logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಕ್ಕೇ ಬಿಡ್ತು 300ನೇ ವಿಕೆಟ್; ಅಶ್ವಿನ್-ಕಪಿಲ್ ದೇವ್ ಹಿಂದಿಕ್ಕಿ ಐತಿಹಾಸಿಕ‌ ಡಬಲ್ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

ಸಿಕ್ಕೇ ಬಿಡ್ತು 300ನೇ ವಿಕೆಟ್; ಅಶ್ವಿನ್-ಕಪಿಲ್ ದೇವ್ ಹಿಂದಿಕ್ಕಿ ಐತಿಹಾಸಿಕ‌ ಡಬಲ್ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

Sep 30, 2024 03:05 PM IST

ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ 4ನೇ ದಿನದಾಟದಲ್ಲಿ, ಟೀಮ್‌ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಇತಿಹಾಸ ಬರೆದಿದ್ದಾರೆ. ಖಲೀದ್ ಅಹ್ಮದ್ ಅವರನ್ನು ಔಟ್ ಮಾಡುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ 300 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಇದರೊಂದಿಗೆ ಅವರ ಬತ್ತಳಿಕೆಗೆ ಹಲವು ದಾಖಲೆಗಳು ನಿರ್ಮಾಣವಾಗಿವೆ.

  • ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ 4ನೇ ದಿನದಾಟದಲ್ಲಿ, ಟೀಮ್‌ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಇತಿಹಾಸ ಬರೆದಿದ್ದಾರೆ. ಖಲೀದ್ ಅಹ್ಮದ್ ಅವರನ್ನು ಔಟ್ ಮಾಡುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ 300 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ಇದರೊಂದಿಗೆ ಅವರ ಬತ್ತಳಿಕೆಗೆ ಹಲವು ದಾಖಲೆಗಳು ನಿರ್ಮಾಣವಾಗಿವೆ.
ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ 3000 ರನ್ ಮತ್ತು 300 ವಿಕೆಟ್‌ ಸಾಧನೆಯನ್ನು ಮಾಡಿದ ಭಾರತದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.
(1 / 6)
ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ 3000 ರನ್ ಮತ್ತು 300 ವಿಕೆಟ್‌ ಸಾಧನೆಯನ್ನು ಮಾಡಿದ ಭಾರತದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.(PTI)
3000 ರನ್ ಮತ್ತು 300 ವಿಕೆಟ್‌ ಸಾಧನೆ ಪಡೆದ ಭಾರತದ ಮೂರನೇ ಆಟಗಾರ ಜಡೇಜಾ. ಈ ಹಿಂದೆ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಮಾತ್ರ ಈ ಡಬಲ್‌ ಸಾಧನೆ ಮಾಡಿದ್ದಾರೆ. ಆದರೆ, ಈ ಇಬ್ಬರು ಅನುಭವಿ ಆಟಗಾರರಿಗಿಂತ ಜಡೇಜಾ ಕಡಿಮೆ ಪಂದ್ಯಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದಾರೆ.
(2 / 6)
3000 ರನ್ ಮತ್ತು 300 ವಿಕೆಟ್‌ ಸಾಧನೆ ಪಡೆದ ಭಾರತದ ಮೂರನೇ ಆಟಗಾರ ಜಡೇಜಾ. ಈ ಹಿಂದೆ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಮಾತ್ರ ಈ ಡಬಲ್‌ ಸಾಧನೆ ಮಾಡಿದ್ದಾರೆ. ಆದರೆ, ಈ ಇಬ್ಬರು ಅನುಭವಿ ಆಟಗಾರರಿಗಿಂತ ಜಡೇಜಾ ಕಡಿಮೆ ಪಂದ್ಯಗಳಲ್ಲಿ ಮೈಲಿಗಲ್ಲನ್ನು ತಲುಪಿದ್ದಾರೆ.(AP)
ಜಾಗತಿಕವಾಗಿ ಅತಿ ವೇಗವಾಗಿ 3000 ರನ್ ಮತ್ತು 300 ವಿಕೆಟ್‌ ಸಾಧನೆ ಮಾಡಿದ ಎರಡನೇ ಆಟಗಾರ ಜಡೇಜಾ. ಇಂಗ್ಲೆಂಡ್‌ನ ಶ್ರೇಷ್ಠ ಆಟಗಾರ ಇಯಾನ್ ಬೋಥಮ್ ಮೊದಲ ಸ್ಥಾನದಲ್ಲಿದ್ದಾರೆ. ಬೋಥಮ್ ಈ ಮೈಲುಗಲ್ಲನ್ನು ತಲುಪಲು ಕೇವಲ 72 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಜಡೇಜಾ ತಮ್ಮ 74ನೇ ಟೆಸ್ಟ್ ಪಂದ್ಯದಲ್ಲಿ ಹೆಗ್ಗುರುತನ್ನು ತಲುಪಿದ್ದಾರೆ.
(3 / 6)
ಜಾಗತಿಕವಾಗಿ ಅತಿ ವೇಗವಾಗಿ 3000 ರನ್ ಮತ್ತು 300 ವಿಕೆಟ್‌ ಸಾಧನೆ ಮಾಡಿದ ಎರಡನೇ ಆಟಗಾರ ಜಡೇಜಾ. ಇಂಗ್ಲೆಂಡ್‌ನ ಶ್ರೇಷ್ಠ ಆಟಗಾರ ಇಯಾನ್ ಬೋಥಮ್ ಮೊದಲ ಸ್ಥಾನದಲ್ಲಿದ್ದಾರೆ. ಬೋಥಮ್ ಈ ಮೈಲುಗಲ್ಲನ್ನು ತಲುಪಲು ಕೇವಲ 72 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಜಡೇಜಾ ತಮ್ಮ 74ನೇ ಟೆಸ್ಟ್ ಪಂದ್ಯದಲ್ಲಿ ಹೆಗ್ಗುರುತನ್ನು ತಲುಪಿದ್ದಾರೆ.(PTI)
300 ಟೆಸ್ಟ್ ವಿಕೆಟ್ ಪಡೆದ 7ನೇ ಭಾರತೀಯ ಬೌಲರ್ ಜಡೇಜಾ. ಇದಕ್ಕಾಗಿ ಅವರು 17428 ಎಸೆತಗಳನ್ನು ತೆಗೆದುಕೊಂಡರು. ಇದು ಎರಡನೇ ವೇಗದ ಗಳಿಕೆ. ಈಗಾಗಲೇ ರವಿಚಂದ್ರನ್ ಅಶ್ವಿನ್ ಕೇವಲ 15636 ಎಸೆತಗಳಲ್ಲಿ ಈ ಸಾಧನೆ ಮಾಡಿ ಭಾರತದ ಪರ ಅಗ್ರಸ್ಥಾನದಲ್ಲಿದ್ದಾರೆ.
(4 / 6)
300 ಟೆಸ್ಟ್ ವಿಕೆಟ್ ಪಡೆದ 7ನೇ ಭಾರತೀಯ ಬೌಲರ್ ಜಡೇಜಾ. ಇದಕ್ಕಾಗಿ ಅವರು 17428 ಎಸೆತಗಳನ್ನು ತೆಗೆದುಕೊಂಡರು. ಇದು ಎರಡನೇ ವೇಗದ ಗಳಿಕೆ. ಈಗಾಗಲೇ ರವಿಚಂದ್ರನ್ ಅಶ್ವಿನ್ ಕೇವಲ 15636 ಎಸೆತಗಳಲ್ಲಿ ಈ ಸಾಧನೆ ಮಾಡಿ ಭಾರತದ ಪರ ಅಗ್ರಸ್ಥಾನದಲ್ಲಿದ್ದಾರೆ.(PTI)
300 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಭಾರತೀಯ ಬೌಲರ್‌ಗಳ ಪೈಕಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಅವರು 619 ವಿಕೆಟ್‌ ಕಬಳಿಸಿದ್ದಾರೆ.
(5 / 6)
300 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಭಾರತೀಯ ಬೌಲರ್‌ಗಳ ಪೈಕಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಅವರು 619 ವಿಕೆಟ್‌ ಕಬಳಿಸಿದ್ದಾರೆ.(PTI)
ನಂತರದ ಸ್ಥಾನಗಳಲ್ಲಿ ಆರ್ ಅಶ್ವಿನ್ (524), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311) ಮತ್ತು ಜಹೀರ್ ಖಾನ್ (311) ಇದ್ದಾರೆ.
(6 / 6)
ನಂತರದ ಸ್ಥಾನಗಳಲ್ಲಿ ಆರ್ ಅಶ್ವಿನ್ (524), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311) ಮತ್ತು ಜಹೀರ್ ಖಾನ್ (311) ಇದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು