ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ ಪರ ​ಫ್ಲಾಪ್ ಶೋ, ಬೇರೆ ತಂಡಗಳ ಪರ ಪವರ್​ಫುಲ್ ಶೋ; ಐಪಿಎಲ್​​ನಲ್ಲಿ ಮಿಂಚ್ತಿರುವ ಬೆಂಗಳೂರು ಮಾಜಿ ಆಟಗಾರರು ಇವರೇ

ಆರ್​ಸಿಬಿ ಪರ ​ಫ್ಲಾಪ್ ಶೋ, ಬೇರೆ ತಂಡಗಳ ಪರ ಪವರ್​ಫುಲ್ ಶೋ; ಐಪಿಎಲ್​​ನಲ್ಲಿ ಮಿಂಚ್ತಿರುವ ಬೆಂಗಳೂರು ಮಾಜಿ ಆಟಗಾರರು ಇವರೇ

Apr 25, 2024 05:24 PM IST

RCB EX Players: ಆರ್​ಸಿಬಿ ತಂಡದಲ್ಲಿದ್ದಾಗ ಕಳಪೆ ಪ್ರದರ್ಶನ ನೀಡಿ, ಬೇರೆ ಫ್ರಾಂಚೈಸಿಗಳ ಪರ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

  • RCB EX Players: ಆರ್​ಸಿಬಿ ತಂಡದಲ್ಲಿದ್ದಾಗ ಕಳಪೆ ಪ್ರದರ್ಶನ ನೀಡಿ, ಬೇರೆ ಫ್ರಾಂಚೈಸಿಗಳ ಪರ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
ಆರ್​ಸಿಬಿ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಉಳಿದ ಆರು ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್​​ ಪ್ರವೇಶಿಸುತ್ತದೆ ಎನ್ನುವ ಖಚಿತತೆ ಇಲ್ಲ.ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟರ್​​ಗಳು ಸ್ವಲ್ಪ ಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬೌಲರ್​​ಗಳು ಕಳಪೆ ಪ್ರದರ್ಶನ ನೀಡುತ್ತಿರುವುದನ್ನು ಮುಂದುವರೆಸಿದೆ.
(1 / 10)
ಆರ್​ಸಿಬಿ ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿದೆ. ಉಳಿದ ಆರು ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್​​ ಪ್ರವೇಶಿಸುತ್ತದೆ ಎನ್ನುವ ಖಚಿತತೆ ಇಲ್ಲ.ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟರ್​​ಗಳು ಸ್ವಲ್ಪ ಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬೌಲರ್​​ಗಳು ಕಳಪೆ ಪ್ರದರ್ಶನ ನೀಡುತ್ತಿರುವುದನ್ನು ಮುಂದುವರೆಸಿದೆ.(ANI)
ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ಕುರಿತ ವಿಚಾರವೊಂದು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಹಿಂದೆ ಆರ್​ಸಿಬಿ ತಂಡವನ್ನು ತೊರೆದು ಬೇರೆ ತಂಡಗಳ ಪರ ಅಬ್ಬರಿಸುತ್ತಿರುವ ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್​​ಸಿಬಿ ತೊರೆದ ಬೇರೆ ಫ್ರಾಂಚೈಸಿಗಳ ಪರ ಅಬ್ಬರಿಸುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
(2 / 10)
ಸಾಮಾಜಿಕ ಜಾಲತಾಣಗಳಲ್ಲಿ ಆರ್​ಸಿಬಿ ಕುರಿತ ವಿಚಾರವೊಂದು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಹಿಂದೆ ಆರ್​ಸಿಬಿ ತಂಡವನ್ನು ತೊರೆದು ಬೇರೆ ತಂಡಗಳ ಪರ ಅಬ್ಬರಿಸುತ್ತಿರುವ ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್​​ಸಿಬಿ ತೊರೆದ ಬೇರೆ ಫ್ರಾಂಚೈಸಿಗಳ ಪರ ಅಬ್ಬರಿಸುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
ಹೆನ್ರಿಚ್ ಕ್ಲಾಸೆನ್: ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮತ್ತೊಬ್ಬ ಹೊಡಿಬಡಿ ಆಟಗಾರ ಹೆನ್ರಿಚ್ ಕ್ಲಾಸೆನ್ ಸಹ ಆರ್​ಸಿಬಿ ತಂಡದಲ್ಲಿದ್ದವರೇ. 5.25 ಕೋಟಿಗೆ ಎಸ್​ಆರ್​ಹೆಚ್ ಸೇರಿರುವ ಕ್ಲಾಸೆನ್, ಬೆಂಕಿಬಿರುಗಾಳಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 198.52ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 268 ರನ್ ಚಚ್ಚಿದ್ದಾರೆ.
(3 / 10)
ಹೆನ್ರಿಚ್ ಕ್ಲಾಸೆನ್: ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮತ್ತೊಬ್ಬ ಹೊಡಿಬಡಿ ಆಟಗಾರ ಹೆನ್ರಿಚ್ ಕ್ಲಾಸೆನ್ ಸಹ ಆರ್​ಸಿಬಿ ತಂಡದಲ್ಲಿದ್ದವರೇ. 5.25 ಕೋಟಿಗೆ ಎಸ್​ಆರ್​ಹೆಚ್ ಸೇರಿರುವ ಕ್ಲಾಸೆನ್, ಬೆಂಕಿಬಿರುಗಾಳಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 198.52ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 268 ರನ್ ಚಚ್ಚಿದ್ದಾರೆ.(ANI )
ಟ್ರಾವಿಸ್ ಹೆಡ್: ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಟ್ರಾವಿಸ್ ಹೆಡ್, ಈ ಹಿಂದೆ ಇದ್ದದ್ದು ಆರ್​ಸಿಬಿ ತಂಡದಲ್ಲಿ. 2016ರ ಆಕ್ಷನ್​ನಲ್ಲಿ 50 ಲಕ್ಷಕ್ಕೆ ಆರ್​ಸಿಬಿ ಸೇರಿದ್ದರು. 2024ರಲ್ಲಿ 6.5 ಕೋಟಿಗೆ ಎಸ್​ಆರ್​ಹೆಚ್​ ಹೆಡ್​ ಅವರನ್ನು ಖರೀದಿಸಿತು. ಈ ಐಪಿಎಲ್​ನಲ್ಲಿ 6 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 324 ರನ್ ಬಾರಿಸಿದ್ದಾರೆ. 1 ಶತಕ, 2 ಅರ್ಧಶತಕ ಕೂಡ ಸೇರಿವೆ. 
(4 / 10)
ಟ್ರಾವಿಸ್ ಹೆಡ್: ಸನ್​ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಟ್ರಾವಿಸ್ ಹೆಡ್, ಈ ಹಿಂದೆ ಇದ್ದದ್ದು ಆರ್​ಸಿಬಿ ತಂಡದಲ್ಲಿ. 2016ರ ಆಕ್ಷನ್​ನಲ್ಲಿ 50 ಲಕ್ಷಕ್ಕೆ ಆರ್​ಸಿಬಿ ಸೇರಿದ್ದರು. 2024ರಲ್ಲಿ 6.5 ಕೋಟಿಗೆ ಎಸ್​ಆರ್​ಹೆಚ್​ ಹೆಡ್​ ಅವರನ್ನು ಖರೀದಿಸಿತು. ಈ ಐಪಿಎಲ್​ನಲ್ಲಿ 6 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 324 ರನ್ ಬಾರಿಸಿದ್ದಾರೆ. 1 ಶತಕ, 2 ಅರ್ಧಶತಕ ಕೂಡ ಸೇರಿವೆ. (AFP)
ಶಿವಂ ದುಬೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಿನಿಷರ್​ ಶಿವಂ ದುಬೆ ಈ ಹಿಂದೆ ಆರ್​ಸಿಬಿ ತಂಡದಲ್ಲಿದ್ದರು. ಆದರೆ ಕಳಪೆ ಪ್ರದರ್ಶನ ನೀಡಿದ್ದರು. ಆದರೀಗ ಸಿಎಸ್​ಕೆ ಪರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. 2019 ಮತ್ತು 2020ರಲ್ಲಿ ಆರ್​ಸಿಬಿ ಪರ ಆಡಿದ್ದರು. 2022ರಿಂದ ಈವರೆಗೂ ಸಿಎಸ್​ಕೆ ಪರ ಆಡುತ್ತಿರುವ ದುಬೆ, 8 ಪಂದ್ಯಗಳಲ್ಲಿ 51.83ರ ಬ್ಯಾಟಿಂಗ್ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. 3 ಅರ್ಧಶತಕ ಶತಕ ಸೇರಿವೆ.
(5 / 10)
ಶಿವಂ ದುಬೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಿನಿಷರ್​ ಶಿವಂ ದುಬೆ ಈ ಹಿಂದೆ ಆರ್​ಸಿಬಿ ತಂಡದಲ್ಲಿದ್ದರು. ಆದರೆ ಕಳಪೆ ಪ್ರದರ್ಶನ ನೀಡಿದ್ದರು. ಆದರೀಗ ಸಿಎಸ್​ಕೆ ಪರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. 2019 ಮತ್ತು 2020ರಲ್ಲಿ ಆರ್​ಸಿಬಿ ಪರ ಆಡಿದ್ದರು. 2022ರಿಂದ ಈವರೆಗೂ ಸಿಎಸ್​ಕೆ ಪರ ಆಡುತ್ತಿರುವ ದುಬೆ, 8 ಪಂದ್ಯಗಳಲ್ಲಿ 51.83ರ ಬ್ಯಾಟಿಂಗ್ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. 3 ಅರ್ಧಶತಕ ಶತಕ ಸೇರಿವೆ.(PTI)
ಕೆಎಲ್ ರಾಹುಲ್: ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್ ತನ್ನ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದೇ ಆರ್​ಸಿಬಿಯಿಂದ. ಆದರೆ 2013ರಲ್ಲಿ ಆರ್​ಸಿಬಿ ಸೇರಿದರೂ ಅವರನ್ನು ಮತ್ತೆ ಕೈಬಿಡಲಾಯಿತು. 2016ರಲ್ಲಿ ಮತ್ತೆ ಆರ್​ಸಿಬಿ ತಂಡಕ್ಕೆ ಮರು ಸೇರ್ಪಡೆಯಾದರೂ ಮತ್ತೆ ಕೈಬಿಡಲಾಯಿತು. ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡಿಕೊಂಡಿದ್ದರು. ಇದೀಗ ಎಲ್​ಎಸ್​ಜಿ ನಾಯಕನಾಗಿದ್ದಾರೆ. 8 ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ.
(6 / 10)
ಕೆಎಲ್ ರಾಹುಲ್: ಎಲ್​ಎಸ್​ಜಿ ನಾಯಕ ಕೆಎಲ್ ರಾಹುಲ್ ತನ್ನ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದೇ ಆರ್​ಸಿಬಿಯಿಂದ. ಆದರೆ 2013ರಲ್ಲಿ ಆರ್​ಸಿಬಿ ಸೇರಿದರೂ ಅವರನ್ನು ಮತ್ತೆ ಕೈಬಿಡಲಾಯಿತು. 2016ರಲ್ಲಿ ಮತ್ತೆ ಆರ್​ಸಿಬಿ ತಂಡಕ್ಕೆ ಮರು ಸೇರ್ಪಡೆಯಾದರೂ ಮತ್ತೆ ಕೈಬಿಡಲಾಯಿತು. ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡಿಕೊಂಡಿದ್ದರು. ಇದೀಗ ಎಲ್​ಎಸ್​ಜಿ ನಾಯಕನಾಗಿದ್ದಾರೆ. 8 ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ.(AFP)
ಯುಜ್ವೇಂದ್ರ ಚಹಲ್: ಇತ್ತೀಚೆಗಷ್ಟೆ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್​ ಎನಿಸಿಕೊಂಡ ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಪ್ರಸಕ್ತ ಐಪಿಎಲ್​ನಲ್ಲಿ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್​ ರೇಸ್​ನಲ್ಲಿದ್ದಾರೆ. ಈ ಹಿಂದೆ 2014-21ರವರೆಗೂ ಆರ್​ಸಿಬಿ ಪರ ಆಡಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು.
(7 / 10)
ಯುಜ್ವೇಂದ್ರ ಚಹಲ್: ಇತ್ತೀಚೆಗಷ್ಟೆ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್​ ಎನಿಸಿಕೊಂಡ ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಪ್ರಸಕ್ತ ಐಪಿಎಲ್​ನಲ್ಲಿ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್​ ರೇಸ್​ನಲ್ಲಿದ್ದಾರೆ. ಈ ಹಿಂದೆ 2014-21ರವರೆಗೂ ಆರ್​ಸಿಬಿ ಪರ ಆಡಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು.(AP)
ಮಾರ್ಕಸ್ ಸ್ಟೋಯ್ನಿಸ್: 2019ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಮಾರ್ಕಸ್ ಸ್ಟೋಯ್ನಿಸ್, ಕಳೆದ ಮೂರು ಆವೃತ್ತಿಗಳಿಂದಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. ತನ್ನ ಕಳೆದ ಪಂದ್ಯದಲ್ಲಿ ಸಿಎಸ್​​ಕೆ ವಿರುದ್ಧ ಶತಕ (124) ಸಿಡಿಸಿ ಮಿಂಚಿದರು. 2024ರ ಐಪಿಎಲ್​ನಲ್ಲಿ ಆಡಿದ 8 ಪಂದ್ಯಗಳಲ್ಲಿ 254 ರನ್ ಬಾರಿಸಿದ್ದಾರೆ.
(8 / 10)
ಮಾರ್ಕಸ್ ಸ್ಟೋಯ್ನಿಸ್: 2019ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಮಾರ್ಕಸ್ ಸ್ಟೋಯ್ನಿಸ್, ಕಳೆದ ಮೂರು ಆವೃತ್ತಿಗಳಿಂದಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. ತನ್ನ ಕಳೆದ ಪಂದ್ಯದಲ್ಲಿ ಸಿಎಸ್​​ಕೆ ವಿರುದ್ಧ ಶತಕ (124) ಸಿಡಿಸಿ ಮಿಂಚಿದರು. 2024ರ ಐಪಿಎಲ್​ನಲ್ಲಿ ಆಡಿದ 8 ಪಂದ್ಯಗಳಲ್ಲಿ 254 ರನ್ ಬಾರಿಸಿದ್ದಾರೆ.(AFP)
ಹರ್ಷಲ್ ಪಟೇಲ್: 2023ರ ಐಪಿಎಲ್​ನ ಮಿನಿ ಹರಾಜಿನಲ್ಲಿ ಹರ್ಷಲ್ ಪಟೇಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಖರೀದಿಯಾದರು. ಈ ತಂಡದ ಪರ 13 ವಿಕೆಟ್ ಕಿತ್ತಿದ್ದು, ಪರ್ಪಲ್ ಕ್ಯಾಪ್​ ರೇಸ್​ನಲ್ಲಿದ್ದಾರೆ. 2021 ರಿಂದ 2023ರ ತನಕ ಐಪಿಎಲ್​ನಲ್ಲಿ ಆರ್​​ಸಿಬಿ ಪರ ಆಡಿದ್ದರು.
(9 / 10)
ಹರ್ಷಲ್ ಪಟೇಲ್: 2023ರ ಐಪಿಎಲ್​ನ ಮಿನಿ ಹರಾಜಿನಲ್ಲಿ ಹರ್ಷಲ್ ಪಟೇಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಖರೀದಿಯಾದರು. ಈ ತಂಡದ ಪರ 13 ವಿಕೆಟ್ ಕಿತ್ತಿದ್ದು, ಪರ್ಪಲ್ ಕ್ಯಾಪ್​ ರೇಸ್​ನಲ್ಲಿದ್ದಾರೆ. 2021 ರಿಂದ 2023ರ ತನಕ ಐಪಿಎಲ್​ನಲ್ಲಿ ಆರ್​​ಸಿಬಿ ಪರ ಆಡಿದ್ದರು.(AFP)
ಕ್ವಿಂಟನ್ ಡಿ ಕಾಕ್: ಲಕ್ನೋ ತಂಡದಲ್ಲಿರುವ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ಆರ್​ಸಿಬಿ ತಂಡದ ಭಾಗವಾಗಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಅವರನ್ನು ಕೈಬಿಡಲಾಗಿತ್ತು. ಆದರೆ ಎಲ್​ಎಸ್​ಜಿ ಪರ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
(10 / 10)
ಕ್ವಿಂಟನ್ ಡಿ ಕಾಕ್: ಲಕ್ನೋ ತಂಡದಲ್ಲಿರುವ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಕೂಡ ಆರ್​ಸಿಬಿ ತಂಡದ ಭಾಗವಾಗಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಅವರನ್ನು ಕೈಬಿಡಲಾಗಿತ್ತು. ಆದರೆ ಎಲ್​ಎಸ್​ಜಿ ಪರ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.(ANI )

    ಹಂಚಿಕೊಳ್ಳಲು ಲೇಖನಗಳು