logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

4.8 ಕೋಟಿಗೆ ಮುಂಬೈಗೆ ಸೇಲಾದ ಅಲ್ಲಾಹ್‌ ಘಜನ್ಫರ್ ಯಾರು; ಅಫ್ಘಾನಿಸ್ತಾನ ಮಿಸ್ಟರಿ ಸ್ಪಿನ್ನರ್‌ಗೆ ಯಾಕಿಷ್ಟು ಬೇಡಿಕೆ?

Nov 25, 2024 07:31 PM IST

Allah Ghazanfar: ಅಫ್ಘಾನಿಸ್ತಾನದ ಯುವ ಮಿಸ್ಟರಿ ಸ್ಪಿನ್ನರ್ ಅಲ್ಲಾಹ್‌ ಘಜನ್ಫರ್, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಭಾರಿ ಮೊತ್ತ ಸಂಪಾದಿಸಿದ್ದಾರೆ. 18ರ ಹರೆಯದ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 4.8 ಕೋಟಿ ರೂ.ಗೆ ಖರೀದಿಸಿದೆ. ಈ ಸ್ಪಿನ್ನರ್ ಮೂಲ ಬೆಲೆ ಕೇವಲ 75 ಲಕ್ಷ ಇತ್ತು ಎಂಬುದು ಗಮನಾರ್ಹ.

  • Allah Ghazanfar: ಅಫ್ಘಾನಿಸ್ತಾನದ ಯುವ ಮಿಸ್ಟರಿ ಸ್ಪಿನ್ನರ್ ಅಲ್ಲಾಹ್‌ ಘಜನ್ಫರ್, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಭಾರಿ ಮೊತ್ತ ಸಂಪಾದಿಸಿದ್ದಾರೆ. 18ರ ಹರೆಯದ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡ ಬರೋಬ್ಬರಿ 4.8 ಕೋಟಿ ರೂ.ಗೆ ಖರೀದಿಸಿದೆ. ಈ ಸ್ಪಿನ್ನರ್ ಮೂಲ ಬೆಲೆ ಕೇವಲ 75 ಲಕ್ಷ ಇತ್ತು ಎಂಬುದು ಗಮನಾರ್ಹ.
ಅಫ್ಘಾನಿಸ್ತಾನದ ಸ್ಪಿನ್ನರ್ ಅಲ್ಲಾ ಘಜನ್ಫರ್ ಐಪಿಎಲ್ 2025ರ ಹರಾಜಿನಲ್ಲಿ ಜಾಕ್‌ಪಾಟ್ ಗೆದ್ದಿದ್ದಾರೆ. 18ರ ಹರೆಯದ ಸ್ಪಿನ್ನರ್‌ ಈ ಬಾರಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. 4.8 ಕೋಟಿ ರೂ.ಗೆಇವರನ್ನು ಮಾಜಿ ಚಾಂಪಿಯನ್‌ ಖರೀದಿಸಿದೆ. (ಫೋಟೋ-X)
(1 / 7)

ಕಳೆದ ಬಾರಿ ಘಜನ್ಫರ್ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಹೀಗಾಗಿ ತಂಡಕ್ಕೆ ಮರಳಿ ಕರೆತರಲು ಕೆಕೆಆರ್ ಆಸಕ್ತಿ ತೋರಿಸಿತು. ಆದರೆ ತಂಡ ಬಿಡ್‌ನಲ್ಲಿ ಯಶಸ್ವಿಯಾಗಲಿಲ್ಲ. ವಿವಿಧ ತಂಡಗಳು ಆಸಕ್ತಿ ತೋರಿದವು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಬಿಡ್ ಗೆದ್ದುಕೊಂಡಿತು. (ಫೋಟೋ-X)
(2 / 7)

ಆದರೆ, ಈ ಆಟಗಾರನಿಗೆ ಇಷ್ಟೊಂದು ಬೇಡಿಕೆ ಏಕೆ ಎಂಬುದು ಸದ್ಯದ ಪ್ರಶ್ನೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಈ ಮಿಸ್ಟರಿ ಸ್ಪಿನ್ನರ್ ವಿನಾಶಕಾರಿ ಸ್ಪೆಲ್ ಎಸೆದರು. ಆಗಲೇ ಜಾಗತಿಕ ಮಟ್ಟದಲ್ಲಿ ಸ್ಪಿನ್ನರ್ ಸುದ್ದಿಯಾದರು. (ಫೋಟೋ-X)  
(3 / 7)

ಅಫ್ಘಾನಿಸ್ತಾನದ ಮಾಜಿ ನಾಯಕ ದೌಲತ್ ಅಹ್ಮದ್ಜೈ ಅವರನ್ನು ಮಿಸ್ಟರಿ ಸ್ಪಿನ್ನರ್ ಆಗಿ ಪರಿವರ್ತಿಸಿದ್ದಾರೆ. ಆದರೆ ಅದಕ್ಕೂ ಮೊದಲು, ಅಲ್ಲಾಹ್ ಘಜನ್ಫರ್ ವೇಗದ ಬೌಲರ್ ಆಗಿ ತಮ್ಮ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದರು.‌ ಈಗ ಮಿಸ್ಟರಿ ಸ್ಪಿನ್ನರ್‌ ಆಗಿ ಹೆಸರು ಮಾಡಿದ್ದಾರೆ. (ಫೋಟೋ-X)
(4 / 7)

ಯುವ ಸ್ಪಿನ್ನರ್ ಕಳೆದ ಆವೃತ್ತಿಯಲ್ಲಿಯೇ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಭಾಗವಾಗಿದ್ದರು. ತಂಡದಲ್ಲಿದ್ದು ಐಪಿಎಲ್ 2024 ಟ್ರೋಫಿ ಗೆಲುವಿನ ಖುಷಿ ಅನುಭವಿಸಿದರು. ಮುಜೀಬ್ ಉರ್ ರೆಹಮಾನ್ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಅವರು ಫ್ರಾಂಚೈಸಿ ಪರ ಯಾವುದೇ ಪಂದ್ಯ ಆಡಲಿಲ್ಲ. ಈ ಬಾರಿ ಮುಂಬೈ ಇಂಡಿಯನ್ಸ್ ಪರ ಆಡುವ ನಿರೀಕ್ಷೆಯಿದೆ. (ಫೋಟೋ-X)
(5 / 7)

ಅಲ್ಲಾ ಘಜಾನ್ಫರ್ 2024ರ ಅಂಡರ್ 19 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಾಗಿದ್ದರು. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದರು. (ಫೋಟೋ-X)
(6 / 7)

ಇತ್ತೀಚೆಗೆ ನಡೆದ ಎಮರ್ಜಿಂಗ್ ಏಷ್ಯಾಕಪ್‌ನಲ್ಲಿಯೂ ಅಫ್ಘಾನಿಸ್ತಾನ ಪರ ಅಲ್ಲಾಹ್ ಘಜ್ನಾಫರ್ ಗಮನ ಸೆಳೆದರು. ಫೈನಲ್‌ ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದರು. (ಫೋಟೋ-X)
(7 / 7)

    ಹಂಚಿಕೊಳ್ಳಲು ಲೇಖನಗಳು