logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rohit-kohli: ಮೊದಲ ಟೆಸ್ಟ್​ನ​ 2ನೇ ದಿನದಲ್ಲಿ ದಾಖಲಾದವು ಹಲವು ದಾಖಲೆಗಳು; ವಿಶೇಷ ಮೈಲಿಗಲ್ಲು ನೆಟ್ಟಿದ ರೋಹಿತ್​, ವಿರಾಟ್ ಕೊಹ್ಲಿ

Rohit-Kohli: ಮೊದಲ ಟೆಸ್ಟ್​ನ​ 2ನೇ ದಿನದಲ್ಲಿ ದಾಖಲಾದವು ಹಲವು ದಾಖಲೆಗಳು; ವಿಶೇಷ ಮೈಲಿಗಲ್ಲು ನೆಟ್ಟಿದ ರೋಹಿತ್​, ವಿರಾಟ್ ಕೊಹ್ಲಿ

Jan 09, 2024 07:51 PM IST

India vs West Indies Test Day 2 highlights: ರೋಹಿತ್​ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್​ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ವಿಂಡೀಸ್​ ಎದುರಿನ ಮೊದಲ ಟೆಸ್ಟ್​​ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ 312 ರನ್​ ಗಳಿಸಿದೆ. ಜೊತೆಗೆ 162 ರನ್​ಗಳ ಮುನ್ನಡೆಯೂ ಪಡೆದಿದೆ. ಈ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿಯನ್ನು ಒಮ್ಮೆ ನೋಡೋಣ.

ಟೀಮ್​ ಇಂಡಿಯಾ ಭರ್ಜರಿ ಆಟವಾಡುತ್ತಿದೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದೆ. ಡೊಮಿನಿಕಾದ ವಿಂಡ್ಸನ್​ ಪಾರ್ಕ್​​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ನ ಎರಡನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್​ ಶರ್ಮಾ ಅವರ ಭರ್ಜರಿ ಶತಕದಿಂದ ಭಾರವು ಕೆರಿಬಿಯನ್ನರ ವಿರುದ್ಧ ಮೇಲುಗೈ ಸಾಧಿಸಿದೆ.
(1 / 11)
ಟೀಮ್​ ಇಂಡಿಯಾ ಭರ್ಜರಿ ಆಟವಾಡುತ್ತಿದೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದೆ. ಡೊಮಿನಿಕಾದ ವಿಂಡ್ಸನ್​ ಪಾರ್ಕ್​​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ನ ಎರಡನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್​ ಶರ್ಮಾ ಅವರ ಭರ್ಜರಿ ಶತಕದಿಂದ ಭಾರವು ಕೆರಿಬಿಯನ್ನರ ವಿರುದ್ಧ ಮೇಲುಗೈ ಸಾಧಿಸಿದೆ.(BCCI Twitter)
ಆರಂಭಿಕರು ಉತ್ತಮ ಜೊತೆಯಾಟದೊಂದಿಗೆ ಭಾರತ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆ ಇದೆ. ಸದ್ಯ ರೋಹಿತ್​ ಶರ್ಮಾ ಅವರು 221 ಎಸೆತಗಳನ್ನು ಎದುರಿ 103 ರನ್​ ಸಿಡಿಸಿದ್ದಾರೆ. ಶತಕ ಸಿಡಿಸಿ ಔಟಾಗಿರುವ ರೋಹಿತ್​ ಶರ್ಮಾ ಕೆರಿಬಿಯನ್ನರ ನಾಡಿನಲ್ಲಿ ನೂತನ ಬರೆದಿದ್ದಾರೆ.  
(2 / 11)
ಆರಂಭಿಕರು ಉತ್ತಮ ಜೊತೆಯಾಟದೊಂದಿಗೆ ಭಾರತ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆ ಇದೆ. ಸದ್ಯ ರೋಹಿತ್​ ಶರ್ಮಾ ಅವರು 221 ಎಸೆತಗಳನ್ನು ಎದುರಿ 103 ರನ್​ ಸಿಡಿಸಿದ್ದಾರೆ. ಶತಕ ಸಿಡಿಸಿ ಔಟಾಗಿರುವ ರೋಹಿತ್​ ಶರ್ಮಾ ಕೆರಿಬಿಯನ್ನರ ನಾಡಿನಲ್ಲಿ ನೂತನ ಬರೆದಿದ್ದಾರೆ.  (AFP)
ವೆಸ್ಟ್​ ಇಂಡೀಸ್ ವಿರುದ್ಧ ಶತಕ ಸಿಡಿಸಿದ ರೋಹಿತ್​ಗೆ, ಕೆರಿಬಿಯನ್​ ನಾಡಲ್ಲಿ ಇದು ಅವರ ಮೊದಲ ಶತಕ ಎಂಬುದು ವಿಶೇಷ. ಈ ವರ್ಷದಲ್ಲಿ ಇದು ಎರಡನೇ ಶತಕ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಮೂರಂಕಿ ದಾಟಿದ್ದರು.
(3 / 11)
ವೆಸ್ಟ್​ ಇಂಡೀಸ್ ವಿರುದ್ಧ ಶತಕ ಸಿಡಿಸಿದ ರೋಹಿತ್​ಗೆ, ಕೆರಿಬಿಯನ್​ ನಾಡಲ್ಲಿ ಇದು ಅವರ ಮೊದಲ ಶತಕ ಎಂಬುದು ವಿಶೇಷ. ಈ ವರ್ಷದಲ್ಲಿ ಇದು ಎರಡನೇ ಶತಕ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಮೂರಂಕಿ ದಾಟಿದ್ದರು.(AP)
ಹಲವು ದಾಖಲೆ ಬರೆದ ರೋಹಿತ್​ಗೆ ಈ ಶತಕವು ತುಂಬಾ ವಿಶೇಷ. ಇದು ಅವರ ಪಾಲಿಗೆ ವಿದೇಶಿ ನೆಲದಲ್ಲಿ 2ನೇ ಟೆಸ್ಟ್​ ಶತಕವಾಗಿದೆ. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತದ ಪರ ಹೆಚ್ಚು (7) ಶತಕ ದಾಖಲಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಿಟ್​ಮ್ಯಾನ್.
(4 / 11)

ಹಾಗೆಯೇ ಓಪನರ್​ ಆಗಿಯೇ ಈ ಏಳೂ ಶತಕಗಳನ್ನು ಬಾರಿಸಿರುವುದು ವಿಶೇಷ. ಜೊತೆಗೆ ಓಪನರ್​ ಆಗಿ ವಿದೇಶಿ ನೆಲದಲ್ಲಿ ಎಲ್ಲಾ ಮಾದರಿಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯೂ ರೋಹಿತ್​ ಹೆಸರಿಗೆ ದಾಖಲಾಗಿದೆ.
(5 / 11)
ಹಾಗೆಯೇ ಓಪನರ್​ ಆಗಿಯೇ ಈ ಏಳೂ ಶತಕಗಳನ್ನು ಬಾರಿಸಿರುವುದು ವಿಶೇಷ. ಜೊತೆಗೆ ಓಪನರ್​ ಆಗಿ ವಿದೇಶಿ ನೆಲದಲ್ಲಿ ಎಲ್ಲಾ ಮಾದರಿಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯೂ ರೋಹಿತ್​ ಹೆಸರಿಗೆ ದಾಖಲಾಗಿದೆ.
ರೋಹಿತ್​ ಶರ್ಮಾ 2013ರಲ್ಲಿ ಅಂದರೆ 10 ವರ್ಷಗಳ ಹಿಂದೆ ವೆಸ್ಟ್​ ಇಂಡೀಸ್​ ವಿರುದ್ಧವೇ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅದೇ ಸರಣಿಯ 2ನೇ ಪಂದ್ಯದಲ್ಲೂ ಹಿಟ್​​ಮ್ಯಾನ್ 100 ದಾಟಿದ್ದರು. ಈಗ 10 ವರ್ಷಗಳ ನಂತರ ಮತ್ತೊಮ್ಮೆ ವಿಂಡೀಸ್​ ವಿರುದ್ಧವೇ ಮೂರಂಕಿ ದಾಟಿದ್ದಾರೆ. ಇದು 10 ವರ್ಷಗಳಲ್ಲಿ 10ನೇ ಟೆಸ್ಟ್​ ಶತಕವಾಗಿದೆ.
(6 / 11)

ರೋಹಿತ್​ ಶರ್ಮಾ ಆರಂಭಿಕನಾಗಿ ಅತಿಹೆಚ್ಚು ಬಾರಿ 50ಕ್ಕೂ ಅಧಿಕ ರನ್​ ಗಳಿಸಿದ ಭಾರತದ 2ನೇ ಆಟಗಾರ ಎನಿಸಿದ್ದಾರೆ. ಆ ಮೂಲಕ ಸುನಿಲ್ ಗವಾಸ್ಕರ್​ ದಾಖಲೆಯ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.  ಓಪನರ್​ ಆಗಿ 308 ಇನ್ನಿಂಗ್ಸ್​ಗಳಲ್ಲಿ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಸಚಿನ್​, 342 ಇನ್ನಿಂಗ್ಸ್​ಗಳಲ್ಲಿ 120 ಬಾರಿ, ಗವಾಸ್ಕರ್ 286 ಇನ್ನಿಂಗ್ಸ್​​ಗಳಲ್ಲಿ 101 ಸಲ, ನಾಲ್ಕನೇ ಸ್ಥಾನದಲ್ಲಿರುವ ಸೆಹ್ವಾಗ್ 388 ಇನ್ನಿಂಗ್ಸ್​ಗಳಲ್ಲಿ 101 ಸಲ 50ಕ್ಕೂ ರನ್​ ಗಳಿಸಿದ್ದಾರೆ.
(7 / 11)
ರೋಹಿತ್​ ಶರ್ಮಾ ಆರಂಭಿಕನಾಗಿ ಅತಿಹೆಚ್ಚು ಬಾರಿ 50ಕ್ಕೂ ಅಧಿಕ ರನ್​ ಗಳಿಸಿದ ಭಾರತದ 2ನೇ ಆಟಗಾರ ಎನಿಸಿದ್ದಾರೆ. ಆ ಮೂಲಕ ಸುನಿಲ್ ಗವಾಸ್ಕರ್​ ದಾಖಲೆಯ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.  ಓಪನರ್​ ಆಗಿ 308 ಇನ್ನಿಂಗ್ಸ್​ಗಳಲ್ಲಿ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಸಚಿನ್​, 342 ಇನ್ನಿಂಗ್ಸ್​ಗಳಲ್ಲಿ 120 ಬಾರಿ, ಗವಾಸ್ಕರ್ 286 ಇನ್ನಿಂಗ್ಸ್​​ಗಳಲ್ಲಿ 101 ಸಲ, ನಾಲ್ಕನೇ ಸ್ಥಾನದಲ್ಲಿರುವ ಸೆಹ್ವಾಗ್ 388 ಇನ್ನಿಂಗ್ಸ್​ಗಳಲ್ಲಿ 101 ಸಲ 50ಕ್ಕೂ ರನ್​ ಗಳಿಸಿದ್ದಾರೆ.(AP)
ಆರಂಭಿಕರಿಬ್ಬರ ಅದ್ಭುತ ಆಟದ ಬಳಿಕ ಉತ್ತಮ ಆರಂಭ ಪಡೆದಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಅಜೇಯ 36 ರನ್​ ಗಳಿಸಿ ಮಹತ್ವದ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಅಲ್ಲದೆ, ಸೆಹ್ವಾಗ್​ ದಾಖಲೆಯನ್ನೂ ಮುರಿದಿದ್ದಾರೆ.
(8 / 11)
ಆರಂಭಿಕರಿಬ್ಬರ ಅದ್ಭುತ ಆಟದ ಬಳಿಕ ಉತ್ತಮ ಆರಂಭ ಪಡೆದಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಅಜೇಯ 36 ರನ್​ ಗಳಿಸಿ ಮಹತ್ವದ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಅಲ್ಲದೆ, ಸೆಹ್ವಾಗ್​ ದಾಖಲೆಯನ್ನೂ ಮುರಿದಿದ್ದಾರೆ.(AFP)
ಜೈಸ್ವಾಲ್​ ಜೊತೆ ಸೇರಿ ಅರ್ಧಶತಕದ ಜೊತೆಯಾಟವಾಡಿರುವ ಕೊಹ್ಲಿ, ರಿಸ್ಕ್ ತೆಗೆದುಕೊಳ್ಳದೆ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರು. ಶಾಂತವಾಗಿ ಬ್ಯಾಟ್​ ಬೀಸುತ್ತಲ್ಲೇ ವಿರಾಟ್, ವಿಶೇಷ ದಾಖಲೆಯೊಂದನ್ನು ಉಡೀಸ್​ ಮಾಡಿದ್ದಾರೆ. ಈ ಇನ್ನಿಂಗ್ಸ್​ನಲ್ಲಿ ಕೊಹ್ಲಿ, ತಮ್ಮ 81ನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದು ವಿಶೇಷ.
(9 / 11)

21ರನ್​ ಗಳಿಸಿದ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8500 ರನ್‌ ಪೂರೈಸಿದರು. ನಂತರ ಕೊಹ್ಲಿ ಬ್ಯಾಟ್​ನಿಂದ 25ನೇ ರನ್ ಹೊರಬಿದ್ದ ಬೆನ್ನಲ್ಲೇ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರ ದಾಖಲೆಯನ್ನು ಹಿಂದಿಕ್ಕಿದರು.
(10 / 11)
21ರನ್​ ಗಳಿಸಿದ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8500 ರನ್‌ ಪೂರೈಸಿದರು. ನಂತರ ಕೊಹ್ಲಿ ಬ್ಯಾಟ್​ನಿಂದ 25ನೇ ರನ್ ಹೊರಬಿದ್ದ ಬೆನ್ನಲ್ಲೇ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರ ದಾಖಲೆಯನ್ನು ಹಿಂದಿಕ್ಕಿದರು.
ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನಲ್ಲಿ 8503 ರನ್ ಗಳಿಸಿದ್ದಾರೆ. ಇದೀಗ ಈ ದಾಖಲೆ ಮುರಿಯುವ ಮೂಲಕ ಕೊಹ್ಲಿ, ಭಾರತದ ಪರ ಹೆಚ್ಚು ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
(11 / 11)
ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನಲ್ಲಿ 8503 ರನ್ ಗಳಿಸಿದ್ದಾರೆ. ಇದೀಗ ಈ ದಾಖಲೆ ಮುರಿಯುವ ಮೂಲಕ ಕೊಹ್ಲಿ, ಭಾರತದ ಪರ ಹೆಚ್ಚು ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು