logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ishan Kishan: ಅಮ್ಮನ ಕೈ ತುತ್ತೇ ನನ್ನ ಶಕ್ತಿ; ತನ್ನ ಖಡಕ್​ ಸಿಕ್ಸರ್‌ಗಳ ಕ್ರೆಡಿಟ್​ ಅನ್ನು ತಾಯಿಗೆ ಅರ್ಪಿಸಿದ ಇಶಾನ್‌ ಕಿಶನ್‌

Ishan Kishan: ಅಮ್ಮನ ಕೈ ತುತ್ತೇ ನನ್ನ ಶಕ್ತಿ; ತನ್ನ ಖಡಕ್​ ಸಿಕ್ಸರ್‌ಗಳ ಕ್ರೆಡಿಟ್​ ಅನ್ನು ತಾಯಿಗೆ ಅರ್ಪಿಸಿದ ಇಶಾನ್‌ ಕಿಶನ್‌

May 04, 2023 07:51 PM IST

ಪಂಜಾಬ್​ ಕಿಂಗ್ಸ್ (Punjab Kings)​ ವಿರುದ್ಧ ಅಬ್ಬರದ ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್ (Mumbai Indias)​ ತಂಡದ ಎಡಗೈ ಬ್ಯಾಟ್ಸ್​ಮನ್​​ ಇಶಾನ್​ ಕಿಶನ್​ (Ishan Kishan) ಅವರು ತಮ್ಮ ಖಡಕ್​ ಸಿಕ್ಸರ್​​ಗಳ ಶಕ್ತಿ ಹಿಂದಿನ ರಹಸ್ಯ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. 

  • ಪಂಜಾಬ್​ ಕಿಂಗ್ಸ್ (Punjab Kings)​ ವಿರುದ್ಧ ಅಬ್ಬರದ ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್ (Mumbai Indias)​ ತಂಡದ ಎಡಗೈ ಬ್ಯಾಟ್ಸ್​ಮನ್​​ ಇಶಾನ್​ ಕಿಶನ್​ (Ishan Kishan) ಅವರು ತಮ್ಮ ಖಡಕ್​ ಸಿಕ್ಸರ್​​ಗಳ ಶಕ್ತಿ ಹಿಂದಿನ ರಹಸ್ಯ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. 
ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ (ಪಿಸಿಎ) ಮೈದಾನದಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಸೋಲನುಭವಿಸಿತು. ಮುಂಬೈ ಇಂಡಿಯನ್ಸ್​ 6 ವಿಕೆಟ್​​ಗಳಿಂದ ಗೆದ್ದು ಬೀಗಿತು. ಧವನ್​ ಪಡೆ ನೀಡಿದ್ದ ಬೆಟ್ಟದಷ್ಟು ಮೊತ್ತವನ್ನು ರೋಹಿತ್​ ಪಡೆ, ಇನ್ನೂ ಏಳು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
(1 / 6)
ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ (ಪಿಸಿಎ) ಮೈದಾನದಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಸೋಲನುಭವಿಸಿತು. ಮುಂಬೈ ಇಂಡಿಯನ್ಸ್​ 6 ವಿಕೆಟ್​​ಗಳಿಂದ ಗೆದ್ದು ಬೀಗಿತು. ಧವನ್​ ಪಡೆ ನೀಡಿದ್ದ ಬೆಟ್ಟದಷ್ಟು ಮೊತ್ತವನ್ನು ರೋಹಿತ್​ ಪಡೆ, ಇನ್ನೂ ಏಳು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.(IPL Twitter)
ಮೊದಲು ಬ್ಯಾಟಿಂಗ್​ ನಡೆಸಿದ್ದ ಪಂಜಾಬ್​ ಕಿಂಗ್ಸ್​​​, ಲಿಯಾಮ್​ ಲಿವಿಂಗ್​ಸ್ಟೋನ್​ (82*) ಅವರ ಸ್ಫೋಟಕ ಆಟದ ಬಲದಿಂದ 3 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ 18.5 ಓವರ್​​ಗಳಲ್ಲೇ ಗೆಲುವಿನ ದಡ ಸೇರಿತು. ಸೂರ್ಯಕುಮಾರ್ ಮತ್ತು ಇಶಾನ್​ ಕಿಶನ್​ ಆರ್ಭಟಿಸಿ ಮುಂಬೈಗೆ ಗೆಲುವು ತಂದುಕೊಟ್ಟರು. ಅದರಲ್ಲೂ ಇಶಾನ್​​ ಅಬ್ಬರ ಮೆಚ್ಚುಗೆಗೆ ಕಾರಣವಾಯಿತು.
