logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶತಕ ವಂಚಿತರಾದರೂ ಹರ್ಮನ್​ಪ್ರೀತ್​ ಕೌರ್​ ದಾಖಲೆಯನ್ನು ಪುಡಿಗಟ್ಟಿದ ಸ್ಮೃತಿ ಮಂಧಾನ

ಶತಕ ವಂಚಿತರಾದರೂ ಹರ್ಮನ್​ಪ್ರೀತ್​ ಕೌರ್​ ದಾಖಲೆಯನ್ನು ಪುಡಿಗಟ್ಟಿದ ಸ್ಮೃತಿ ಮಂಧಾನ

Jun 24, 2024 09:25 AM IST

Smriti Mandhana Record: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧಾನ ಅವರು ಟೀಮ್ ಇಂಡಿಯಾ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಭಾರತೀಯ ಮಹಿಳಾ ತಂಡ ಭರ್ಜರಿ 6 ವಿಕೆಟ್​​​ಗಳ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ವೈಟ್​ವಾಶ್ ಮಾಡಿಕೊಂಡಿತು.
(1 / 6)

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿತು. ಭಾರತ ಈ ಗುರಿಯನ್ನು 40.4 ಓವರ್​ಗಳಲ್ಲೇ ಗೆದ್ದು ಬೀಗಿತು.
(2 / 6)

ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ (117, 136) ಸ್ಮೃತಿ ಮಂಧಾನ ಈ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಔಟಾದರು. ಇದರೊಂದಿಗೆ ಹ್ಯಾಟ್ರಿಕ್ ಶತಕ ಮಿಸ್ ಮಾಡಿಕೊಂಡರು.
(3 / 6)

ಶತಕವನ್ನು ತಪ್ಪಿಸಿಕೊಂಡರೂ ಟೀಮ್ ಇಂಡಿಯಾ ಪರ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಹಾಕಿಕೊಂಡಿದ್ದಾರೆ. ಅಲ್ಲದೆ, ಏಕದಿನ ಕ್ರಿಕೆಟ್​ನಲ್ಲಿ ನಾಯಕಿ ಹರ್ಮನ್​ಪ್ರೀತ್​ ಕೌರ್ ಅವರನ್ನು ಸ್ಮೃತಿ ಮಂಧಾನ ಅವರು ಹಿಂದಿಕ್ಕಿದ್ದಾರೆ.
(4 / 6)

ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಹರ್ಮನ್​ಪ್ರೀತ್ ಅವರ ದಾಖಲೆಯನ್ನು ಬ್ರೇಕ್ ಮಾಡಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 
(5 / 6)

ಭಾರತದ ಪರ ಅತಿ ಹೆಚ್ಚು ಒಡಿಐ ರನ್ ಗಳಿಸಿದ ಆಟಗಾರ್ತಿಯರ ಪೈಕಿ ಮಿಥಾಲಿ ರಾಜ್ ಅಗ್ರಸ್ಥಾನದಲ್ಲಿದ್ದಾರೆ. ಮಿಥಾಲಿ 7805 ರನ್ ಗಳಿಸಿದ್ದರೆ, ಸ್ಮೃತಿ ಮಂಧಾನ 3585 ರನ್ ಸಿಡಿಸಿದ್ದಾರೆ. ಹರ್ಮನ್​​​ 3565 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು