logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yashasvi Jaiswal: ಚೊಚ್ಚಲ ಟೆಸ್ಟ್​ ಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್; 91 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು

Yashasvi Jaiswal: ಚೊಚ್ಚಲ ಟೆಸ್ಟ್​ ಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್; 91 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು

Jul 14, 2023 11:43 AM IST

India vs West Indies 1st Test: ವೆಸ್ಟ್​ ಇಂಡೀಸ್​ ಎದುರಿನ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​, ದಾಖಲೆ ಬರೆದಿದ್ದಾರೆ. ಇದಲ್ಲದೆ ಹಲವು ದಾಖಲೆಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.

  • India vs West Indies 1st Test: ವೆಸ್ಟ್​ ಇಂಡೀಸ್​ ಎದುರಿನ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​, ದಾಖಲೆ ಬರೆದಿದ್ದಾರೆ. ಇದಲ್ಲದೆ ಹಲವು ದಾಖಲೆಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.
ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣೆಯ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದಾಖಲೆಯ ಶತಕ ಸಿಡಿಸಿದ್ದಾರೆ.
(1 / 9)
ಡೊಮಿನಿಕಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪದಾರ್ಪಣೆಯ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದಾಖಲೆಯ ಶತಕ ಸಿಡಿಸಿದ್ದಾರೆ.(AP)
ಪಂದ್ಯದ ಆರಂಭದಿಂದಲೂ ಅದ್ಭುತ ಅಮೋಘ ಆಟವಾಡಿದ ಜೈಸ್ವಾಲ್, 215 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು. ಎರಡನೇ ದಿನದಾಟದ ಅಂತ್ಯಕ್ಕೆ 350 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ ಅಜೇಯ 143 ರನ್​ ಗಳಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
(2 / 9)
ಪಂದ್ಯದ ಆರಂಭದಿಂದಲೂ ಅದ್ಭುತ ಅಮೋಘ ಆಟವಾಡಿದ ಜೈಸ್ವಾಲ್, 215 ಎಸೆತಗಳಲ್ಲಿ ಚೊಚ್ಚಲ ಶತಕ ಪೂರೈಸಿದರು. ಎರಡನೇ ದಿನದಾಟದ ಅಂತ್ಯಕ್ಕೆ 350 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ ಅಜೇಯ 143 ರನ್​ ಗಳಿಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.(AP)
ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ ಶಿಖರ್ ಧವನ್ (2013), ಪೃಥ್ವಿ ಶಾ (2018) ಆರಂಭಿಕರಾಗಿ ಶತಕ ಸಿಡಿಸಿದ್ದರು. ರೋಹಿತ್​ ಶರ್ಮಾ ಕೂಡ ಆರಂಭಿಕರಾಗಿ ಶತಕ ಸಿಡಿಸಿದ್ದರು.
(3 / 9)
ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಹಿಂದೆ ಶಿಖರ್ ಧವನ್ (2013), ಪೃಥ್ವಿ ಶಾ (2018) ಆರಂಭಿಕರಾಗಿ ಶತಕ ಸಿಡಿಸಿದ್ದರು. ರೋಹಿತ್​ ಶರ್ಮಾ ಕೂಡ ಆರಂಭಿಕರಾಗಿ ಶತಕ ಸಿಡಿಸಿದ್ದರು.(AP)
ಪದಾರ್ಪಣೆ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿದ ಜೈಸ್ವಾಲ್, ಈ ಸಾಧನೆ ಮಾಡಿದ ಭಾರತದ 4ನೇ ಅತ್ಯಂತ ಕಿರಿಯ ಬ್ಯಾಟರ್ (21 ವರ್ಷ 196 ದಿನ) ಎನಿಸಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಶಾ, 18 ವರ್ಷ 329 ದಿನಗಳಲ್ಲಿ ಶತಕ ಸಿಡಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಅಬ್ಬಾಸ್ ಅಲಿ ಬೇಗ್ (20 ವರ್ಷ 126 ದಿನಗಳು), ಜಿ ವಿಶ್ವನಾಥ್ (20 ವರ್ಷ 276 ದಿನಗಳು) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
(4 / 9)
ಪದಾರ್ಪಣೆ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿದ ಜೈಸ್ವಾಲ್, ಈ ಸಾಧನೆ ಮಾಡಿದ ಭಾರತದ 4ನೇ ಅತ್ಯಂತ ಕಿರಿಯ ಬ್ಯಾಟರ್ (21 ವರ್ಷ 196 ದಿನ) ಎನಿಸಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಶಾ, 18 ವರ್ಷ 329 ದಿನಗಳಲ್ಲಿ ಶತಕ ಸಿಡಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ಅಬ್ಬಾಸ್ ಅಲಿ ಬೇಗ್ (20 ವರ್ಷ 126 ದಿನಗಳು), ಜಿ ವಿಶ್ವನಾಥ್ (20 ವರ್ಷ 276 ದಿನಗಳು) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.(AP)
ಜೈಸ್ವಾಲ್ ವಿದೇಶದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ಒಟ್ಟಾರೆ 6ನೇ ಭಾರತೀಯರಾಗಿದ್ದಾರೆ. 1959ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬಾಸ್ ಅಲಿ ಬೇಗ್ ಮೊದಲ ಈ ಸಾಧನೆ ಮಾಡಿದ್ದರು.
(5 / 9)
ಜೈಸ್ವಾಲ್ ವಿದೇಶದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ಒಟ್ಟಾರೆ 6ನೇ ಭಾರತೀಯರಾಗಿದ್ದಾರೆ. 1959ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬಾಸ್ ಅಲಿ ಬೇಗ್ ಮೊದಲ ಈ ಸಾಧನೆ ಮಾಡಿದ್ದರು.(AP)
ನಂತರ 1976ರಲ್ಲಿ ಆಕ್ಲೆಂಡ್‌ನಲ್ಲಿ ಸುರೀಂದರ್ ಅಮರನಾಥ್, 1992ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವೀಣ್ ಆಮ್ರೆ, 1996ರಲ್ಲಿ ಇಂಗ್ಲೆಂಡ್ ಎದುರು ಸೌರವ್ ಗಂಗೂಲಿ ಲಾರ್ಡ್ಸ್‌ನಲ್ಲಿ ಮತ್ತು ವೀರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾ ವಿರುದ್ಧ 2001ರಲ್ಲಿ ಬ್ಲೋಮ್‌ಫಾಂಟೈಮನ್​​ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.
(6 / 9)
ನಂತರ 1976ರಲ್ಲಿ ಆಕ್ಲೆಂಡ್‌ನಲ್ಲಿ ಸುರೀಂದರ್ ಅಮರನಾಥ್, 1992ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರವೀಣ್ ಆಮ್ರೆ, 1996ರಲ್ಲಿ ಇಂಗ್ಲೆಂಡ್ ಎದುರು ಸೌರವ್ ಗಂಗೂಲಿ ಲಾರ್ಡ್ಸ್‌ನಲ್ಲಿ ಮತ್ತು ವೀರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾ ವಿರುದ್ಧ 2001ರಲ್ಲಿ ಬ್ಲೋಮ್‌ಫಾಂಟೈಮನ್​​ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.(AP)
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸೆಂಚುರಿ ಬಾರಿಸಿದ 3ನೇ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಆಗಿದ್ದಾರೆ. ಅವರಿಗೂ ಮುನ್ನ ಪೃಥ್ವಿ ಶಾ ಮತ್ತು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧವೇ ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ನೂರು ಬಾರಿಸಿದ್ದರು. 91 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ವೆಸ್ಟ್​ ಇಂಡೀಸ್​ ವಿರುದ್ಧ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ.
(7 / 9)
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸೆಂಚುರಿ ಬಾರಿಸಿದ 3ನೇ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಆಗಿದ್ದಾರೆ. ಅವರಿಗೂ ಮುನ್ನ ಪೃಥ್ವಿ ಶಾ ಮತ್ತು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧವೇ ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ನೂರು ಬಾರಿಸಿದ್ದರು. 91 ವರ್ಷಗಳ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ವೆಸ್ಟ್​ ಇಂಡೀಸ್​ ವಿರುದ್ಧ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ.(AP)
ಅಲ್ಲದೆ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸೇರಿ ಯಶಸ್ವಿ ಜೈಸ್ವಾಲ್, 229 ರನ್‌ಗಳ ಜೊತೆಯಾಟ ಆಡಿದರು. ಇದು ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಆರಂಭಿಕರ ಜೊತೆಯಾಟ ಎಂಬ  ಹೊಸ ದಾಖಲೆಯಾಗಿದೆ.
(8 / 9)
ಅಲ್ಲದೆ, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸೇರಿ ಯಶಸ್ವಿ ಜೈಸ್ವಾಲ್, 229 ರನ್‌ಗಳ ಜೊತೆಯಾಟ ಆಡಿದರು. ಇದು ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಆರಂಭಿಕರ ಜೊತೆಯಾಟ ಎಂಬ  ಹೊಸ ದಾಖಲೆಯಾಗಿದೆ.(AP)
ಈ ಚೊಚ್ಚಲ ಟೆಸ್ಟ್ ಸೆಂಚುರಿಯೊಂದಿಗೆ ವಿದೇಶಿ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್​ಗೆ ಪದಾರ್ಪಣೆಗೈದು, ಸೆಂಚುರಿ ಸಿಡಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ಯಶಸ್ವಿ ಪಾತ್ರರಾಗಿದ್ದಾರೆ.
(9 / 9)
ಈ ಚೊಚ್ಚಲ ಟೆಸ್ಟ್ ಸೆಂಚುರಿಯೊಂದಿಗೆ ವಿದೇಶಿ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್​ಗೆ ಪದಾರ್ಪಣೆಗೈದು, ಸೆಂಚುರಿ ಸಿಡಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಗೆ ಯಶಸ್ವಿ ಪಾತ್ರರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು