logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  4 ವಿಕೆಟ್ ಕಿತ್ತು ವಿಶೇಷ ಮೈಲಿಗಲ್ಲು ತಲುಪಿದ ಜಸ್ಪ್ರೀತ್ ಬುಮ್ರಾ; 400 ವಿಕೆಟ್​ಗಳೊಂದಿಗೆ ದಿಗ್ಗಜರ ಕ್ಲಬ್​ಗೆ ಮಾಸ್ ಎಂಟ್ರಿ

4 ವಿಕೆಟ್ ಕಿತ್ತು ವಿಶೇಷ ಮೈಲಿಗಲ್ಲು ತಲುಪಿದ ಜಸ್ಪ್ರೀತ್ ಬುಮ್ರಾ; 400 ವಿಕೆಟ್​ಗಳೊಂದಿಗೆ ದಿಗ್ಗಜರ ಕ್ಲಬ್​ಗೆ ಮಾಸ್ ಎಂಟ್ರಿ

Sep 20, 2024 09:41 PM IST

Jasprit Bumrah Record: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಉರುಳಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

  • Jasprit Bumrah Record: ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಉರುಳಿಸುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​​ನಲ್ಲಿ ಬೆಂಕಿ ಬಿರುಗಾಳಿ ಬೌಲಿಂಗ್ ನಡೆಸಿದ ಭಾರತದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ, ಹಲವು ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್ 2024 ನಂತರ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಮೊದಲ ಓವರ್​​ನಲ್ಲೇ​​ವಿಕೆಟ್ ಬೇಟೆ ಆರಂಭಿಸಿದರು. ಒಟ್ಟು 4 ವಿಕೆಟ್ ಉರುಳಿಸಿದ ಬುಮ್ರಾ, ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
(1 / 6)
ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​​ನಲ್ಲಿ ಬೆಂಕಿ ಬಿರುಗಾಳಿ ಬೌಲಿಂಗ್ ನಡೆಸಿದ ಭಾರತದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ, ಹಲವು ದಾಖಲೆ ಬರೆದಿದ್ದಾರೆ. ಟಿ20 ವಿಶ್ವಕಪ್ 2024 ನಂತರ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಮೊದಲ ಓವರ್​​ನಲ್ಲೇ​​ವಿಕೆಟ್ ಬೇಟೆ ಆರಂಭಿಸಿದರು. ಒಟ್ಟು 4 ವಿಕೆಟ್ ಉರುಳಿಸಿದ ಬುಮ್ರಾ, ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.(PTI)
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ 11 ಓವರ್​​​ಗಳಲ್ಲಿ 50 ರನ್​​ ಬಿಟ್ಟು ಕೊಟ್ಟು 4 ವಿಕೆಟ್​ಪಡೆದು ಮಿಂಚಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಎಲ್ಲಾ 3 ಸ್ವರೂಪಗಳಲ್ಲಿ 400 ವಿಕೆಟ್​ಗಳ ಮೈಲಿಗಲ್ಲು ತಲುಪುವ ಮೂಲಕ ಗಮನ ಸೆಳೆದಿದ್ದಾರೆ.
(2 / 6)
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ 11 ಓವರ್​​​ಗಳಲ್ಲಿ 50 ರನ್​​ ಬಿಟ್ಟು ಕೊಟ್ಟು 4 ವಿಕೆಟ್​ಪಡೆದು ಮಿಂಚಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಎಲ್ಲಾ 3 ಸ್ವರೂಪಗಳಲ್ಲಿ 400 ವಿಕೆಟ್​ಗಳ ಮೈಲಿಗಲ್ಲು ತಲುಪುವ ಮೂಲಕ ಗಮನ ಸೆಳೆದಿದ್ದಾರೆ.(AFP)
ಜಸ್ಪ್ರೀತ್ ಬುಮ್ರಾ 196 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 227 ಇನ್ನಿಂಗ್ಸ್​​ಗಳಲ್ಲಿ​ 401 ವಿಕೆಟ್ ಪಡೆದಿದ್ದಾರೆ. ಇಂಟರ್​​ನ್ಯಾಷನಲ್ ಕ್ರಿಕೆಟ್​ನ ಎಲ್ಲಾ 3 ಸ್ವರೂಪಗಳಲ್ಲಿ 12 ಇನ್ನಿಂಗ್ಸ್​​ಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​​ ಪಡೆದಿದ್ದಾರೆ. ಟೆಸ್ಟ್​​ನಲ್ಲಿ 10 ಬಾರಿ ಮತ್ತು ಏಕದಿನದಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.
(3 / 6)
ಜಸ್ಪ್ರೀತ್ ಬುಮ್ರಾ 196 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 227 ಇನ್ನಿಂಗ್ಸ್​​ಗಳಲ್ಲಿ​ 401 ವಿಕೆಟ್ ಪಡೆದಿದ್ದಾರೆ. ಇಂಟರ್​​ನ್ಯಾಷನಲ್ ಕ್ರಿಕೆಟ್​ನ ಎಲ್ಲಾ 3 ಸ್ವರೂಪಗಳಲ್ಲಿ 12 ಇನ್ನಿಂಗ್ಸ್​​ಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​​ ಪಡೆದಿದ್ದಾರೆ. ಟೆಸ್ಟ್​​ನಲ್ಲಿ 10 ಬಾರಿ ಮತ್ತು ಏಕದಿನದಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.(AP)
ಬುಮ್ರಾ 37 ಟೆಸ್ಟ್ ಪಂದ್ಯಗಳ 70 ಇನ್ನಿಂಗ್ಸ್​​​ಗಳಲ್ಲಿ ಒಟ್ಟು 163 ವಿಕೆಟ್ ಪಡೆದಿದ್ದಾರೆ. 89 ಏಕದಿನ ಪಂದ್ಯಗಳ 88 ಇನ್ನಿಂಗ್ಸ್​​ಗಳಲ್ಲಿ 149 ವಿಕೆಟ್ ಮತ್ತು 70 ಟಿ20ಐ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ.
(4 / 6)
ಬುಮ್ರಾ 37 ಟೆಸ್ಟ್ ಪಂದ್ಯಗಳ 70 ಇನ್ನಿಂಗ್ಸ್​​​ಗಳಲ್ಲಿ ಒಟ್ಟು 163 ವಿಕೆಟ್ ಪಡೆದಿದ್ದಾರೆ. 89 ಏಕದಿನ ಪಂದ್ಯಗಳ 88 ಇನ್ನಿಂಗ್ಸ್​​ಗಳಲ್ಲಿ 149 ವಿಕೆಟ್ ಮತ್ತು 70 ಟಿ20ಐ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ.
ಬುಮ್ರಾ ಎಲ್ಲಾ 3 ಸ್ವರೂಪಗಳಲ್ಲಿ 400 ವಿಕೆಟ್ ಪಡೆದ 10ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ (953), ರವಿಚಂದ್ರನ್ ಅಶ್ವಿನ್ (744), ಹರ್ಭಜನ್ ಸಿಂಗ್ (707), ಕಪಿಲ್ ದೇವ್ (687), ಜಹೀರ್ ಖಾನ್ (597), ರವೀಂದ್ರ ಜಡೇಜಾ (570), ಜಾವಗಲ್ ಶ್ರೀನಾಥ್ (551), ಮೊಹಮ್ಮದ್ ಶಮಿ (448), ಇಶಾಂತ್ ಶರ್ಮಾ (448) ಈ ಸಾಧನೆ ಮಾಡಿದ್ದಾರೆ.
(5 / 6)

ಅತ್ಯಂತ ವೇಗವಾಗಿ 400 ವಿಕೆಟ್ ತಲುಪಿದ ಭಾರತದ ಮೂರನೇ ವೇಗಿ ಹಾಗೂ 5ನೇ ಬೌಲರ್​ ಎನಿಸಿಕೊಂಡಿದ್ದಾರೆ. ಅಶ್ವಿನ್ 216 ಇನ್ನಿಂಗ್ಸ್​​ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ನಂತರ ಕಪಿಲ್ ದೇವ್ (220), ಮೊಹಮ್ಮದ್ ಶಮಿ (224) ಮತ್ತು ಅನಿಲ್ ಕುಂಬ್ಳೆ (226) ಇದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು