logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Exam Study: ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ನಿಮ್ಮದಾಗಬೇಕಾ, ಓದುವಾಗ ಈ 6 ಸಿಂಪಲ್ ಟಿಪ್ಸ್ ಪಾಲಿಸಿ ನೋಡಿ, ಖುಷಿಯಾಗಬಹುದು

Exam Study: ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ನಿಮ್ಮದಾಗಬೇಕಾ, ಓದುವಾಗ ಈ 6 ಸಿಂಪಲ್ ಟಿಪ್ಸ್ ಪಾಲಿಸಿ ನೋಡಿ, ಖುಷಿಯಾಗಬಹುದು

Dec 22, 2024 07:05 PM IST

Exam Study: ಶೈಕ್ಷಣಿಕ ವರ್ಷದ ಕೊನೆಯ ಘಟ್ಟಕ್ಕೆ ಬಂದಿದ್ದೇವೆ. 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಶುರುವಾಗಿದೆ. ಪಾಲಕರು ಮತ್ತು ಶಿಕ್ಷಕರಿಗೆ ಒತ್ತಡವೇ ಆದರೂ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಒತ್ತಡ ತುಸು ಹೆಚ್ಚು. ಅದನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್. ಅನುಸರಿಸಿದ್ರೆ ಅತ್ಯುತ್ತಮ ಫಲಿತಾಂಶ ನಿಮ್ಮದಾಗಬಹುದು.

Exam Study: ಶೈಕ್ಷಣಿಕ ವರ್ಷದ ಕೊನೆಯ ಘಟ್ಟಕ್ಕೆ ಬಂದಿದ್ದೇವೆ. 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಿದ್ಧತೆ ಶುರುವಾಗಿದೆ. ಪಾಲಕರು ಮತ್ತು ಶಿಕ್ಷಕರಿಗೆ ಒತ್ತಡವೇ ಆದರೂ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಒತ್ತಡ ತುಸು ಹೆಚ್ಚು. ಅದನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್. ಅನುಸರಿಸಿದ್ರೆ ಅತ್ಯುತ್ತಮ ಫಲಿತಾಂಶ ನಿಮ್ಮದಾಗಬಹುದು.
Exam Study ಹತ್ತು ಮತ್ತು ಹನ್ನೆರಡನೇ ತರಗತಿ ಮಕ್ಕಳಿಗೆ, ಅವರ ಪಾಲಕರಿಗೆ, ಶಿಕ್ಷಕರಿಗೆ ನಿಧಾನವಾಗಿ ಬೋರ್ಡ್ ಪರೀಕ್ಷೆಯ ಬಿಸಿ ಶುರುವಾಗಿರಬಹುದು. ಸಹಜವಾಗಿಯೇ ಮಕ್ಕಳು ಮತ್ತು ಪಾಲಕರಲ್ಲಿ ಪರೀಕ್ಷಾ ಭಯ ಕಾಡತೊಡಗಿರಬಹುದು. ವಿದ್ಯಾರ್ಥಿಗಳಂತೂ ಈಗ ಟೈಮ್ ಟೇಬಲ್ ಮಾಡಿಕೊಂಡು ಓದಲು ಶುರುಮಾಡುವ ಬಗ್ಗೆ ಚಿಂತನೆ ನಡೆಸಿರಬಹುದು. ಅಂದಂದಿನ ಪಾಠವನ್ನು ಅಂದಂದೇ ಓದದವರು ತುಸು ಒತ್ತಡಕ್ಕೆ ಒಳಗಾಬಹುದು. ಮನೆಯಲ್ಲೇ ಸ್ವತಃ ಈ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಉತ್ತಮ ಫಲಿತಾಂಶಗಳನ್ನು ಹೇಗೆ ಸಾಧಿಸುವುದು ಎಂಬ ಪ್ರಶ್ನೆಗಳು ಕಾಡುವುದು ಸಹಜ. ಅದಕ್ಕೆ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ.
(1 / 7)
Exam Study ಹತ್ತು ಮತ್ತು ಹನ್ನೆರಡನೇ ತರಗತಿ ಮಕ್ಕಳಿಗೆ, ಅವರ ಪಾಲಕರಿಗೆ, ಶಿಕ್ಷಕರಿಗೆ ನಿಧಾನವಾಗಿ ಬೋರ್ಡ್ ಪರೀಕ್ಷೆಯ ಬಿಸಿ ಶುರುವಾಗಿರಬಹುದು. ಸಹಜವಾಗಿಯೇ ಮಕ್ಕಳು ಮತ್ತು ಪಾಲಕರಲ್ಲಿ ಪರೀಕ್ಷಾ ಭಯ ಕಾಡತೊಡಗಿರಬಹುದು. ವಿದ್ಯಾರ್ಥಿಗಳಂತೂ ಈಗ ಟೈಮ್ ಟೇಬಲ್ ಮಾಡಿಕೊಂಡು ಓದಲು ಶುರುಮಾಡುವ ಬಗ್ಗೆ ಚಿಂತನೆ ನಡೆಸಿರಬಹುದು. ಅಂದಂದಿನ ಪಾಠವನ್ನು ಅಂದಂದೇ ಓದದವರು ತುಸು ಒತ್ತಡಕ್ಕೆ ಒಳಗಾಬಹುದು. ಮನೆಯಲ್ಲೇ ಸ್ವತಃ ಈ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಉತ್ತಮ ಫಲಿತಾಂಶಗಳನ್ನು ಹೇಗೆ ಸಾಧಿಸುವುದು ಎಂಬ ಪ್ರಶ್ನೆಗಳು ಕಾಡುವುದು ಸಹಜ. ಅದಕ್ಕೆ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ.(istockphoto)
ಫಲಿತಾಂಶದ ಬಗ್ಗೆ ಚಿಂತಿಸುವ ಬದಲು, ಪ್ರಯತ್ನದ ಮೇಲೆ ಗಮನ ಹರಿಸಬೇಕು, ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ವಿಷಯಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರತಿ ಪ್ರಶ್ನೆಯನ್ನೂ ಗಮನಿಸಿ ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಂಡ ನಂತರವೇ ಉತ್ತರಿಸಬೇಕು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.
(2 / 7)
ಫಲಿತಾಂಶದ ಬಗ್ಗೆ ಚಿಂತಿಸುವ ಬದಲು, ಪ್ರಯತ್ನದ ಮೇಲೆ ಗಮನ ಹರಿಸಬೇಕು, ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ವಿಷಯಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರತಿ ಪ್ರಶ್ನೆಯನ್ನೂ ಗಮನಿಸಿ ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಂಡ ನಂತರವೇ ಉತ್ತರಿಸಬೇಕು ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.(istockphoto)
ಪ್ರತಿನಿತ್ಯವೂ ಓದಲು ಸ್ವಲ್ಪ ಸಮಯವನ್ನು ಮೀಸಲಿಡಿ. ನಿಮ್ಮ ಟೈಮ್‌ ಟೇಬಲ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಿಕೊಂಡು ಓದುವುದಕ್ಕೆ ಸಮಯ ಮೀಸಲಿಡುವುದು ಮುಖ್ಯ. ಇದಕ್ಕಾಗಿ ಸಂಕಲ್ಪ ಮಾಡಿಕೊಳ್ಳಿ. ಒತ್ತಡ ಮತ್ತು ಭಯ ಇದ್ದಾಗ ಪಾಲಕರು ಮತ್ತು ಸ್ನೇಹಿತರೊಂದಿಗೆ ಮಾತನಾಡಿ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಪ್ತ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.
(3 / 7)
ಪ್ರತಿನಿತ್ಯವೂ ಓದಲು ಸ್ವಲ್ಪ ಸಮಯವನ್ನು ಮೀಸಲಿಡಿ. ನಿಮ್ಮ ಟೈಮ್‌ ಟೇಬಲ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಿಕೊಂಡು ಓದುವುದಕ್ಕೆ ಸಮಯ ಮೀಸಲಿಡುವುದು ಮುಖ್ಯ. ಇದಕ್ಕಾಗಿ ಸಂಕಲ್ಪ ಮಾಡಿಕೊಳ್ಳಿ. ಒತ್ತಡ ಮತ್ತು ಭಯ ಇದ್ದಾಗ ಪಾಲಕರು ಮತ್ತು ಸ್ನೇಹಿತರೊಂದಿಗೆ ಮಾತನಾಡಿ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಪ್ತ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ.(istockphoto)
ಒಂದೇ ಸಲ ಎಲ್ಲವನ್ನೂ ಓದಲು ಹೋಗಬೇಡಿ. ಹೀಗೆ ಏಕಕಾಲದಲ್ಲಿ ಅಧ್ಯಯನ ಮಾಡುವ ಬದಲು ಪ್ರತಿ ಗಂಟೆಗೆ 5-10 ನಿಮಿಷಗಳ ವಿರಾಮ ತೆಗೆದುಕೊಳ್ಳುವುದು ಉತ್ತಮ. ಹೆಚ್ಚು ಪರೀಕ್ಷಾ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ಸಂದೇಹಗಳನ್ನು ನಿವಾರಿಸಲು ನೀವು ಶಿಕ್ಷಕರನ್ನು ಕೇಳಬೇಕು
(4 / 7)
ಒಂದೇ ಸಲ ಎಲ್ಲವನ್ನೂ ಓದಲು ಹೋಗಬೇಡಿ. ಹೀಗೆ ಏಕಕಾಲದಲ್ಲಿ ಅಧ್ಯಯನ ಮಾಡುವ ಬದಲು ಪ್ರತಿ ಗಂಟೆಗೆ 5-10 ನಿಮಿಷಗಳ ವಿರಾಮ ತೆಗೆದುಕೊಳ್ಳುವುದು ಉತ್ತಮ. ಹೆಚ್ಚು ಪರೀಕ್ಷಾ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ಸಂದೇಹಗಳನ್ನು ನಿವಾರಿಸಲು ನೀವು ಶಿಕ್ಷಕರನ್ನು ಕೇಳಬೇಕು(Pixabay)
ಗ್ರೂಪ್ ಸ್ಟಡಿ ಮಾಡುವುದರಿಂದ ಅನುಕೂಲ ಹೆಚ್ಚು. ಪಠ್ಯಕ್ರಮದ ಮುಖ್ಯಾಂಶಗಳು, ಪ್ರಶ್ನೆಗಳ ಮಾದರಿ ಮತ್ತು ಅಂಕಗಳ ಹಂಚಿಕೆಯ ಮೇಲೆ ಕೇಂದ್ರೀಕರಿಸಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ. ಮಾದರಿ ಪರೀಕ್ಷೆ ಎಂಬಂತೆ ಮನೆಯಲ್ಲೇ ಆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಸಮಯ ಪಾಲಿಸುವುದು ಸಾಧ್ಯವೇ ನೋಡಿ ಖಾತರಿಪಡಿಸಿಕೊಳ್ಳಿ.
(5 / 7)
ಗ್ರೂಪ್ ಸ್ಟಡಿ ಮಾಡುವುದರಿಂದ ಅನುಕೂಲ ಹೆಚ್ಚು. ಪಠ್ಯಕ್ರಮದ ಮುಖ್ಯಾಂಶಗಳು, ಪ್ರಶ್ನೆಗಳ ಮಾದರಿ ಮತ್ತು ಅಂಕಗಳ ಹಂಚಿಕೆಯ ಮೇಲೆ ಕೇಂದ್ರೀಕರಿಸಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ. ಮಾದರಿ ಪರೀಕ್ಷೆ ಎಂಬಂತೆ ಮನೆಯಲ್ಲೇ ಆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಸಮಯ ಪಾಲಿಸುವುದು ಸಾಧ್ಯವೇ ನೋಡಿ ಖಾತರಿಪಡಿಸಿಕೊಳ್ಳಿ.(istockphoto)
ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಆರೋಗ್ಯವಾಗಿರಬೇಕು. ಅಂದರೆ ಆರೋಗ್ಯದ ಕಡೆಗೆ ಗಮನಹರಿಸಬೇಕು. ಸಿಕ್ಕಿದ್ದೆಲ್ಲ ತಿನ್ನಲು ಹೋಗಬೇಡಿ. ಹಾಗೆಂದು ಪೂರ್ತಿ ಡಯೆಟ್ ಮಾಡೋದಕ್ಕೆ ಹೋಗಬೇಡಿ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಬಹುದು. ಶಕ್ತಿ ಮತ್ತು ಏಕಾಗ್ರತೆಗಾಗಿ ಪೌಷ್ಟಿಕಾಂಶ ಬೇಕು. ಹಣ್ಣು, ತರಕಾರಿ, ಸಿರಿಧಾನ್ಯ ಸೇವನೆ ಕಡೆಗೆ ಗಮನಕೊಡಿ. ಜಂಕ್ ಫುಡ್ ಮತ್ತು ಹೆಚ್ಚಿನ ಮಸಾಲೆಯುಕ್ತ ಆಹಾರಗಳನ್ನು ತಿನ್ನಬೇಡಿ. ಸಾಕಷ್ಟು ನೀರು ಕುಡಿಯಿರಿ.
(6 / 7)
ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಆರೋಗ್ಯವಾಗಿರಬೇಕು. ಅಂದರೆ ಆರೋಗ್ಯದ ಕಡೆಗೆ ಗಮನಹರಿಸಬೇಕು. ಸಿಕ್ಕಿದ್ದೆಲ್ಲ ತಿನ್ನಲು ಹೋಗಬೇಡಿ. ಹಾಗೆಂದು ಪೂರ್ತಿ ಡಯೆಟ್ ಮಾಡೋದಕ್ಕೆ ಹೋಗಬೇಡಿ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಬಹುದು. ಶಕ್ತಿ ಮತ್ತು ಏಕಾಗ್ರತೆಗಾಗಿ ಪೌಷ್ಟಿಕಾಂಶ ಬೇಕು. ಹಣ್ಣು, ತರಕಾರಿ, ಸಿರಿಧಾನ್ಯ ಸೇವನೆ ಕಡೆಗೆ ಗಮನಕೊಡಿ. ಜಂಕ್ ಫುಡ್ ಮತ್ತು ಹೆಚ್ಚಿನ ಮಸಾಲೆಯುಕ್ತ ಆಹಾರಗಳನ್ನು ತಿನ್ನಬೇಡಿ. ಸಾಕಷ್ಟು ನೀರು ಕುಡಿಯಿರಿ.(istockphoto)
ದಿನಕ್ಕೆ ಕನಿಷ್ಠ 6-8 ಗಂಟೆಗಳ ನಿದ್ರೆಯ ಅಗತ್ಯವಿದೆ. ನಿದ್ರೆಯ ಕೊರತೆಯು ಏಕಾಗ್ರತೆ ಮತ್ತು ಸ್ಮರಣೆಯನ್ನು ನಿಧಾನಗೊಳಿಸುತ್ತದೆ. ಪರೀಕ್ಷೆಯ ಸಮಯದಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ನಿಮಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಚಿಂತೆ ನಿವಾರಿಸಿ ಆರಾಮ ಇರುವಂತೆ ಮಾಡುತ್ತದೆ.
(7 / 7)
ದಿನಕ್ಕೆ ಕನಿಷ್ಠ 6-8 ಗಂಟೆಗಳ ನಿದ್ರೆಯ ಅಗತ್ಯವಿದೆ. ನಿದ್ರೆಯ ಕೊರತೆಯು ಏಕಾಗ್ರತೆ ಮತ್ತು ಸ್ಮರಣೆಯನ್ನು ನಿಧಾನಗೊಳಿಸುತ್ತದೆ. ಪರೀಕ್ಷೆಯ ಸಮಯದಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ನಿಮಗೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಚಿಂತೆ ನಿವಾರಿಸಿ ಆರಾಮ ಇರುವಂತೆ ಮಾಡುತ್ತದೆ.(istockphoto)

    ಹಂಚಿಕೊಳ್ಳಲು ಲೇಖನಗಳು