(2 / 6)
ಮೊದಲು ಬ್ಯಾಟಿಂಗ್​ ನಡೆಸಿದ್ದ ಪಂಜಾಬ್​ ಕಿಂಗ್ಸ್​​​, ಲಿಯಾಮ್​ ಲಿವಿಂಗ್​ಸ್ಟೋನ್​ (82*) ಅವರ ಸ್ಫೋಟಕ ಆಟದ ಬಲದಿಂದ 3 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ 18.5 ಓವರ್​​ಗಳಲ್ಲೇ ಗೆಲುವಿನ ದಡ ಸೇರಿತು. ಸೂರ್ಯಕುಮಾರ್ ಮತ್ತು ಇಶಾನ್​ ಕಿಶನ್​ ಆರ್ಭಟಿಸಿ ಮುಂಬೈಗೆ ಗೆಲುವು ತಂದುಕೊಟ್ಟರು. ಅದರಲ್ಲೂ ಇಶಾನ್​​ ಅಬ್ಬರ ಮೆಚ್ಚುಗೆಗೆ ಕಾರಣವಾಯಿತು.(IPL Twitter)
ಪಂಜಾಬ್​ ಕಿಂಗ್ಸ್​ ಪರ ಲಿಯಾಮ್​ ಲಿವಿಂಗ್​ಸ್ಟೋನ್​ ಮತ್ತು ಜಿತೇಶ್​ ಶರ್ಮಾ 53 ಎಸೆತಗಳಲ್ಲಿ 119 ರನ್​ಗಳ ಜೊತೆಯಾಟವಾಡಿದರು. ಲಿವಿಂಗ್​ ಸ್ಟೋನ್​ 42 ಎಸೆತಗಳಲ್ಲಿ 7 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ ಅಜೇಯ 82 ರನ್​ ಚಚ್ಚಿದರು. ಹಾಗೆಯೇ ಜಿತೇಶ್​ ಶರ್ಮಾ 27 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 49 ರನ್​ ಗಳಿಸಿದ್ದಾರೆ.
(3 / 6)
ಪಂಜಾಬ್​ ಕಿಂಗ್ಸ್​ ಪರ ಲಿಯಾಮ್​ ಲಿವಿಂಗ್​ಸ್ಟೋನ್​ ಮತ್ತು ಜಿತೇಶ್​ ಶರ್ಮಾ 53 ಎಸೆತಗಳಲ್ಲಿ 119 ರನ್​ಗಳ ಜೊತೆಯಾಟವಾಡಿದರು. ಲಿವಿಂಗ್​ ಸ್ಟೋನ್​ 42 ಎಸೆತಗಳಲ್ಲಿ 7 ಬೌಂಡರಿ, 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ ಅಜೇಯ 82 ರನ್​ ಚಚ್ಚಿದರು. ಹಾಗೆಯೇ ಜಿತೇಶ್​ ಶರ್ಮಾ 27 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 49 ರನ್​ ಗಳಿಸಿದ್ದಾರೆ.(Punjab Kings Twitter)
ಮುಂಬೈ ಪರ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್​ ನಡೆಸಿದರು. ಇಬ್ಬರು 3ನೇ ವಿಕೆಟ್​ಗೆ 55 ಎಸೆತಗಳಲ್ಲಿ 116 ರನ್​ ಜೊತೆಯಾಟವಾಡಿದರು. ಇಶಾನ್​ 41 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 75 ರನ್​ ಸಿಡಿಸಿದರು. ಸೂರ್ಯಕುಮಾರ್​ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 66 ರನ್​ ಚಚ್ಚಿದರು.
