logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kitchen Hacks: ಸ್ಮಾರ್ಟ್‌ ಗೃಹಿಣಿಯರಾಗಲು ಈ ಕಿಚನ್‌ ಟಿಪ್ಸ್‌ ಅನುಸರಿಸಿ, ಎಲ್ಲರೂ ಹೊಗಳೋದು ಗ್ಯಾರಂಟಿ

Kitchen Hacks: ಸ್ಮಾರ್ಟ್‌ ಗೃಹಿಣಿಯರಾಗಲು ಈ ಕಿಚನ್‌ ಟಿಪ್ಸ್‌ ಅನುಸರಿಸಿ, ಎಲ್ಲರೂ ಹೊಗಳೋದು ಗ್ಯಾರಂಟಿ

Oct 08, 2022 06:41 PM IST

Kitchen Hacks : ಅಡುಗೆಮನೆಯನ್ನು ಸ್ಮಾರ್ಟ್‌ ಆಗಿ ನಿರ್ವಹಿಸಲು ಎಲ್ಲರಿಂದಲೂ ಆಗುವುದಿಲ್ಲ. ಕೆಲ ಗೃಹಿಣಿಯರು ದಿನವಿಡೀ ಅಡುಗೆ ಮನೆಯಲ್ಲೇ ಸಲಯ ಕಳೆದರೂ, ಕೆಲಸವೇ ಮುಗಿಯುವುದಿಲ್ಲ. ಶುಚಿತ್ವ ಕೂಡಾ ಇರುವುದಿಲ್ಲ. ಹೀಗಾಗಿ ಅಡುಗೆ ಮನೆಯಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು ಸ್ಮಾರ್ಟ್ ಕೆಲಸ ಮಾಡುವುದು ತುಂಬಾ ಮುಖ್ಯ. ಇದಕ್ಕಾಗಿ ನೀವು ಕೆಲವು ಭಿನ್ನ ಮಾರ್ಗಗಳನ್ನು ಅನುಸರಿಸಬೇಕು.

  • Kitchen Hacks : ಅಡುಗೆಮನೆಯನ್ನು ಸ್ಮಾರ್ಟ್‌ ಆಗಿ ನಿರ್ವಹಿಸಲು ಎಲ್ಲರಿಂದಲೂ ಆಗುವುದಿಲ್ಲ. ಕೆಲ ಗೃಹಿಣಿಯರು ದಿನವಿಡೀ ಅಡುಗೆ ಮನೆಯಲ್ಲೇ ಸಲಯ ಕಳೆದರೂ, ಕೆಲಸವೇ ಮುಗಿಯುವುದಿಲ್ಲ. ಶುಚಿತ್ವ ಕೂಡಾ ಇರುವುದಿಲ್ಲ. ಹೀಗಾಗಿ ಅಡುಗೆ ಮನೆಯಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಲು ಸ್ಮಾರ್ಟ್ ಕೆಲಸ ಮಾಡುವುದು ತುಂಬಾ ಮುಖ್ಯ. ಇದಕ್ಕಾಗಿ ನೀವು ಕೆಲವು ಭಿನ್ನ ಮಾರ್ಗಗಳನ್ನು ಅನುಸರಿಸಬೇಕು.
ನೀವು ಎಂದಾದರೂ ಕುಕ್ಕರ್‌ನಲ್ಲಿ ಕೇಕ್ ಮಾಡಿದ್ದೀರಾ? ಉತ್ತರ ಹೌದು ಎಂದಾದರೆ, ಅದು ಎಷ್ಟು ಚೆನ್ನಾಗಿ ಬಂದಿದೆ ಎಂದು ನೆನಪಿಸಿಕೊಳ್ಳಿ. ಒಳ್ಳೆಯ ಕೇಕ್ ಮಾಡಲು ಏನೆಲ್ಲಾ ಬೇಕು ಎಂದು ನಿಮಗೆ ತಿಳಿದಿದೆ. ನೀವು ಒಂದು ಸಣ್ಣ ಹೆಜ್ಜೆ ತಪ್ಪಿದರೂ ಕೇಕ್ ಸರಿಯಾಗಿ ಬರುವುದಿಲ್ಲ. ಉದಾಹರಣೆಗೆ ನೀವು ಕೇಕ್ ಪ್ಯಾನ್‌ಗೆ ಸರಿಯಾಗಿ ಬೆಣ್ಣೆ ಹಚ್ಚದಿದ್ದರೆ, ನಿಮ್ಮ ಕೇಕ್ ಅಂಟಿಕೊಳ್ಳುತ್ತದೆ. ಹೀಗಾಗಿ ಈ ಹಂತವನ್ನು ಮರೆಯಬೇಡಿ.
(1 / 7)

ರೆಫ್ರಿಜರೇಟರ್‌ನಲ್ಲಿ ಇಟ್ಟ ಪನೀರ್ ಗಟ್ಟಿಯಾದರೆ, ಅದನ್ನು ಮೃದುವಾಗಿಸಲು ಸರಳ ಉಪಾಯವಿದೆ. ಬಿಸಿ ಉಪ್ಪುನೀರಿನಲ್ಲಿ ಅದನ್ನು ಸ್ವಲ್ಪ ಹೊತ್ತು ಹಾಕಿಡಿ. ಸ್ವಲ್ಪ ಸಮಯದ ನಂತರ ಅದು ಮೃದುವಾಗುತ್ತದೆ. ಅಲ್ಲದೆ ರುಚಿ ಕೂಡ ಹೆಚ್ಚಾಗುತ್ತದೆ.
(2 / 7)

ಕೊತ್ತಂಬರಿ ಸೊಪ್ಪು ಹೆಚ್ಚು ಕಾಲ ಫ್ರೆಶ್ ಆಗಿ ಇಡಬೇಕೆಂದರೆ, ಮಾರುಕಟ್ಟೆಯಿಂದ ತಂದ ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ. ಅದರಲ್ಲಿರುವ ಹಾಳಾದ ಅಥವಾ ಕೊಳೆತಿರುವ ಸೊಪ್ಪನ್ನು ಬೇರ್ಪಡಿಸಿ. ಅದನ್ನು ಗಾಳಿಯಾಡದ ಡಬ್ಬದಲ್ಲಿ ಇಡಿ. ಆಗ ಹೆಚ್ಚು ಕಾಲ ಉಳಿಯುತ್ತದೆ.
(3 / 7)

ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳುತ್ತವೆ‌. ಇರುವೆಗಳು ಬಾರದಂತೆ ತಡೆಯಲು ನೀವು ಸಕ್ಕರೆ ಡಬ್ಬಕ್ಕೆ 3-4 ಲವಂಗವನ್ನು ಹಾಕಿಡಿ. 
(4 / 7)

ನೀವು ಆಲೂ ಪರಾಠವನ್ನು ಹೆಚ್ಚು ರುಚಿಯಾಗಿ ಮಾಡಲು, ಆಲೂಗಡ್ಡೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಮಚ ಕಸೂರಿ ಮೇಥಿಯನ್ನು ಸೇರಿಸಿ.
(5 / 7)

ನೀವು ಶುಂಠಿ ಚಹಾವನ್ನು ಇಷ್ಟಪಡುತ್ತೀರಾ? ಆದರೆ ಅದನ್ನು ಮಾಡುವಾಗ ಹಾಲು ಒಡೆಯುತ್ತದೆ ಎಂಬ ಆತಂಕನಿಮಗಿರಬಹುದು. ಹಾಲು ಕೆಡದಂತೆ ತಡೆಯಲು ಬೆಲ್ಲದ ಚಹಾ ಮಾಡಿ. ಟೀ ತಯಾರಿಕೆಯ ಕೊನೆಯಲ್ಲಿ ಬೆಲ್ಲ ಹಾಕಿದರೆ, ಹಾಲು ಒಡೆದು ಮೊಸರಾಗುವುದಿಲ್ಲ.
(6 / 7)

ರಾಯಿತ ಮಾಡಿ ಕೆಲವೇ ಸಮಯದಲ್ಲಿ ಹುಳಿಯಾಗುತ್ತಾರೆ. ಇದು ಹುಳಿಯಾಗದಂತೆ ತಡೆಯಲು ಉಪಾಯವಿದೆ. ರಾಯಿತವನ್ನು ಮುಂಚಿತವಾಗಿ ತಯಾರಿಸಬೇಕು. ಆಗಲೇ ಉಪ್ಪು ಹಾಕಬಾರದು. ಬಡಿಸುವ ಹೊತ್ತಿಗೆ ಉಪ್ಪು ಹಾಕಬೇಕು.
(7 / 7)

    ಹಂಚಿಕೊಳ್ಳಲು ಲೇಖನಗಳು