logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೂಲನ್ ಗೋಸ್ವಾಮಿ ದಾಖಲೆ ಮುರಿದ ಪೂಜಾ ವಸ್ತ್ರಾಕರ್; ಬಾಂಗ್ಲಾದೇಶ ವಿರುದ್ಧ ರಿಚಾ-ರೇಣುಕಾ ರೆಕಾರ್ಡ್

ಜೂಲನ್ ಗೋಸ್ವಾಮಿ ದಾಖಲೆ ಮುರಿದ ಪೂಜಾ ವಸ್ತ್ರಾಕರ್; ಬಾಂಗ್ಲಾದೇಶ ವಿರುದ್ಧ ರಿಚಾ-ರೇಣುಕಾ ರೆಕಾರ್ಡ್

Jul 26, 2024 06:18 PM IST

ವನಿತೆಯರ ಏಷ್ಯಾಕಪ್ 2024ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಸಾಧಿಸಿದೆ. ಇದೇ ವೇಳೆ ಆಲ್‌ರೌಂಡರ್ ಪೂಜಾ ವಸ್ತ್ರಾಕರ್, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಠಾಕೂರ್ ವೈಯಕ್ತಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

  • ವನಿತೆಯರ ಏಷ್ಯಾಕಪ್ 2024ರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಸಾಧಿಸಿದೆ. ಇದೇ ವೇಳೆ ಆಲ್‌ರೌಂಡರ್ ಪೂಜಾ ವಸ್ತ್ರಾಕರ್, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಠಾಕೂರ್ ವೈಯಕ್ತಿಕ ದಾಖಲೆಯನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾದ ಡಂಬುಲ್ಲಾದಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ವಿಶೇಷ ದಾಖಲೆ ನಿರ್ಮಿಸಿದರು. ಆ ಮೂಲಕ ದಿಗ್ಗಜ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರ ದಾಖಲೆಯನ್ನು ಮುರಿದರು.
(1 / 7)
ಶ್ರೀಲಂಕಾದ ಡಂಬುಲ್ಲಾದಲ್ಲಿ ಶುಕ್ರವಾರ ನಡೆದ ಏಷ್ಯಾಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯದಲ್ಲಿ ಪೂಜಾ ವಸ್ತ್ರಾಕರ್ ವಿಶೇಷ ದಾಖಲೆ ನಿರ್ಮಿಸಿದರು. ಆ ಮೂಲಕ ದಿಗ್ಗಜ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರ ದಾಖಲೆಯನ್ನು ಮುರಿದರು.(BCCI)
ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ನಲ್ಲಿ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಜೂಲನ್ ಗೋಸ್ವಾಮಿಯನ್ನು ಹಿಂದಿಕ್ಕಿದ್ದಾರೆ. ಜೂಲನ್ ಭಾರತ ಪರ 68 ಪಂದ್ಯಗಳಲ್ಲಿ 67 ಇನ್ನಿಂಗ್ಸ್‌ಗಳಲ್ಲಿ 56 ವಿಕೆಟ್‌ ಪಡೆದಿದ್ದಾರೆ. ಇದೇ ವೇಳೆ ಪೂಜಾ 69 ಪಂದ್ಯಗಳ 63 ಇನ್ನಿಂಗ್ಸ್‌ಳಲ್ಲಿ ಬೌಲಿಂಗ್ ಮಾಡಿ 57 ವಿಕೆಟ್‌ ಪಡೆದಿದ್ದಾರೆ.
(2 / 7)
ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ನಲ್ಲಿ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಜೂಲನ್ ಗೋಸ್ವಾಮಿಯನ್ನು ಹಿಂದಿಕ್ಕಿದ್ದಾರೆ. ಜೂಲನ್ ಭಾರತ ಪರ 68 ಪಂದ್ಯಗಳಲ್ಲಿ 67 ಇನ್ನಿಂಗ್ಸ್‌ಗಳಲ್ಲಿ 56 ವಿಕೆಟ್‌ ಪಡೆದಿದ್ದಾರೆ. ಇದೇ ವೇಳೆ ಪೂಜಾ 69 ಪಂದ್ಯಗಳ 63 ಇನ್ನಿಂಗ್ಸ್‌ಳಲ್ಲಿ ಬೌಲಿಂಗ್ ಮಾಡಿ 57 ವಿಕೆಟ್‌ ಪಡೆದಿದ್ದಾರೆ.(PTI)
ಪೂಜಾ, ಜೂಲನ್ ಅವರನ್ನು ಹಿಂದಿಕ್ಕಿ ಟಿ20ಐನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೀಪ್ತಿ ಶರ್ಮಾ (130), ಪೂನಂ ಯಾದವ್ (98), ರಾಧಾ ಯಾದವ್ (90) ಮತ್ತು ರಾಜೇಶ್ವರಿ ಗಾಯಕ್ವಾಡ್ (61) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ವೇಗಿಗಳ ಪೈಕಿ ಅವರು ಅಗ್ರಸ್ಥಾನ ಪಡೆದಿದ್ದಾರೆ.
(3 / 7)
ಪೂಜಾ, ಜೂಲನ್ ಅವರನ್ನು ಹಿಂದಿಕ್ಕಿ ಟಿ20ಐನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೀಪ್ತಿ ಶರ್ಮಾ (130), ಪೂನಂ ಯಾದವ್ (98), ರಾಧಾ ಯಾದವ್ (90) ಮತ್ತು ರಾಜೇಶ್ವರಿ ಗಾಯಕ್ವಾಡ್ (61) ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ವೇಗಿಗಳ ಪೈಕಿ ಅವರು ಅಗ್ರಸ್ಥಾನ ಪಡೆದಿದ್ದಾರೆ.
ಇದೇ ವೇಳೆ ಪಂದ್ಯದಲ್ಲಿ ರಿಚಾ ಘೋಷ್ ಕೂಡಾ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶದ ರಿತು ಮಣಿ ಅವರನ್ನು ಸ್ಟಂಪ್‌ ಔಟ್‌ ಮಾಡುವ ಮೂಲಕ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್‌ ಮಾಡಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾದರು. ಅವರು ತಾನಿಯಾ ಭಾಟಿಯಾ ಅವರ ದಾಖಲೆ ಮುರಿದರು. ಮಹಿಳಾ ಏಷ್ಯಾಕಪ್‌ನಲ್ಲಿ ತಾನಿಯಾ ಒಟ್ಟು 6 ಸ್ಟಂಪ್‌ ಔಟ್ ಮಾಡಿದ್ದಾರೆ. ರಿಚಾ ಏಳು ಸ್ಟಂಪ್‌ಔಟ್ ಮಾಡಿದ್ದಾರೆ.
(4 / 7)
ಇದೇ ವೇಳೆ ಪಂದ್ಯದಲ್ಲಿ ರಿಚಾ ಘೋಷ್ ಕೂಡಾ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶದ ರಿತು ಮಣಿ ಅವರನ್ನು ಸ್ಟಂಪ್‌ ಔಟ್‌ ಮಾಡುವ ಮೂಲಕ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್‌ ಮಾಡಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾದರು. ಅವರು ತಾನಿಯಾ ಭಾಟಿಯಾ ಅವರ ದಾಖಲೆ ಮುರಿದರು. ಮಹಿಳಾ ಏಷ್ಯಾಕಪ್‌ನಲ್ಲಿ ತಾನಿಯಾ ಒಟ್ಟು 6 ಸ್ಟಂಪ್‌ ಔಟ್ ಮಾಡಿದ್ದಾರೆ. ರಿಚಾ ಏಳು ಸ್ಟಂಪ್‌ಔಟ್ ಮಾಡಿದ್ದಾರೆ.(PTI)
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೇಣುಕಾ ಸಿಂಗ್ ಠಾಕೂರ್ 3 ವಿಕೆಟ್ ಪಡೆದರು. ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ನಂತರ ಮಹಿಳಾ ಟಿ20ಯಲ್ಲಿ 50 ವಿಕೆಟ್ ಪಡೆದ ಮೂರನೇ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ರೇಣುಕಾ 46 ಟಿ20 ಪಂದ್ಯಗಳಲ್ಲಿ ಒಟ್ಟು 50 ವಿಕೆಟ್‌ ಪಡೆದಿದ್ದಾರೆ.
(5 / 7)
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೇಣುಕಾ ಸಿಂಗ್ ಠಾಕೂರ್ 3 ವಿಕೆಟ್ ಪಡೆದರು. ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ನಂತರ ಮಹಿಳಾ ಟಿ20ಯಲ್ಲಿ 50 ವಿಕೆಟ್ ಪಡೆದ ಮೂರನೇ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ರೇಣುಕಾ 46 ಟಿ20 ಪಂದ್ಯಗಳಲ್ಲಿ ಒಟ್ಟು 50 ವಿಕೆಟ್‌ ಪಡೆದಿದ್ದಾರೆ.(PTI)
ಮಹಿಳಾ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ರೇಣುಕಾ ಮುರಿದಿದ್ದಾರೆ. 2022ರ ಏಷ್ಯಾಕಪ್‌ನಲ್ಲಿ ರೇಣುಕಾ 6 ವಿಕೆಟ್ ಪಡೆದಿದ್ದರು. 2024ರ ಏಷ್ಯಾಕಪ್‌ನಲ್ಲಿ ಈವರೆಗೆ 7 ವಿಕೆಟ್ ಕಬಳಿಸಿದ್ದಾರೆ. ಏಷ್ಯಾಕಪ್‌ನ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ರೇಣುಕಾ ಪಾತ್ರರಾಗಿದ್ದಾರೆ.
(6 / 7)
ಮಹಿಳಾ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ರೇಣುಕಾ ಮುರಿದಿದ್ದಾರೆ. 2022ರ ಏಷ್ಯಾಕಪ್‌ನಲ್ಲಿ ರೇಣುಕಾ 6 ವಿಕೆಟ್ ಪಡೆದಿದ್ದರು. 2024ರ ಏಷ್ಯಾಕಪ್‌ನಲ್ಲಿ ಈವರೆಗೆ 7 ವಿಕೆಟ್ ಕಬಳಿಸಿದ್ದಾರೆ. ಏಷ್ಯಾಕಪ್‌ನ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ರೇಣುಕಾ ಪಾತ್ರರಾಗಿದ್ದಾರೆ.(BCCI)
ಡಂಬುಲ್ಲಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 83 ರನ್ ಗಳಿಸಿತು. ಸ್ಮೃತಿ ಮಂದಾನ ಅಜೇಯ 55 ರನ್ ಗಳಿಸಿದರು.
(7 / 7)
ಡಂಬುಲ್ಲಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಭಾರತ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 83 ರನ್ ಗಳಿಸಿತು. ಸ್ಮೃತಿ ಮಂದಾನ ಅಜೇಯ 55 ರನ್ ಗಳಿಸಿದರು.(BCCI)

    ಹಂಚಿಕೊಳ್ಳಲು ಲೇಖನಗಳು