(4 / 6)
ಮುಂಬೈ ಪರ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್​ ನಡೆಸಿದರು. ಇಬ್ಬರು 3ನೇ ವಿಕೆಟ್​ಗೆ 55 ಎಸೆತಗಳಲ್ಲಿ 116 ರನ್​ ಜೊತೆಯಾಟವಾಡಿದರು. ಇಶಾನ್​ 41 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 75 ರನ್​ ಸಿಡಿಸಿದರು. ಸೂರ್ಯಕುಮಾರ್​ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 66 ರನ್​ ಚಚ್ಚಿದರು.(IPL Twitter)
ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್​ ಅವರು ಇಶಾನ್​ ಕಿಶನ್​ ಅವರನ್ನು ಸಂದರ್ಶಿಸಿದರು. ಈ ವೇಳೆ ಸೂರ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಶಾನ್​ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಪಂದ್ಯದ ಬಳಿಕ ತಮ್ಮ ಬ್ಯಾಟಿಂಗ್‌ ಶಕ್ತಿ ಹಾಗೂ ಪಂದ್ಯ ಗೆಲ್ಲಲು ರೂಪಿಸಿದ್ದ ಯೋಜನೆ ಇಶಾನ್ ರಿವೀಲ್​ ಮಾಡಿದ್ದಾರೆ. ತಮ್ಮ ಯಶಸ್ಸಿನ ಶ್ರೇಯವನ್ನು ಅಮ್ಮನಿಗೆ ಸಲ್ಲಬೇಕು ಎಂದಿದ್ದಾರೆ.
(5 / 6)
ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್​ ಅವರು ಇಶಾನ್​ ಕಿಶನ್​ ಅವರನ್ನು ಸಂದರ್ಶಿಸಿದರು. ಈ ವೇಳೆ ಸೂರ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಶಾನ್​ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಪಂದ್ಯದ ಬಳಿಕ ತಮ್ಮ ಬ್ಯಾಟಿಂಗ್‌ ಶಕ್ತಿ ಹಾಗೂ ಪಂದ್ಯ ಗೆಲ್ಲಲು ರೂಪಿಸಿದ್ದ ಯೋಜನೆ ಇಶಾನ್ ರಿವೀಲ್​ ಮಾಡಿದ್ದಾರೆ. ತಮ್ಮ ಯಶಸ್ಸಿನ ಶ್ರೇಯವನ್ನು ಅಮ್ಮನಿಗೆ ಸಲ್ಲಬೇಕು ಎಂದಿದ್ದಾರೆ.(Ishan Kishan Twitter)
ನನ್ನ ಪ್ರಕಾರ ಫಿಟ್​ನೆಸ್​ ತುಂಬಾ ಮುಖ್ಯ. ನಾವು ಕಠಿಣ ತರಬೇತಿ ಮಾಡುತ್ತೇನೆ. ಹೆಚ್ಚೆಚ್ಚು ಅಭ್ಯಾಸ ಮಾಡಲು ಪ್ರಯತ್ನಿಸುತ್ತೇನೆ. ಹಾಗೆಯೇ ಮನೆಯಲ್ಲಿ ಚೆನ್ನಾಗಿ ತಿನ್ನುವುದು ಮುಖ್ಯವಾದ ಕಾರಣ. ತಾಯಿಯ ಕೈತುತ್ತಿನಲ್ಲೂ ಶಕ್ತಿ ಅಡಗಿದೆ. ಆದ್ದರಿಂದ ತಾನು ಸಿಕ್ಸರ್‌ ಸಿಡಿಸುವುದರ ಶ್ರೇಯ ನನ್ನ ತಾಯಿಗೆ ಸಲ್ಲಬೇಕು ಎಂದು ಇಶಾನ್​ ಹೇಳಿದ್ದಾರೆ.
(6 / 6)
ನನ್ನ ಪ್ರಕಾರ ಫಿಟ್​ನೆಸ್​ ತುಂಬಾ ಮುಖ್ಯ. ನಾವು ಕಠಿಣ ತರಬೇತಿ ಮಾಡುತ್ತೇನೆ. ಹೆಚ್ಚೆಚ್ಚು ಅಭ್ಯಾಸ ಮಾಡಲು ಪ್ರಯತ್ನಿಸುತ್ತೇನೆ. ಹಾಗೆಯೇ ಮನೆಯಲ್ಲಿ ಚೆನ್ನಾಗಿ ತಿನ್ನುವುದು ಮುಖ್ಯವಾದ ಕಾರಣ. ತಾಯಿಯ ಕೈತುತ್ತಿನಲ್ಲೂ ಶಕ್ತಿ ಅಡಗಿದೆ. ಆದ್ದರಿಂದ ತಾನು ಸಿಕ್ಸರ್‌ ಸಿಡಿಸುವುದರ ಶ್ರೇಯ ನನ್ನ ತಾಯಿಗೆ ಸಲ್ಲಬೇಕು ಎಂದು ಇಶಾನ್​ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು