logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ Vs ಡಿಸಿ ನಿರ್ಣಾಯಕ ಪಂದ್ಯ; ಮಾಡು ಇಲ್ಲವೇ ಮಡಿ ಪಂದ್ಯಕ್ಕಿದೆ ಮಳೆಯ ಭೀತಿ, ಹವಾಮಾನ ಇಲಾಖೆ ಹೇಳಿದ್ದೇನು?

ಆರ್​ಸಿಬಿ vs ಡಿಸಿ ನಿರ್ಣಾಯಕ ಪಂದ್ಯ; ಮಾಡು ಇಲ್ಲವೇ ಮಡಿ ಪಂದ್ಯಕ್ಕಿದೆ ಮಳೆಯ ಭೀತಿ, ಹವಾಮಾನ ಇಲಾಖೆ ಹೇಳಿದ್ದೇನು?

May 12, 2024 02:40 PM IST

RCB vs DC : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಆರ್​​ಸಿಬಿ ಕಥೆ ಏನು?

  • RCB vs DC : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದರೆ ಆರ್​​ಸಿಬಿ ಕಥೆ ಏನು?
17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಈ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
(1 / 7)
17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಈ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.(AFP)
ಐಪಿಎಲ್​ನ ಮೊದಲಾರ್ಧದ 7 ಪಂದ್ಯಗಳಲ್ಲಿ 6 ಸೋತಿದ್ದ ಆರ್​ಸಿಬಿ, ದ್ವಿತಿಯಾರ್ಧದ 5 ಪಂದ್ಯಗಳಲ್ಲಿ 4 ಜಯಿಸಿದೆ. ಇದರೊಂದಿಗೆ ಪ್ಲೇಆಫ್ ಕನಸು ಕಾಣಲಾರಂಭಿಸಿದೆ.
(2 / 7)
ಐಪಿಎಲ್​ನ ಮೊದಲಾರ್ಧದ 7 ಪಂದ್ಯಗಳಲ್ಲಿ 6 ಸೋತಿದ್ದ ಆರ್​ಸಿಬಿ, ದ್ವಿತಿಯಾರ್ಧದ 5 ಪಂದ್ಯಗಳಲ್ಲಿ 4 ಜಯಿಸಿದೆ. ಇದರೊಂದಿಗೆ ಪ್ಲೇಆಫ್ ಕನಸು ಕಾಣಲಾರಂಭಿಸಿದೆ.(AFP)
ಆದರೆ, ಡೆಲ್ಲಿ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಆತಂಕಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದ ಜೋರು ಮಳೆ ಸುರಿಯುತ್ತಿದ್ದು, ಇವತ್ತಿನ ಪಂದ್ಯಕ್ಕೂ (ಮೇ 12) ವರುಣ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.
(3 / 7)
ಆದರೆ, ಡೆಲ್ಲಿ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಆತಂಕಕ್ಕೆ ಒಳಗಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದ ಜೋರು ಮಳೆ ಸುರಿಯುತ್ತಿದ್ದು, ಇವತ್ತಿನ ಪಂದ್ಯಕ್ಕೂ (ಮೇ 12) ವರುಣ ಅಡಚಣೆ ಉಂಟು ಮಾಡುವ ಸಾಧ್ಯತೆ ಇದೆ.(AFP)
ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
(4 / 7)
ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.(ANI)
ಹಗಲಿನಲ್ಲಿ ಬಿಸಿಲು ಕಾಣಿಸಿಕೊಳ್ಳಲಿದ್ದು, ಸಂಜೆ ವೇಳೆ ಮಳೆ ಕಾಣಿಸಿಕೊಳ್ಳಲಿದೆ. ಅಲ್ಲದೆ, ರಾತ್ರಿ 11ರ ನಂತರ ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
(5 / 7)
ಹಗಲಿನಲ್ಲಿ ಬಿಸಿಲು ಕಾಣಿಸಿಕೊಳ್ಳಲಿದ್ದು, ಸಂಜೆ ವೇಳೆ ಮಳೆ ಕಾಣಿಸಿಕೊಳ್ಳಲಿದೆ. ಅಲ್ಲದೆ, ರಾತ್ರಿ 11ರ ನಂತರ ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(PTI)
ಸಂಜೆ ಶೇ 25ರಷ್ಟು, ರಾತ್ರಿ 11ರ ನಂತರ 55ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ಲೇಆಫ್​ ಕನಸು ಕಾಣುತ್ತಿರುವ ಆರ್​ಸಿಬಿಗೆ ಮಳೆ ತೊಂದರೆ ನೀಡುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
(6 / 7)
ಸಂಜೆ ಶೇ 25ರಷ್ಟು, ರಾತ್ರಿ 11ರ ನಂತರ 55ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ಲೇಆಫ್​ ಕನಸು ಕಾಣುತ್ತಿರುವ ಆರ್​ಸಿಬಿಗೆ ಮಳೆ ತೊಂದರೆ ನೀಡುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.(PTI)
ಆರ್​ಸಿಬಿ ಪ್ಲೇಆಫ್​ ಆಸೆ ಜೀವಂತವಾಗಿರಬೇಕೆಂದರೆ ಈ ಮಹತ್ವದ ಪಂದ್ಯದಲ್ಲಿ ಗೆಲ್ಲಲೇಬೇಕು. ಸಿಎಸ್​ಕೆ ಎಲ್ಲಾ ಪಂದ್ಯ ಸೋಲಬೇಕು. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಎಲ್​ಎಸ್​ಜಿ ವಿರುದ್ಧ ಗೆಲ್ಲಬೇಕು. ಜಿಟಿ ಎರಡು ಪಂದ್ಯ ಪರಾಭವಗೊಳ್ಳಬೇಕು.ಒಂದು ವೇಳೆ ಮಳೆ ಬಂದರೆ ಆರ್​ಸಿಬಿ ಪ್ಲೇಆಫ್ ಕನಸು ಅಂತ್ಯಗೊಳ್ಳಲಿದೆ.
(7 / 7)
ಆರ್​ಸಿಬಿ ಪ್ಲೇಆಫ್​ ಆಸೆ ಜೀವಂತವಾಗಿರಬೇಕೆಂದರೆ ಈ ಮಹತ್ವದ ಪಂದ್ಯದಲ್ಲಿ ಗೆಲ್ಲಲೇಬೇಕು. ಸಿಎಸ್​ಕೆ ಎಲ್ಲಾ ಪಂದ್ಯ ಸೋಲಬೇಕು. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಎಲ್​ಎಸ್​ಜಿ ವಿರುದ್ಧ ಗೆಲ್ಲಬೇಕು. ಜಿಟಿ ಎರಡು ಪಂದ್ಯ ಪರಾಭವಗೊಳ್ಳಬೇಕು.ಒಂದು ವೇಳೆ ಮಳೆ ಬಂದರೆ ಆರ್​ಸಿಬಿ ಪ್ಲೇಆಫ್ ಕನಸು ಅಂತ್ಯಗೊಳ್ಳಲಿದೆ.

    ಹಂಚಿಕೊಳ್ಳಲು ಲೇಖನಗಳು