logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ

WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ

Oct 12, 2024 06:00 AM IST

WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲಿನ ನಂತರ, ಪಾಕಿಸ್ತಾನವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಭಾರತವು ಅಗ್ರಸ್ಥಾನದಲ್ಲಿ ಮುಂದುವರೆದಿದೆ.

  • WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲಿನ ನಂತರ, ಪಾಕಿಸ್ತಾನವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಭಾರತವು ಅಗ್ರಸ್ಥಾನದಲ್ಲಿ ಮುಂದುವರೆದಿದೆ.
WTC Points Table: ಪಾಕಿಸ್ತಾನ ತಂಡವು ತವರಿನಲ್ಲಿ ಮತ್ತೊಂದು ಹೀನಾಯ ಸೋಲಿಗೆ ಶರಣಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಪಾಕ್ ಇನ್ನಿಂಗ್ಸ್ ಮತ್ತು 47 ರನ್​​ಗಳಿಂದ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್​​​ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದರೂ, ಇನ್ನಿಂಗ್ಸ್​ ಸೋಲು ಕಂಡ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಕುಖ್ಯಾತಿಗೆ ಪಾಕ್ ಪಾತ್ರವಾಗಿದೆ.
(1 / 6)
WTC Points Table: ಪಾಕಿಸ್ತಾನ ತಂಡವು ತವರಿನಲ್ಲಿ ಮತ್ತೊಂದು ಹೀನಾಯ ಸೋಲಿಗೆ ಶರಣಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಪಾಕ್ ಇನ್ನಿಂಗ್ಸ್ ಮತ್ತು 47 ರನ್​​ಗಳಿಂದ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್​​​ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದರೂ, ಇನ್ನಿಂಗ್ಸ್​ ಸೋಲು ಕಂಡ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಕುಖ್ಯಾತಿಗೆ ಪಾಕ್ ಪಾತ್ರವಾಗಿದೆ.(REUTERS)
WTC Points Table: ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​​​ ಪಾಯಿಂಟ್ಸ್ ಟೇಬಲ್​​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ತಂಡವು 3ನೇ ಆವೃತ್ತಿಯಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದ್ದು, ಆರರಲ್ಲಿ ಸೋತಿದೆ. 16 ಅಂಕ ಮತ್ತು 16.67ರಷ್ಟು ಶೇಕಡವಾರು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.
(2 / 6)
WTC Points Table: ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​​​ ಪಾಯಿಂಟ್ಸ್ ಟೇಬಲ್​​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ತಂಡವು 3ನೇ ಆವೃತ್ತಿಯಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದ್ದು, ಆರರಲ್ಲಿ ಸೋತಿದೆ. 16 ಅಂಕ ಮತ್ತು 16.67ರಷ್ಟು ಶೇಕಡವಾರು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.(REUTERS)
WTC Points Table: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಪಾಕಿಸ್ತಾನ 556 ರನ್ ಗಳಿಸಿತ್ತು. ಆದಾಗ್ಯೂ, ಇಂಗ್ಲೆಂಡ್ ತಿರುಗೇಟು ನೀಡಿತು. ಅಲ್ಲದೆ, ಬೃಹತ್ 823 ರನ್ ಗಳಿಸುವ ಮೂಲಕ ದಾಖಲೆ ಬರೆಯಿತು. ಇದರೊಂದಿಗೆ 267 ರನ್​ಗಳ ಮುನ್ನಡೆ ಸಾಧಿಸಿತು. ಆದರೆ 2ನೇ ಇನ್ನಿಂಗ್ಸ್​​ನಲ್ಲಿ ಪಾಕಿಸ್ತಾನ 220 ರನ್​ಗಳಿಗೆ ಪತನಗೊಂಡ ಕಾರಣ ಇನ್ನಿಂಗ್ಸ್ ಮತ್ತು 47 ರನ್​​ಗಳ ಸೋಲನುಭವಿಸಿತು.
(3 / 6)
WTC Points Table: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಪಾಕಿಸ್ತಾನ 556 ರನ್ ಗಳಿಸಿತ್ತು. ಆದಾಗ್ಯೂ, ಇಂಗ್ಲೆಂಡ್ ತಿರುಗೇಟು ನೀಡಿತು. ಅಲ್ಲದೆ, ಬೃಹತ್ 823 ರನ್ ಗಳಿಸುವ ಮೂಲಕ ದಾಖಲೆ ಬರೆಯಿತು. ಇದರೊಂದಿಗೆ 267 ರನ್​ಗಳ ಮುನ್ನಡೆ ಸಾಧಿಸಿತು. ಆದರೆ 2ನೇ ಇನ್ನಿಂಗ್ಸ್​​ನಲ್ಲಿ ಪಾಕಿಸ್ತಾನ 220 ರನ್​ಗಳಿಗೆ ಪತನಗೊಂಡ ಕಾರಣ ಇನ್ನಿಂಗ್ಸ್ ಮತ್ತು 47 ರನ್​​ಗಳ ಸೋಲನುಭವಿಸಿತು.(AP)
WTC Points Table: ತವರಿನಲ್ಲಿ ಪಾಕಿಸ್ತಾನ ತಂಡವು ಮತ್ತೊಂದು ಹೀನಾಯ ಸೋಲು ಕಂಡ ಹಿನ್ನೆಲೆ ಡಬ್ಲ್ಯುಟಿಸಿ ಫೈನಲ್​ ರೇಸ್​​ನಿಂದ ಹೊರ ಬಿತ್ತು,
(4 / 6)
WTC Points Table: ತವರಿನಲ್ಲಿ ಪಾಕಿಸ್ತಾನ ತಂಡವು ಮತ್ತೊಂದು ಹೀನಾಯ ಸೋಲು ಕಂಡ ಹಿನ್ನೆಲೆ ಡಬ್ಲ್ಯುಟಿಸಿ ಫೈನಲ್​ ರೇಸ್​​ನಿಂದ ಹೊರ ಬಿತ್ತು,(REUTERS)
WTC Points Table: ಈ ಗೆಲುವಿನೊಂದಿಗೆ ಇಂಗ್ಲೆಂಡ್ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 4ನೇ ಸ್ಥಾನಕ್ಕೇರಿತು. 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 9ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡಿದೆ. ಮತ್ತೊಂದು ಟೆಸ್ಟ್ ಡ್ರಾ ಆಗಿತ್ತು. 93 ಅಂಕಗಳು ಮತ್ತು ಗೆಲುವಿನ ಶೇಕಡವಾರು 45.59 ರಷ್ಟಿದೆ.
(5 / 6)
WTC Points Table: ಈ ಗೆಲುವಿನೊಂದಿಗೆ ಇಂಗ್ಲೆಂಡ್ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 4ನೇ ಸ್ಥಾನಕ್ಕೇರಿತು. 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 9ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡಿದೆ. ಮತ್ತೊಂದು ಟೆಸ್ಟ್ ಡ್ರಾ ಆಗಿತ್ತು. 93 ಅಂಕಗಳು ಮತ್ತು ಗೆಲುವಿನ ಶೇಕಡವಾರು 45.59 ರಷ್ಟಿದೆ.(AFP)
WTC Points Table: ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ 11 ಪಂದ್ಯಗಳನ್ನು ಆಡಿದ್ದು, 8ರಲ್ಲಿ ಗೆಲುವು, 2ರಲ್ಲಿ ಸೋಲು ಹಾಗೂ 1ರಲ್ಲಿ ಡ್ರಾ ಸಾಧಿಸಿದೆ. 98 ಅಂಕ ಮತ್ತು ಗೆಲುವಿನ ಶೇಕಡಾ 78.24ರಷ್ಟಿದೆ.
(6 / 6)
WTC Points Table: ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ 11 ಪಂದ್ಯಗಳನ್ನು ಆಡಿದ್ದು, 8ರಲ್ಲಿ ಗೆಲುವು, 2ರಲ್ಲಿ ಸೋಲು ಹಾಗೂ 1ರಲ್ಲಿ ಡ್ರಾ ಸಾಧಿಸಿದೆ. 98 ಅಂಕ ಮತ್ತು ಗೆಲುವಿನ ಶೇಕಡಾ 78.24ರಷ್ಟಿದೆ.(AFP)

    ಹಂಚಿಕೊಳ್ಳಲು ಲೇಖನಗಳು