logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ ಫೈನಲ್‌ನಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ಎಸ್‌ಆರ್‌ಎಚ್; 2024ರ ಆವೃತ್ತಿಯಲ್ಲಿ ದಾಖಲಾದ 5 ಕನಿಷ್ಠ ಸ್ಕೋರ್‌ಗಳಿವು

ಐಪಿಎಲ್‌ ಫೈನಲ್‌ನಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ಎಸ್‌ಆರ್‌ಎಚ್; 2024ರ ಆವೃತ್ತಿಯಲ್ಲಿ ದಾಖಲಾದ 5 ಕನಿಷ್ಠ ಸ್ಕೋರ್‌ಗಳಿವು

May 26, 2024 11:42 PM IST

ಐಪಿಎಲ್‌ 2024ರ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಕೆಕೆಆರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ನಡುವೆ ಮಹತ್ವದ ಫೈನಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡವು ಕೇವಲ 113 ರನ್‌ ಮಾತ್ರ ಗಳಿಸಿತು. ಇದು ಐಪಿಎಲ್‌ ಇತಿಹಾಸದಲ್ಲಿ ಫೈನಲ್‌ನಲ್ಲಿ ದಾಖಲಾದ ಅತಿ ಕಡಿಮೆ ಮೊತ್ತ. ಹಾಗಿದ್ದರೆ, ಈ ಆವೃತ್ತಿಯಲ್ಲಿ ಯಾವ ತಂಡ ಅತಿ ಕಡಿಮೆ ಮೊತ್ತ ಗಳಿಸಿದೆ ಎಂಬುದನ್ನು ನೋಡೋಣ.

  • ಐಪಿಎಲ್‌ 2024ರ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಕೆಕೆಆರ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ನಡುವೆ ಮಹತ್ವದ ಫೈನಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ ತಂಡವು ಕೇವಲ 113 ರನ್‌ ಮಾತ್ರ ಗಳಿಸಿತು. ಇದು ಐಪಿಎಲ್‌ ಇತಿಹಾಸದಲ್ಲಿ ಫೈನಲ್‌ನಲ್ಲಿ ದಾಖಲಾದ ಅತಿ ಕಡಿಮೆ ಮೊತ್ತ. ಹಾಗಿದ್ದರೆ, ಈ ಆವೃತ್ತಿಯಲ್ಲಿ ಯಾವ ತಂಡ ಅತಿ ಕಡಿಮೆ ಮೊತ್ತ ಗಳಿಸಿದೆ ಎಂಬುದನ್ನು ನೋಡೋಣ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶ್ರೇಯಸ್‌ ಅಯ್ಯರ್‌ ಬಳಗವು ಗೆದ್ದಿದೆ. 113 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ ಕೆಕೆಆರ್‌, 10.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಗುರಿ ಸಾಧಿಸಿತು. ಎಸ್‌ಆರ್‌ಎಚ್‌ ಗಳಿಸಿದ 113‌ ರನ್‌, ಐಪಿಎಲ್‌ ಫೈನಲ್‌ ಇತಿಹಾಸದಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಂಡವೊಂದು ದಾಖಲಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.
(1 / 7)
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶ್ರೇಯಸ್‌ ಅಯ್ಯರ್‌ ಬಳಗವು ಗೆದ್ದಿದೆ. 113 ರನ್‌ಗಳ ಅಲ್ಪ ಗುರಿ ಬೆನ್ನಟ್ಟಿದ ಕೆಕೆಆರ್‌, 10.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಗುರಿ ಸಾಧಿಸಿತು. ಎಸ್‌ಆರ್‌ಎಚ್‌ ಗಳಿಸಿದ 113‌ ರನ್‌, ಐಪಿಎಲ್‌ ಫೈನಲ್‌ ಇತಿಹಾಸದಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಂಡವೊಂದು ದಾಖಲಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.(PTI)
ಹಾಗಿದ್ದರೆ, 2024ರ ಆವೃತ್ತಿಯ ಅಗ್ರ 5 ಲೋ ಸ್ಕೋರ್‌ ಇನ್ನಿಂಗ್ಸ್‌ಗಳು ಯಾವುವು ಎಂಬುದನ್ನು ನೋಡೋಣ.
(2 / 7)
ಹಾಗಿದ್ದರೆ, 2024ರ ಆವೃತ್ತಿಯ ಅಗ್ರ 5 ಲೋ ಸ್ಕೋರ್‌ ಇನ್ನಿಂಗ್ಸ್‌ಗಳು ಯಾವುವು ಎಂಬುದನ್ನು ನೋಡೋಣ.(PTI)
ಏಪ್ರಿಲ್‌ 17ರಂದು ನಡೆದ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್‌ ಟೈಟನ್ಸ್‌ ತಂಡವು ಕೇವಲ 89 ರನ್‌ಗಳಿಗೆ ಆಲೌಟ್‌ ಆಯ್ತು. ಇದು ಈ ಸೀಸನ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ದಾಖಲಾದ ಅತ್ಯಲ್ಪ ಮೊತ್ತವಾಗಿದೆ. ಪಂದ್ಯದಲ್ಲಿ ಡೆಲ್ಲಿ ಜಯ ಸಾಧಿಸಿತು.
(3 / 7)
ಏಪ್ರಿಲ್‌ 17ರಂದು ನಡೆದ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್‌ ಟೈಟನ್ಸ್‌ ತಂಡವು ಕೇವಲ 89 ರನ್‌ಗಳಿಗೆ ಆಲೌಟ್‌ ಆಯ್ತು. ಇದು ಈ ಸೀಸನ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ದಾಖಲಾದ ಅತ್ಯಲ್ಪ ಮೊತ್ತವಾಗಿದೆ. ಪಂದ್ಯದಲ್ಲಿ ಡೆಲ್ಲಿ ಜಯ ಸಾಧಿಸಿತು.(AFP)
ಮೇ 26ರ ಫೈನಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ 113‌ ರನ್‌ ಗಳಿಸಿತು. ಪಂದ್ಯದಲ್ಲಿ ಸುಲಭವಾಗಿ ಗುರಿ ತಲುಪಿದ ಕೆಕೆಆರ್‌ 8 ವಿಕೆಟ್‌ಗಳಿಂದ ಗೆದ್ದು ಬೀಗಿತು.
(4 / 7)
ಮೇ 26ರ ಫೈನಲ್‌ ಪಂದ್ಯದಲ್ಲಿ ಎಸ್‌ಆರ್‌ಎಚ್‌ 113‌ ರನ್‌ ಗಳಿಸಿತು. ಪಂದ್ಯದಲ್ಲಿ ಸುಲಭವಾಗಿ ಗುರಿ ತಲುಪಿದ ಕೆಕೆಆರ್‌ 8 ವಿಕೆಟ್‌ಗಳಿಂದ ಗೆದ್ದು ಬೀಗಿತು.(PTI)
ಏಪ್ರಿಲ್‌ 01ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 125 ರನ್‌ ಗಳಿಸಿತು. ಚೇಸಿಂಗ್ ಮಾಡಿದ ರಾಯಲ್ಸ್‌ 6 ವಿಕೆಟ್‌ಗಳಿಂದ ಗೆದ್ದು ಬೀಗಿತು.
(5 / 7)
ಏಪ್ರಿಲ್‌ 01ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 125 ರನ್‌ ಗಳಿಸಿತು. ಚೇಸಿಂಗ್ ಮಾಡಿದ ರಾಯಲ್ಸ್‌ 6 ವಿಕೆಟ್‌ಗಳಿಂದ ಗೆದ್ದು ಬೀಗಿತು.(AFP)
ಏಪ್ರಿಲ್‌ 07ರಂದು ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಚೇಸಿಂಗ್‌ ವೇಳೆ ಗುಜರಾತ್‌ ಟೈಟಾನ್ಸ್‌ 130 ರನ್‌ಗಳಿಗೆ ಆಲೌಟ್‌ ಆಯ್ತು. ಹೀಗಾಗಿ ಲಕ್ನೋ 33 ರನ್‌ಗಳ ಜಯ ಸಾಧಿಸಿತು.
(6 / 7)
ಏಪ್ರಿಲ್‌ 07ರಂದು ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಚೇಸಿಂಗ್‌ ವೇಳೆ ಗುಜರಾತ್‌ ಟೈಟಾನ್ಸ್‌ 130 ರನ್‌ಗಳಿಗೆ ಆಲೌಟ್‌ ಆಯ್ತು. ಹೀಗಾಗಿ ಲಕ್ನೋ 33 ರನ್‌ಗಳ ಜಯ ಸಾಧಿಸಿತು.(AFP)
ಏಪ್ರಿಲ್‌ 28ರಂದು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಎಸ್‌ಆರ್‌ಎಚ್‌ 134 ರನ್‌ ಗಳಿಸಿತು. ಸಿಎಸ್‌ಕೆ ತಂಡವು ಪಂದ್ಯದಲ್ಲಿ 78 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು.
(7 / 7)
ಏಪ್ರಿಲ್‌ 28ರಂದು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಎಸ್‌ಆರ್‌ಎಚ್‌ 134 ರನ್‌ ಗಳಿಸಿತು. ಸಿಎಸ್‌ಕೆ ತಂಡವು ಪಂದ್ಯದಲ್ಲಿ 78 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು.(PTI)

    ಹಂಚಿಕೊಳ್ಳಲು ಲೇಖನಗಳು