logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಂದೀಪ್ ವಾರಿಯರ್: ಶಮಿ ಬದಲಿಗೆ ಭಾರತ ಪರ 1 ಟಿ20 ಪಂದ್ಯ ಆಡಿದ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಿದ ಗುಜರಾತ್ ಟೈಟಾನ್ಸ್‌

ಸಂದೀಪ್ ವಾರಿಯರ್: ಶಮಿ ಬದಲಿಗೆ ಭಾರತ ಪರ 1 ಟಿ20 ಪಂದ್ಯ ಆಡಿದ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಿದ ಗುಜರಾತ್ ಟೈಟಾನ್ಸ್‌

Mar 21, 2024 04:55 PM IST

ಗುಜರಾತ್‌ ಟೈಟಾನ್ಸ್‌ ತಂಡವು 2024ರ ಐಪಿಎಲ್ ಆವರತ್ತಿಗೂ ಮುನ್ನ, ಗಾಯಾಳು ಮೊಹಮ್ಮದ್ ಶಮಿ ಅವರಿಗೆ ಬದಲಿ ಆಟಗಾರನ್ನು ತಂಡಕ್ಕೆ ಕರೆಸಿಕೊಂಡಿದೆ. ವೇಗಿ ಸಂದೀಪ್ ವಾರಿಯರ್ ಅವರನ್ನು ಮಾಜಿ ಚಾಂಪಿಯನ್‌ ಬದಲಿಯಾಗಿ ಆಯ್ಕೆ ಮಾಡಿದೆ. ಗಾಯದಿಂದಾಗಿ ಶಮಿ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದು, ಟೈಟಾನ್ಸ್‌ಗೆ ಭಾರಿ ನಷ್ಟವಾಗಿದೆ.

  • ಗುಜರಾತ್‌ ಟೈಟಾನ್ಸ್‌ ತಂಡವು 2024ರ ಐಪಿಎಲ್ ಆವರತ್ತಿಗೂ ಮುನ್ನ, ಗಾಯಾಳು ಮೊಹಮ್ಮದ್ ಶಮಿ ಅವರಿಗೆ ಬದಲಿ ಆಟಗಾರನ್ನು ತಂಡಕ್ಕೆ ಕರೆಸಿಕೊಂಡಿದೆ. ವೇಗಿ ಸಂದೀಪ್ ವಾರಿಯರ್ ಅವರನ್ನು ಮಾಜಿ ಚಾಂಪಿಯನ್‌ ಬದಲಿಯಾಗಿ ಆಯ್ಕೆ ಮಾಡಿದೆ. ಗಾಯದಿಂದಾಗಿ ಶಮಿ ಸಂಪೂರ್ಣ ಟೂರ್ನಿಯಿಂದ ಹೊರಬಿದ್ದಿದ್ದು, ಟೈಟಾನ್ಸ್‌ಗೆ ಭಾರಿ ನಷ್ಟವಾಗಿದೆ.
ಮೊಹಮ್ಮದ್‌ ಶಮಿ ಕಳೆದ ಋತುವಿನ ಐಪಿಎಲ್‌ನಲ್ಲಿ 18.64ರ ಸರಾಸರಿಯಲ್ಲಿ ಬೌಲಿಂಗ್‌ ಮಾಡಿ 28 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.
(1 / 5)
ಮೊಹಮ್ಮದ್‌ ಶಮಿ ಕಳೆದ ಋತುವಿನ ಐಪಿಎಲ್‌ನಲ್ಲಿ 18.64ರ ಸರಾಸರಿಯಲ್ಲಿ ಬೌಲಿಂಗ್‌ ಮಾಡಿ 28 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.(PTI)
ಹಿಮ್ಮಡಿ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ, ಸಂದೀಪ್ ವಾರಿಯರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ವಾರಿಯರ್ ಈವರೆಗೆ 5 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ತಮ್ಮ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಜಿಟಿ ಸೇರಲಿದ್ದಾರೆ.
(2 / 5)
ಹಿಮ್ಮಡಿ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ, ಸಂದೀಪ್ ವಾರಿಯರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ವಾರಿಯರ್ ಈವರೆಗೆ 5 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ತಮ್ಮ ಮೂಲ ಬೆಲೆ 50 ಲಕ್ಷ ರೂಪಾಯಿಗೆ ಜಿಟಿ ಸೇರಲಿದ್ದಾರೆ.(PTI)
ಸಂದೀಪ್ ವಾರಿಯರ್ ಭಾರತದ ಪರ ಏಕೈಕ ಟಿ20 ಪಂದ್ಯ ಆಡಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
(3 / 5)
ಸಂದೀಪ್ ವಾರಿಯರ್ ಭಾರತದ ಪರ ಏಕೈಕ ಟಿ20 ಪಂದ್ಯ ಆಡಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ.(PTI)
ಬಲಗೈ ವೇಗಿ ಐಪಿಎಲ್‌ನಲ್ಲಿ 2019ರಿಂದ 2021ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆಡಿದ್ದರು. ಐದು ಪಂದ್ಯಗಳಲ್ಲಿ ಆಡಿ 7.88ರ ಎಕಾನಮಿಯಲ್ಲಿ ಎರಡು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
(4 / 5)
ಬಲಗೈ ವೇಗಿ ಐಪಿಎಲ್‌ನಲ್ಲಿ 2019ರಿಂದ 2021ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆಡಿದ್ದರು. ಐದು ಪಂದ್ಯಗಳಲ್ಲಿ ಆಡಿ 7.88ರ ಎಕಾನಮಿಯಲ್ಲಿ ಎರಡು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
32 ವರ್ಷ ವಯಸ್ಸಿನ ಬೌಲರ್ 2013ರಿಂದ 2015ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. 2023ರಲ್ಲಿ  ಮುಂಬೈ ಇಂಡಿಯನ್ಸ್  ಫ್ರಾಂಚೈಸ್‌ ಪಾಲಾಗಿದ್ದರೂ, ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ಇದೀಗ ವಾರಿಯರ್‌ ಅವರು ಗುಜರಾತ್‌ ವೇಗಿಗಳಾದ ಮೋಹಿತ್ ಶರ್ಮಾ, ಜೋಶ್ ಲಿಟಲ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್ ಮತ್ತು ಕಾರ್ತಿಕ್ ತ್ಯಾಗಿ ಅವರೊಂದಿಗೆ ಬೌಲಿಂಗ್‌ ಮಾಡಲು ಸಜ್ಜಾಗಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು