logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ ಆರಂಭಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ದೊಡ್ಡ ಆಘಾತ

ಐಪಿಎಲ್​ ಆರಂಭಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ದೊಡ್ಡ ಆಘಾತ

Mar 02, 2024 09:33 PM IST

Dale Steyn : ಈ ವರ್ಷದ ಐಪಿಎಲ್​ಗೆ ತಯಾರಿ ನಡೆಸುತ್ತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಹಿನ್ನಡೆಯಾಗಿದೆ. ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಈ ಆವೃತ್ತಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

  • Dale Steyn : ಈ ವರ್ಷದ ಐಪಿಎಲ್​ಗೆ ತಯಾರಿ ನಡೆಸುತ್ತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಹಿನ್ನಡೆಯಾಗಿದೆ. ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಈ ಆವೃತ್ತಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಈ ವರ್ಷದ ಐಪಿಎಲ್ 2024 ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತವಾಗಿದೆ. ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಈ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. 
(1 / 5)
ಈ ವರ್ಷದ ಐಪಿಎಲ್ 2024 ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತವಾಗಿದೆ. ತಂಡದ ಬೌಲಿಂಗ್ ಕೋಚ್ ಡೇಲ್ ಸ್ಟೇನ್ ಈ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. (Photo: X)
ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಸ್ಟೇನ್ ಐಪಿಎಲ್ 2024 ರ ಋತುವಿನಿಂದ ದೂರವಿರಲು ನಿರ್ಧರಿಸಿದ್ದಾರೆ ಎಂದು ಕ್ರಿಕ್​ಬಜ್ ವರದಿ ಬಹಿರಂಗಪಡಿಸಿದೆ. ಕಳೆದ ವರ್ಷ ಎಸ್ಆರ್​ಎಚ್​ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಸ್ಟೇನ್, ಈ ವರ್ಷ ವಿರಾಮ ತೆಗೆದುಕೊಳ್ಳುವಂತೆ ಫ್ರಾಂಚೈಸಿಯನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. 
(2 / 5)
ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಸ್ಟೇನ್ ಐಪಿಎಲ್ 2024 ರ ಋತುವಿನಿಂದ ದೂರವಿರಲು ನಿರ್ಧರಿಸಿದ್ದಾರೆ ಎಂದು ಕ್ರಿಕ್​ಬಜ್ ವರದಿ ಬಹಿರಂಗಪಡಿಸಿದೆ. ಕಳೆದ ವರ್ಷ ಎಸ್ಆರ್​ಎಚ್​ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಸ್ಟೇನ್, ಈ ವರ್ಷ ವಿರಾಮ ತೆಗೆದುಕೊಳ್ಳುವಂತೆ ಫ್ರಾಂಚೈಸಿಯನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. 
ಮುಂದಿನ ವರ್ಷ ತಂಡದೊಂದಿಗೆ ಮತ್ತೆ ಸೇರಿಕೊಳ್ಳುವುದಾಗಿ ಸ್ಟೇನ್ ಫ್ರಾಂಚೈಸಿಗೆ ಮಾಹಿತಿ ನೀಡಿದ್ದಾರೆ. ಈ ವರ್ಷದ ಋತುವಿಗೆ ಹೈದರಾಬಾದ್ ಈಗಾಗಲೇ ಹೊಸ ಬೌಲಿಂಗ್ ಕೋಚ್​ ಆಗಿ ನ್ಯೂಜಿಲೆಂಡ್​​ನ ಜೇಮ್ಸ್​ ಫ್ರಾಂಕ್ಲಿನ್ ನೇಮಕಗೊಂಡಿದ್ದಾರೆ ಎಂದು ಇಎಸ್​​ಪಿನ್​ ಕ್ರಿಕ್​ಇನ್ಫೋ ವರದಿ ಮಾಡಿದೆ.
(3 / 5)
ಮುಂದಿನ ವರ್ಷ ತಂಡದೊಂದಿಗೆ ಮತ್ತೆ ಸೇರಿಕೊಳ್ಳುವುದಾಗಿ ಸ್ಟೇನ್ ಫ್ರಾಂಚೈಸಿಗೆ ಮಾಹಿತಿ ನೀಡಿದ್ದಾರೆ. ಈ ವರ್ಷದ ಋತುವಿಗೆ ಹೈದರಾಬಾದ್ ಈಗಾಗಲೇ ಹೊಸ ಬೌಲಿಂಗ್ ಕೋಚ್​ ಆಗಿ ನ್ಯೂಜಿಲೆಂಡ್​​ನ ಜೇಮ್ಸ್​ ಫ್ರಾಂಕ್ಲಿನ್ ನೇಮಕಗೊಂಡಿದ್ದಾರೆ ಎಂದು ಇಎಸ್​​ಪಿನ್​ ಕ್ರಿಕ್​ಇನ್ಫೋ ವರದಿ ಮಾಡಿದೆ.(AFP)
ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಶೀಘ್ರದಲ್ಲೇ ಹೊಸ ಬೌಲಿಂಗ್ ಕೋಚ್ ನೇಮಕದ ಕುರಿತು ಅಧಿಕೃತವಾಗಿ ಅಪ್ಡೇಟ್ ನೀಡಲಿದೆ.
(4 / 5)
ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಶೀಘ್ರದಲ್ಲೇ ಹೊಸ ಬೌಲಿಂಗ್ ಕೋಚ್ ನೇಮಕದ ಕುರಿತು ಅಧಿಕೃತವಾಗಿ ಅಪ್ಡೇಟ್ ನೀಡಲಿದೆ.(Sunrisers Hyderabad)
ಮತ್ತೊಂದೆಡೆ ಸನ್​ರೈಸರ್ಸ್​​ ಹೈದರಾಬಾದ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಅವರನ್ನು ಐಪಿಎಲ್ 2024ಕ್ಕೆ ನಾಯಕರನ್ನಾಗಿ ನೇಮಿಸುತ್ತದೆ ಎಂಬ ವದಂತಿಗಳಿವೆ. ಈ ಋತುವಿನ ಹರಾಜಿನಲ್ಲಿ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿಸಿದೆ. ಎಸ್​ಆರ್​​ಎಚ್​ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಆಡಲಿದೆ.
(5 / 5)
ಮತ್ತೊಂದೆಡೆ ಸನ್​ರೈಸರ್ಸ್​​ ಹೈದರಾಬಾದ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಅವರನ್ನು ಐಪಿಎಲ್ 2024ಕ್ಕೆ ನಾಯಕರನ್ನಾಗಿ ನೇಮಿಸುತ್ತದೆ ಎಂಬ ವದಂತಿಗಳಿವೆ. ಈ ಋತುವಿನ ಹರಾಜಿನಲ್ಲಿ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿಸಿದೆ. ಎಸ್​ಆರ್​​ಎಚ್​ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಆಡಲಿದೆ.(Sunrisers Hyderabad)

    ಹಂಚಿಕೊಳ್ಳಲು ಲೇಖನಗಳು