logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೆಸ್ಟ್ ಇಂಡೀಸ್ Vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತದ ಯಾವ ಸ್ಥಾನದಲ್ಲಿದೆ?

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತದ ಯಾವ ಸ್ಥಾನದಲ್ಲಿದೆ?

Aug 13, 2024 06:10 AM IST

WTC Point Table: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು, ನೀರಸ ಡ್ರಾದಲ್ಲಿ ಕೊನೆಗೊಂಡಿತು. ಪಂದ್ಯದ ಫಲಿತಾಂಶದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ ಎಂಬುದು ನೋಡೋಣ.

  • WTC Point Table: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯವು, ನೀರಸ ಡ್ರಾದಲ್ಲಿ ಕೊನೆಗೊಂಡಿತು. ಪಂದ್ಯದ ಫಲಿತಾಂಶದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಹೇಗಿದೆ ಎಂಬುದು ನೋಡೋಣ.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಡ್ರಾ ಆದ ನಂತರ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಬಂದಿದೆ. ಡಬ್ಲ್ಯುಟಿಸಿ ಪ್ರಸಕ್ತ ಋತುವಿನಲ್ಲಿ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಒಟ್ಟು ಐದು ಪಂದ್ಯಗಳನ್ನು ಆಡಿದೆ. ಅದರಲ್ಲಿ ತಂಡ 1 ಪಂದ್ಯವನ್ನು ಮಾತ್ರವೇ ಗೆದ್ದದೆ. ಉಳಿದಂತೆ 1 ಪಂದ್ಯ ಡ್ರಾ ಆಗಿದ್ದು, 3 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. ತಂಡದ ಶೇಕಡಾವಾರು ಪಾಯಿಂಟ್ 26.67 ಆಗಿದೆ. ದಕ್ಷಿಣ ಆಫ್ರಿಕಾ ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
(1 / 7)
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಡ್ರಾ ಆದ ನಂತರ ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನಕ್ಕೆ ಬಂದಿದೆ. ಡಬ್ಲ್ಯುಟಿಸಿ ಪ್ರಸಕ್ತ ಋತುವಿನಲ್ಲಿ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಒಟ್ಟು ಐದು ಪಂದ್ಯಗಳನ್ನು ಆಡಿದೆ. ಅದರಲ್ಲಿ ತಂಡ 1 ಪಂದ್ಯವನ್ನು ಮಾತ್ರವೇ ಗೆದ್ದದೆ. ಉಳಿದಂತೆ 1 ಪಂದ್ಯ ಡ್ರಾ ಆಗಿದ್ದು, 3 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. ತಂಡದ ಶೇಕಡಾವಾರು ಪಾಯಿಂಟ್ 26.67 ಆಗಿದೆ. ದಕ್ಷಿಣ ಆಫ್ರಿಕಾ ಪ್ರಸ್ತುತ ಲೀಗ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.(AFP)
ವೆಸ್ಟ್ ಇಂಡೀಸ್ ತಂಡ ಆಡಿರುವ 8 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಕೆರಿಬಿಯನ್ ತಂಡವು ಎರಡು ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಂಡದ ಶೇಕಡಾವಾರು ಪಾಯಿಂಟ್ 20.83. ತಂಡವು ಪಾಯಿಂಟ್ಸ್ ಟೇಬಲ್‌ನ ಕೊನೆಯ, ಅಂದರೆ 9ನೇ ಸ್ಥಾನದಲ್ಲಿದ್ದಾರೆ.
(2 / 7)
ವೆಸ್ಟ್ ಇಂಡೀಸ್ ತಂಡ ಆಡಿರುವ 8 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಕೆರಿಬಿಯನ್ ತಂಡವು ಎರಡು ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಂಡದ ಶೇಕಡಾವಾರು ಪಾಯಿಂಟ್ 20.83. ತಂಡವು ಪಾಯಿಂಟ್ಸ್ ಟೇಬಲ್‌ನ ಕೊನೆಯ, ಅಂದರೆ 9ನೇ ಸ್ಥಾನದಲ್ಲಿದ್ದಾರೆ.(AFP)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ನಂಬರ್‌ 1 ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳನ್ನು ಆಡಿದ್ದು, 6 ಟೆಸ್ಟ್ ಪಂದ್ಯಗಳಲ್ಲಿ ಗೆದ್ದಿದೆ. ಉಳಿದ  2ರಲ್ಲಿ ಸೋತರೆ, 1 ಟೆಸ್ಟ್ ಡ್ರಾಗೊಂಡಿದೆ. ಭಾರತ ಒಟ್ಟು 74 ಅಂಕಗಳು ಹಾಗೂ 68.51 ಶೇಕಡಾವಾರು ಅಂಕಗಳನ್ನು ಹೊಂದಿದೆ.
(3 / 7)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ನಂಬರ್‌ 1 ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳನ್ನು ಆಡಿದ್ದು, 6 ಟೆಸ್ಟ್ ಪಂದ್ಯಗಳಲ್ಲಿ ಗೆದ್ದಿದೆ. ಉಳಿದ  2ರಲ್ಲಿ ಸೋತರೆ, 1 ಟೆಸ್ಟ್ ಡ್ರಾಗೊಂಡಿದೆ. ಭಾರತ ಒಟ್ಟು 74 ಅಂಕಗಳು ಹಾಗೂ 68.51 ಶೇಕಡಾವಾರು ಅಂಕಗಳನ್ನು ಹೊಂದಿದೆ.(AFP)
ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 12 ಟೆಸ್ಟ್ ಪಂದ್ಯಗಳಲ್ಲಿ ತಂಡವು 8ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 1 ಟೆಸ್ಟ್ ಡ್ರಾ ಆಗಿತ್ತು. ಆಸೀಸ್ ಖಾತೆಯಲ್ಲಿ 90 ಅಂಕಗಳಿದ್ದರೂ, ಕಾಂಗರೂಗಳ ಶೇಕಡಾವಾರು ಅಂಕಗಳು 62.50. 
(4 / 7)
ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 12 ಟೆಸ್ಟ್ ಪಂದ್ಯಗಳಲ್ಲಿ ತಂಡವು 8ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 1 ಟೆಸ್ಟ್ ಡ್ರಾ ಆಗಿತ್ತು. ಆಸೀಸ್ ಖಾತೆಯಲ್ಲಿ 90 ಅಂಕಗಳಿದ್ದರೂ, ಕಾಂಗರೂಗಳ ಶೇಕಡಾವಾರು ಅಂಕಗಳು 62.50. 
ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಕಿವೀಸ್‌ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಒಟ್ಟು 36 ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡ 50 ಪ್ರತಿಶತ ಅಂಕಗಳನ್ನು ಸಂಗ್ರಹಿಸಿದೆ. ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ.
(5 / 7)
ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ಕಿವೀಸ್‌ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಒಟ್ಟು 36 ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡ 50 ಪ್ರತಿಶತ ಅಂಕಗಳನ್ನು ಸಂಗ್ರಹಿಸಿದೆ. ಶ್ರೀಲಂಕಾ ನಾಲ್ಕನೇ ಸ್ಥಾನದಲ್ಲಿದೆ.( AFP)
ಪಾಕಿಸ್ತಾನವು ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 36.66 ಶೇಕಡಾ ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಪಾಕ್‌ ಐದನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಆರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶವು ಶೇಕಡಾ 25.00 ದರದಲ್ಲಿ ಒಟ್ಟು 12 ಅಂಕಗಳನ್ನು ಹೊಂದಿದ್ದು, ಎಂಟನೇ ಸ್ಥಾನದಲ್ಲಿದೆ.
(6 / 7)
ಪಾಕಿಸ್ತಾನವು ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 36.66 ಶೇಕಡಾ ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಪಾಕ್‌ ಐದನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಆರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶವು ಶೇಕಡಾ 25.00 ದರದಲ್ಲಿ ಒಟ್ಟು 12 ಅಂಕಗಳನ್ನು ಹೊಂದಿದ್ದು, ಎಂಟನೇ ಸ್ಥಾನದಲ್ಲಿದೆ.(AFP)
ಎಲ್ಲಾ ಪಂದ್ಯಗಳ ಕೊನೆಯಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.
(7 / 7)
ಎಲ್ಲಾ ಪಂದ್ಯಗಳ ಕೊನೆಯಲ್ಲಿ, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಸಂಗ್ರಹಿಸಿದ ಅಂಕಗಳಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಪಡೆದ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.(AFP)

    ಹಂಚಿಕೊಳ್ಳಲು ಲೇಖನಗಳು