logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shampooing Tips: ಕೂದಲಿಗೆ ಶಾಂಪೂ ಹಾಕುವಾಗ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

Shampooing Tips: ಕೂದಲಿಗೆ ಶಾಂಪೂ ಹಾಕುವಾಗ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

Nov 18, 2022 10:27 AM IST

Shampooing Tips: ಕೂದಲನ್ನು ಸಾಂದರ್ಭಿಕವಾಗಿ ಶಾಂಪೂ ಬಳಸಿ ತೊಳೆಯಬೇಕಾಗುತ್ತದೆ. ಆದರೆ ಶಾಂಪೂ ಬಳಸುವಾಗ ಜಾಗರೂಕರಾಗಿರಬೇಕು. ಕೆಲವೊಬ್ಬರು ಶಾಂಪೂ ಬಳಸಿದರೂ, ಕೂದಲು ಉದುರುತ್ತಲೇ ಇರುತ್ತದೆ ಎಂದು ದೂರುತ್ತಾರೆ. ಇದಕ್ಕೆ ನೀವು ಮಾಡುವ ಕೆಲ ತಪ್ಪುಗಳು ಕೂಡಾ ಕಾರಣವಿರಬಹುದು.

  • Shampooing Tips: ಕೂದಲನ್ನು ಸಾಂದರ್ಭಿಕವಾಗಿ ಶಾಂಪೂ ಬಳಸಿ ತೊಳೆಯಬೇಕಾಗುತ್ತದೆ. ಆದರೆ ಶಾಂಪೂ ಬಳಸುವಾಗ ಜಾಗರೂಕರಾಗಿರಬೇಕು. ಕೆಲವೊಬ್ಬರು ಶಾಂಪೂ ಬಳಸಿದರೂ, ಕೂದಲು ಉದುರುತ್ತಲೇ ಇರುತ್ತದೆ ಎಂದು ದೂರುತ್ತಾರೆ. ಇದಕ್ಕೆ ನೀವು ಮಾಡುವ ಕೆಲ ತಪ್ಪುಗಳು ಕೂಡಾ ಕಾರಣವಿರಬಹುದು.
ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಶಾಂಪೂ ಕೂಡಾ ಒಂದು ಕಾರಣವಾಗಿರಬಹುದು. ನಿಮ್ಮ ಕೂದಲನ್ನು ತೊಳೆಯುವ ವಿಧಾನವು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಶಾಂಪೂ ಬಳಸುವ ಸರಿಯಾದ ವಿಧಾನವನ್ನು ಇಲ್ಲಿ ತಿಳಿಯಿರಿ.
(1 / 7)

ಹೆಚ್ಚಿನ ಜನರು ಶಾಂಪೂವನ್ನು ನೇರವಾಗಿ ಕೂದಲಿನ ಮೇಲೆ ಬಳಸುತ್ತಾರೆ. ಕೂದಲಿಗೆ ಶಾಂಪೂವನ್ನು ನೇರವಾಗಿ ಅನ್ವಯಿಸಿದ ಬಳಿಕ, ನೀರಿನೊಂದಿಗೆ ಬೆರೆತು ಅದು ನೊರೆಯನ್ನು ಸೃಷ್ಟಿಸುತ್ತದೆ. ಆಮೇಲೆ ಅದನ್ನು ಉಜ್ಜಿ ತೊಳೆಯುತ್ತಾರೆ. ಆದರೆ ಈ ವಿಧಾನವು ಸಂಪೂರ್ಣವಾಗಿ ತಪ್ಪು.
(2 / 7)

ಈ ರೀತಿ ಶಾಂಪೂವನ್ನು ನೇರವಾಗಿ ಕೂದಲಿಗೆ ಹಾಕುವುದರಿಂದ ಕೂದಲಿನಲ್ಲಿ ಸ್ವಲ್ಪ ಪ್ರಮಾಣದ ಶಾಂಪೂ ಸಂಗ್ರಹವಾಗುತ್ತದೆ. ಅದು ಒಣಗಿದಾಗ ಕೂದಲು ಕೂಡಾ ಉದುರುತ್ತದೆ.
(3 / 7)

