logo
ಕನ್ನಡ ಸುದ್ದಿ  /  Photo Gallery  /  Divine Star Rishab Shetty Inaugurated Government School In Bangalore

Rishab Shetty: ಸಾಧಕರು ಓದಿರುವುದು ಸರ್ಕಾರಿ ಶಾಲೆಯಲ್ಲೇ ಎಂದ ರಿಷಬ್‌ ಶೆಟ್ಟಿ... ಶಾಲೆ ಉದ್ಘಾಟನೆ ಫೋಟೋ ಗ್ಯಾಲರಿ

Mar 20, 2023 10:38 AM IST

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ಮಾಡಿದರು. 

  • ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆ ಮಾಡಿದರು. 
ಶಾಲೆ ಉದ್ಘಾಟಿಸಿದ ಫೋಟೋಗಳನ್ನು ಸಚಿವ ಅಶ್ವತ್ಥ್ ನಾರಾಯಣ್ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
(1 / 11)
ಶಾಲೆ ಉದ್ಘಾಟಿಸಿದ ಫೋಟೋಗಳನ್ನು ಸಚಿವ ಅಶ್ವತ್ಥ್ ನಾರಾಯಣ್ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (PC: Dr. Ashwath Narayan)
ಶಾಲೆ ಉದ್ಘಾಟನೆ ಮಾಡುವ ಮೂಲಕ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ, ತಾವು ನಿರ್ದೇಶಿಸಿ, ನಿರ್ಮಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ನೆನಪು ಮಾಡಿದ್ದಾರೆ. 
(2 / 11)

ಕಾರ್ಯಕ್ರಮದಲ್ಲಿ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ, ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 
(3 / 11)

ಶಾಲೆ ಉದ್ಘಾಟಿಸಿ ಮಾತನಾಡಿದ ರಿಷಬ್‌ ಶೆಟ್ಟಿ ಮಕ್ಕಳೊಂದಿಗೆ ಕುಳಿತು ಫೋಟೋಗೆ ಪೋಸ್‌ ನೀಡಿದರು. ತಾವು ಕೂಡಾ ಸರ್ಕಾರಿ ಶಾಲೆಯಲ್ಲಿ ಓದಿದ್ದು ಎಂದು ನೆನಪಿಸಿಕೊಂಡರು. 
(4 / 11)

ಸರ್ಕಾರಿ ಶಾಲೆಯನ್ನು ಪೋಷಕರು ತಾತ್ಸಾರ ಮಾಡುವುದು ಸರಿ ಅಲ್ಲ, ಏಕೆಂದರೆ ಬಹಳಷ್ಟು ಸಾಧಕರು ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದು ರಿಷಬ್‌ ಶೆಟ್ಟಿ ಪೋಷಕರಿಗ ಕಿವಿಮಾತು ಹೇಳಿದರು. 
(5 / 11)

2018ರಲ್ಲಿ ರಿಷಬ್‌ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿದ್ದರು. ಈ ಚಿತ್ರದ ಮೂಲಕ ಅವರು ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದರು.
(6 / 11)

ಈ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ, ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಹೇಳಿದ್ದರು. 
(7 / 11)

ಇತ್ತೀಚೆಗೆ ರಿಷಬ್‌ ಶೆಟ್ಟಿ, ಸ್ವಿಟ್ಜರ್ಲೆಂಡ್‌ನ ಜಿನಿವಾಗೆ ತೆರಳಿ ವಿಶ್ವಸಂಸ್ಥೆ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. 
(8 / 11)

ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದರು. ಈ ವಿಡಿಯೋ ವೈರಲ್‌ ಆಗುತ್ತಿದೆ. 
(9 / 11)

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ರಿಷಬ್‌ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್‌ ಸ್ಕ್ರಿಪ್ಟ್‌ ಬರೆಯುವುದರಲ್ಲಿ ಬ್ಯುಸಿ ಇದ್ದಾರೆ. 
(10 / 11)

ಇತರ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಬ್ಯುಸಿ ಇದ್ದಾರೆ. ರಿಷಬ್‌ ಶೆಟ್ಟಿ ನಿರ್ಮಾಣದ 'ವಾಘಚಿಪಾಣಿ' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. 
(11 / 11)

    ಹಂಚಿಕೊಳ್ಳಲು ಲೇಖನಗಳು