ಇದೆ. ಆದರೆ, ಅವರು ಎಲ್ಲಾ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ.

  • ಐಪಿಎಲ್‌ 2024ರ ಆವೃತ್ತಿಯ ಆರಂಭಕ್ಕೂ ಮುನ್ನ, ದಿಗ್ಗಜ ಆಟಗಾರ ಎಂಎಸ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕತ್ವವನ್ನು‌ ಋತುರಾಜ್‌ ಗಾಯಕ್ವಾಡ್‌ಗೆ ಹಸ್ತಾಂತರಿಸಿದರು. ಅಲ್ಲಿಗೆ ಮಾಹಿ ನಾಯಕತ್ವದ ಪರಂಪರೆ ಅಂತ್ಯವಾಯ್ತು. ಸದ್ಯ, ನಾಯಕತ್ವ ತ್ಯಜಿಸಿದರೂ ಚೆನ್ನೈ ತಂಡದಲ್ಲಿ ಮಾಹಿ ಉಪಸ್ಥಿತಿ ಇದೆ. ಆದರೆ, ಅವರು ಎಲ್ಲಾ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ.
ವೆಸ್ಟ್ ಇಂಡೀಸ್ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್, ಐಪಿಎಲ್ 2024ರ ಎಲ್ಲಾ ಪಂದ್ಯಗಳಲ್ಲಿ ಎಂಎಸ್ ಧೋನಿ ಆಡದಿರಲೂಬಹುದು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.
(1 / 7)
ವೆಸ್ಟ್ ಇಂಡೀಸ್ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್, ಐಪಿಎಲ್ 2024ರ ಎಲ್ಲಾ ಪಂದ್ಯಗಳಲ್ಲಿ ಎಂಎಸ್ ಧೋನಿ ಆಡದಿರಲೂಬಹುದು ಎಂದು ಹೇಳಿದ್ದಾರೆ. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.(RCB-X)
ಕಳೆದ ಆವೃತ್ತಿಗೂ ಮುನ್ನವೇ, ಧೋನಿ ನಿವೃತ್ತಿ ವಿಚಾರ ಭಾರಿ ಸುದ್ದಿಯಾಗಿತ್ತು. ಆದರೆ, ಅಭಿಮಾನಿಗಳಿಗಾಗಿ ಇನ್ನೂ ಒಂದು ವರ್ಷ ಆಡುವುದಾಗಿ ಮಾಹಿ ತಿಳಿಸಿದ್ದರು. ಈ ಬಾರಿ ನಾಯಕತ್‌ ತ್ಯಜಿಸಿದ ಧೋನಿ, ಮುಂದೆ ಮೈದಾನಕ್ಕಿಳಿಯುವುದರಿಂದಲೂ ಹಿಂದೆ ಸರಿಯಬಹುದು ಎಂದು ಹೇಳಲಾಗುತ್ತಿದೆ.
(2 / 7)
ಕಳೆದ ಆವೃತ್ತಿಗೂ ಮುನ್ನವೇ, ಧೋನಿ ನಿವೃತ್ತಿ ವಿಚಾರ ಭಾರಿ ಸುದ್ದಿಯಾಗಿತ್ತು. ಆದರೆ, ಅಭಿಮಾನಿಗಳಿಗಾಗಿ ಇನ್ನೂ ಒಂದು ವರ್ಷ ಆಡುವುದಾಗಿ ಮಾಹಿ ತಿಳಿಸಿದ್ದರು. ಈ ಬಾರಿ ನಾಯಕತ್‌ ತ್ಯಜಿಸಿದ ಧೋನಿ, ಮುಂದೆ ಮೈದಾನಕ್ಕಿಳಿಯುವುದರಿಂದಲೂ ಹಿಂದೆ ಸರಿಯಬಹುದು ಎಂದು ಹೇಳಲಾಗುತ್ತಿದೆ.(CSK Twitter)
ಮತ್ತೊಂದೆಡೆ, ಆಟದಿಂದ ವಿದಾಯ ಹೇಳಿದ ಬಳಿಕ ಸಿಎಸ್‌ಕೆ ತಂಡದ ಮುಖ್ಯ ಕೋಚ್‌ ಹುದ್ದೆಯನ್ನು ಮಾಹಿ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಪ್ರಸಕ್ತ ಆವೃತ್ತಿಯ ಅಂತ್ಯಕ್ಕೂ ಮುನ್ನವೇ ಇದು ಸತ್ಯವಾದರೂ ಅಚ್ಚರಿಯಿಲ್ಲ.
(3 / 7)
ಮತ್ತೊಂದೆಡೆ, ಆಟದಿಂದ ವಿದಾಯ ಹೇಳಿದ ಬಳಿಕ ಸಿಎಸ್‌ಕೆ ತಂಡದ ಮುಖ್ಯ ಕೋಚ್‌ ಹುದ್ದೆಯನ್ನು ಮಾಹಿ ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಪ್ರಸಕ್ತ ಆವೃತ್ತಿಯ ಅಂತ್ಯಕ್ಕೂ ಮುನ್ನವೇ ಇದು ಸತ್ಯವಾದರೂ ಅಚ್ಚರಿಯಿಲ್ಲ.(CSK Twitter)
ಈ ಬಾರಿ ಪಂದ್ಯಾವಳಿಯಲ್ಲಿ ಧೋನಿ ಎಲ್ಲಾ ಪಂದ್ಯಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಪಂದ್ಯಾವಳಿಯ ಮಧ್ಯದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಋತುರಾಜ್‌ಗೆ ಹಸ್ತಾಂತರಿಸಿದ್ದಾರೆ ಎಂದು ಯೂನಿವರ್ಸ್ ಬಾಸ್  ಗೇಲ್‌ ಅಭಿಪ್ರಾಯಪಟ್ಟಿದ್ದಾರೆ.
(4 / 7)
ಈ ಬಾರಿ ಪಂದ್ಯಾವಳಿಯಲ್ಲಿ ಧೋನಿ ಎಲ್ಲಾ ಪಂದ್ಯಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಪಂದ್ಯಾವಳಿಯ ಮಧ್ಯದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಋತುರಾಜ್‌ಗೆ ಹಸ್ತಾಂತರಿಸಿದ್ದಾರೆ ಎಂದು ಯೂನಿವರ್ಸ್ ಬಾಸ್  ಗೇಲ್‌ ಅಭಿಪ್ರಾಯಪಟ್ಟಿದ್ದಾರೆ.(AFP)
"ಅವರು ಎಲ್ಲಾ ಪಂದ್ಯಗಳಲ್ಲಿಯೂ ಆಡದೇ ಇರಬಹುದು. ಪಂದ್ಯಗಳ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದು. ಅದಕ್ಕಾಗಿಯೇ ಅವರು ನಾಯಕತ್ವದಿಂದ ಹೊರಬಂದಿದ್ದಾರೆ. ಟೂರ್ನಿಯುದ್ಕಕ್ಕೂ ಎಲ್ಲವೂ ಸರಾಗವಾಗಿ ಚೆನ್ನಾಗಿ ಸಾಗುತ್ತದೆ. ಆ ಬಗ್ಗೆ ಚಿಂತಿಸಬೇಡಿ" ಎಂದು ಗೇಲ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
(5 / 7)
"ಅವರು ಎಲ್ಲಾ ಪಂದ್ಯಗಳಲ್ಲಿಯೂ ಆಡದೇ ಇರಬಹುದು. ಪಂದ್ಯಗಳ ನಡುವೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬಹುದು. ಅದಕ್ಕಾಗಿಯೇ ಅವರು ನಾಯಕತ್ವದಿಂದ ಹೊರಬಂದಿದ್ದಾರೆ. ಟೂರ್ನಿಯುದ್ಕಕ್ಕೂ ಎಲ್ಲವೂ ಸರಾಗವಾಗಿ ಚೆನ್ನಾಗಿ ಸಾಗುತ್ತದೆ. ಆ ಬಗ್ಗೆ ಚಿಂತಿಸಬೇಡಿ" ಎಂದು ಗೇಲ್ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.(AFP)
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಧೋನಿ 2020ರಿಂದ ಐಪಿಎಲ್‌ನಲ್ಲಿ ಮಾತ್ರವೇ ಆಡಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯಲ್ಲಿ ಆಡಿದ ಬಳಿಕ, ಮಾಹಿ ಕ್ರಿಕೆಟ್‌ನಿಂದ ಹೊರಗುಳಿಯುತ್ತಾರೆ. ಕಳೆದ ವರ್ಷ ಅವರ ನಿವೃತ್ತಿಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಟೂರ್ನಿಯ ಕೊನೆಯಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಸಲುವಾಗಿ ಈ ವರ್ಷ ಮತ್ತೆ ಆಡುವುದಾಗಿ ಭರವಸೆ ನೀಡಿದರು.
(6 / 7)
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಧೋನಿ 2020ರಿಂದ ಐಪಿಎಲ್‌ನಲ್ಲಿ ಮಾತ್ರವೇ ಆಡಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯಲ್ಲಿ ಆಡಿದ ಬಳಿಕ, ಮಾಹಿ ಕ್ರಿಕೆಟ್‌ನಿಂದ ಹೊರಗುಳಿಯುತ್ತಾರೆ. ಕಳೆದ ವರ್ಷ ಅವರ ನಿವೃತ್ತಿಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಟೂರ್ನಿಯ ಕೊನೆಯಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಸಲುವಾಗಿ ಈ ವರ್ಷ ಮತ್ತೆ ಆಡುವುದಾಗಿ ಭರವಸೆ ನೀಡಿದರು.(PTI)
ಸದ್ಯ ಫ್ರಾಂಚೈಸಿಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಅವರು ಗಾಯಕ್ವಾಡ್‌ಗೆ ನೀಡಿದ್ದಾರೆ. ಆದರೆ ಧೋನಿ ಅವರ ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಸ್ಟಂಪ್ ಹಿಂದೆ ಅದೇ ಹಳೆಯ ವೇಗ ಈಗಲೂ ಇದೆ.
(7 / 7)
ಸದ್ಯ ಫ್ರಾಂಚೈಸಿಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಅವರು ಗಾಯಕ್ವಾಡ್‌ಗೆ ನೀಡಿದ್ದಾರೆ. ಆದರೆ ಧೋನಿ ಅವರ ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಸ್ಟಂಪ್ ಹಿಂದೆ ಅದೇ ಹಳೆಯ ವೇಗ ಈಗಲೂ ಇದೆ.(PTI)

    ಹಂಚಿಕೊಳ್ಳಲು ಲೇಖನಗಳು