logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Standings: ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಕಿವೀಸ್; ಲಂಕಾಗೆ ಬಡ್ತಿ, ಭಾರತದ ಸ್ಥಾನ ಅಬಾಧಿತ

WTC Standings: ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಕಿವೀಸ್; ಲಂಕಾಗೆ ಬಡ್ತಿ, ಭಾರತದ ಸ್ಥಾನ ಅಬಾಧಿತ

Sep 29, 2024 05:36 PM IST

WTC Points Table: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಭರ್ಜರಿಯಾಗಿ ವಶಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆಗಳಾಗಿವೆ. ಸದ್ಯ ಕಿವೀಸ್‌ ಹಾಗೂ ಲಂಕಾ ಯಾವ ಸ್ಥಾನದಲ್ಲಿವೆ ಎಂಬುದನ್ನು ನೋಡೋಣ.

  • WTC Points Table: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಶ್ರೀಲಂಕಾ 2-0 ಅಂತರದಿಂದ ಭರ್ಜರಿಯಾಗಿ ವಶಪಡಿಸಿಕೊಂಡಿದೆ. ಇದರ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಬದಲಾವಣೆಗಳಾಗಿವೆ. ಸದ್ಯ ಕಿವೀಸ್‌ ಹಾಗೂ ಲಂಕಾ ಯಾವ ಸ್ಥಾನದಲ್ಲಿವೆ ಎಂಬುದನ್ನು ನೋಡೋಣ.
ಸರಣಿಯ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸಿದ್ದ ಶ್ರೀಲಂಕಾ‌, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಶ್ರೀಲಂಕಾ ಲೀಗ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮತ್ತೊಂದೆಡೆ, ಶ್ರೀಲಂಕಾ ವಿರುದ್ಧ ವೈಟ್‌ವಾಶ್‌ ಆಗಿರುವ ಕಿವೀಸ್, ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಮತ್ತಷ್ಟು ಕುಸಿದಿದೆ.  
(1 / 9)
ಸರಣಿಯ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸಿದ್ದ ಶ್ರೀಲಂಕಾ‌, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಶ್ರೀಲಂಕಾ ಲೀಗ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮತ್ತೊಂದೆಡೆ, ಶ್ರೀಲಂಕಾ ವಿರುದ್ಧ ವೈಟ್‌ವಾಶ್‌ ಆಗಿರುವ ಕಿವೀಸ್, ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಮತ್ತಷ್ಟು ಕುಸಿದಿದೆ.  (AFP)
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ನಂತರ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಮೂರನೇ ಸ್ಥಾನವನ್ನು ಬಲಪಡಿಸಿಕೊಂಡಿದೆ. ಇದರೊಂದಿಗೆ ಶ್ರೀಲಂಕಾ ತಂಡವು ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಕ್ಕಿಂತ ಅಂತರವನ್ನು ಹೆಚ್ಚಿಸಿದೆ. ಸದ್ಯ ಶ್ರೀಲಂಕಾ 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ತಂಡ ಶೇಕಡಾವಾರು ಪಾಯಿಂಟ್ 55.56 ಆಗಿದೆ.
(2 / 9)
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ನಂತರ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಮೂರನೇ ಸ್ಥಾನವನ್ನು ಬಲಪಡಿಸಿಕೊಂಡಿದೆ. ಇದರೊಂದಿಗೆ ಶ್ರೀಲಂಕಾ ತಂಡವು ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡಕ್ಕಿಂತ ಅಂತರವನ್ನು ಹೆಚ್ಚಿಸಿದೆ. ಸದ್ಯ ಶ್ರೀಲಂಕಾ 9 ಪಂದ್ಯಗಳಿಂದ 60 ಅಂಕ ಗಳಿಸಿದೆ. ತಂಡ ಶೇಕಡಾವಾರು ಪಾಯಿಂಟ್ 55.56 ಆಗಿದೆ.(AFP)
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಸೋತ ನಂತರ ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್‌ನಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ತಂಡವು ಇದೀಗ ಏಳನೇ ಸ್ಥಾನಕ್ಕೆ ಕುಸಿದಿದೆ. ಈ ಸರಣಿಗೂ ಮೊದಲು, ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿತ್ತು. ಸದ್ಯ ಕಿವೀಸ್ ಆಡಿರುವ 8 ಪಂದ್ಯಗಳಲ್ಲಿ 37.50ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ.
(3 / 9)
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಸೋತ ನಂತರ ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್‌ನಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ತಂಡವು ಇದೀಗ ಏಳನೇ ಸ್ಥಾನಕ್ಕೆ ಕುಸಿದಿದೆ. ಈ ಸರಣಿಗೂ ಮೊದಲು, ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿತ್ತು. ಸದ್ಯ ಕಿವೀಸ್ ಆಡಿರುವ 8 ಪಂದ್ಯಗಳಲ್ಲಿ 37.50ರ ಸರಾಸರಿಯಲ್ಲಿ 36 ಅಂಕಗಳನ್ನು ಗಳಿಸಿದೆ.(AFP)
ಭಾರತ ತಂಡವು ಎಂದಿನಂತೆ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಭಾರತ 10 ಪಂದ್ಯಗಳಲ್ಲಿ 86 ಅಂಕಗಳನ್ನು ಗಳಿಸಿದೆ. ಭಾರತದ ಪಾಯಿಂಟ್ ಕಲೆಕ್ಷನ್ ಶೇಕಡಾವಾರು 71.67 ಆಗಿದೆ.
(4 / 9)
ಭಾರತ ತಂಡವು ಎಂದಿನಂತೆ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಭಾರತ 10 ಪಂದ್ಯಗಳಲ್ಲಿ 86 ಅಂಕಗಳನ್ನು ಗಳಿಸಿದೆ. ಭಾರತದ ಪಾಯಿಂಟ್ ಕಲೆಕ್ಷನ್ ಶೇಕಡಾವಾರು 71.67 ಆಗಿದೆ.
ಅತ್ತ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 90 ಅಂಕಗಳನ್ನು ಗಳಿಸಿದೆ. ಆಸೀಸ್ ಸಂಗ್ರಹಿಸಿದ ಅಂಕಗಳ ಶೇಕಡಾವಾರು 62.50 ಆಗಿದೆ.
(5 / 9)
ಅತ್ತ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 90 ಅಂಕಗಳನ್ನು ಗಳಿಸಿದೆ. ಆಸೀಸ್ ಸಂಗ್ರಹಿಸಿದ ಅಂಕಗಳ ಶೇಕಡಾವಾರು 62.50 ಆಗಿದೆ.(Action Images via Reuters)
ನ್ಯೂಜಿಲೆಂಡ್ ತಂಡ ಹಿಂದೆ ಬಿದ್ದಿದ್ದರಿಂದ ಇಂಗ್ಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ತಂಡವು ಆಡಿದ 16 ಪಂದ್ಯಗಳಲ್ಲಿ 42.19ರ ಸರಾಸರಿಯಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ. ಲೀಗ್ ಟೇಬಲ್‌ನಲ್ಲಿ ಬಾಂಗ್ಲಾದೇಶ ಕೂಡ ಒಂದು ಹೆಜ್ಜೆ ಸುಧಾರಿಸಿದೆ. ಬಾಂಗ್ಲಾ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 7 ಪಂದ್ಯಗಳಲ್ಲಿ 33 ಅಂಕಗಳನ್ನು ಗಳಿಸಿದೆ. ತಂಡದ ಶೇಕಡಾವಾರು ಅಂಕ 39.29.
(6 / 9)
ನ್ಯೂಜಿಲೆಂಡ್ ತಂಡ ಹಿಂದೆ ಬಿದ್ದಿದ್ದರಿಂದ ಇಂಗ್ಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ತಂಡವು ಆಡಿದ 16 ಪಂದ್ಯಗಳಲ್ಲಿ 42.19ರ ಸರಾಸರಿಯಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ. ಲೀಗ್ ಟೇಬಲ್‌ನಲ್ಲಿ ಬಾಂಗ್ಲಾದೇಶ ಕೂಡ ಒಂದು ಹೆಜ್ಜೆ ಸುಧಾರಿಸಿದೆ. ಬಾಂಗ್ಲಾ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 7 ಪಂದ್ಯಗಳಲ್ಲಿ 33 ಅಂಕಗಳನ್ನು ಗಳಿಸಿದೆ. ತಂಡದ ಶೇಕಡಾವಾರು ಅಂಕ 39.29.(AFP)
ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದಂತೆ ದಕ್ಷಿಣ ಆಫ್ರಿಕಾ ಕೂಡ ನ್ಯೂಜಿಲೆಂಡ್ ಸೋಲಿನಿಂದ ಲಾಭ ಪಡೆದಿದೆ. ತಂಡವು ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಒಂದು ಸ್ಥಾನ ಮೇಲೇರಿದೆ. 6 ಪಂದ್ಯಗಳಲ್ಲಿ ಶೇ.38.89ರ ಸರಾಸರಿಯಲ್ಲಿ 28 ಅಂಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
(7 / 9)
ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದಂತೆ ದಕ್ಷಿಣ ಆಫ್ರಿಕಾ ಕೂಡ ನ್ಯೂಜಿಲೆಂಡ್ ಸೋಲಿನಿಂದ ಲಾಭ ಪಡೆದಿದೆ. ತಂಡವು ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಒಂದು ಸ್ಥಾನ ಮೇಲೇರಿದೆ. 6 ಪಂದ್ಯಗಳಲ್ಲಿ ಶೇ.38.89ರ ಸರಾಸರಿಯಲ್ಲಿ 28 ಅಂಕಗಳನ್ನು ಗಳಿಸಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪಾಕಿಸ್ತಾನವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ತಂಡ 7 ಪಂದ್ಯಗಳಲ್ಲಿ 19.05ರ ದರದಲ್ಲಿ 16 ಅಂಕಗಳನ್ನು ಸಂಗ್ರಹಿಸಿದೆ. ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡ 9 ಪಂದ್ಯಗಳಲ್ಲಿ 18.52 ರ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.
(8 / 9)
ಪಾಕಿಸ್ತಾನವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ತಂಡ 7 ಪಂದ್ಯಗಳಲ್ಲಿ 19.05ರ ದರದಲ್ಲಿ 16 ಅಂಕಗಳನ್ನು ಸಂಗ್ರಹಿಸಿದೆ. ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡ 9 ಪಂದ್ಯಗಳಲ್ಲಿ 18.52 ರ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.(AP)
ಟೆಸ್ಟ್ ಚಾಂಪಿಯನ್‌ಶಿಪ್‌ ಶ್ರೇಯಾಂಕವನ್ನು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ತಂಡಗಳು ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.
(9 / 9)
ಟೆಸ್ಟ್ ಚಾಂಪಿಯನ್‌ಶಿಪ್‌ ಶ್ರೇಯಾಂಕವನ್ನು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ತಂಡಗಳು ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.(AFP)

    ಹಂಚಿಕೊಳ್ಳಲು ಲೇಖನಗಳು