logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ಐರ್ಲೆಂಡ್ ಟಿ20 ವಿಶ್ವಕಪ್​ ಪಂದ್ಯ ಎಷ್ಟೊತ್ತಿಗೆ, ಎಲ್ಲಿ, ಯಾವಾಗ? ಉಚಿತ ವೀಕ್ಷಣೆ ಹೇಗೆ?

ಭಾರತ vs ಐರ್ಲೆಂಡ್ ಟಿ20 ವಿಶ್ವಕಪ್​ ಪಂದ್ಯ ಎಷ್ಟೊತ್ತಿಗೆ, ಎಲ್ಲಿ, ಯಾವಾಗ? ಉಚಿತ ವೀಕ್ಷಣೆ ಹೇಗೆ?

Jun 05, 2024 07:00 AM IST

India vs Ireland Live Streaming: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ 8ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಎಷ್ಟೊತ್ತಿಗೆ, ಉಚಿತ ವೀಕ್ಷಣೆ ಹೇಗೆ? ಇಲ್ಲಿದೆ ವಿವರ.

2024ರ ಟಿ20 ವಿಶ್ವಕಪ್ಗೂ ಮುನ್ನ ನಡೆದ ಏಕೈಕ ಅಭ್ಯಾಸ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲು ಟೀಮ್ ಇಂಡಿಯಾ ಕಾಯುತ್ತಿದೆ. ಇದೀಗ, ಐರ್ಲೆಂಡ್ vs ಭಾರತ ನಡುವಿನ ಎ ಗ್ರೂಪ್​ ಪಂದ್ಯವು ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದನ್ನು ನೋಡೋಣ.
(1 / 5)

ಭಾರತ ಮತ್ತು ಐರ್ಲೆಂಡ್ ನಡುವಿನ ಗ್ರೂಪ್ ಎ ಪಂದ್ಯವು ಜೂನ್ 5ರಂದು ನಡೆಯಲಿದೆ. ನ್ಯೂಯಾರ್ಕ್​​​ನಲ್ಲಿ ಹೊಸದಾಗಿ ನಿರ್ಮಿಸಲಾದ ನಸ್ಸೌ ಕೌಂಟಿ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7:30ಕ್ಕೆ ನಡೆಯಲಿದೆ.
(2 / 5)

2024ರ ಟಿ20 ವಿಶ್ವಕಪ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರ ಪ್ರಸಾರವಾಗಲಿದೆ.  ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನ ಎಲ್ಲಾ ಚಾನೆಲ್​​ಗಳಲ್ಲೂ ಪ್ರಸಾರವಾಗಲಿದೆ. ಇದಲ್ಲದೆ, ಭಾರತದ ವಿಶ್ವಕಪ್ ಪಂದ್ಯಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್​​ನಲ್ಲೂ ನೋಡಬಹುದು.
(3 / 5)

ಟಿ20 ವಿಶ್ವಕಪ್ 2024 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಹೊಂದಿದೆ. ವಿಶ್ವಕಪ್ ಪಂದ್ಯಗಳನ್ನು ಹಾಟ್​ಸ್ಟಾರ್​​ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮೊಬೈಲ್​​ ಅಪ್ಲಿಕೇಷನ್​ನಲ್ಲಿ ಪಂದ್ಯ ನೋಡುವವರಿಗೆ ಒಂದು ಪೈಸೆಯೂ ಪಾವತಿಸುವಂತಿಲ್ಲ. ಆದರೆ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಅನ್ನು ಲ್ಯಾಪ್​ಟಾಪ್​ನಲ್ಲಿ ನೋಡಿದರೆ, ನೀವು ಚಂದಾದಾರಿಕೆ ಮಾಡಿಕೊಳ್ಳಬೇಕಿದೆ.
(4 / 5)

ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
(5 / 5)

    ಹಂಚಿಕೊಳ್ಳಲು ಲೇಖನಗಳು