logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ಕ್ರಿಕೆಟ್​​ನಲ್ಲಿ ವೇಗದ ಶತಕ, 27 ಎಸೆತಗಳಲ್ಲೇ 100 ರನ್; ಕ್ರಿಸ್​ಗೇಲ್ ದಾಖಲೆ ಧ್ವಂಸಗೊಳಿಸಿದ ಸಾಹಿಲ್ ಚೌಹಾಣ್

ಟಿ20 ಕ್ರಿಕೆಟ್​​ನಲ್ಲಿ ವೇಗದ ಶತಕ, 27 ಎಸೆತಗಳಲ್ಲೇ 100 ರನ್; ಕ್ರಿಸ್​ಗೇಲ್ ದಾಖಲೆ ಧ್ವಂಸಗೊಳಿಸಿದ ಸಾಹಿಲ್ ಚೌಹಾಣ್

Jun 18, 2024 06:00 AM IST

Sahil Chauhan T20 Cricket Record: ಟಿ20 ಕ್ರಿಕೆಟ್​ನಲ್ಲಿ ಎಸ್ಟೋನಿಯಾ ಬ್ಯಾಟರ್​ ಸಾಹಿಲ್ ಚೌಹಾಣ್ ಅವರು ವೇಗದ ಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.

  • Sahil Chauhan T20 Cricket Record: ಟಿ20 ಕ್ರಿಕೆಟ್​ನಲ್ಲಿ ಎಸ್ಟೋನಿಯಾ ಬ್ಯಾಟರ್​ ಸಾಹಿಲ್ ಚೌಹಾಣ್ ಅವರು ವೇಗದ ಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
ಎಸ್ಟೋನಿಯಾ ಬ್ಯಾಟರ್ ಸಾಹಿಲ್ ಚೌಹಾಣ್ ಸೋಮವಾರ (ಜೂನ್ 17) ಸೈಪ್ರಸ್ ತಂಡದ ವಿರುದ್ಧ 27 ಎಸೆತಗಳಲ್ಲೇ ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
(1 / 6)

ಟಿ20 ಕ್ರಿಕೆಟ್​​ನಲ್ಲಿ ಕ್ರಿಸ್​ ಗೇಲ್​ ಅವರ ವಿಶ್ವದಾಖಲೆ ಹಿಂದಿಕ್ಕಿ ವೇಗದ ಶತಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. 2013ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ 30 ಎಸೆತಗಳಲ್ಲಿ ಶತಕ ಗಳಿಸಿದ್ದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
(2 / 6)

ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಂತ ವೇಗದ ಶತಕವಾಗಿದೆ. ನೇಪಾಳ ವಿರುದ್ಧ ನಮೀಬಿಯಾದ ಜಾನ್-ನಿಕೋಲ್ ಲಾಫ್ಟಿ-ಈಟನ್ ಅವರು 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
(3 / 6)

ಚೌಹಾಣ್ 41 ಎಸೆತಗಳಲ್ಲಿ ಅಜೇಯ 144 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್​​ನಲ್ಲಿ 6 ಬೌಂಡರಿ, 18 ಸಿಕ್ಸರ್ ದಾಖಲಾಗಿವೆ. ಇದು ಟಿ20ಐ ಇನ್ನಿಂಗ್ಸ್​ವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್​​ಗಳಾಗಿವೆ. ಸ್ಟ್ರೈಕ್ ರೇಟ್ 351.21 ಆಗಿತ್ತು.
(4 / 6)

18 ಸಿಕ್ಸರ್​​ಗಳೊಂದಿಗೆ ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ ಮತ್ತು ನ್ಯೂಜಿಲೆಂಡ್​ನ ಫಿನ್ ಅಲೆನ್ ದಾಖಲೆಗಳನ್ನು ಮುರಿದರು. 2019ರಲ್ಲಿ ಐರ್ಲೆಂಡ್ ವಿರುದ್ಧ ಝಜೈ ಮತ್ತು ಅಲೆನ್ 2024 ರಲ್ಲಿ ಪಾಕಿಸ್ತಾನದ ವಿರುದ್ಧ ತಲಾ 16 ಸಿಕ್ಸರ್​ ಬಾರಿಸಿದ್ದರು.
(5 / 6)

ಚೌಹಾಣ್ ಆರ್ಭಟದಿಂದ ಎಸ್ಟೋನಿಯಾ 13 ಓವರ್‌ಗಳಲ್ಲಿ 191 ರನ್‌ಗಳನ್ನು ಬೆನ್ನಟ್ಟಲು ನೆರವಾಯಿತು. 6 ವಿಕೆಟ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. ಎಸ್ಟೋನಿಯನ್ ಕ್ರಿಕೆಟಿಗ ರನ್ ಚೇಸ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು