logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಏನಕ್ಕೂ ಲಾಯಕ್ಕಿಲ್ಲ; ಪಾಕಿಸ್ತಾನ ತಂಡಕ್ಕೆ ಬೆಂಡೆತ್ತಿದ ವೀರೇಂದ್ರ ಸೆಹ್ವಾಗ್

ನೀವು ಏನಕ್ಕೂ ಲಾಯಕ್ಕಿಲ್ಲ; ಪಾಕಿಸ್ತಾನ ತಂಡಕ್ಕೆ ಬೆಂಡೆತ್ತಿದ ವೀರೇಂದ್ರ ಸೆಹ್ವಾಗ್

Jun 17, 2024 03:32 PM IST

Virender Sehwag: ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಲೀಗ್​​ನಿಂದಲೇ ಹೊರಬಿದ್ದ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನ ತಂಡದ ವಿರುದ್ಧ ಕಿಡಿಕಾರಿದ್ದಾರೆ.

  • Virender Sehwag: ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಲೀಗ್​​ನಿಂದಲೇ ಹೊರಬಿದ್ದ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನ ತಂಡದ ವಿರುದ್ಧ ಕಿಡಿಕಾರಿದ್ದಾರೆ.
2022ರ ಟಿ20 ವಿಶ್ವಕಪ್​​ನಲ್ಲಿ​ ರನ್ನರ್​ಅಪ್ ಆಗಿದ್ದ ಪಾಕಿಸ್ತಾನ ತಂಡವು ಈ ಆವೃತ್ತಿಯಲ್ಲಿ ಟ್ರೋಫಿ ಜಯಿಸುವ ಉಮೇದಿನಲ್ಲಿತ್ತು. ಆದರೆ ಗುಂಪು ಹಂತದಲ್ಲೇ ಹೊರಬಿತ್ತು. ಆಡಿದ 4ರಲ್ಲಿ 2 ಗೆಲುವು, 2 ಸೋಲು ಕಂಡು 4 ಅಂಕ ಪಡೆದ ಬಾಬರ್ ಪಡೆ, 3ನೇ ಸ್ಥಾನ ಪಡೆಯಿತು.
(1 / 6)

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ ಹೊರಬೀಳಲು ಐಸಿಸಿ ಮತ್ತು ಬಿಸಿಸಿಐ ನಡೆಸಿರುವ ಪಿತೂರಿ ಎಂದು ಅಭಿಮಾನಿಗಳು ದೂರಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಪಾಕ್ ತಂಡವನ್ನು ಜಾಡಿಸಿದ್ದಾರೆ.
(2 / 6)

ಈ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್,​ ಪಾಕಿಸ್ತಾನ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳಲು ಲಾಯಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
(3 / 6)

ಕ್ರಿಕ್​ಬಜ್​ಗೆ ನೀಡಿರುವ ಸಂದರ್ಶನದಲ್ಲಿ ಸೆಹ್ವಾಗ್ ಈ ಬಗ್ಗೆ ಮಾತನಾಡಿದ್ದು,​ ನೀವು ನೀಡಿರುವ ಕಳಪೆ ಪ್ರದರ್ಶನಕ್ಕೂ ಟೂರ್ನಿಯಿಂದ ಹೊರಬೀಳುವುದಕ್ಕೂ ಮಳೆಗೂ ಏನೂ ಸಂಬಂಧ. ಟೂರ್ನಿಯಲ್ಲಿ ಭಾಗವಹಿಸಲು  ಯೋಗ್ಯರಲ್ಲ ಎಂದು ಹೇಳಿದ್ದಾರೆ.
(4 / 6)

ಒಂದು ವೇಳೆ ನೀವು ಸೂಪರ್​-8 ಪ್ರವೇಶಿಸಿದ್ದರೂ, ಅಲ್ಲಿ ನಿಮಗೆ ಕಠಿಣ ತಂಡಗಳು ಎದುರಾಗುತ್ತಿದ್ದವು. ಆಗ ಮತ್ತೆ ಸೋಲುತ್ತಿದ್ದೀರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
(5 / 6)

ಅಮೆರಿಕ ಮತ್ತು ಟೀಮ್ ಇಂಡಿಯಾ ಎದುರು ಸೋತಿರುವ ನೀವು, ಸೂಪರ್​​-8ಕ್ಕೆ ಅರ್ಹತೆ ಪಡೆಯದೇ ಇರುವುದಕ್ಕೆ ಮಳೆಯನ್ನು ದೂಷಿಸುವುದು ಸರಿಯಲ್ಲ. ನೀವು ತಪ್ಪು ಮಾಡಿ, ಮತ್ತೊಬ್ಬರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು