logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಧು ಹೊಸ ಧಾರಾವಾಹಿ ನಟಿಯ ನಿಜವಾದ ಹೆಸರೇನು, ಯಾವ ಊರು, ಓದಿದ್ದೇನು? ಇಲ್ಲಿದೆ ಈ ನಟಿಯ ಹಿಂದಿನ ಸೀರಿಯಲ್‌ಗಳ ಮಾಹಿತಿ

ವಧು ಹೊಸ ಧಾರಾವಾಹಿ ನಟಿಯ ನಿಜವಾದ ಹೆಸರೇನು, ಯಾವ ಊರು, ಓದಿದ್ದೇನು? ಇಲ್ಲಿದೆ ಈ ನಟಿಯ ಹಿಂದಿನ ಸೀರಿಯಲ್‌ಗಳ ಮಾಹಿತಿ

Dec 19, 2024 12:29 PM IST

ಕಲರ್ಸ್‌ ಕನ್ನಡದಲ್ಲಿ ವಧು ಹೆಸರಿನ ಹೊಸ ಸೀರಿಯಲ್‌ ಶುರುವಾಗುತ್ತಿದೆ. ಇನ್ನೇನು ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ, ಈ ಧಾರಾವಾಹಿ ಆರಂಭವಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಕನ್ನಡ ಕಿರುತೆರೆಯ ಜತೆಗೆ ತೆಲುಗಿನಲ್ಲಿಯೂ ಮೋಡಿ ಮಾಡಿರುವ ಈ ವಧು ಯಾರು, ಇವರ ರಿಯಲ್‌ ಹೆಸರೇನು, ಹುಟ್ಟಿದ್ದು ಎಲ್ಲಿ, ವಿದ್ಯಾರ್ಹತೆ ಏನು? ಎಂಬಿತ್ಯಾದಿ ವಿವರ ಇಲ್ಲಿದೆ.

  • ಕಲರ್ಸ್‌ ಕನ್ನಡದಲ್ಲಿ ವಧು ಹೆಸರಿನ ಹೊಸ ಸೀರಿಯಲ್‌ ಶುರುವಾಗುತ್ತಿದೆ. ಇನ್ನೇನು ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ, ಈ ಧಾರಾವಾಹಿ ಆರಂಭವಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಕನ್ನಡ ಕಿರುತೆರೆಯ ಜತೆಗೆ ತೆಲುಗಿನಲ್ಲಿಯೂ ಮೋಡಿ ಮಾಡಿರುವ ಈ ವಧು ಯಾರು, ಇವರ ರಿಯಲ್‌ ಹೆಸರೇನು, ಹುಟ್ಟಿದ್ದು ಎಲ್ಲಿ, ವಿದ್ಯಾರ್ಹತೆ ಏನು? ಎಂಬಿತ್ಯಾದಿ ವಿವರ ಇಲ್ಲಿದೆ.
ಕಲರ್ಸ್‌ ಕನ್ನಡದಲ್ಲಿ ವಧು ಹೆಸರಿನ ಹೊಸ ಧಾರಾವಾಹಿ ಶೀಘ್ರದಲ್ಲಿಯೇ ಪ್ರಸಾರ ಆರಂಭಿಸಲಿದೆ. ವಿಶೇಷ ಏನೆಂದರೆ, ಇತ್ತೀಚೆಗಷ್ಟೇ ಈ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದೆ.
(1 / 10)

ಕನ್ನಡದ ಜತೆಗೆ ತೆಲುಗಿನ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ನಟಿ ದುರ್ಗಾಶ್ರೀ ವಧು ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಆಗಮಿಸುತ್ತಿದ್ದಾರೆ. 
(2 / 10)

ಕೋರ್ಟ್‌ ರೂಮ್‌ ಡ್ರಾಮಾ ಹಿನ್ನೆಲೆಯ ವಧು ಸೀರಿಯಲ್‌ನಲ್ಲಿ ಟಿ.ಎನ್‌ ಸೀತಾರಾಮ್‌ ಮತ್ತೆ ಲಾಯರ್‌ ಆಗಿ ಕೋರ್ಟ್‌ ಅಂಗಳಕ್ಕೆ ಕಾಲಿರಿಸಿದ್ದಾರೆ. 
(3 / 10)

ಇದೇ ಸೀರಿಯಲ್‌ ಮೂಲಕ ನಟಿ ದುರ್ಗಾಶ್ರೀ ಎಸ್‌ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ದುರ್ಗಾಶ್ರೀ ನಟಿಸಿದ್ದರು. ಆ ಸೀರಿಯಲ್ ಬಳಿಕ ಜೀ ತೆಲುಗಿನಲ್ಲಿ ಪ್ರಸಾರವಾದ ವೈಷ್ಣವಿ ಧಾರಾವಾಹಿಯಲ್ಲಿಯೂ ನಟಿಸಿದರು. 
(4 / 10)

ತೆಲುಗಿನ ಸ್ಟಾರ್‌ ಮಾ ಚಾನೆಲ್‌ನಲ್ಲಿನ ಮಧುರಣಗರಿಲೋ ಸೀರಿಯಲ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ. ಜೆಮಿನಿ ಟಿವಿಯಲ್ಲಿ ಪ್ರಸಾರವಾದ ಅರ್ಧಾಂಗಿ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡರು ದುರ್ಗಾಶ್ರೀ. ಈಗ ಇದೇ ನಟಿ ಮರಳಿ ತವರಿಗೆ ಆಗಮಿಸಿದ್ದಾರೆ.
(5 / 10)

ಮೂಲತಃ ಬೆಂಗಳೂರಿನ ಜಕ್ಕೂರಿನವರಾದ ದುರ್ಗಾಶ್ರೀ, ಹುಟ್ಟಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಸಹಕಾರ ನಗರದ ಕಾವೇರಿ ಪಬ್ಲಿಕ್‌ ಶಾಲೆಯಲ್ಲಿ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಮುಗಿಸಿದ್ದಾರೆ.
(6 / 10)

ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನಲ್ಲಿ ಪಿಯು ಮುಗಿಸಿ, ಹೆಸರಘಟ್ಟದ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. 
(7 / 10)

ವಧು ಸೀರಿಯಲ್‌ ಅನ್ನು ಈ ಹಿಂದಿನ ಕಲರ್ಸ್‌ ಕನ್ನಡದ ಬಿಜಿನೆಸ್‌ ಹೆಡ್‌ ಆಗಿದ್ದ ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನ ಮಾಡುತ್ತಿದ್ದಾರೆ. 
(8 / 10)

ಟಿ.ಎನ್‌ ಸೀತಾರಾಮ್‌ ಮತ್ತೆ ಕೋರ್ಟ್‌ ಅಂಗಳಕ್ಕೆ ಆಗಮಿಸುತ್ತಿದ್ದಾರೆ. ಅವರಿಗಿಲ್ಲಿ ನ್ಯಾಯವಾದಿಯ ಪಾತ್ರ. 
(9 / 10)

ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ದಂಪತಿ ವಧು ಸೀರಿಯಲ್‌ಗೆ ಬಂಡವಾಳ ಹೂಡುತ್ತಿದ್ದಾರೆ. 
(10 / 10)
ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್‌ ರಾಜ್‌ ದಂಪತಿ ವಧು ಸೀರಿಯಲ್‌ಗೆ ಬಂಡವಾಳ ಹೂಡುತ್ತಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು