logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಕದಿನ ಬ್ಯಾಟಿಂಗ್ ಶ್ರೇಯಾಂಕ; ಅಗ್ರ 10ರೊಳಗೆ ಸ್ಥಾನ ಪಡೆದ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್

ಏಕದಿನ ಬ್ಯಾಟಿಂಗ್ ಶ್ರೇಯಾಂಕ; ಅಗ್ರ 10ರೊಳಗೆ ಸ್ಥಾನ ಪಡೆದ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್‌ ಕೌರ್

Jun 25, 2024 07:26 PM IST

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಸ್ಮೃತಿ ಮಂಧಾನ ಹಾಗೂ ಹರ್ಮನ್‌ಪ್ರೀತ್‌ ಕೌರ್, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 2 ಶತಕ ಸಹಿತ 300ಕ್ಕೂ ಅಧಿಕ ರನ್‌ ಗಳಿಸಿದ ಸ್ಮೃತಿ, ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕಿ ಕೌರ್ ಎರಡು ಸ್ಥಾನ ಮೇಲಕ್ಕೇರಿ 9ನೇ ಸ್ಥಾನಕ್ಕೇರಿದ್ದಾರೆ.

  • ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಸ್ಮೃತಿ ಮಂಧಾನ ಹಾಗೂ ಹರ್ಮನ್‌ಪ್ರೀತ್‌ ಕೌರ್, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 2 ಶತಕ ಸಹಿತ 300ಕ್ಕೂ ಅಧಿಕ ರನ್‌ ಗಳಿಸಿದ ಸ್ಮೃತಿ, ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕಿ ಕೌರ್ ಎರಡು ಸ್ಥಾನ ಮೇಲಕ್ಕೇರಿ 9ನೇ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮಂಧನಾ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 343 ರನ್ ಗಳಿಸಿದರು. ಆ ಮೂಲಕ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ.
(1 / 6)
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮಂಧನಾ ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 343 ರನ್ ಗಳಿಸಿದರು. ಆ ಮೂಲಕ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ.(PTI)
ಮಂಧಾನ 738 ರೇಟಿಂಗ್ ಪಾಯಿಂಟ್ ಗಳಿಸಿದರೆ, ಕೌರ್ 648 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.
(2 / 6)
ಮಂಧಾನ 738 ರೇಟಿಂಗ್ ಪಾಯಿಂಟ್ ಗಳಿಸಿದರೆ, ಕೌರ್ 648 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.(BCCI Women-X)
ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಕೂಡಾ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಆ ಮೂಲಕ ಮೂರು ಸ್ಥಾನ ಜಿಗಿದು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಸದ್ಯ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್‌ ತಂಡದ ನ್ಯಾಟ್ ಸಿವರ್-ಬ್ರಂಟ್ ಅವರಿಗಿಂತ ಕೇವಲ 16 ರೇಟಿಂಗ್ ಪಾಯಿಂಟ್‌ಗಳಿಂದ ಹಿಂದಿದ್ದಾರೆ.
(3 / 6)
ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಕೂಡಾ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಆ ಮೂಲಕ ಮೂರು ಸ್ಥಾನ ಜಿಗಿದು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಸದ್ಯ ನಂ.1 ಸ್ಥಾನದಲ್ಲಿರುವ ಇಂಗ್ಲೆಂಡ್‌ ತಂಡದ ನ್ಯಾಟ್ ಸಿವರ್-ಬ್ರಂಟ್ ಅವರಿಗಿಂತ ಕೇವಲ 16 ರೇಟಿಂಗ್ ಪಾಯಿಂಟ್‌ಗಳಿಂದ ಹಿಂದಿದ್ದಾರೆ.(PTI)
ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 0-3 ಅಂತರದಿಂದ ಸೋತಿತು. ಆದರೆ ವೊಲ್ವಾರ್ಡ್ಟ್ ಮಾತ್ರ ಅಬ್ಬರಿಸಿದರು. ಬೆಂಗಳೂರಿನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ 135 ರನ್ ಗಳಿಸಿ ಮಿಂಚಿದರು. ಸರಣಿಯ ಅಂತಿಮ ಪಂದ್ಯದಲ್ಲಿ 65 ರನ್ ಗಳಿಸಿದರು.
(4 / 6)
ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 0-3 ಅಂತರದಿಂದ ಸೋತಿತು. ಆದರೆ ವೊಲ್ವಾರ್ಡ್ಟ್ ಮಾತ್ರ ಅಬ್ಬರಿಸಿದರು. ಬೆಂಗಳೂರಿನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ 135 ರನ್ ಗಳಿಸಿ ಮಿಂಚಿದರು. ಸರಣಿಯ ಅಂತಿಮ ಪಂದ್ಯದಲ್ಲಿ 65 ರನ್ ಗಳಿಸಿದರು.(PTI)
ದಕ್ಷಿಣ ಆಫ್ರಿಕಾ ಆಲ್‌ರೌಂಡರ್‌ ಮಾರಿಜಾನೆ ಕಾಪ್ ಈ ಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನದಲ್ಲಿದ್ದಾರೆ. ಅವರು ಸರಣಿಯಲ್ಲಿ ಒಂದು ಶತಕ ಸಿಡಿಸಿದರು.
(5 / 6)
ದಕ್ಷಿಣ ಆಫ್ರಿಕಾ ಆಲ್‌ರೌಂಡರ್‌ ಮಾರಿಜಾನೆ ಕಾಪ್ ಈ ಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಿ ಏಳನೇ ಸ್ಥಾನದಲ್ಲಿದ್ದಾರೆ. ಅವರು ಸರಣಿಯಲ್ಲಿ ಒಂದು ಶತಕ ಸಿಡಿಸಿದರು.(PTI)
ಭಾರತದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ನಾಲ್ಕು ಸ್ಥಾನ ಮೇಲೇರಿ 29ನೇ ಸ್ಥಾನ ಪಡೆದಿದ್ದಾರೆ.
(6 / 6)
ಭಾರತದ ಬ್ಯಾಟರ್ ಜೆಮಿಮಾ ರೊಡ್ರಿಗಸ್ ನಾಲ್ಕು ಸ್ಥಾನ ಮೇಲೇರಿ 29ನೇ ಸ್ಥಾನ ಪಡೆದಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು