logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉತ್ತಮ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆಯದ ನತದೃಷ್ಟ ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ಉತ್ತಮ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆಯದ ನತದೃಷ್ಟ ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Apr 30, 2024 07:55 PM IST

T20 World Cup 2024 : ಭಾರತ ತಂಡದಲ್ಲಿ ಸಾಮರ್ಥ್ಯ ಸಾಬೀತು ಮಾಡಿದವರು ಮತ್ತು ಐಪಿಎಲ್​ನಲ್ಲಿ ಅಬ್ಬರಿಸುತ್ತಿರುವ ಆಟಗಾರರು ಮುಂಬರುವ ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.

  • T20 World Cup 2024 : ಭಾರತ ತಂಡದಲ್ಲಿ ಸಾಮರ್ಥ್ಯ ಸಾಬೀತು ಮಾಡಿದವರು ಮತ್ತು ಐಪಿಎಲ್​ನಲ್ಲಿ ಅಬ್ಬರಿಸುತ್ತಿರುವ ಆಟಗಾರರು ಮುಂಬರುವ ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.
2024 ಟಿ20 ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಚ್ಚರಿಯಂತೆ ಅವರನ್ನು ಕೈಬಿಡಲಾಗಿದೆ. ಪ್ರಸಕ್ತ ಐಪಿಎಲ್​ನಲ್ಲಿ 9 ಪಂದ್ಯಗಳಲ್ಲಿ 378 ರನ್ ಗಳಿಸುವ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ ನಂತರವೂ ನಿರಾಶೆಗೊಂಡಿದ್ದಾರೆ. 9 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಲೀಗ್ ಟೇಬಲ್​​ನಲ್ಲಿ 5ನೇ ಸ್ಥಾನದಲ್ಲಿದ್ದರೂ ಲಕ್ನೋ ನಾಯಕ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
(1 / 12)
2024 ಟಿ20 ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಚ್ಚರಿಯಂತೆ ಅವರನ್ನು ಕೈಬಿಡಲಾಗಿದೆ. ಪ್ರಸಕ್ತ ಐಪಿಎಲ್​ನಲ್ಲಿ 9 ಪಂದ್ಯಗಳಲ್ಲಿ 378 ರನ್ ಗಳಿಸುವ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ ನಂತರವೂ ನಿರಾಶೆಗೊಂಡಿದ್ದಾರೆ. 9 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಲೀಗ್ ಟೇಬಲ್​​ನಲ್ಲಿ 5ನೇ ಸ್ಥಾನದಲ್ಲಿದ್ದರೂ ಲಕ್ನೋ ನಾಯಕ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.(AFP)
ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಭಾರತದ ಮುಖ್ಯ ತಂಡದಲ್ಲಿ ರಿಂಕು ಸಿಂಗ್ ಅವರ ಹೆಸರು ಇಲ್ಲದಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ರಾಷ್ಟ್ರೀಯ ತಂಡ, ರಾಜ್ಯ ತಂಡ ಮತ್ತು ಐಪಿಎಲ್​ನಲ್ಲಿ ಕೆಕೆಆರ್​ ಪರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಆದರೂ, ರಿಂಕು ಸಿಂಗ್ ಅವರ ಹೆಸರು ಮುಖ್ಯ ತಂಡದಲ್ಲಿಲ್ಲ ಎಂದು ಅನೇಕರು ಆಶ್ಚರ್ಯಪಟ್ಟರು. ಅದಕ್ಕೆ ಕಾರಣ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸದೇ ಇರುವುದು.
(2 / 12)
ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಭಾರತದ ಮುಖ್ಯ ತಂಡದಲ್ಲಿ ರಿಂಕು ಸಿಂಗ್ ಅವರ ಹೆಸರು ಇಲ್ಲದಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ರಾಷ್ಟ್ರೀಯ ತಂಡ, ರಾಜ್ಯ ತಂಡ ಮತ್ತು ಐಪಿಎಲ್​ನಲ್ಲಿ ಕೆಕೆಆರ್​ ಪರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಆದರೂ, ರಿಂಕು ಸಿಂಗ್ ಅವರ ಹೆಸರು ಮುಖ್ಯ ತಂಡದಲ್ಲಿಲ್ಲ ಎಂದು ಅನೇಕರು ಆಶ್ಚರ್ಯಪಟ್ಟರು. ಅದಕ್ಕೆ ಕಾರಣ ಈ ಬಾರಿಯ ಐಪಿಎಲ್​ನಲ್ಲಿ ಅಬ್ಬರಿಸದೇ ಇರುವುದು.(PTI)
ಅತ್ಯಂತ ಆಶ್ಚರ್ಯಕರ ವಿಷಯವೆಂದರೆ, ಋತುರಾಜ್ ಗಾಯಕ್ವಾಡ್ ಅವರ ಅನುಪಸ್ಥಿತಿ. ಐಪಿಎಲ್​ನಲ್ಲಿ 9 ಪಂದ್ಯಗಳಲ್ಲಿ 447 ರನ್ ಗಳಿಸಿರುವ ಋತುರಾಜ್, ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ತಂಡದಲ್ಲಿ ಹೆಸರೇ ಇಲ್ಲದಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ. ಉತ್ತಮ ಫಾರ್ಮ್​​ನಲ್ಲಿದ್ದರೂ ಋತುರಾಜ್​ರನ್ನು ಹೊರಗಿಡಲು ಕಾರಣ ಏನೆಂಬುದೇ ಗೊತ್ತಾಗುತ್ತಿಲ್ಲ.
(3 / 12)
ಅತ್ಯಂತ ಆಶ್ಚರ್ಯಕರ ವಿಷಯವೆಂದರೆ, ಋತುರಾಜ್ ಗಾಯಕ್ವಾಡ್ ಅವರ ಅನುಪಸ್ಥಿತಿ. ಐಪಿಎಲ್​ನಲ್ಲಿ 9 ಪಂದ್ಯಗಳಲ್ಲಿ 447 ರನ್ ಗಳಿಸಿರುವ ಋತುರಾಜ್, ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ತಂಡದಲ್ಲಿ ಹೆಸರೇ ಇಲ್ಲದಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ. ಉತ್ತಮ ಫಾರ್ಮ್​​ನಲ್ಲಿದ್ದರೂ ಋತುರಾಜ್​ರನ್ನು ಹೊರಗಿಡಲು ಕಾರಣ ಏನೆಂಬುದೇ ಗೊತ್ತಾಗುತ್ತಿಲ್ಲ.(AFP)
ಸಾಯಿ ಸುದರ್ಶನ್ ಪರವಾಗಿ ಅನೇಕರು ಧ್ವನಿ ಎತ್ತಿದ್ದರು. ಈ ವರ್ಷದ ವಿಶ್ವಕಪ್ ತಂಡದಲ್ಲಿ ಸುದರ್ಶನ್ ಸ್ಥಾನ ಪಡೆಯಬೇಕು ಎಂದು ಅನೇಕ ತಜ್ಞರು ಹೇಳಿದ್ದಾರೆ. ಆದರೆ ಗುಜರಾತ್ ಪರ 10 ಪಂದ್ಯಗಳಲ್ಲಿ 418 ರನ್ ಗಳಿಸಿ ಆರೆಂಜ್ ಕ್ಯಾಪ್​ ಸ್ಪರ್ಧೆಗಿಳಿದಿರುವ ಸಾಯಿ, ಟಿ20 ವಿಶ್ವಕಪ್​ ತಂಡದಲ್ಲಿ ಅವಕಾಶ ಪಡೆಯದಿರುವುಕ್ಕೆ ಅನೇಕರಿಗೆ ನಿರಾಸೆಯಾಗಿದೆ.
(4 / 12)
ಸಾಯಿ ಸುದರ್ಶನ್ ಪರವಾಗಿ ಅನೇಕರು ಧ್ವನಿ ಎತ್ತಿದ್ದರು. ಈ ವರ್ಷದ ವಿಶ್ವಕಪ್ ತಂಡದಲ್ಲಿ ಸುದರ್ಶನ್ ಸ್ಥಾನ ಪಡೆಯಬೇಕು ಎಂದು ಅನೇಕ ತಜ್ಞರು ಹೇಳಿದ್ದಾರೆ. ಆದರೆ ಗುಜರಾತ್ ಪರ 10 ಪಂದ್ಯಗಳಲ್ಲಿ 418 ರನ್ ಗಳಿಸಿ ಆರೆಂಜ್ ಕ್ಯಾಪ್​ ಸ್ಪರ್ಧೆಗಿಳಿದಿರುವ ಸಾಯಿ, ಟಿ20 ವಿಶ್ವಕಪ್​ ತಂಡದಲ್ಲಿ ಅವಕಾಶ ಪಡೆಯದಿರುವುಕ್ಕೆ ಅನೇಕರಿಗೆ ನಿರಾಸೆಯಾಗಿದೆ.(AFP)
ರಿಯಾನ್ ಪರಾಗ್ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ಐಪಿಎಲ್ ಮತ್ತು ರಣಜಿ ಟ್ರೋಫಿಯಲ್ಲಿ ಅವರು ಪ್ರದರ್ಶನ ನೀಡಿದ ರೀತಿ ಎಲ್ಲರನ್ನೂ ದಂಗುಬಡಿಸಿತ್ತು. ಹಾಗಾಗಿ ರಿಯಾನ್ ಈ ಬಾರಿ ಭಾರತೀಯ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಪರಾಗ್ ಈ ಬಾರಿಯೂ ನಿರಾಶೆಗೊಂಡರು.
(5 / 12)
ರಿಯಾನ್ ಪರಾಗ್ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ಐಪಿಎಲ್ ಮತ್ತು ರಣಜಿ ಟ್ರೋಫಿಯಲ್ಲಿ ಅವರು ಪ್ರದರ್ಶನ ನೀಡಿದ ರೀತಿ ಎಲ್ಲರನ್ನೂ ದಂಗುಬಡಿಸಿತ್ತು. ಹಾಗಾಗಿ ರಿಯಾನ್ ಈ ಬಾರಿ ಭಾರತೀಯ ತಂಡದಲ್ಲಿ ಅವಕಾಶ ಪಡೆಯಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಪರಾಗ್ ಈ ಬಾರಿಯೂ ನಿರಾಶೆಗೊಂಡರು.(AFP)
ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು ಭಾರತ ತಂಡದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ನಂತರ ಇದ್ದಕ್ಕಿದ್ದಂತೆ ತಮ್ಮ ಸ್ಥಾನವನ್ನು ಕಳೆದುಕೊಂಡರು. ರಣಜಿ ಟ್ರೋಫಿ ಮತ್ತು ಐಪಿಎಲ್​ನಲ್ಲಿ ಅವರು ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ, ಅಯ್ಯರ್ ದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ.
(6 / 12)
ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು ಭಾರತ ತಂಡದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ನಂತರ ಇದ್ದಕ್ಕಿದ್ದಂತೆ ತಮ್ಮ ಸ್ಥಾನವನ್ನು ಕಳೆದುಕೊಂಡರು. ರಣಜಿ ಟ್ರೋಫಿ ಮತ್ತು ಐಪಿಎಲ್​ನಲ್ಲಿ ಅವರು ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ, ಅಯ್ಯರ್ ದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ.(AFP)
ಮುಂಬರುವ ಟಿ20 ವಿಶ್ವಕಪ್​​​ನಲ್ಲಿ ಪಿಚ್​​ಗಳು ನಿಧಾನವಾಗಿರಬಹುದು ಎಂದು ತಜ್ಞರು ಪದೇ ಪದೇ ಹೇಳಿದ್ದಾರೆ, ಹಾಗಾಗಿ ಐಪಿಎಲ್​ನಲ್ಲಿ ಜಸ್ಪ್ರೀತ್ ಬುಮ್ರಾ ನಂತರ ಅತ್ಯಂತ ಯಶಸ್ವಿ ಬೌಲರ್​ ಎನಿಸಿಕೊಂಡ ಹರ್ಷಲ್ ಪಟೇಲ್​ಗೂ ಅವಕಾಶ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಬುಮ್ರಾ ಅವರಂತೆ 9 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ನಿರಾಸೆಯಾಗಿದೆ.
(7 / 12)
ಮುಂಬರುವ ಟಿ20 ವಿಶ್ವಕಪ್​​​ನಲ್ಲಿ ಪಿಚ್​​ಗಳು ನಿಧಾನವಾಗಿರಬಹುದು ಎಂದು ತಜ್ಞರು ಪದೇ ಪದೇ ಹೇಳಿದ್ದಾರೆ, ಹಾಗಾಗಿ ಐಪಿಎಲ್​ನಲ್ಲಿ ಜಸ್ಪ್ರೀತ್ ಬುಮ್ರಾ ನಂತರ ಅತ್ಯಂತ ಯಶಸ್ವಿ ಬೌಲರ್​ ಎನಿಸಿಕೊಂಡ ಹರ್ಷಲ್ ಪಟೇಲ್​ಗೂ ಅವಕಾಶ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಬುಮ್ರಾ ಅವರಂತೆ 9 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ನಿರಾಸೆಯಾಗಿದೆ.(PTI)
ಆಕಾಶ್ ಚೋಪ್ರಾ ಸೇರಿದಂತೆ ಅನೇಕ ತಜ್ಞರು ಟಿ20 ವಿಶ್ವಕಪ್ ತಂಡಗಳನ್ನು ರಚಿಸುವಾಗ ಟಿ ನಟರಾಜನ್ ಅವರಿಗೂ ಅವಕಾಶ ನೀಡಬೇಕೆಂದು ಕೋರಿದ್ದರು. ಐಪಿಎಲ್​ನಲ್ಲಿ ನಟ್ಟು ಏಳು ಪಂದ್ಯಗಳಲ್ಲಿ 13 ವಿಕೆಟ್​​ಗಳನ್ನು ಪಡೆದಿದ್ದರೂ ವಿಶ್ವಕಪ್​ಗೆ ಅವಕಾಶ ನೀಡಿಲ್ಲ.
(8 / 12)
ಆಕಾಶ್ ಚೋಪ್ರಾ ಸೇರಿದಂತೆ ಅನೇಕ ತಜ್ಞರು ಟಿ20 ವಿಶ್ವಕಪ್ ತಂಡಗಳನ್ನು ರಚಿಸುವಾಗ ಟಿ ನಟರಾಜನ್ ಅವರಿಗೂ ಅವಕಾಶ ನೀಡಬೇಕೆಂದು ಕೋರಿದ್ದರು. ಐಪಿಎಲ್​ನಲ್ಲಿ ನಟ್ಟು ಏಳು ಪಂದ್ಯಗಳಲ್ಲಿ 13 ವಿಕೆಟ್​​ಗಳನ್ನು ಪಡೆದಿದ್ದರೂ ವಿಶ್ವಕಪ್​ಗೆ ಅವಕಾಶ ನೀಡಿಲ್ಲ.(AFP)
ಪ್ರಸ್ತುತ ನಡೆಯುತ್ತಿರುವ ಐಪಿಎಲ್​​ನಲ್ಲಿ ಮುಕೇಶ್ ಕುಮಾರ್ ಇಲ್ಲಿಯವರೆಗೆ ಕೆಟ್ಟ ಪ್ರದರ್ಶನ ನೀಡಿಲ್ಲ. ಅವರು ಏಳು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಮುಖೇಶ್ ಮುಖ್ಯ ತಂಡದಲ್ಲಿ ಇಲ್ಲದಿದ್ದರೂ ಮೀಸಲು ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಆಗಲಿಲ್ಲ.
(9 / 12)
ಪ್ರಸ್ತುತ ನಡೆಯುತ್ತಿರುವ ಐಪಿಎಲ್​​ನಲ್ಲಿ ಮುಕೇಶ್ ಕುಮಾರ್ ಇಲ್ಲಿಯವರೆಗೆ ಕೆಟ್ಟ ಪ್ರದರ್ಶನ ನೀಡಿಲ್ಲ. ಅವರು ಏಳು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಮುಖೇಶ್ ಮುಖ್ಯ ತಂಡದಲ್ಲಿ ಇಲ್ಲದಿದ್ದರೂ ಮೀಸಲು ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಆಗಲಿಲ್ಲ.(AFP)
ಯುವ ಆಟಗಾರ ರವಿ ಬಿಷ್ಣೋಯ್ ಪ್ರಸ್ತುತ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಅವರನ್ನು ತಂಡದೊಂದಿಗೆ ಉಳಿಸಿಕೊಳ್ಳಬಹುದು ಎಂದು ಹಲವರು ಭಾವಿಸಿದ್ದರು. ಸುನಿಲ್ ಗವಾಸ್ಕರ್ ಕೂಡ ಬಿಷ್ಣೋಯ್ ಬಗ್ಗೆ ಮಾತನಾಡಿದರು. ಆದಾಗ್ಯೂ, ಈ ವರ್ಷದ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ.
(10 / 12)
ಯುವ ಆಟಗಾರ ರವಿ ಬಿಷ್ಣೋಯ್ ಪ್ರಸ್ತುತ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಅವರನ್ನು ತಂಡದೊಂದಿಗೆ ಉಳಿಸಿಕೊಳ್ಳಬಹುದು ಎಂದು ಹಲವರು ಭಾವಿಸಿದ್ದರು. ಸುನಿಲ್ ಗವಾಸ್ಕರ್ ಕೂಡ ಬಿಷ್ಣೋಯ್ ಬಗ್ಗೆ ಮಾತನಾಡಿದರು. ಆದಾಗ್ಯೂ, ಈ ವರ್ಷದ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ.(ANI)
ಶುಭ್ಮನ್ ಗಿಲ್ ಟಿ20 ವಿಶ್ವಕಪ್​ಗೆ ಬಹುತೇಕ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ತಂಡದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರೂ ಅವಕಾಶ ಪಡೆಯಲಿಲ್ಲ. ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಮತ್ತೊಂದೆಡೆ ಇಶಾನ್ ಕಿಶನ್ ಅವಕಾಶ ಪಡೆಯುತ್ತಿದ್ದರು.  ಆದರೆ, ದೇಶೀಯ ಕ್ರಿಕೆಟ್ ಆಡುವಂತೆ ಬಿಸಿಸಿಐ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದರೂ ನಿರಾಕರಿಸಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡದೆ ಸರಿಯಾದ ಶಿಕ್ಷೆ ನೀಡಲಾಗಿದೆ.
(11 / 12)
ಶುಭ್ಮನ್ ಗಿಲ್ ಟಿ20 ವಿಶ್ವಕಪ್​ಗೆ ಬಹುತೇಕ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ತಂಡದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರೂ ಅವಕಾಶ ಪಡೆಯಲಿಲ್ಲ. ಮೀಸಲು ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಮತ್ತೊಂದೆಡೆ ಇಶಾನ್ ಕಿಶನ್ ಅವಕಾಶ ಪಡೆಯುತ್ತಿದ್ದರು.  ಆದರೆ, ದೇಶೀಯ ಕ್ರಿಕೆಟ್ ಆಡುವಂತೆ ಬಿಸಿಸಿಐ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದರೂ ನಿರಾಕರಿಸಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡದೆ ಸರಿಯಾದ ಶಿಕ್ಷೆ ನೀಡಲಾಗಿದೆ.
ಟಿ20 ವಿಶ್ವಕಪ್​​ಗೆ ಭಾರತ ತಂಡ:  ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
(12 / 12)
ಟಿ20 ವಿಶ್ವಕಪ್​​ಗೆ ಭಾರತ ತಂಡ:  ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು - ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

    ಹಂಚಿಕೊಳ್ಳಲು ಲೇಖನಗಳು