ನಿಮ್ಮ ಕೂದಲಿಗೆ ಶಾಂಪೂ ಹಾಕುವ ಮುನ್ನ, ಮೊದಲು ಕೂದಲನ್ನು ಸಂಪೂರ್ಣವಾಗಿ ನೀರಿನಿಂದ ಒದ್ದೆ ಮಾಡಿ. ನಂತರ ಕಾಲು ಕಪ್‌ನಷ್ಟು ನೀರಿಗೆ ಶಾಂಪೂ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ತೆಳ್ಳನೆಯ ಶಾಂಪೂ ದ್ರಾವಣವನ್ನು ಕೂದಲಿಗೆ ಅನ್ವಯಿಸಿ ಮತ್ತು ಅದನ್ನು ಉಜ್ಜಿಕೊಳ್ಳಿ. ಶಾಂಪೂ ಹಾಕಿದಾಗ ನೆತ್ತಿಯನ್ನು ತುಂಬಾ ಗಟ್ಟಿಯಾಗಿ ಉಜ್ಜಬೇಡಿ. ನಿಧಾನವಾಗಿ ತಿಕ್ಕಿ ತೊಳೆಯಿರಿ. ಶಾಂಪೂ ಮಾಡುವ ಸರಿಯಾದ ವಿಧಾನ ಇದು.
(4 / 7)

ಕಂಡೀಷನರ್ ಅನ್ನು ಯಾವಾಗಲೂ ಕೂದಲಿನ ತುದಿಗೆ ಮಾತ್ರ ಅನ್ವಯಿಸಬೇಕು. ಕೂದಲಿನ ಬುಡಭಾಗಕ್ಕೆ, ಅಂದರೆ ತಲೆಗೆ ಎಂದಿಗೂ ಬಳಸಬೇಡಿ. ಹೀಗೆ ಮಾಡುವುದರಿಂದ ಕೂದಲು ಉದುರುತ್ತದೆ. ನಿಮ್ಮ ಕೂದಲಿಗೆ ಕಂಡೀಷನರ್ ಅನ್ನು ನಿಧಾನವಾಗಿ ಅನ್ವಯಿಸಿ, ಐದು ನಿಮಿಷಗಳ ಕಾಲ ಬಿಡಿ. ನಂತರ ಸ್ನಾನ ಮಾಡಿ.
(5 / 7)

ಪ್ರತಿನಿತ್ಯ ಶಾಂಪೂ ಮಾಡುವುದರಿಂದ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆಯಂತಹ ಅಂಶ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಕೂದಲು ಶುಷ್ಕ ಮತ್ತು ನಿರ್ಜೀವವಾಗಿ ನಂತರ ಉದುರುತ್ತವೆ.
(6 / 7)

ಕೂದಲನ್ನು ತೊಳೆಯಲು ಯಾವಾಗಲೂ ಸೌಮ್ಯವಾದ ಸಲ್ಫೇಟ್ ಮುಕ್ತ ಶಾಂಪೂ ಬಳಸಿ. ಇದಕ್ಕಾಗಿ ನೀವು ಗಿಡಮೂಲಿಕೆ ಅಥವಾ ಯಾವುದೇ ಆಯುರ್ವೇದ ಶಾಂಪೂವನ್ನು ಬಳಸಬಹುದು. ಅಂತಹ ಶ್ಯಾಂಪೂಗಳಲ್ಲಿ ರಾಸಾಯನಿಕ ಅಂಶ ಕಡಿಮೆ ಇರುತ್ತದೆ.
(7 / 7)

    ಹಂಚಿಕೊಳ್ಳಲು ಲೇಖನಗಳು